ಕನಾ೯ಟಕದ ಬಗ್ಗೆ ಎಷ್ಟು ಗೊತ್ತು ತಮಗ ? 1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು? 2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು? 3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು? 4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು? 6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು? 7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು? 8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು? 9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ? 10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು? 11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ? 12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು? 13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು? 14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು? 15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು? 16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು? 17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು? 18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು? 19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು? 20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು? 21) ರಾಯಚೂರಿನ ಮೊದಲ ಹೆಸರೇನು? 22) ಕನ್ನಡದ ಮೊದಲ ಕೃತಿ ಯಾವುದು? 23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು. 24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು? 25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು? 26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು? 27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು? 28) ಮೈಸೂರು ಅರಮನೆಯ ಹೆಸರೇನು? 29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು? 30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ? 31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? 32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು? 34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು? 35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು? 36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು? 37) ಕರ್ನಾಟಕದ ಮೊದಲ ಕವಯತ್ರಿ ಯಾರು? 38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು? 39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು? 40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು? 41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು? 42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ? 43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು? 44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು? 45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು? 46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?- 47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು? 48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ? 49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು? 50) ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
*************************************************************************
1) ಮಲ್ಲಬೈರೆಗೌಡ. 2) ಟಿಪ್ಪು ಸುಲ್ತಾನ್. 3) ಚಿತ್ರದುರ್ಗ. 4) ಕೃಷ್ಣದೇವರಾಯ. 5) ಪಂಪಾನದಿ. 6) ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ. 7) ಹೈದರಾಲಿ. 8) ಶ್ರೀರಂಗ ಪಟ್ಟಣದ ಪಾಲಹಳ್ಳಿ. 9) ಕಲಾಸಿಪಾಳ್ಯ. 10) ಕೆಂಗಲ್ ಹನುಮಂತಯ್ಯ. 11) 8 12) "ಸರ್. ಮಿರ್ಜಾ ಇಸ್ಮಾಯಿಲ್" 13) ರಾಮಕೃಷ್ಣ ಹೆಗ್ಗಡೆ. 14) ದೇವನಹಳ್ಳಿ (ದೇವನದೊಡ್ಡಿ) 15) ವಿಜಯನಗರ ಸಾಮ್ರಾಜ್ಯ. 16) ತಿರುಮಲಯ್ಯ. 17) ಶ್ರೀರಂಗ ಪಟ್ಟಣದ ಕೋಟೆ. 18) ಶಿವಮೊಗ್ಗ ಜಿಲ್ಲೆಯ ಮತ್ತೂರ್. 19) ಶಿರಸಿಯ ಮಾರಿಕಾಂಬ ಜಾತ್ರೆ. 20) ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ) 21) ಮಾನ್ಯಖೇಟ. 22) ಕವಿರಾಜ ಮಾರ್ಗ 23) ಹಂಪೆ. 24) ಶ್ರಾವಣಬೆಳಗೊಳದ ಗೊಮ್ಮಟೇಶ್ವರ. 25) ಕರ್ನಲ್ ವಸಂತ್. 26) ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ. 27) ಮುಳ್ಳಯ್ಯನ ಗಿರಿ. 28) ಅಂಬಾವಿಲಾಸ ಅರಮನೆ. 29) ಬಾಬಾ ಬುಡನ್ ಸಾಹೇಬ. 30) ದಾವಣಗೆರೆ. 31) ಆಗುಂಬೆ. 32) ಬೆಂಗಳೂರು ನಗರ ಜಿಲ್ಲೆ. 33) ಹಲ್ಮಿಡಿ ಶಾಸನ. 34) ನೀಲಕಂಠ ಪಕ್ಷಿ. 35) ಕೆ.ಸಿ.ರೆಡ್ಡಿ. 36) ಶ್ರೀ ಜಯಚಾಮರಾಜ ಒಡೆಯರು. 37) ಅಕ್ಕಮಹಾದೇವಿ. 38) ವಡ್ಡರಾದನೆ. 39) ಮೈಸೂರು ವಿಶ್ವವಿಧ್ಯಾನಿಲಯ. 40) "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ" 41) ಪುರಂದರ ದಾಸರು. 42) ರಾಯಚೂರು ಜಿಲ್ಲೆ. 43) ರಾಮನಗರ. 44) ಮಂಡ್ಯ ಜಿಲ್ಲೆ. 45) ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ. 46) ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ 47) ಗರಗ 48) ಕೊಡಗು. 49) ಲಿಂಗನಮಕ್ಕಿ ಅಣೆಕಟ್ಟು 50) ಕುವೆಂಪು.
Subscribe , Follow on
Facebook Instagram YouTube Twitter WhatsApp