-->

Ugadi greetings wishes ಯುಗಾದಿ ಶುಭಾಶಯಗಳು

"ಯುಗಾದಿ ಹಬ್ಬ ಮತ್ತು ವಿಶೇಷತೆಗಳು"

ಹಬ್ಬ-ಹರಿದಿನ, ಉತ್ಸವಗಳು , ನಮ್ಮ ಭಾರತೀಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿ ಬಂದಿದೆ.. 
ಬಹುಷಃ ನಮ್ಮ ದೇಶದಲ್ಲಿ ನಡೆಯೋ ಹಬ್ಬ ಹರಿದಿನ ಜಾತ್ರೆಗಳು ಬೇರೆಲ್ಲೂ ನಡೆಯುವುದಿಲ್ಲ..
ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಸಂಸ್ಕೃತಿ, ಕಾರಣಗಳು ಇವೆ. ಇದೇ ಕಾರಣಕ್ಕೆ ನಮ್ಮ ಹಬ್ಬಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿವೆ..
ಇಂತಹುದರಲ್ಲಿ ಹಿಂದೂ ವರ್ಷದ, ಹೊಸ ಸಂವತ್ಸರದ ಮೊದಲ ಹಬ್ಬ "ಯುಗಾದಿ"ಯೂ ಒಂದು..
ಈ "ಯುಗಾದಿ" ಹಬ್ಬವು ಚಾಂದ್ರಮಾನ ಮತ್ತು ಸೌರಮಾನ ಎಂದು ಎರಡು ವಿಧಾನವಾಗಿದೆ..
ಆಂಧ್ರ ಮತ್ತು ಕರ್ನಾಟಕ ಪ್ರದೇಶದಲ್ಲಿ ಹೆಚ್ಚಾಗಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ..
ಕೆಲವು ಕಡೆ ಸೌರಮಾನ ಯುಗಾದಿ ಆಚರಿಸುತ್ತಾರೆ..

ಯುಗಾದಿ ಅಂದರೆ ಯುಗದ ಆದಿ, ಯುಗದ ಪ್ರಾರಂಭ ಎಂದರ್ಥ..
ಈ ದಿನವನ್ನು ಬ್ರಹ್ಮದೇವರು ಸೃಷ್ಟಿಸಿದ್ದಾನೆಂದು ತುಂಬಾ ಗ್ರಂಥಗಳು ಹೇಳುತ್ತವೆ..
ಈ ದಿನದಂದು ಮಹಾವಿಷ್ಣುವು " ಮತ್ಸ್ಯಾವತಾರವನ್ನು " ತಾಳಿದನು..

"ಶ್ರೀ ರಾಮಚಂದ್ರರು ಕಾಡಿನಿಂದ ಅಯೋಧ್ಯೆಗೆ ಹಿಂತಿರುಗಿದ ದಿನವಿದು, ಈ ದಿನ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ ,ಎಂದು ಗ್ರಂಥಗಳು ಹೇಳುತ್ತವೆ..
ವಸಂತ ನವರಾತ್ರಿಗಳು ಈ ದಿನದಂದು ಪ್ರಾರಂಭವಾಗಿ, ಶ್ರೀ ರಾಮಚಂದ್ರ ಪಟ್ಟಾಭಿಷೇಕದ ಪೂಜೆಗಳು, ದುರ್ಗಾಸಪ್ತಶತೀ ಪಾರಾಯಣಗಳು, ಈ ದಿನ ಪ್ರಾರಂಭವಾಗುವುದು ತುಂಬಾ ವಿಶೇಷ..

ಈ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ ಏಳಬೇಕು. ಎದ್ದ ತಕ್ಷಣ ದೇವರನ್ನು ಧ್ಯಾನಿಸಿ ನಂತರ ಅಭ್ಯಂಜನ ಸ್ನಾನ ಮಾಡಬೇಕು.
ತಲೆಗೆ ಎಣ್ಣೆಯನ್ನು ಮನೆಯ ಹೆಂಗಸರು ಸುಮಂಗಲಿಯರಿಂದನೇ ಹಚ್ಚಿಸಿಕೊಳ್ಳಬೇಕು..
ಮನೆಯನ್ನು ಶುದ್ಧಗೊಳಿಸಿ, ಮಾವಿನ ಎಲೆಗಳಿಂದ ತೋರಣ ಕಟ್ಟಬೇಕು..
ದೇವರ ಪೂಜೆ, ಅಭಿಷೇಕ, ನೈವೇದ್ಯ, ಪಂಚಾಂಗ ಪೂಜೆ ಮಾಡುವುದು ತುಂಬಾ ಒಳ್ಳೆಯದು ..
"ಬ್ರಾಹ್ಮಣರಿಗೆ ಫಲತಾಂಬೂಲದೊಂದಿಗೆ ಪಂಚಾಂಗ ದಾನ ಮಾಡಿದರೆ ತುಂಬಾ ಒಳ್ಳೆಯದು..
ನಂತರ ದೇವರಿಗೆ ಬೇವು ಬೆಲ್ಲ ನೈವೇದ್ಯ ಮಾಡಿ, ಸುಖ ದುಃಖ ಏನೇ ಬಂದರೂ ನಿಮ್ಮ ಆಶೀರ್ವಾದ ಇರಲಿ, ನಮಗೆ ಆಯಸ್ಸು ಆರೋಗ್ಯ ಕರುಣಿಸಿ ಎಂದು ಪ್ರಾರ್ಥಿಸಿ, ಬೇವು ಬೆಲ್ಲವನ್ನು, ಮೊದಲು ಹಸುವಿಗೆ ಕೊಟ್ಟು ನಮಸ್ಕರಿಸಿ, ನಂತರ ಮನೆಯ ಹಿರಿಯರಿಗೆ ಮತ್ತು ಗುರುಸ್ಥಾನದ ವ್ಯಕ್ತಿಗಳಿಗೆ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯಬೇಕು..
ನಂತರ ನೀವು ಸ್ವೀಕರಿಸಬೇಕು.. 
 
Ugadi wishes

*********

ಬೇವು ಬೆಲ್ಲ ಸೇವಿಸುವಾಗ..
"ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||"

ತಾತ್ಪರ್ಯ : ನೂರುವರ್ಷ ವಜ್ರದಂತೆ ಗಟ್ಟಿಯಾದ ದೇಹದ ಶಕ್ತಿ, ಎಲ್ಲಾ ರೀತಿಯ ಐಶ್ವರ್ಯ ಸಂಪತ್ತುಗಳ ಪ್ರಾಪ್ತಿಗಾಗಿ,ಮತ್ತು ಸಕಲಾರಿಷ್ಟಗಳೂ ನಿವಾರಣೆಯಾಗಲೆಂದು ಬೇವು ಬೆಲ್ಲ ಸೇವನೆ ಮಾಡುತ್ತೇನೆ.."!

ವಿಶೇಷ ವಿಷಯ:

ಯುಗಾದಿಯ ದಿನ "ವಿದ್ಯಾವ್ರತವನ್ನು" ಬೇಕಾದರೂ ಮಾಡಬಹುದು. ಯಾರಿಗೆ ವಿದ್ಯೆ ಸರಿಯಾಗಿ ಬರುತ್ತಿಲ್ಲ, ಓದಿದ್ದೆಲ್ಲಾ ಮರೆತು ಹೋಗುತ್ತಿದೆ, ತುಂಬಾ ದಡ್ಡರಾಗಿದ್ದಾರೆ ಅನ್ನುವವರು "ಹಯಗ್ರೀವ ದೇವರನ್ನು ಮತ್ತು ದತ್ತಾತ್ರೇಯ"ರನ್ನು ಪೂಜಿಸಿ, ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ವಸ್ತುಗಳು ದಾನ ಮಾಡಬೇಕು.."
ಈ ದಿನ
"ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ|
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||"

ಈ ಸರಸ್ವತೀ ದೇವಿ ಸ್ತೋತ್ರ ೩೩ ಸಾರಿ ಹೇಳಿ, ಸರಸ್ವತೀ ದೇವಿ ಪೂಜಿಸಿ, "ಬೆಲ್ಲದನ್ನ" ಅಥವಾ ಪೊಂಗಲ್ ನೈವೇದ್ಯ ಮಾಡಿದರೆ, ಮಕ್ಕಳು ತುಂಬಾ ತುಂಬಾ ವಿದ್ಯಾವಂತರಾಗುತ್ತಾರೆ ಮತ್ತು ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಾರೆ..

ಪಂಚಾಂಗ ಶ್ರವಣ ಅಥವಾ ಓದುವುದರಿಂದ ಫಲ.

"ಚೈತ್ರ ಶುಕ್ಲಪಕ್ಷದಲ್ಲಿ ವರ್ಷದ ರಾಜ ಮಂತ್ರಿ ಮೊದಲಾದ ಪಂಚಾಂಗದಲ್ಲಿನ ಫಲಗಳನ್ನು ಯಾರು ಕೇಳುತ್ತಾರೋ, ಅಂಥವರು ಪಾಪ ಫಲಗಳಿಂದ ಮುಕ್ತರು, ಆರೋಗ್ಯವಂತರು, ಆಯುಷ್ಯವಂತರೂ , ಐಶ್ವರ್ಯವಂತರೂ ಸುಖನುಭವಿಗಳೂ ಆಗುತ್ತಾರೆ..

ತಿಥಿಯಿಂದ ಐಶ್ವರ್ಯ, ವಾರದಿಂದ ಆಯುಷ್ಯವೃದ್ಧಿ, ನಕ್ಷತ್ರದಿಂದ ರೋಗ ಪರಿಹಾರ, ಕರಣದಿಂದ ಕಾರ್ಯಸಿದ್ಧಿ, ಮುಂತಾದ ಶುಭಫಲಗಳು ಪಂಚಾಂಗದಿಂದ ಲಭಿಸುತ್ತವೆ..

"ಹೀಗೆ ವಿಧಾನೋಕ್ತವಾಗಿ ಯುಗಾದಿ ಆಚರಣೆ ಮಾಡಿದರೆ ಇಡೀ ವರ್ಷ ಶುಭದಾಯಕವಾಗಿರುವುದರಲ್ಲಿ ಸಂದೇಹವಿಲ್ಲ..

**********
ಸೃಷ್ಟಿಯ ಮೊದಲ ದಿನ 
ಸೂರ್ಯನ ಕಿರಣದ ಮೊದಲ ದಿನ
ಹಸಿರೆಲೆಗಳ ಚಿಗುರೊಡೆಯುವ ದಿನ
ಹಿಂದೂ ವರ್ಷಾರಂಬ ದಿನ

ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🌿🌱🎍🎋🎋🎋
********** 
🌿🌱ಯುಗಾದಿ🌱🌿
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ 
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !! 
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ. !!

              ತಮಗು ಮತ್ತು ತಮ್ಮ ಕುಟುಂಬಕ್ಕು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ, ಜೊತೆಗೆ  ತರಲಿ
      ಎಲ್ಲಾ  ಬಂಧು  ಮಿತ್ರರು ಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.....😃
🙏🙏🙏🍋🍃🌴

*********

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
ಈ ಸಂದರ್ಭದಲ್ಲಿ, ನಮ್ಮ ಬಾಲ್ಯದ ನೆನಪಿನ ಪದ್ಯ

ವಸಂತ ಬಂದ 
ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
 
ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
ಇನಿಯರ ಬೇಟ ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
 
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೊವೂ ಜಗ್ ಜಗ್ ಪುವ್ವೀ ಟೂ ವಿ ಟ್ಟವೂ !
 
ಬಂದ ವಸಂತ -ನಮ್ಮಾ
ರಾಜ ವಸಂತ !!

*********
 
ಜಗತ್ತಿನ ಎಲ್ಲಾ ಸುಖವೂ ತನ್ನದಾಗ ಬೇಕೆಂಬುದು ಮಾನವರ ಸಹಜವಾದ ಗುಣ ಆದರೆ ಅವರವರ ಯೋಗ್ಯತೆಗೆ ತಕ್ಕಂತೆ ಸುಖದುಃಖಗಳನ್ನು ಅನುಭವಿಸುವುದು ಭಗವಂತನ ಸಂಕಲ್ಪ .ಬೇವು ಬೇಲ್ಲದ ಮಿಶ್ರಣದಂತೆ ಎಲ್ಲರ ಜೀವನದಲ್ಲಿ ಸುಖದುಃಖಗಳು ಬಂದುಹೋಗುತ್ತದೆ .ಆ ಭಗವಂತನ ದಯೆಯಿಂದ ನಿಮ್ಮ ಜೀವನದಲ್ಲಿ ದುಖವೆಂಬ ಬೇವಿಲ್ಲದೆ ಸುಖವೆಂಬ ಬೆಲ್ಲವು ಇಮ್ಮಡಿಯಾಗಲಿ ಎಂದು ಸದಾ ಪ್ರಾರ್ಥಿಸುತ್ತಾ ಹೊಸ ವರ್ಷದ ಶುಭಾಶಯಗಳು.

*********
💐🌿🌾ಸಮಸ್ತರಿಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

*********
ಬದುಕು - ಇಲ್ಲಿ ಸಿಹಿ, ಕಹಿಗಳು ಸಾಮಾನ್ಯ. ಹೊಸ ವರ್ಷದ ಆರಂಭ ಬೇವು, ಬೆಲ್ಲ ಸವಿಯುತ್ತ ಆರಂಭಿಸೋಣ. ಬೇವು ಬೆಲ್ಲಗಳ ಸಮ್ಮಿಲನವೇ ನಮ್ಮ ಜೀವನ. ಸಿಹಿಯಂತೆ ಕಹಿಯನ್ನೂ ಸ್ವೀಕರಿಸುತ್ತ ಬದುಕು ಮುನ್ನಡೆಸೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
********* 
ಬೇವು ಬೆಲ್ಲ ಸವಿಯುವ ತವಕದಲಿ
ಆರೋಗ್ಯ ನೆಮ್ಮದಿಯ ಜೀವನ ಬೇಡುವ ಸಂತಸದಲಿ
ಒಬ್ಬಟ್ಟಿನೂಟವ ಸವಿಯುವ ಖುಷಿಯಲಿ
ಬರುವ ಸಂವತ್ಸರವ ಸ್ವಾಗತಿಸುವ
********* 
ಜೀವನದ ಪಯಣದಲಿ
ಹೊಸ ವರ್ಷ(ಯುಗಾದಿ) ಹರುಷ ತರಲಿ...
ನವ ಬಾಳು ಬೆಳಗಲಿ...
ನವ ಚೈತನ್ಯ ಚಿಮ್ಮಲಿ...
ಕಹಿ-ನೋವುಗಳು ತೊಲಗಲಿ...
ಸಿಹಿ-ನಲಿವುಗಳು ಬರಲಿ...
ಶಾಂತಿ,ಸಮೃದ್ಧಿ,ನೆಮ್ಮದಿ ಬಾಳಲಿ ಸಿಗಲಿ...
🌱🌴🌿🍃🌾🌱🌴🌿🍃
 
********* 
🌹ನೆಮ್ಮದಿ ಹರುಷವನ್ನು🌹
  🌺ತಂದು ಕೊಡಲಿ ಈ 🌺 
    🌻ನವ ಯುಗಾದಿ 🌻

🍃ಬೇವು ಬೆಲ್ಲವ ಸವಿದು 🌿
🍃ದುಃಖ ದುಮ್ಮಾನವ 🌿
  🍃   ಕಳೆಯಲಿ ಈ.  🌿
   🍃ಶುಭ ಯುಗಾದಿ 🌿

🍋ಮಾವು,ಬೇವು ಗಳ🍃
🍃ಸವಿದು ಸುಖ ಸಮೃದ್ಧಿ🍋
🍀 ಗಳನ್ನು ತರಲಿ ಈ🍀
  🌹ಶುಭ ಯುಗಾದಿ 🌹
🌹💐🌺💐💐🌺💐🌹
 
Ugadi wishes

***********
ಪಾಡ್ಯದ ರವಿ ಉದಯಿಸಿರಲು..
ಚೈತ್ರದ ಬಾಗಿಲಲ್ಲಿ..
ಹೊಸ ಚಿಗುರ ರಂಗವಲ್ಲಿ...

ಹೊಸ ಸಂವತ್ಸರದ ಬೆಳಕಲ್ಲಿ 
ಸಿಹಿಕಹಿಗಳ ಹೂರಣವಿಹುದು
ಬೇವು- ಬೆಲ್ಲಗಳ ಮಿಶ್ರಣದಲ್ಲಿ..

ಹಳೆ ಎಲೆಗಳ ಉದುರಿಸಿ 
ಹೊಸ ಚಿಗುರ ತೊಟ್ಟು..
ಪ್ರಕೃತಿ ಸಂಭ್ರಮಿಸುವಂದದಿ...

ಹಳೆಯ ನೋವೆಲ್ಲವ ಮರೆಸಿ 
ಹೊಸ ಆಶಯಗಳ ಕೊಟ್ಟು 
ಎಲ್ಲರಿಗೂ ಶುಭ ತರಲಿ 
ಚಾಂದ್ರಮಾನ ಯುಗಾದಿ....
 
************************
ಯುಗಾದಿ ಹಬ್ಬ ಸರ್ವರಿಗೂ ಶುಭವನ್ನುಂಟುಮಾಡಲಿ
ಹೊಂಗೆಯ ತೊಂಗಲಿನಲ್ಲಿ ಎಂದಿನಂತೆ ದುಂಬಿಗಳಿವೆ. ಮಾವು ಚಿಗುರಿದೆ. ಬೇವಿನ ಹೂವಿನ ಕಂಪು ಹರಡಿದೆ. ಪ್ರಕೃತಿ ಎಂದೆಂದಿಗೂ ಸೌಂದರ್ಯವತಿ. ನಾವು ಅದನ್ನು ಗುರುತಿಸುವಲ್ಲಿ ಒಮ್ಮೊಮ್ಮೆ ಸೋಲುತ್ತೇವೆ. ಕಾರಣ ನಮಗೆ ನಮ್ಮದಷ್ಟೇ ನೋವು ನಲಿವುಗಳು ಪ್ರಮುಖ. ನಮ್ಮೊಂದಿಗೆ ಎಲ್ಲರನ್ನೂ ಸೇರಿಸಿಕೊಳ್ಳುವ ಮನಸ್ಸು ಮಾಡುವಾ.
ಈ ಸಮಯದಲ್ಲಿ ಹಿರಿಯರಿಗೆ ನಮಸ್ಕಾರಗಳು🙏🏼🙏🏼. ಕಿರಿಯರಿಗೆ ಶುಭಾಶೀರ್ವಾದಗಳು.✋🏾✋🏾 ಸ್ನೇಹವಲಯಕ್ಕೆ ಹಾರೈಕೆಗಳು.👍🏻👍🏻
ಎಲ್ಲರಿಗೂ ಒಳಿತಾಗಲಿ.☘️❤️. 

******************************
ಬದುಕೆಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. 
ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. 
ಯುಗಾದಿ ಹೊಸ ಸಂವತ್ಸರದಲ್ಲಿ ನಮ್ಮ  ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು, 
ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸುಗಳೊಂದಿಗೆ ನೆಮ್ಮದಿಯ ಬದುಕನ್ನು 
ದಯಪಾಲಿಸಲಿ ಎಂದು  ಎಂದು ಪ್ರಾರ್ಥಿಸೋಣ
************************
ಬೇವು ಎಷ್ಟೇ ಕಹಿಯಿದ್ದರೂ ಅದರ ರೋಗ ನಿರೋಧಕ ಶಕ್ತಿ ಮಹತ್ವದ್ದು.ಹಾಗೆಯೇ ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಕಷ್ಟಗಳು  ನಮ್ಮ ಮನಸ್ಸನ್ನು ಧೃಡಪಡಿಸಿ ಸಾಗುವುದನ್ನು ಕಲಿಸುತ್ತದೆ.
ಬೆಲ್ಲ ಎಷ್ಟೇ ಸಿಹಿಯೆನಿಸಿದರೂ ನಿರಂತರ ಸ್ವೀಕರಿಸಲಾಗುವುದಿಲ್ಲ..
ಹಾಗೂ ಕಹಿಯ ರುಚಿ  ಅನುಭವ ಇಲ್ಲದಿದ್ದರೇ ಸಿಹಿಯ ಬೆಲೆಯ ಆನಂದಿಸಲಾಗುವುದಿಲ್ಲ. 
ಸಿಹಿ-ಕಹಿ ಘಟನೆ ಗಳು ನಮ್ಮ ಜೀವನದಲ್ಲಿ ಬಂದಾಗಲು ಸಹ, 
ಬೆಲ್ಲದಂಥ ಮನಸ್ಸು ನಮ್ಮದಾಗಿ ದೇವರ ದಯೆಇಂದ ಕಹಿಯನ್ನೂ ಸಹ ಸಿಹಿಯಾಗಿ 
ಪರಿವರ್ತಿಸುವ ಆಶಯದೊಡನೆ ಈ ನೂತನ ವರ್ಷವನ್ನು ಪ್ರಾರಂಭಿಸೋಣ. 
************************ 
ಯುಗಾದಿ ಹಬ್ಬ ಎಲ್ಲರಿಗೂ ಮಂಗಳವನ್ನು, ಆರೋಗ್ಯವನ್ನು, ನಿರ್ಭಯತೆಯನ್ನು, ಸಂತಸವನ್ನು, ಸಂಸ್ಕೃತಿ ಪ್ರೇಮವನ್ನು, ಧರ್ಮದ ಶ್ರದ್ಧೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ 
************************ 
ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ , ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ . ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ
ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
************************* 
ಕಂಡ  ಕನಸುಗಳೆಲ್ಲಾ  ಹೊಸ ವರ್ಷದ ಬೆಳಕಿನ ಸಿಂಚನದಲ್ಲಿ ಚಿಗುರಿ  ಸಮೃದ್ಧವಾಗಿ ಬೆಳೆದು ನನಸಾಗಲಿ 
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
************************** 
Ugadi wishes

 
 
Let the sweetness of Jaggery fill in further joy
Let the bitterness of Neem leaves keep you healthy  
May you , your family and loved ones have a healthy and joyful life
We wish you a Happy Ugadi 🙏🏼
********************************
Life is wonderful full of surprises
May you get the strength to lead it with right balance
Just like how Jaggery and Neem make a healthy balance
Wish you and your family a prosperous Ugadi festival 🙏🏼
************************************ 
May Neem's bitterness , raw mango's sourness and
Sweetness of the jaggery remind you that life is a mixed bag.
Enjoy every moment and put your best foot forward 
A very Happy Ugadi to you and your family  🙏🏼
************************************ 
May this Ugadi bring joy , health and wealth to you.
Wish you a happy Ugadi 
************************************ 
Ugadi wishes

 
 
ಯುಗಾದಿ  ವಿಶೇಷ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ!..
ಯುಗಾದಿಯೆಂದರೆ ಬೇವು ಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗ ಶ್ರವಣ ಮತ್ತು ಬೇಂದ್ರೆ ಕವನ..
ಯುಗಾದಿಯಂದು ಸಂಭ್ರಮದ ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ನಿತ್ಯನೂತನ ಕವನ ‘ಯುಗಾದಿ’ ತರುವುದು ಹೊಸ ಹರುಷ. ಯುಗಾದಿಗೆ ‘ಯುಗಾದಿ’ಯೇ ಸಾಟಿ; ‘ಯುಗಾದಿ’ಗೆ ಯುಗಾದಿಯೇ ಸಾಟಿ.
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ..
ಯುಗಯುಗಗಳು ಕಳೆದರೂ ಮರಳಿ ಬರುತ್ತಲೇ ಇರುವ ಯುಗಾದಿಯು ಪ್ರತಿವರ್ಷವೂ ಹೊಸ ವರ್ಷಕ್ಕಾಗಿ ಹೊಸೆದು ಹೊಸೆದು ತರುವ ಹೊಸತು ಹೊಸತಾದ ಹರ್ಷವನ್ನು ಕವಿಯು ಸಾರುವಾಗ ಎಂತಹವರ ಕವಿಯಲ್ಲದ ಮನವೂ ಹರ್ಷದಿಂದ ಹೊಂಗತೊಡಗುತ್ತದೆ. ವೃಕ್ಷಗಳ ಜೀವಸೆಲೆಯೊಡನೆ, ಪಕ್ಷಿಗಳ ಜೀವನೆಲೆಯನ್ನು ಬೆಸೆಯುವ ವಸಂತನು ಪ್ರತಿ ವರುಷ ಜಗದ ಜೀವಜಾತಕೆ ನಮ್ಮ ಹೃದಯವನ್ನು ತೆರೆದು ಸೃಷ್ಟಿನಿಯಮದ ಬಗ್ಗೆ ನಮ್ಮನ್ನು ಎಚ್ಚರಿಸುತ್ತಾ, ನಮ್ಮ ಮಸ್ತಿಷ್ಕಕ್ಕೆ ಅರಿವಿನ ಬೆಳಕನ್ನು ಬೀರುತ್ತಾನೆ.
ಚೈತ್ರ ಮಾಸದ ಮೊದಲ ದಿನ ‘ಯುಗಾದಿ’. ಭಾರತೀಯರಿಗೆ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ವ್ಯುತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ, ಎಂದು.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ ೦ – ೧೩:೨೦ ಭಾಗ(ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.
ಆಧ್ಯಾತ್ಮಿಕ ಕಾರಣಗಳು
ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯ ದಶಮಿ) ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ದಿನಗಳಂದು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳ ಪ್ರತಿ ಘಳಿಗೆಯೂ ಶುಭ ಮುಹೂರ್ತವೇ ಆಗಿರುತ್ತದೆ.
ಪುರಾಣದ ಪ್ರಕಾರ ಬ್ರಹ್ಮ ದೇವ ಯುಗಾದಿಯ ದಿನದಿಂದ ಅಂದರೆ ಚೈತ್ರ ಶುದ್ಧದ ದಿನ ಲೋಕದ ಸೃಷ್ಟಿ ಪ್ರಾರಂಭಿಸಿದಂತೆ. ಹಿಂದೂ ಜನಾಂಗಕ್ಕೆ ಯುಗಾದಿಯ ದಿನದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್ ಸಹ ಇಂದಿನಿಂದಲೇ ಶುರುವಾಗುತ್ತದೆ. ಹೊಸ ಪಂಚಾಗ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ.
ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ ೧೫ ದಿನಗಳಿಗೆ ಬರುವುದು ಯುಗಾದಿ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ, ಕೃತಯುಗ, ದ್ವಾಪರಯುಗ, ಕಲಿಯುಗಗಳಿಗೆ ಯುಇಗವೆಂದರೆ ೫೦೦೦ಕ್ಕೂ ಹೆಚ್ಚಿನ ವರುಷಗಳಂತೆ. ಆದರೆ ಇಲ್ಲಿ ಹಾಗಲ್ಲ. ಕಾಲದ ಒಂದು ಭಾಗ ಮತ್ತೆ ಪ್ರಾರಂಭವಾಗುತ್ತಿದೆ ಎಂಬುದರ ಸೂಚನೆಯಷ್ಟೆ. ವಸಂತ ಋತುವಿನಿಂದ ಪ್ರಾರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುತ್ತಿರುವುದರ ಸೂಚನೆ. ಇಂತಹ ಯುಗದ ಅಂದರೆ ವರುಷದ ಮೊದಲನೆಯ ದಿನವನ್ನು ಯುಗಾದಿ ಎಂದು ಗುರುತಿಸಿ ಹಬ್ಬವನ್ನಾಗಿ ಆಚರಿಸುವರು.
ಚಾಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇವೆಲ್ಲವೂ ಇಂದು ನಂಬಲಶಕ್ಯ. ಆದರೂ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ ಎಂದು ಹೇಳಬೇಕಿದೆ. ಇಂದಿನ ದಿನದಿಂದ ಚೈತ್ರ ಮಾಸ ಪ್ರಾರಂಭವಾಗಿ ತರು ಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು:ಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.
ಐತಿಹಾಸಿಕ ಕಾರಣ
ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯ ರಾಕ್ಷಸರನ್ನು ಹಾಗೂ ರಾವಣನನ್ನು ವಧಿಸಿ ಭಗವಾನ ರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದ್ದು ಇದೇ ದಿನ. ಅದೇ ರೀತಿ ಇದೇ ದಿನದಂದು ರಾವಣವಧೆಯ ನಂತರ ಅಯೋಧ್ಯೆಗೆ ಹಿಂತಿರುಗಿದ ರಾಮನ ವಿಜಯದ ಹಾಗೂ ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸಿದರು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.
ಹಬ್ಬದ ಆಚರಣೆಯ ವಿಧಾನ
ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.
ಅಭ್ಯಂಗಸ್ನಾನ
ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗ ಸ್ನಾನ ಮಾಡಬೇಕು. ದೇಹಕ್ಕೆ ಎಣ್ಣೆ ಹಚ್ಚಿ ಅದನ್ನು ತಿಕ್ಕಿ ತೀಡಿ ಚರ್ಮದಲ್ಲಿ ಸೇರುವಂತೆ ಮಾಡಿ, ನಂತರ ಬಿಸಿನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗ ಸ್ನಾನ ಎನ್ನುತ್ತಾರೆ. ಸ್ನಾನದಿಂದ ರಜ-ತಮ ಗುಣಗಳು ಒಂದು ಲಕ್ಷಾಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚಾಗುತ್ತದೆ. ಈ ಪ್ರಭಾವವು ನಿತ್ಯದ ಸ್ನಾನದಲ್ಲಿ ಮೂರು ಗಂಟೆಗಳ ಕಾಲ ಉಳಿದರೆ, ಅಭ್ಯಂಗ ಸ್ನಾನದ ಪ್ರಭಾವವು ನಾಲ್ಕರಿಂದ ಐದು ಗಂಟೆಗಳ ಕಾಲ ಉಳಿಯುತ್ತದೆ. ಚರ್ಮಕ್ಕೆ ಯಾವಾಗಲೂ ಸ್ನಿಗ್ಧತೆ ಇರಬೇಕೆಂದು ಎಣ್ಣೆ ಹಚ್ಚುತ್ತಾರೆ. ಶರೀರಕ್ಕೆ ಸುಖದಾಯಕ ಮತ್ತು ಮಂಗಳಕರವೆಂದು ಬಿಸಿನೀರಿನ ಸ್ನಾನವನ್ನು ಹೇಳಲಾಗಿದೆ. ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆ ಉಳಿಯುತ್ತದೆ. ಆದುದರಿಂದ ಸ್ನಾನ ಮಾಡುವುದಕ್ಕಿಂತ ಮೊದಲು ಎಣ್ಣೆಯನ್ನು ಹಚ್ಚಬೇಕು.
ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು. ಅಭ್ಯಂಗಸ್ನಾನವನ್ನು ಮಾಡುವಾಗ ‘ದೇಶಕಾಲಕಥನ’ ಮಾಡಬೇಕು. ‘ದೇಶಕಾಲಕಥನ’ ದಿಂದ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.
ದೇಶಕಾಲ ಕಥನ
ಅಭ್ಯಂಗ ಸ್ನಾನ ಮಾಡುವಾಗ ದೇಶ ಕಾಲ ಕಥನ ಮಾಡಬೇಕು. ದೇಶಕಾಲ ಕಥನ ಮಾಡುವ ಭಾರತೀಯರ ಪದ್ಧತಿಯೂ ವೈಶಿಷ್ಟ್ಯ್ಯಪೂರ್ಣವಾಗಿದೆ. ಬ್ರಹ್ಮದೇವನ ಜನನವಾದಾಗಿನಿಂದ ಇಲ್ಲಿಯವರೆಗೂ ಬ್ರಹ್ಮದೇವನ ಎಷ್ಟು ವರ್ಷಗಳಾದವು, ಯಾವ ವರ್ಷದಲ್ಲಿ ಯಾವ ಮತ್ತು ಎಷ್ಟನೆಯ ಮನ್ವಂತರವು ನಡೆದಿದೆ, ಈ ಮನ್ವಂತರದಲ್ಲಿನ ಎಷ್ಟನೆ ಮಹಾಯುಗ ಮತ್ತು ಅದರಲ್ಲಿ ಯಾವ ಉಪಯುಗ ನಡೆದಿದೆ, ಇವೆಲ್ಲವುಗಳ ಉಲ್ಲೇಖವು ದೇಶಕಾಲ ಕಥನದಲ್ಲಿ ಬರುತ್ತದೆ. ಇದರಿಂದ ಎಷ್ಟು ಮಹತ್ತರವಾದ ಕಾಲವು ಗತಿಸಿದೆ ಮತ್ತು ಉಳಿದ ಕಾಲವು ಎಷ್ಟು ದೊಡ್ಡದಿದೆ ಎನ್ನುವುದರ ಕಲ್ಪನೆ ಬರುತ್ತದೆ. ನಾನು ಬಹಳ ದೊಡ್ಡವನಾಗಿದ್ದೇನೆ ಎಂದು ಪ್ರತಿಯೊಬ್ಬನಿಗೂ ಅನಿಸುತ್ತಿರುತ್ತದೆ. ಆದರೆ, ವಿಶ್ವದ ಬೃಹತ್ ಕಾಲವನ್ನು ಮನಗಂಡಾಗ ನಾವೆಷ್ಟು ಚಿಕ್ಕವರು ಮತ್ತು ಎಷ್ಟು ಸಣ್ಣವರಾಗಿದ್ದೇವೆ ಎನ್ನುವುದರ ಅರಿವಾಗುತ್ತದೆ. ಇದರ ಒಂದು ಲಾಭವೆಂದರೆ ಮನುಷ್ಯನ ಅಹಂಭಾವವು ಕಡಿಮೆಯಾಗುತ್ತದೆ. ವರ್ಷದಲ್ಲಿ ಮುಂದಿನ ಐದು ದಿನಗಳಂದು ಹೀಗೆಯೇ ಅಭ್ಯಂಗಸ್ನಾನ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
1. ಸಂವತ್ಸರಾರಂಭ
2. ವಸಂತೋತ್ಸವದ ಮೊದಲನೆಯ ದಿನ ಅಂದರೆ ಫಾಲ್ಗುಣ ಬಹುಳ ಪ್ರತಿಪದೆ
3. ದೀಪಾವಳಿಯ ಮೂರು ದಿನಗಳು ಅಂದರೆ ಆಶ್ವಯುಜ ಬಹುಳ ಚತುರ್ದಶಿ, ಅಮಾವಾಸ್ಯೆ ಮತ್ತು ಕಾರ್ತಿಕ ಶುದ್ಧ ಪ್ರತಿಪದೆ
ತೋರಣವನ್ನು ಕಟ್ಟುವುದು
ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣ ಶುಭಸೂಚಕವಾಗಿದೆ. ಸಾತ್ತ್ವಿಕ ತೋರಣದಿಂದ ಚೈತನ್ಯ ಪ್ರಕ್ಷೇಪಿತವಾಗಿ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ.
ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.
ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೇಷ ತಿನಿಸು – ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.
ಬೇವು-ಬೆಲ್ಲ
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.
ಬೇವು- ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||
ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.
ಪಂಚಾಂಗ ಶ್ರವಣ ಎಂದರೇನು ಮತ್ತು ಅದರ ಮಹತ್ವ ಏನು?
ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲದ ಶ್ರವಣದ ಫಲ ಹೇಳಲಾಗಿದೆ, ಅದು ಮುಂದಿನಂತಿದೆ. ತಿಥಿಯ ಶ್ರವಣದಿಂದ ಲಕ್ಷ್ಮೀಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶ ವಾಗುತ್ತದೆ, ಯೋಗಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.’
ದಾನ
ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲ ಮಂದಿರ) ನಿರ್ಮಿಸಿ ನೀರಿನ ದಾನವನ್ನು ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.
ಭೂಮಿಯನ್ನು ಊಳುವುದು
ಯುಗಾದಿಯಂದು ಭೂಮಿಯನ್ನು ಊಳಬೇಕು. ಭೂಮಿಯನ್ನು ಊಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು ಹಾಕಬೇಕು. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಬೇಕು. ಈ ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ, ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರಬೇಕು ಎಂದು ಹೇಳುತ್ತಾರೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೇ ಬಾಲ್ಯ ಒಂದೇ ಹರೆಯ
ನಮಗದಷ್ಟೆ ಏತಕೆ?
ಬೋಳಾದ ವೃಕ್ಷ ಪ್ರತಿ ವಸಂತದಲ್ಲೂ ಚಿಗುರಿಬಿಡುತ್ತದೆ. ಗತದ ಚಿಂತೆಯಿಲ್ಲದ ಪ್ರಾಣಿ-ಪಕ್ಷಿಗಳು ಪ್ರತಿ ವಸಂತದಲ್ಲು ಸುಗ್ಗಿಯ ಹಿಗ್ಗಿನಲ್ಲಿ ಹೊಸಬಾಳು ಆರಂಭಿಸುತ್ತವೆ. ನಿದ್ದೆಯಿಂದೆದ್ದಾಗ ನಿನ್ನೆಯ ನೆನಪಿಲ್ಲವಾಗುವಂಥ, ತತ್ಫಲವಾಗಿ ಪ್ರತಿ ಮುಂಜಾನೆಯೂ ಹೊಸ ಹುಟ್ಟಿನ ಅನುಭವ ಪಡೆಯುವಂತಹ, ಪ್ರತಿ ದಿನವೂ ಹೊಸ ಜೀವನದ ಸಂತಸ ಹೊಂದುವಂಥ ಸುಯೋಗವನ್ನು ಪ್ರತಿ ವಸಂತದಲ್ಲೂ ಗಿಡ-ಮರ, ಪ್ರಾಣಿ-ಪಕ್ಷಿಗಳಿಗೆ ಕರುಣಿಸಿರುವಂತೆ ಮಾನವರಾದ ನಮಗೆ ಆ ಸೃಷ್ಟಿಕರ್ತ ಕರುಣಿಸಿಲ್ಲ. ನಮಗೆ ಮಾತ್ರ ಒಂದೇ ಜನ್ಮ. ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗೇಕೆ ಈ ವಂಚನೆ?! ಎಂದು ಪ್ರಶ್ನೆಯನ್ನು ಒಡ್ಡುವ ಮೂಲಕ ವರಕವಿ ಬೇಂದ್ರೆಯವರು ಸೃಷ್ಟಿಯ ಆಂತರ್ಯವನ್ನೇ ಕೆದಕುತ್ತಾರೆ.
ಆದರೆ ಸೃಷ್ಟಿಕರ್ತನು ಪ್ರತಿ ದಿನವನ್ನೂ ಸಂತಸಮಯವನ್ನಾಗಿ ಮಾಡಿಕೊಳ್ಳುವಂತಹ ಬುದ್ಧಿಶಕ್ತಿಯನ್ನು ಮನುಷ್ಯನಿಗೆ ಕರುಣಿಸಿದ್ದಾನೆ. ಹೊಸವರುಷ ಹೊಸತಲ್ಲ.. ಏಕೆಂದರದು ಹಳೆಯ ನೋವನ್ನು ಮರೆಸುವುದಿಲ್ಲ, ಅದೇ ಬದುಕು, ಅದೇ ಬೇಗೆ, ಅದೇ ಬೆಂಕಿ ಎಂಬ ಮನದ ಭಾವವನ್ನು ಬದಲಿಸಿಕೊಂಡು ನಮ್ಮ ಪ್ರತಿ ದಿನವನ್ನೂ ನವೀನ ಜನನದಂತೆ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಎಲ್ಲ ಸನ್ಮಿತ್ರರಿಗೂ ಯುಗಾದಿಯ ಶುಭಾಶಯಗಳು.. 
Terms | Privacy | 2024 🇮🇳
–>