Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles with a brief English translation. This post is to promote kannada riddles. you may also contribute by sharing your favorite riddles in the comments section.
ಒಗಟು - ಕಾಲಿಲ್ಲದೆ ನಡೆಯುವುದು , ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು / It walks without legs , it speaks without mouth , its a home for many | ಉತ್ತರ - ನದಿ / River
ಒಗಟು - ಕುಡಿಕೆಯಲ್ಲಿ ಮೆಣಸು / Pepper in the pot | ಉತ್ತರ - ಪರಂಗಿ ಹಣ್ಣು / Papaya
ಒಗಟು - ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ / Fistful when covered with fist , Houseful when uncovered from fist | ಉತ್ತರ - ದೀಪ / Lamp
ಒಗಟು - ಮೇಲೆ ಹಸಿರು , ಒಳಗೆ ಕೆಂಪು , ತಿಂದರೆ ತಂಪು / Green on top , Red and cool inside | ಉತ್ತರ - ಕಲ್ಲಂಗಡಿ / Water Melon
ಒಗಟು - ಹಾರಿದರೆ ಹನುಮಂತ , ಕೂಗಿದರೆ ರಾವಣ , ಕುಳಿತರೆ ಮುನಿರಾಮ / Its Hanuman when it flies , Its Ravana when it screams , Its Munirama when it sits | ಉತ್ತರ - ಕಪ್ಪೆ / Frog
ಒಗಟು - ಚಿಕ್ಕ ಮನೇಲಿ ಚಕ್ಕೆ ತುಂಬಿವೆ / In a small house , are filled with chips | ಉತ್ತರ - ಹಲ್ಲು / Teeth
ಒಗಟು - ಉದ್ದ ಮರದಲ್ಲಿ ಕೆಂಪು ಸನ್ಯಾಸಿ / A red monk in a long tree | ಉತ್ತರ - ಅಡಿಕೆ ಕಾಯಿ / Areca nut
ಒಗಟು - ನಿನ್ನ ಹೊಟ್ಟೆಯ ಮೇಲೆ , ನನ್ನ ಹೊಟ್ಟೆ / On your stomach is my stomach | ಉತ್ತರ - ರಾಗಿ ಕಲ್ಲು / Millet Stone
ಒಗಟು - ಕಲ್ಲರಳಿ ಹೂವಾಗಿ , ಎಲ್ಲರಿಗೂ ಬೇಕಾಗಿ , ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ / Stone blossoms to flower , needed by everyone , serves as light for lord's head | ಉತ್ತರ - ಸುಣ್ಣ / limestone
ಒಗಟು - ಸತ್ತವನೇ ಸಾವಿನ ಸುದ್ದಿ ತಗೊಂಡು ಹೋಗ್ತಾನೆ / The dead person carries the news of his death everywhere | ಉತ್ತರ - ಹಲಸಿನ ಹಣ್ಣು / Jackfruit
ಒಗಟು - ಚಿಕ್ಕ ಚಿಕ್ಕ ಪೆಟ್ಟಿಗೆ , ಚಿನ್ನದ ಪೆಟ್ಟಿಗೆ , ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ / Small box , gold box , when closed & opened three hundred boxes | ಉತ್ತರ - ದಾಳಿಂಬೆ ಹಣ್ಣು / Pomegranate
ಒಗಟು -ಚೆಲ್ಲೋದುಂಟು , ಕುಯ್ಯೋದುಂಟು , ತಿನ್ನೋದಿಲ್ಲ / It can be scattered , it can be cut , but it cannot be eaten | ಉತ್ತರ - ಕೂದಲು / Hair
ಒಗಟು - ಹತ್ನಾರ್ದ ಮರಕ್ಕೆ , ಹತ್ತುತನೆ ಕರಿಯಣ್ಣ / He climbs a tree which no one climbs | ಉತ್ತರ - ಇರುವೆ / Ant
ಒಗಟು - ಸಾಯೋವರೆಗೂ ಹೂವಿಲ್ಲ , ಹಣ್ಣು ಮಾತ್ರ ಬಿಡ್ತದೆ / It does not give any flower till it dies , only bears fruit | ಉತ್ತರ - ಹತ್ತಿಹಣ್ಣು / Cotton fruit
ಒಗಟು - ಕಿರೀಟವುಂಟು ರಾಜನಲ್ಲ , ಗಡ್ಡವುಂಟು ತುರುಕನಲ್ಲ / It has a crown but not a king , it has a beard but not a turkey | ಉತ್ತರ - ಹುಂಜ / Cock
ಒಗಟು - ಸುತ್ತಮುತ್ತ ಗರಿಕೆ , ನಡುವೆ ಕುಡಿಕೆ / Around are meadow grass , between them are small pots | ಉತ್ತರ - ಕಣ್ಣು / Eyes
ಒಗಟು - ಹತ್ತಲಾರದ ಮರ , ಎಣಿಸಲಾರದ ಕಾಯಿ / A tree which cannot be climbed , A nut which cannot be counted | ಉತ್ತರ - ರಾಗಿ ಗಿಡ / Millet Plant
ಒಗಟು - ರಕ್ತವಿಲ್ಲದ ಮಾಂಸ , ಕರುಳಿಲ್ಲದ ಹೊಟ್ಟೆ / Bloodless Muscle , gutless stomach | ಉತ್ತರ - ಸೀಗಡಿ / Shrimp
ಒಗಟು - ಮುಳ್ಳು ಮುಳ್ಳು ಮರದಲ್ಲಿ , ಮುತ್ತು ಮುತ್ತು ಕಾಯಿ / In a prickly thorn tree , are these pearls | ಉತ್ತರ - ನಿಂಬೆ ಹಣ್ಣು / Lemon
ಒಗಟು - ಸಾಸಿವೆ ಗಾತ್ರದ ಕಲ್ಲು ಬಿದ್ದರೆ , ಸಾವಿರ ರೂಪಾಯಿನ ತೋಟ ಹಾಳು ! / A small stone like a mustard if falls , affects a thousand rupees farm | ಉತ್ತರ - ಕಣ್ಣು / Eyes
ಒಗಟು - ಕಪ್ಪೆ ಮುಟ್ಟದ ಕೈಲಾಸದ ನೀರು ! The god's water which a frog can't touch | ಉತ್ತರ - ಎಳೆನೀರು
ಒಗಟು - ಕಲ್ಲನ್ನು ತುಳಿಯುತ್ತೆ ! ಮುಳ್ಳನ್ನು ಮೂಯುತ್ತೆ ! ನೀರು ಕಂಡ್ರೆ ನಿಲ್ಲುತ್ತೆ ! / It oppresses stone ! It pierces the thorns ! It stops at water | ಉತ್ತರ - ಚಪ್ಪಲಿ / Slippers
ಒಗಟು - ಅಮ್ಮನ ಹಾಸಿಗೆ ಸುತ್ತೊಕ್ಕಾಗಲ್ಲ ! ಅಪ್ಪನ ದುಡ್ಡು ಎಣಿಸೋಕ್ಕಾಗಲ್ಲ ! / Mother's Bed cannot be tied , Father's money cannot be counted | ಉತ್ತರ - ಆಕಾಶ , ನಕ್ಷತ್ರಗಳು
ಒಗಟು - ನೀಲಿ ಕೆರೇಲಿ ಬಿಳಿ ಮೀನು / A white fish in a blue lake | ಉತ್ತರ - ನಕ್ಷತ್ರ
ಒಗಟು - ಕಣ್ಣಿಗೆ ಕಾಣೋದಿಲ್ಲ ! ಕೈಯಿಗೆ ಸಿಗೋದಿಲ್ಲ ! / Invisible and cannot catch | ಉತ್ತರ - ಗಾಳಿ / Wind
ಒಗಟು - ಮಡಿಸಿದರೆ ಮೊಗ್ಗು ! ಬಿಡಿಸಿದರೆ ಹೂವು ! ಪರಿಮಳವಿಲ್ಲ ವಾಸ್ನೆ ಇಲ್ಲ ! / If folded its a bud , when opened its a flower , it has no scent . | ಉತ್ತರ - ಕೊಡೆ / Umbrella
ಒಗಟು - ಚಿನ್ನ ಬಿಸಾಡುತ್ತಾರೆ ! ಬೆಳ್ಳಿ ತಿಂತಾರೆ ! / Gold is thrown , silver is eaten | ಉತ್ತರ - ಬಾಳೆ ಹಣ್ಣು
ಒಗಟು - ಅಕ್ಷರಗಳಿದ್ದರೂ ಪುಸ್ತಕವಲ್ಲ ! ಸಿಂಹವಿದ್ದರೂ ಅರಣ್ಯವಲ್ಲ ! ದುಂಡಾಗಿದ್ದರೂ ಚಕ್ರವಲ್ಲ ! ನಾನ್ಯಾರು ? / It has letters but its not a book , it has a lion but not a forest, it is round , but not a wheel | ಉತ್ತರ - ನಾಣ್ಯ / coin
ಒಗಟು - ಹೋದ ನೆಂಟ ಬಂದ ನೆಂಟ ! ಬಂದ ದಾರಿ ಗೊತ್ತಿಲ್ಲ / The guest comes and goes , but the way they come is not known | ಉತ್ತರ - ನೆರಳು / Shadow
ಒಗಟು - ಕಣ್ಣಿಗೆ ಹತ್ತಿರ , ಕಾಲಿಗೆ ದೂರ / Near for eyes , Far for Legs | ಉತ್ತರ - ದಿಗಂತ / Horizons
ಒಗಟು - ಊರುಂಟು ಜನರಿಲ್ಲ ! ನದಿಯುಂಟು ನೀರಿಲ್ಲ ! ರಸ್ತೆಯುಂಟು ವಾಹನವಿಲ್ಲ ! ಹಾಗಾದರೆ ನಾನ್ಯಾರು ? / Village exists , but no one is there , There is river but no water , There is road but no vehicles , Who am ! ? | ಉತ್ತರ - ಭೂಪಟ / Map
ಒಗಟು - ಅಣ್ಣ ತಮ್ಮ ಇಬ್ಬರೂ ನಾ ಮುಂದೆ ತಾ ಮುಂದೆ ಎನ್ನುತ್ತಾರೆ ! ಆದರೆ ಯಾರೂ ಮುಂದೆ ಹೋಗುವುದಿಲ್ಲ ! / Both brothers try to go first one after other , but none of them comes first. | ಉತ್ತರ - ಕಾಲುಗಳು / Legs
ಒಗಟು - ಹೋಗುತ್ತಾ ಬರುತ್ತಾ ಇರುವುದು ಎರಡು , ಎರಡೂ ಹೋದ ಮೇಲೆ ಬರಲಾರವು / Both keep coming and going , But both when gone does not come back | ಉತ್ತರ - ಸಿರಿತನ - ಬಡತನ , ಪ್ರಾಣ - ಮಾನ / Wealth - Poverty , Life force - Respect
ಒಗಟು - ಕಚ್ಚಿದರೆ ಮಾತ್ರ ಕಚ್ಚುವುದು ! ಕಚ್ಚಲ್ಲ , ಹಾವಲ್ಲ , ಚೇಳಲ್ಲ / It bites if we bite ! It does not bite , its not a snake nor a scorpio | ಉತ್ತರ - ಮೆಣಸಿನ ಕಾಯಿ / Chilli
ಒಗಟು - ಅಂಗಡಿಯಲ್ಲಿ ತರೋದು ಅದರ ಮುಂದು ಕೂತು ಅಳೋದು / Bring it from shop and cry in front of it | ಉತ್ತರ - ಈರುಳ್ಳಿ / Onion
ಒಗಟು - ಎರಡು ಮನೆಗೆ ಒಂದೇ ದೂಲ / Both houses have a common wall | ಉತ್ತರ - ಮೂಗು / Nose
Subscribe , Follow on
Facebook Instagram YouTube Twitter WhatsApp