-->

Kannada subhashitha , ಮನಮುಟ್ಟಿದ ಸಾಲುಗಳು

ಮನಮುಟ್ಟಿದ ಸಾಲುಗಳು

1." ನೀವೇನನ್ನು ಬಯಸುತ್ತೀರೋ 
ಅದನ್ನು ಪಡೆಯಲಾರಿರಿ. ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ. ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ. ಯಾವುದು ಶಾಶ್ವತವೋ ಅದು ಬೇಸರ.
Kannada subhashitha , ಮನಮುಟ್ಟಿದ ಸಾಲುಗಳು

ಅದೇ ಬದುಕು"...
     ●●●●●●●
2. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ ಸಮನಾದೀತು. ಬದುಕಿನಲ್ಲೂ ಹಾಗೆ ನಾವು ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..
   ●●●●●●●
3. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ 
ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ ನಿಮಗೆ ಅತ್ಯಂತ ಖುಷಿಯೆನಿಸುವದು.
ಅದು ಯಾವುದೆಂದರೆ ಬೇರೆಯವರ
ಕಣ್ಣುಗಳಲಿ ನೀವು ಕಾಣುವ ನಿಮ್ಮ ಬಗೆಗಿನ ಕಾಳಜಿ"...
     ●●●●●●●
4. "ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ ಬದುಕುಳಿಯುವದು. ಆದರೆ ಅದು ಪ್ರತಿದಿನ ಅತ್ಯಂತ ಸಂತೋಷದಿಂದ ಹಾರಾಡುವದು ಮತ್ತು ಹಲವರ ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ ಪ್ರಮುಖ. ಯಾವಾಗಲೂ ಸುಖ ಸಂತೋಷದಿಂದಿರಿ"...
    ●●●●●●
5. "ಕಾಲಿಗೆ ಬೂಟುಗಳಿಲ್ಲವೆಂದು ನಾನು ಅಳುತ್ತಿದ್ದೆ. ಆದರೆ ಕಾಲುಗಳೇ ಇಲ್ಲದ ವ್ಯಕ್ತಿಯನು ಕಂಡಾಗ ನಾನು ಅಳುವುದನ್ನು ನಿಲ್ಲಿಸಿಬಿಟ್ಟೆ. ಬದುಕು ಆಶೀರ್ವಾದಗಳ ಸಂತೆ.ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು"...
    ●●●●●●●
6. "ಯಾರಾದರೂ ಬಹು ಬೇಗ ಸತ್ತು
ಹೋದರೆ ದೇವರು ಅವನನ್ನು ತುಂಬಾ ಪ್ರೀತಿಸುತ್ತಾನೆಂದು ಜನ ಅಭಿಪ್ರಾಯ ಪಡುತ್ತಾರೆ. ಆದರೆ ಭೂಮಿಯ ಮೇಲೆ ಇನ್ನೂ ಬದುಕಿದ್ದೇವೆಂದರೆ ಏನರ್ಥ?
ಈ ಭೂಮಿಯ ಮೇಲೆ ಯಾರೋ ದೇವರಿಗಿಂತ ನಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಎಂದರ್ಥ"...
    ●●●●●●●
7. "ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ ತೋರುವ ಯಾರನ್ನು ನೋಯಿಸಬೇಡಿ"...
      ●●●●●●●
8. "ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು  ರೂಪಿಸಲಾರದು. ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನು ರೂಪಿಸಲಾರದು. ತಿಳಿಯಾದ ಆಕಾಶ ಒಬ್ಬ ಒಳ್ಳೆಯ ವಿಮಾನ ಚಾಲಕನನ್ನು ರೂಪಿಸಲಾರದು. ಸಮಸ್ಯೆಗಳೇ ಇಲ್ಲದ ಜೀವನ ಎಂದಿಗೂ ಸಾಧಕರನು ರೂಪಿಸದು"...
     ●●●●●●●
9. "ಸಮಯ ನಮಗಾಗಿ ಕಾಯುವುದಿಲ್ಲ ಎಂದಾದರೆ ನಾವೇಕೆ ಯೋಗ್ಯ ಸಮಯಕ್ಕಾಗಿ ಯಾವಾಗಲೂ ಕಾಯಬೇಕು? 
ಒಳ್ಳೆಯ ಕೆಲಸ ಮಾಡುವುದಕೆ ಯಾವಾಗಲೂ ಕೆಟ್ಟ ಸಮಯ ಎಂದಿರುವದಿಲ್ಲ"...
     ●●●●●●

ಸುಂದರ ಸರಳ ಜೀವನಕ್ಕೆ ಕೆಲವು ಸೂತ್ರಗಳು:


1. ದಿನಾ 10-30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, 7 ಘಂಟೆಗಳ ಕಾಲ ನಿದ್ದೆ ಮಾಡಿ.

2. ದಿನಾಲೂ ಪ್ರಾರ್ಥನೆ, ಧ್ಯಾನ ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಡವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.

3. ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.

4. ಧಾರಾಳವಾಗಿ ನೀರು ಕುಡಿಯಿರಿ. ಇಷ್ಟವಾದ ಆಟವಾಡಿ.

5. ತಿಂಡಿ ರಾಜನಂತೆ ತಿನ್ನಿ. ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ. ರಾತ್ರಿ ಊಟ ಭಿಕ್ಷುಕನಂತೆ ಇರಲಿ.

6. ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.

7. ಜಾಸ್ತಿ ಮುಗುಳ್ನಗೆ ಬೀರಿ. ಹೆಚ್ಚೆಚ್ಚು ನಕ್ಕುಬಿಡಿ. ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.

8. ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.

9. ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕೊಲ್ಲಬೇಡಿ. ಜೀವನ ಚಿಕ್ಕದು. ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ. ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.

10. ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ ವಯೋಮಾನದ ಹಿರಿಯರೊಂದಿಗೆ ಹಾಗೂ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಡನೆ ಕಾಲ ಕಳೆಯಿರಿ.

11. ಎಲ್ಲಾ ವಾದಗಳನ್ನೂ ಗೆಲ್ಲಲೇಬೇಕಿಂದಿಲ್ಲ. ಸೋತು ಗೆದ್ದುಬಿಡಿ.

12. ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.

13. ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

14. ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.

15. ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು. ಅವರಿಗೆ  ಯಾವಾಗಲೂ ಸಮಯ ಕೊಡಿ.

16. ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.b
💬ನಿಜಕ್ಕೂ ಜೀವನದಲ್ಲಿ ಸತ್ಯ ವಾಗಿದೆ ಈ ಮೇಲಿನ ವಾಕ್ಯಗಳು👌👌
–>