ಕೊಲ್ಲೂರು ಮೂಕಾಂಬಿಕೆ ಬಗ್ಗೆ ಈ 19 ಸತ್ಯಗಳ್ನ ತಿಳ್ಕೊಂಡ್ರೆ ಜೀವನದಲ್ಲಿ ಒಂದ್ಸಲಿ ನೋಡಬೇಕು ಅನ್ನಿಸುತ್ತೆ
ಸಾವಿರಾರು ವರ್ಷದಿಂದ ಸತತವಾಗಿ ಕನ್ನಡಿಗರು ಪೋಷಿಸಿಕೊಂಡು ಬಂದಿರೋ ದೇವಸ್ಥಾನ ಇದು
ನಮ್ಮ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ. ಪಾರ್ವತಿ, ಸರಸ್ವತಿ ಹಾಗೂ ಲಕ್ಷ್ಮಿಯ ಸ್ವರೂಪವಾದ ಮೂಕಾಂಬಿಕೆಯ ದರ್ಶನ ಪಡೆಯುವುದಕ್ಕೆ ಲಕ್ಷಗಟ್ಟಲೆ ಜನ ಕರ್ನಾಟಕ, ಕೇರಳ ಮತ್ತು ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ಕಡೆಯಿಂದ ಬರ್ತಾರೆ. ಸುಂದರ ಪರಿಸರದ ಮಧ್ಯೆ ಇರೋ ಈ ದೇವಾಲಯಕ್ಕೆ ಇರೋ ಪುರಾತನ ಹಿನ್ನಲೆ ಏನು, ಅಲ್ಲಿಯ ವಿಶೇಷತೆ ಏನು ಅಂತ ಗೊತ್ತೇ...
1. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಇರೋದು ಕೊಡಚಾದ್ರಿಯ ಹಸಿರಿನ ಮಧ್ಯೆ, ಸೌಪರ್ಣಿಕಾ ನದಿ ತೀರದಲ್ಲಿ
ಕನ್ನಡಿಗರು, ತುಳುವರು, ತಮಿಳರು ಮತ್ತು ಮಳಯಾಳಿಗಳ ಅರಾಧ್ಯ ದೇವತೆ, ಶಕ್ತಿದೇವತಿ ಇವಳು.
ಮೂಲ
2. ಮಂಗಳೂರಿಂದ 147 ಕಿ.ಮಿ ದೂರದಲ್ಲಿದೆ
ಕೊಲ್ಲೂರು ಉಡುಪಿ ಜಿಲ್ಲೆಗೆ ಸೇರಿದೆ. ಕೊಲ್ಲೂರು ಕ್ಷೇತ್ರದ ಮೂಲ ಹೆಸರು ‘ಮಹಾರಣ್ಯಪುರ’ ಅಂತ ಇತ್ತು ಅಂತಾರೆ. ಕೊಡಚಾದ್ರಿ ಬೆಟ್ಟದಿಂದ ಪಶ್ಚಿಮ ದಿಕ್ಕಿನಲ್ಲಿ ಇಳೀಬೇಕು ಇಲ್ಲಿಗೆ ಬರಕ್ಕೆ.
ಮೂಲ
3. ದೇವಸ್ಥಾನದಲ್ಲಿರೋ ಕಬ್ಬಿಣದ ಕಂಬ ಡೆಲ್ಲಿಯಲ್ಲಿರೋ ಕುತುಬ್ ಮಿನಾರ್ ಮುಂದೆ ಇರೋ ಕಂಬಕ್ಕಿಂತ 1300 ವರ್ಷ ಹಳೇದು.
ಕುತುಬ್ ಮಿನಾರ್ ಮುಂದೆ ಇರೋ ಕಬ್ಬಿಣದ ಕಂಬ 1000 ವರ್ಷ ಹಳೇದಾದ್ರೆ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದ ಮುಂದೆ ಇರೋ ಧ್ವಜಸ್ಥಂಭವನ್ನ ಸ್ಥಳೀಯರು 2300 ವರ್ಷದ ಹಿಂದೇನೇ ಕಟ್ಟಿದ್ದರು. ಈಗಲೂ ಅದು ಒಂದು ಸ್ವಲ್ಪಾನೂ ತುಕ್ಕು ಹಿಡಿಯದೆ, ಹಾಳಾಗದೆ ಗಟ್ಟಿಮುಟ್ಟಾಗಿದೆ. ವಿಜ್ಞಾನಿಗಳು ಇದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ.
ಮೂಲ
4. ‘ಕೋಲ’ ಅನ್ನೋ ಹೆಸರಿನ ಮಹರ್ಷಿಯೊಬ್ಬ ಪೂಜೆ ಮಾಡ್ತಿದ್ದ ಲಿಂಗದಲ್ಲಿ ಮೂಕಾಂಬಿಕೆ ನೆಲೆಸಿದಳಂತೆ, ಅವನ ಹೆಸರಿಂದಾನೇ ‘ಕೊಲ್ಲೂರು’ ಅನ್ನೋ ಹೆಸರು ಬಂತಂತೆ
ಅವನಿಂದ ಈ ಜಾಗಕ್ಕೆ ಕೋಲಾಪುರ ಅಂತ ಹೆಸರಿತ್ತು. ಕಾಲಾನಂತರ ಇದು ಕೊಲ್ಲೂರು ಆಯ್ತು. ಕೋಲ ಮಹರ್ಷಿ ತನ್ನ ಆಶ್ರಮದ ಹಸುವೊಂದು ಪ್ರತಿನಿತ್ಯ ಒಂದು ಲಿಂಗಕ್ಕೆ ಹಾಲು ಸುರಿಸುವುದನ್ನು ಕಂಡು ಆ ಲಿಂಗಕ್ಕೆ ಏನೋ ಅದ್ಭುತ ಶಕ್ತಿ ಇರ್ಬೇಕು ಅಂತ ನಂಬಿ ಆ ಲಿಂಗವನ್ನ ಪೂಜಿಸೋಕ್ಕೆ ಶುರು ಮಾಡಿದನಂತೆ. ಆಗ ಕಂಹಾಸುರನೆಂಬ ರಾಕ್ಷಸನು ತೊಂದರೆ ಕೊಡಲು ಶುರು ಮಾಡಿದ. ಜೊತೆಗೆ ಶಿವನ ಕುರಿತು ಕಠಿಣ ತಪಸ್ಸು ಮಾಡಿ ಇನ್ನೇನು ವರ
ಕೇಳಬೇಕು ಅನ್ನೋಷ್ಟರಲ್ಲಿ ಕೋಲ ಮಹರ್ಷಿಯ ಕೋರಿಕೆಯಂತೆ ಮಹಾದೇವಿ ಅವನ ನಾಲಿಗೆಯ ಮೇಲೆ ಕೂತು ಅವ ಮೂಕನಾಗುವ ಹಾಗೆ ಮಾಡುತ್ತಾಳಂತೆ. ಮಹರ್ಷಿಯ ಈ ಕುತಂತ್ರ ಮೂಕಾಸುರನಿಗೆ ಗೊತ್ತಾಗಿ ಅವನನ್ನು ಸಾಯಿಸಲು ಮುಂದಾಗುತ್ತಾನೆ. ಆಗ ದೇವಿಯು ಶಕ್ತಿಸ್ವರೂಪಿಣಿಯಾಗಿ ಮೂಕಾಸುರನ್ನ ಸಾಯಿಸಿ ಅಲ್ಲಿಯೆ ಕೋಲ ಮಹರ್ಷಿ ಪೂಜಿಸುತ್ತಿದ್ದ ಲಿಂಗದಲ್ಲಿ ನೆಲೆಸುತ್ತಾಳೆ ಎಂದು ಕಥೆ ಇದೆ.
ಮೂಲ
5. ಇನ್ನೊಂದು ಪುರಾಣದ ಪ್ರಕಾರ ಕೊಲ್ಲೂರ್ನ ಕಟ್ಟಿದ್ದು ಪರಶುರಾಮ ಅಂತೆ
ಪರಶುರಾಮ ತನ್ನ ಏಳು ಮುಕ್ತಿಸ್ಥಳಗಳಲ್ಲಿ ಕೊಲ್ಲೂರಿನಲ್ಲಿ ಮಾತ್ರ ಪಾರ್ವತಿಯ ವಿಗ್ರಹ ಸ್ಥಾಪಿಸಿದ್ದನಂತೆ. ಮಿಕ್ಕ ಆರು ಕ್ಷೇತ್ರಗಳಾದ ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣಗಳಲ್ಲಿ ಗಣೇಶ, ಶಿವ ಮತ್ತು ಸುಬ್ರಮಣ್ಯನ ವಿಗ್ರಹ ಸ್ಥಾಪನೆ ಮಾಡಿದ್ದನು.ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿಯ ಅಂಶಗಳನ್ನು ಹೊಂದಿರೋ ಈ ತಾಯಿ ನಮ್ಮನ್ನು ಹರಸಲಿ, ನಮ್ಮ ಮಕ್ಕಳಿಗೆ ಎಲ್ಲಾ
ಕೆಲ್ಸದಲ್ಲೂ ವೃದ್ಧಿ ತರಲಿ ಅಂತ ಲಕ್ಷಗಟ್ಟಲೆ ಜನರು ಈ ದೇವಸ್ಥಾನಕ್ಕೆ ಹೋಗುತ್ತಾರೆ.
ಮೂಲ
6. ಈಗಿರೋ ಪಂಚಲೋಹದ ದೇವಿ ಮೂರ್ತೀನ ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು
ಕೊಡಚಾದ್ರಿ ಬೆಟ್ಟದಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದಾಗ ದೇವಿ ಪ್ರತ್ಯಕ್ಷಳಾಗಿ ಅವರ ಬಯಕೆಯೇನೆಂದು ಕೇಳಿದಳು. ಆಗ ಶಂಕರರು ಕೇರಳದಲ್ಲಿ ನಾನು ಹೇಳೋ ಜಾಗಕ್ಕೆ ಬಂದು ನೆಲೆಸಬೇಕು ಅಂತ ಹೇಳಿದರು. ಆಗ ದೇವಿಯು ಒಪ್ಪಿಕೊಂಡು ನಾನು ನಿನ್ನ ಹಿಂದೆ ಬರುವಾಗ ನೀನೇನಾದರೂ ಹಿಂದೆ ತಿರುಗಿ ನೋಡಿದೆಯಾದರೇ ನಾನು ಅಲ್ಲೇ ನೆಲೆಸುವೆ ಎಂದು ಸವಾಲು ಹಾಕಿದಳಂತೆ. ಆದರೆ ಶಂಕರರನ್ನು ಪರೀಕ್ಷಿಸೋ ಉದ್ದೇಶದಿಂದ ದೇವಿ
ನಿಂತ್ಕೊತಾಳೆ. ತನ್ನ ಹಿಂದೆ ದೇವಿಯ ಕಾಲ್ಗೆಜ್ಜೆಗಳ ಧ್ವನಿ ಕೇಳದಾದಾಗ ಶಂಕರರು ಹಿಂದಿರುಗಿ ನೋಡಿದರು. ಹಾಗೆ ನೋಡುತ್ತಿದ್ದಂತೆ ಆ ಸ್ಥಳದಲ್ಲಿ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ದೇವಿಯು ಶಂಕರರಿಗೆ ತಿಳಿಸಿದಳು.
ಮೂಲ
7. ಆದಿ ಶಂಕರರು ಈ ದೇವಸ್ಥಾನದಲ್ಲಿರೋ ಸರಸ್ವತಿ ಮಂಟಪದಲ್ಲಿ ಕೂತ್ಕೊಂಡೇ "ಸೌಂದರ್ಯ ಲಹರಿ" ಬರೆದಿದ್ದು
ಜಗಜ್ಜನನಿಯ ವಿಶ್ವರೂಪ ವರ್ಣಿಸುವ ಸೌಂದರ್ಯ ಲಹರಿಯನ್ನು ಬರೆದ್ದಿದ್ದರು.
ಮೂಲ
8. ಮಂಟಪದೊಳಗಡೆ ರಾಜಾ ರವಿವರ್ಮನ ಅದ್ಭುತವಾದ ಚಿತ್ರಕಲೆ ಇದೆ
20 ದಿನ ಶ್ರೀ ಕ್ಷೇತ್ರದಲ್ಲಿ ತಂಗಿದ್ದು ತನ್ನ ಚಿತ್ರಕಲೆಯ ಅಮೋಘ ಪ್ರದರ್ಶನ ಮಾಡಿ ವಿಶ್ವವಿಖ್ಯಾತನಾಗಿದ್ದ.
ಮೂಲ
9. ದೇವಸ್ಥಾನದಲ್ಲಿ ರಾತ್ರಿ ಕೊಡೋ ತೀರ್ಥ ಆರೋಗ್ಯಕರವಾದ ಒಂದು ಕಷಾಯ
ಇದು ಶುಂಠಿ, ಮೆಣಸುಕಾಳು, ಏಲಕ್ಕಿ, ಲವಂಗ ಮತ್ತು ಬೆಲ್ಲ ಮೊದಲಾದವುಗಳೊಂದಿಗೆ ತಯಾರಿಸಿದ್ದು ಶೀತ, ಜ್ವರಗಳಿಂದ ನರಳುತ್ತಿರುವವರಿಗೆ ತುಂಬಾ ಒಳ್ಳೆಯದೆಂದೂ ಹೇಳುತ್ತಾರೆ. ಶಂಕರಾಚಾರ್ಯರ ಕಾಲದಿಂದ ನಡೆದು ಬಂದಿದೆ ಅಂತಾರೆ.
ಮೂಲ
10. ಮಕ್ಕಳಿಗೆ ಈ ಕ್ಷೇತ್ರದಲ್ಲಿ ‘ವಿದ್ಯಾರಂಬ’ ಮಾಡಿಸಿದರೆ ಚೆನ್ನಾಗಿ ಕಲೀತವಂತೆ
ಸುಮಾರು ಜನ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಇಲ್ಲೇ ಮಾಡ್ತಾರೆ. ಡ್ಯಾನ್ಸ್ ಮತ್ತು ಹಾಡುಗಾರಿಕೆ ಕಲಿತವರು ಕೂಡ ತಮ್ಮ ಮೊದಲ ಪ್ರದರ್ಶನ ಇಲ್ಲಿಯೇ ಮಾಡ್ತಾರೆ.
ಮೂಲ
11. ದೇವಸ್ಥಾನದ ವಾಸ್ತುಶಿಲ್ಪ ಕೆಳದಿ ರಾಜರ ಕಾಲದ್ದು
ಕೆಳದಿಯ ಅರಸ ವೆಂಕಟಪ್ಪನಾಯಕನು ಕೊಲ್ಲೂರು ಮೂಕಾಂಬಿಕಾ ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಸಿದ್ದಂತೆ. ಲಕ್ಷದೀಪಾರಾಧನೆ ರಥೋತ್ಸವ ಕಟ್ಟಳೆಗಳು ಸರಾಗವಾಗಿ ನಡೆಯುವಂತೆ ನಿಯಮಿಸಿದ್ದಂತೆ.
ಇಕ್ಕೇರಿ ಸಂಸ್ಥಾನದವರೇ ಈಗ ದೇವಸ್ಥಾನದ ಬಾಗಿಲಲ್ಲಿರುವ ದ್ವಾರಪಾಲಕರಾದ ಜಯವಿಜಯರನ್ನು ಮಾಡಿಸಿ ಕೊಟ್ಟಿದ್ದಂತೆ.
ಮೂಲ
12. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಅರ್. ಈ ದೇವಸ್ಥಾನಕ್ಕೆ ಒಂದು ಬಂಗಾರದ ಕತ್ತಿ ಕಾಣಿಕೆಯಾಗಿ ಕೊಟ್ಟಿದಾರೆ
ಅದು 1.ಕೇ. ಜಿ ತೂಕ ಹಾಗೂ 2.5 ಅಡಿ ಉದ್ದ ಇದೆ.
ಮೂಲ
13. ನಮ್ಮ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಔರು ಒಂದು ಬೆಳ್ಳಿ ಕತ್ತಿ ಕೊಟ್ಟಿದಾರೆ
ಮೂಲ
14. ಮೂಕಾಂಬಿಕಾ ದೇವತೆಗೆ ಬಂಗಾರದ ಮುಖವಾಡ ಮಾಡಿಸಿದ್ದು ವಿಜಯನಗರದ ಅರಸರು
ಮೂಲ
15. ಜ್ಯೋತಿರ್ಲಿಂಗಕ್ಕೆ ಬಂಗಾರದ ಮುಖವಾಡ ಮಾಡಿಸಿದ್ದು ಕೆಳದಿ ಚೆನ್ನಮ್ಮ
ಮೂಲ
16. ಈ ದೇವಸ್ಥಾನದಲ್ಲಿ ಬಹಳ ವಿಶೇಷವಾದ್ದೇನಪ್ಪಾ ಅಂದ್ರೆ ಇದರಲ್ಲಿ ಒಂದಲ್ಲ, ಎರಡು ಉತ್ಸವಮೂರ್ತಿಗಳು!
ಬಂಗಾರದಲ್ಲಿ ಮಾಡಿರುವಂಥ, ಉತ್ಸವದಲ್ಲಿ ಬಳಸುವ ಎರಡು ಉತ್ಸವಮೂರ್ತಿಗಳನ್ನು ಈ ದೇವಸ್ಥಾನವು ಹೊಂದಿದೆ. ಮೂಲ ವಿಗ್ರಹವು ಕಳೆದುಹೋದಾಗ ಚೆನ್ನಮ್ಮ ರಾಣಿಯು ಮತ್ತೊಂದನ್ನು ಕೊಟ್ಟಿದ್ದಳಂತೆ. ಆದರೆ ಕಳೆದುಹೋದ ಉತ್ಸವಮೂರ್ತಿಯು ನಂತರ ಸಿಕ್ಕಿತ್ತಂತೆ. ಆವಾಗಿನಿಂದ ಇಲ್ಲಿ ಎರಡು ಉತ್ಸವ ಮೂರ್ತಿಗಳನ್ನು ಪೂಜಿಸುತ್ತಾರೆ.
ಮೂಲ
17. ಖ್ಯಾತ ಗಾಯಕ ಯೇಸುದಾಸ್ 30 ವರ್ಷದಿಂದ ಇಲ್ಲಿ ತಮ್ಮ ಹುಟ್ಟುಹಬ್ಬದ ದಿನ ಚಂಡಿಕಾ ಯಾಗ ಮಾಡಿಸ್ತಾರೆ
ಇದರ ಜೊತೆ ಕಳೆದ 14 ವರ್ಷಗಳಿಂದ ಸತತವಾಗಿ ಅಲ್ಲಿ ಸಂಗೀತೋತ್ಸವ ಮಾಡ್ಕೊಂಡು ಬಂದಿದ್ದಾರೆ.
ಮೂಲ
18. ಚಂಡಿಕಾ ಹೋಮಕ್ಕೆ ಅಡ್ವಾನ್ಸ್ ಬುಕಿಂಗ್ 2 ವರ್ಷದ ಮುಂಚೆನೇ ಮಾಡಿಸ್ಬೇಕು
ಈಗಾಗಲೇ ಜನವರಿ 2019ರ ತನಕ ಬುಕ್ಕಿಂಗ್ ಮುಗಿದುಹೋಗಿದೆ!
ಮೂಲ
19. ದೇವಸ್ಥಾನದ ಹುಂಡೀಲಿ 1,80,000 ರೂಪಾಯಿಗಿಂತಲೂ ಜಾಸ್ತಿ ಕಲಕ್ಷನ್ ಆಗತ್ತೆ.
ತಮ್ಮ ಹರಕೆ ತೀರಿದ್ದಕ್ಕೆ ಭಕ್ತರು ಲಕ್ಷಗಟ್ಟಲೆ ಬೆಲೆಬಾಳುವ ಚಿನ್ನ-ಬೆಳ್ಳಿ ಆಭರಣಗಳನ್ನು ದೇವಿಗೆ ಕಾಣಿಕೆಯಾಗಿ ಕೊಡುತ್ತಾರೆ.
ಮೂಲ
ಮಾರ್ಚಿ-ಏಪ್ರಿಲ್ ತಿಂಗಳಲ್ಲಿ 10 ದಿನದ ರಥೋತ್ಸವ ನಡೆಯತ್ತೆ. ಕೃಷ್ಣ ಜನ್ಮಾಷ್ಟಮಿ ಇಲ್ಲಿ ವಿಜೃಂಭಣೆಯಿಂದ ಮಾಡ್ತಾರೆ. ಸಾವಿರಾರು ವರ್ಷದಿಂದ ಈ ದೇವಿ ಕನ್ನಡಿಗರನ್ನ ಕಾಪಾಡಿಕೊಂಡು ಬಂದಿದಾಳೆ... ಒಮ್ಮೆ ಹೋಗಿ ಬನ್ನಿ...
☰
MENU
🔍
SEARCH
🔖
FOLLOW
📢
SHARE
×
Search
ThinkBangalore
🏠 Home 🏛 City Connect 🌄 Travel 🏃 Health 🛒 Shopping 💡 Inspire 🙏 Culture 🧑 Jobs 📸 Gallery 😄 Leisure 📞 ContactNews Updates
🎤 Live News 📰 Bengaluru 📰 State 📰 National 🏏 Cricket 📰 Business 📰 Sports 📰 EntertainmentToday
♉ Horoscope ⛅ Weather 🔊 Day QuoteKannada Entertainment
🎬 Sandalwood 🎵 Music 🎞 Movies 🎥 Trailers 🎥 Comedy 🎥 Web Seriesಕೊಲ್ಲೂರು ಮೂಕಾಂಬಿಕೆ - ಒಮ್ಮೆ ಹೋಗಿ ಬನ್ನಿ
Related
#kollur mookambika
Post / View Comments
Subscribe , Follow on
Facebook Instagram YouTube Twitter X WhatsApp