-->

Kannada subhashitha , ಪ್ರಶ್ನೋತ್ತರಮಾಲಿಕಾ

ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ
ಪ್ರಶ್ನೋತ್ತರಮಾಲಿಕಾ , ಬದುಕಿನಲ್ಲಿ ಏನನ್ನು
ಮಾಡಬೇಕು , ಏನನ್ನು ಮಾಡಬಾರದೆಂದು ಬಹಳ
ಸುಂದರ , ಸರಳವಾಗಿ ತಿಳಿಸುತ್ತದೆ..

ಈ ಲೇಖನವನ್ನು ತಪ್ಪದೇ ಓದಿ..


ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..?
ಪೂಜ್ಯರೇ ಜೀವನದಲ್ಲಿ
ಏನನ್ನು ಅನುಸರಿಸಬೇಕು ?
ಉತ್ತರ - ಗುರುವಚನಮ್
ಜೀವನದಲ್ಲಿ ಗುರು-ಹಿರಿಯರ
ಮಾತನ್ನು ಅನುಸರಿಸಬೇಕು.

ಪ್ರಶ್ನೆ - ಕಃ ಪಥ್ಯತರಃ ?
ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ?
ಉತ್ತರ - ಧರ್ಮಃ
ಧರ್ಮವೇ ಹಿತಕರವಾದದ್ದು.

ಪ್ರಶ್ನೆ - ಕಿಮ್ ವಿಷಮ್ ?
ಯಾವುದು ವಿಷ ?
ಉತ್ತರ - ಅವಧೀರಣಾ ಗುರುಷು
ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ.

ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ?
ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ
ಯಾವುದು ?
ಉತ್ತರ - ಸ್ವಪರಹಿತಾಯ ಉದ್ಯತಂ ಜನ್ಮ
ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ
ಜೀವನವನ್ನು ತೊಡಗಿಸಿಕೊಳ್ಳುವುದು.

ಪ್ರಶ್ನೆ - ಕೇ ಚ ದಸ್ಯವಃ ?
ಕಳ್ಳರು ಯಾರು ?
ಉತ್ತರ - ವಿಷಯಾಃ
ಸುಖಪಭೋಗ
ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ
ಮನಸನ್ನು
ಅಪಹರಿಸುತ್ತವೆ )

ಪ್ರಶ್ನೆ - ಕೋ ವೈರೀ ?
ನಮ್ಮ ಶತ್ರು ಯಾರು ?
ಉತ್ತರ - ಯಸ್ತು ಅನುದ್ಯೋಗಃ
ನಿರುದ್ಯೋಗವೇ ನಮ್ಮ ಶತ್ರು.

ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ?
ಶ್ರೇಷ್ಠತೆಯ ಮೂಲ ಯಾವುದು ?
ಉತ್ತರ - ಯತ್ ಏತತ್ ಅಪ್ರಾರ್ಥನಮ್ ನಾಮ ಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ
ಶ್ರೇಷ್ಠತೆ

ಪ್ರಶ್ನೆ - ಕಿಮ್ ದುಃಖಮ್ ?
ದುಃಖವೆಂದರೇನು..?
ಉತ್ತರ - ಅಸಂತೋಷಃ
ಸಂತೋಷವನ್ನು ಕಳೆದುಕೊಂಡಾಗಿನ ಅವಸ್ಥೆ.

ಪ್ರಶ್ನೆ - ಕಿಮ್ ಜಾಡ್ಯಮ್ ?
ಆಲಸ್ಯತನವು ಯಾವುದು ?
ಉತ್ತರ - ಪಾಠತೋSಪಿ ಅನಭ್ಯಾಸಃ
ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು , ಅಧ್ಯಯನ
ಮಾಡದಿರುವುದು.

ಪ್ರಶ್ನೆ - ನಲಿನೀ-ದಲ-ಗತ-ಜಲವತ್-ತರಲಂ 
ಕಿಮ್ ?
ಕಮಲದ ಎಲೆಯ ಮೇಲಿನ ನೀರಿನಂತೆ
ಚಂಚಲವಾದದ್ದು ಯಾವುದು ?
ಉತ್ತರ - ಯೌವ್ವನಂ - ಧನಂ ಚ ಆಯುಃ
ತಾರುಣ್ಯ,ಸಂಪತ್ತು ಮತ್ತು ಆಯುಷ್ಯ
ಇವು ಕಮಲದ ಎಲೆ ಮೇಲಿನ ನೀರಿನಂತೆ
ಚಂಚಲವಾದವುಗಳು.

ಪ್ರಶ್ನೆ - ಕಿಮ್ ಚ ಅನರ್ಘಮ್ ?
ಬೆಲೆ ಕಟ್ಟಲಾಗದ್ದು ಯಾವುದು ?
ಉತ್ತರ - ಯದವಸರೇ ದತ್ತಮ್ ?
ಸರಿಯಾದ ಸಮಯದಲ್ಲಿ ಅನ್ಯರಿಗೆ ದಾನ ಮಾಡಿದ್ದು.

ಪ್ರಶ್ನೆ - ಆಮರಣಾತ್ ಕಿಮ್ ಶಾಲ್ಯಮ್ ?
ಸಾಯುವವರೆಗೂ ಬಾಣದಂತೆ
ಚುಚ್ಚುತ್ತಲೇ ಇರುವುದು ಯಾವುದು ?
ಉತ್ತರ - ಪ್ರಚ್ಛನ್ನಂ ಯತ್ ಕೃತಂ ಪಾಪಮ್
ಬಚ್ಚಿಟ್ಟುಕೊಂಡ ಪಾಪಕಾರ್ಯ
ಸಾಯುವವರೆಗೂ ಬಾಣದಂತೆ
ಚುಚ್ಚತ್ತಲೇ ಇರುತ್ತದೆ .

ಪ್ರಶ್ನೆ - ಕುತ್ರ ವಿಧೇಯೋ ಯತ್ನಃ ?
ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ?
ಉತ್ತರ - ವಿದ್ಯಾಭ್ಯಾಸೇ ಸದೌಷಧೇ ದಾನೇ
ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ
ಮತ್ತು ದಾನ ಮಾಡುವಲ್ಲಿ ಪ್ರಯತ್ನ
ಮಾಡಬೇಕು..

ಪ್ರಶ್ನೆ - ಕೇನ ಜಿತಂ ಜಗದೇತತ್ ?
ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ?
ಉತ್ತರ - ಸತ್ಯ-ತಿತಿಕ್ಷಾವತಾ ಪುಂಸಾ
ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು ಈ
ಜಗತ್ತನ್ನು ಗೆಲ್ಲುತ್ತಾನೆ.

ಪ್ರಶ್ನೆ - ಕಸ್ಯ ವಶೇ ಪ್ರಾಣಿಗಣಃ ?
ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?
ಉತ್ತರ - ಸತ್ಯ-ಪ್ರಿಯಭಾಷಿಣೋ ವಿನೀತಸ್ಯ
ಪ್ರಾಣಿ
ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ
ವಿನಯಶಾಲಿಯ ವಶದಲ್ಲಿ ಇರುತ್ತದೆ.

ಪ್ರಶ್ನೆ - ಕ್ವ ಸ್ಥಾತವ್ಯಮ್ ?
ಎಲ್ಲಿ ಸ್ಥಿರವಾಗಿ ನಿಲ್ಲಬೇಕು ?
ಉತ್ತರ - ನ್ಯಾಯ್ಯೇ ಪಥಿ ದೃಷ್ಟ - ಅದೃಷ್ಟ -
ಲಾಭಾಢ್ಯೇ
ದೃಷ್ಟ ಮತ್ತು ಅದೃಷ್ಟ
(ಕಂಡು ಕಾಣದ )ಲಾಭದಿಂದ ಸಮೃದ್ಧವಾದ
ನ್ಯಾಯಯುತವಾದ
ಮಾರ್ಗದಲ್ಲಿ ಸದಾ ನಿಲ್ಲಬೇಕು.

ಪ್ರಶ್ನೆ - ಕಿಮ್ ದಾನಮ್ ?
ದಾನವು ಯಾವುದು ?
ಉತ್ತರ - ಅನಾಕಾಂಕ್ಷಮ್
ಪ್ರತಿಫಲವನ್ನು ಬಯಸದೇ ಮಾಡಿದ
ದಾನವೇ ನಿಜವಾದ ದಾನವು .

ಪ್ರಶ್ನೆ - ಕಿಮ್ ಮಿತ್ರಮ್ ?
ನಿಜವಾದ ಮಿತ್ರನು ಯಾರು ?
ಉತ್ತರ - ಯೋ ನಿವಾರಯತಿ ಪಾಪಾತ್
ಪಾಪ ಕಾರ್ಯಗಳನ್ನು ಮಾಡದಂತೆ
ತಡೆಯುವನು ನಿಜವಾದ ಮಿತ್ರನು.

ಪ್ರಶ್ನೆ - ಕಿಮ್ ಶೋಚ್ಯಮ್ ?
ದುಃಖಕರವಾದುದು ಯಾವುದು ?
ಉತ್ತರ - ಕಾರ್ಪಣ್ಯಮ್
ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು..

ಪ್ರಶ್ನೆ - ಕಃ ಪರಿಹರ್ಯೋ ದೇಶಃ ?
ಎಂತಹ ದೇಶದಿಂದ ದೂರ ಇರಬೇಕು ?
ಉತ್ತರ - ಪಿಶುನಯುತೋ ಲುಬ್ಧಭೂಪಶ್ಚ
ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ
ರಾಜನುಳ್ಳ ದೇಶವನ್ನು ತೊರೆಯಬೇಕು.

ಪ್ರಶ್ನೆ - ಇಹ ಭುವನೇ ಕೋ ಶೋಚ್ಯಃ ?
ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ?
ಉತ್ತರ - ಸತ್ಯಪಿ ಭುವನೇ ಯೋ ನ ದಾತಾ
ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ.

ಪ್ರಶ್ನೆ - ಕಿಮಹರ್ನಿಶಂ ಅನುಚಿಂತ್ಯಮ್ ?
ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?
ಉತ್ತರ - ಭಗವಚ್ಚರಣಮ್ ನ ಸಂಸಾರಃ
ಹಗಲಿರುಳು ಪರಮಾತ್ಮನ ಚರಣದ ಚಿಂತೆ
ಮಾಡಬೇಕೇ ವಿನಃ ಸಂಸಾರವನ್ನಲ್ಲ .

ಪ್ರಶ್ನೆ - ಕಿಮ್ ಸಂಪಾದ್ಯಂ ಮನುಜೈಃ ?
ಮಾನವರು ಏನನ್ನು ಸಂಪಾದಿಸಬೇಕು ?
ಉತ್ತರ - ವಿದ್ಯಾ , ವಿತ್ತಮ್ , ಬಲಂ , ಯಶಃ ,
ಪುಣ್ಯಮ್
ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ
ಮತ್ತು ಪುಣ್ಯಗಳನ್ನು ಸಂಪಾದಿಸಬೇಕು .

ಪ್ರಶ್ನೆ - ಕಃ ಸರ್ವಗುಣವಿನಾಶೀ ?
ಎಲ್ಲ
ಗುಣಗಳನ್ನು ನಾಶಪಡಿಸುವಂಥಹದು ಯಾವುದು ?
ಉತ್ತರ - ಲೋಭಃ
ಲೋಭವು ಸರ್ವ ಗುಣಗಳನ್ನು ನಾಶ
ಪಡಿಸುವಂತಹದು.

ಪ್ರಶ್ನೆ - ಶತ್ರುಶ್ಚ ಕಃ ?
ವೈರಿಯು ಯಾರು ?
ಉತ್ತರ - ಕಾಮಃ
ಕಾಮವೇ ವೈರಿಯು .

ಪ್ರಶ್ನೆ - ಕಾ ಸುರಕ್ಷ್ಯಾ
ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ?
ಉತ್ತರ - ಕೀರ್ತಿಃ , ಪತಿವ್ರತಾ , ನೈಜಬುದ್ಧಿಶ್ಚ
ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ
ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ .

ಪ್ರಶ್ನೆ - ಕಾ ಕಲ್ಪಲತಾ ಲೋಕೇ ?
ಜಗತ್ತಿನ್ನಲ್ಲಿ ಕಲ್ಪಲತೆ ಯಾವುದು ?
(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ಬಳ್ಳಿ )
ಉತ್ತರ - ಸಚ್ಛಿಷ್ಯಾಯ ಅರ್ಪಿತಾ ವಿದ್ಯಾ
ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು
ಜಗತ್ತಿನಲ್ಲಿ ಕಲ್ಪಲತೆ .

ಪ್ರಶ್ನೆ - ಪಾತಕಂ ಚ ಕಿಮ್ ?
ಪಾತಕವು ಯಾವುದು ?
ಉತ್ತರ - ಹಿಂಸಾ
ಹಿಂಸೆಯೇ(ಕ್ರೂರತೆ) ಪಾತಕವು.

ಪ್ರಶ್ನೆ - ಸಂಭಾವಿತಸ್ಯ ಮರಣಾತ್ ಅಧಿಕಂ ಕಿಮ್ ?
ಒಳ್ಳೆಯವನಿಗೆ ಸಾವಿಗಿಂತಲೂ
ಹೆಚ್ಚು ದುಃಖದಾಯಕ ಯಾವುದು ?
ಉತ್ತರ - ದುರ್ಯಶೋ ಭವತಿ
ಅಪಕೀರ್ತಿಯು ಮರಣಕ್ಕಿಂತಲೂ
ಹೆಚ್ಚು ದುಃಖದಾಯಕ.

ಪ್ರಶ್ನೆ - ಕೋ ವರ್ಧತೇ ?
ಯಾರು ಪ್ರಗತಿ ಯನ್ನು ಹೊಂದುತ್ತಾರೆ ?
ಉತ್ತರ - ವಿನೀತಃ
ವಿನಮ್ರ ನಾದವನು (ವಿನಯಶಾಲಿಯು )
ಪ್ರಗತಿಯನ್ನು ಹೊಂದುತ್ತಾನೆ .

ಪ್ರಶ್ನೆ - ಕಿಮ್ ಭಾಗ್ಯಂ ದೇಹವತಾಮ್ ?
ದೇಹಿಗಳಿಗೆ (ಮನುಷ್ಯರಿಗೆ)
ಭಾಗ್ಯವು ಯಾವುದು ?
ಉತ್ತರ - ಆರೋಗ್ಯಮ್
ಆರೋಗ್ಯವೇ ಭಾಗ್ಯವು .

ಪ್ರಶ್ನೆ - ಕೋ ಜಗದ್ಭರ್ತಾ ?
ಜಗತ್ತಿನ ಸಂರಕ್ಷಕನ್ಯಾರು ?
ಉತ್ತರ - ಸೂರ್ಯಃ
ಸೂರ್ಯ.

ಪ್ರಶ್ನೆ - ಸರ್ವೇಷಾಂ ಕೋ ಜೀವನಹೇತುಃ ?
ಎಲ್ಲರ ಬದುಕಿಗೆ ಕಾರಣನು ಯಾರು ?
ಉತ್ತರ - ಸ ಪರ್ಜನ್ಯಃ
ಪರ್ಜನ್ಯನು (ಮಳೆ ) ಎಲ್ಲರ ಬದುಕಿಗೆ ಕಾರಣನು .

ಪ್ರಶ್ನೆ - ಕಃ ಶೂರಃ ?
ಶೂರನು ಯಾರು ?
ಉತ್ತರ - ಯೋ ಭೀತತ್ರಾತಾ
ಭೀತನಾದವನನ್ನು ಕಾಪಾಡುವವನು ಶೂರನು .

ಪ್ರಶ್ನೆ - ತ್ರಾತಾ ಚ ಕಃ ?
ಮತ್ತೆ ಕಾಪಾಡುವವನು ಯಾರು ?
ಉತ್ತರ - ಸ ಗುರುಃ
ಗುರುವೇ ಕಾಪಾಡುವವನು.

ಪ್ರಶ್ನೆ - ಪ್ರತ್ಯಕ್ಷದೇವತಾ ಕಾ ?
ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ?
ಉತ್ತರ - ಮಾತಾ
ತಾಯಿಯೇ ಪ್ರತ್ಯಕ್ಷ ದೇವತೆಯು .

ಪ್ರಶ್ನೆ - ಪೂಜ್ಯೋ ಗುರುಶ್ಚ ಕಃ ?
ಪೂಜ್ಯ ಗುರುವು ಯಾರು ?
ಉತ್ತರ - ತಾತಃ
ತಂದೆಯೇ ಪೂಜ್ಯ ಗುರುವು .

ಪ್ರಶ್ನೆ - ಪಾತ್ರಂ ಕಿಮ್ ಅನ್ನದಾನೇ ?
ಅನ್ನದಾನಕ್ಕೆ ಅರ್ಹನಾರು ?
ಉತ್ತರ - ಕ್ಷುಧಿತಮ್
ಹಸಿದವನು ಅನ್ನದಾನಕ್ಕೆ ಅರ್ಹನು .

ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಜೀವನದಲ್ಲಿ ಇಷ್ಟು ಪ್ರಶ್ನೆಗಳಿಗೆ ಉತ್ತರ
ಕಂಡುಕೊಂಡರೆ ಸಾಕು..
ತತ್ವಜ್ಞಾನವನ್ನರಿಯಲು
ಇನ್ನ್ಯಾವ ಶಾಸ್ತ್ರ-ಪುರಾಣಗಳ ಅಗತ್ಯತೆಯಿಲ್ಲ..
Terms | Privacy | 2024 🇮🇳
–>