-->

Kannada Shayari and other Shayari collections

In this post  , we share our collections of Kannada and few other language shayari which may include comedy , fun , love , humor , funny and any other category . You may also contribute to this post by sharing your shayaris to thinkbangalore@gmail.com or post under comments.

Read , share and Enjoy madi !!!

ಅವನು S.S.L.C. ಯಲ್ಲಿ  Rank ತಗೊಂಡ  ಕಾರಣ, ಅವನು ಪ್ರತಿಭಾವಂತ //ವ್ಹಾ ವ್ಹಾ//
ಅವನು S.S.L.C. ಯಲ್ಲಿ Rank ತಗೊಂಡ ಕಾರಣ, ಅವನು ಪ್ರತಿಭಾವಂತ //ವ್ಹಾ ವ್ಹಾ//
ಅವನು P.U.C. ನಲ್ಲಿ ಫೇಲ್ ಆದ ಕಾರಣ, ಅವಳು ಯಾರೋ ಪ್ರತಿಭಾ ಅಂತಾ!!!
Kannada Shayari  Enjoy madi

ಅವನು ಹೇಳಿದ್ದು ಇಷ್ಟೇ
I LOVE U ಗಾಯಿತ್ರಿ //ವ್ಹಾ ವ್ಹಾ//
ಅವನು ಹೇಳಿದ್ದು ಇಷ್ಟೇ,
I LOVE YOU ಗಾಯಿತ್ರಿ..
ಆಗಿದ್ದು ಇಷ್ಟೇ.. ಮುಖದ ಮೇಲೆ ಗಾಯ THREE!!

ಪ್ರೀತಿಸುವ ಮೊದಲು
ಪ್ರೀತಿಯ ಆಳ ನೋಡು.. //ವ್ಹಾ ವ್ಹಾ//
ಪ್ರೀತಿಸುವ ಮೊದಲು ಪ್ರೀತಿಯ ಆಳ ನೋಡು..
ನಂಬಿಕೆ ಬರದಿದ್ರೆ,
ಮುಂಗಾರು ಮಳೆ FILM ನೋಡು..

ನೀನು ನನ್ನ ಮನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ಕನಸು ಕದ್ದೆ, ನಾನು ಸುಮ್ಮನಿದ್ದೆ
ನನ್ನ ನಿದ್ದೆ ಕದ್ದೆ, ಆಗಲೂ ನಾನು ಸುಮ್ಮನಿದ್ದೆ
ನೀನು ನನ್ನ ನಾಯಿಯ ಪ್ಲೇಟ್ ಕದ್ದೆ,
ನಾನು ಸುಮ್ಮನಿದ್ದರೂ ನಾಯಿ ಸುಮ್ಮನೆ ಬಿಡುವುದಿಲ್ಲ..
ಮರ್ಯಾದೆಯಿಂದ ತಂದುಕೊಡು...!!

ನುಡಿದರೆ, ಮುತ್ತಿನ ಹಾರದಂತಿರಬೇಕು //ವ್ಹಾ ವ್ಹಾ//
ನುಡಿದರೆ, ಮುತ್ತಿನ ಹಾರದಂತಿರಬೇಕು.
ಕುಡಿದರೆ, ಮನೆಯವರಿಗೆ ಅನುಮಾನ ಬಾರದಂತಿರಬೇಕು...

ಹೃದಯದ ಗಾಯಕ್ಕೆ ಇಲ್ಲಾ ಮುಲಾಮ್ //ವ್ಹಾ ವ್ಹಾ//
ಹೃದಯದ ಗಾಯಕ್ಕೆ ಇಲ್ಲಾ ಮುಲಾಮ್....
ಅದಕ್ಕೆ ಮದುವೆ ಆಗಲಿಲ್ಲಾ
'ಅಬ್ದುಲ್ ಕಲಾಮ್'

ಶಿಲ್ಪಿ ಕಲ್ಲನ್ನು ಕೆತ್ತಿದರೆ ಕಲೆ /ವಾ..ವಾ../
ಶಿಲ್ಪಿ ಕಲ್ಲನ್ನು ಕೆತ್ತಿದರೆ ಕಲೆ.....
ಅದೇ ಕಲ್ಲಿನಿಂದ ಶಿಲ್ಪಿಯನ್ನು ಕೆತ್ತಿದರೆ, ಕೊಲೆ...../ವಾ..ವಾ.//
Terms | Privacy | 2024 🇮🇳
–>