-->

Kannada subhashita - ಕನ್ನಡ ಸುಭಾಷಿತಗಳು


  • ಬುಧಿವಂತರಾದವರು ಹಿಂಜರಿಯದೆ ಹತ್ತಿರ ಹೋಗಿ ಆಪ್ತನಾದವನು ಸೇರಬೆಕು
  • ಕೆಟ್ಟದ್ದನು ನುಡಿವವರನ್ನು ಉಪಾಯವಾಗಿ ತೊರೆಯುವುದು ವಿವೇಕ
  • ದುರಳರೊಂದಿಗೆ ಸ್ನೇಹವನ್ನು ಬಿಡು , ಉತ್ತಮರ ಹಿತವಾದಗಳನ್ನು ನೆನಪಿನಲ್ಲಿಟ್ಟುಕೊಂಡಿರು
  • ವಿದ್ಯೆಗಿಂತ ಬೇರೆ ಐಶ್ವರ್ಯವಿಲ್ಲ , ನಿರ್ಮಲ ಸ್ವಭಾವಕಿಂತ ಬೇರೆ ತೀರ್ಥ ಸ್ನಾನವಿಲ್ಲ
  • ನುಡಿದಂತೆ ನಡೆದುಕೊಳ್ಳದವನು ಶ್ರೇಷ್ಠನಾಗಲು ಸಾಧ್ಯವೆ ಇಲ್ಲ
  • ಶ್ರದ್ಧೆಯೆ ಯೆಶಸ್ಸಿನ ಕೀಲಿ ಕೈ
  • ಆದರ್ಶಗಳಿಗಾಗಿ ಬದುಕುವ ಬದುಕು ಒಂದು ತಪಸ್ಸೇ ಸರಿ
  • ಪ್ರತಿಭೆ , ಶ್ರಮ ಮತ್ತು ಸ್ವಲ್ಪ ಅದೃಷ್ಟ ಇವುಗಳ ಮಿಶ್ರಣವೇ ಯೆಶಸ್ಸು.
  • ಸಂಸ್ಕೃತಿಯೇ ಮಾನವನ ಮಹಾಗುರು
  • ಜೀವನದ ಹಾದಿಯಲ್ಲಿ ಕಷ್ಟಗಳೆಂಬ ಉಬ್ಬುಗಳಿದ್ದರೂ ಸುಖವೆಂಬ ಇಳಿಜಾರುಗಳೂ ಇರುತ್ತವೆ
  • ಧೈರ್ಯಶಾಲಿಗೆ ಮಾತ್ರ ವಿಜಯಲಕ್ಶ್ಮಿ ಒಲೆಯುತ್ತಾಳೆ , ಹೇಡಿಗಳಿಗಲ್ಲ
  • ಹುಲಿಗೆ ಹುಲ್ಲು ತಿನ್ನುವುದನ್ನು ಕಲಿಸಬಹುದು , ಮುರ್ಖನಿಗೆ ನೀತಿಯನ್ನು ಕಲಿಸುವುದು ಕಷ್ಟ ಸಾಧ್ಯ
  • ಪ್ರಚಂಡ ಆತ್ಮವಿಶ್ವಾಸ ನಮ್ಮನ್ನು ಸಮುದ್ರದ ಚಂಡಮಾರುತದಿಂದಲೂ ಫಾರಾಗಿಸಬಲ್ಲದು
  • ನೀವು ಹುಟ್ಟುವಾಗ ಏನನ್ನೂ ತರುವುದಿಲ್ಲವಾದುದರಿಂದ ನಂತರ ಪಡೆದಿದ್ದೆಲ್ಲ ಲಾಭವೇ
  • ಸೋಲು ಎಂಬುದು ಮತ್ತೊಮ್ಮೆ ಹೆಚ್ಚು ಚೈತನ್ಯದಿಂದ ಯತ್ನಿಸಲು ನೀಡಲ್ಪಡುವ ಒಂದು ಅವಕಾಶ
  • ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ , ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ

    Kannada subhashitha


    "ಸೋಲಾದಾಗ ಎಲ್ಲರೂ ನಿನ್ನನು ನಿಂದಿಸಿದರೂ
    ನೀನು ನಗುತ್ತಿದ್ದರೆ
    ಎಲ್ಲರೂ ತಮ್ಮ ಆತ್ಮವಿಶ್ವಾಸವನ್ನು ಶಂಕಿಸುತ್ತಿರುವಾಗ
    ನೀನು ನಿನ್ನನೇ ನಂಬುತ್ತಿದ್ದರೆ
    ಅರಸರಲ್ಲಿಯೂ ಆಳುಗಳ ಮಧ್ಯೆಯೂ
    ನೀನು ನಿನ್ನ ತಲೆಯನ್ನು ಅತ್ಮವಿಶ್ವಸದಿಂದ ಎತ್ತಿದ್ದರೆ
    ಈ ಜಗತ್ತೇ ನಿನ್ನದಾಗುತ್ತದೆ
    ಅಂತವನೇ ನಿಜವಾದ ಮಾನವ
    ಉಳಿದವರೆಲ್ಲರೂ ಠೊಳ್ಳು ಮಾನವರು"
    - ರುಡ್ಯಾರ್ಡ್ ಕ್ಲಿಪ್ಲಿಂಗ್ - ಅನುವಾದ

    ನುಡಿಮುತ್ತುಗಳು

    "ನೀರಿಗಿಂತ ತಿಳಿಯಾದದ್ದು ; ಜ್ಞಾನ
    ಭೂಮಿಗಿಂತ ಭಾರವಾದದ್ದು ; ಪಾಪ
    ಕಾಡಿಗಿಂತ ಕಪ್ಪಾಗಿರುವುದು ; ಕಳಂಕ
    ಸೂರ್ಯನಿಗಿಂತ ಪ್ರಕರವಾದದ್ದು ; ಕೋಪ
    ಮಂಜಿಗಿಂತ ಹಗುರವಾದದ್ದು ; ಪುಣ್ಯ
    ಗಾಳಿಗಿಂತ ವೇಗವಾಗಿರುವುದು ; ಮನಸ್ಸು"
     
    "ಯಾರನ್ನಾದರೂ ಮರೆಯುವುದಾದರೆ ಮರೆತುಬಿಡಿ, ಆದರೆ!
    ಯಾರನ್ನು ಮರೆತಿದ್ದೇವೆ ಎಂಬುವುದನ್ನು ನೆನಪಿಟ್ಟುಕೊಳ್ಳಿ"
    "ದೊಡ್ಡವರಾಗಲು ದಡ್ಡರಾಗಲು ವಯಸ್ಸಿನ ಅಂತರವಿರದು."

    "ತಾನಾಗಿ ಬರುವುದು; ತಾರುಣ್ಯ, ಮುಪ್ಪು
    ಜೊತೆಯಲ್ಲೇ ಬರುವುದು; ಪಾಪ, ಪುಣ್ಯ
    ತಡೆಯಿಲ್ಲದೆ ಬರುವುದು; ಆಸೆ, ದುಃಖ
    ಅನಿವಾರ್ಯವಾಗಿ ಬರುವುದು; ಹಸಿವು, ದಾಹ
    ನಾಶಕ್ಕಾಗಿ ಬರುವುದು; ದ್ವೇಷ, ಸಿಟ್ಟು
    ಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು"





     
     
    Kannada subhashitha

    Kannada subhashitha


    –>