ಏನೇನೋ ತಿಂದು ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಉಂಟಾಗುವ ಗ್ಯಾಸ್ಟ್ರಿಕ್ ಸಮಸ್ಯೆ ಈಗ ಹೆಚ್ಚಿನ ಎಲ್ಲಾ ವ್ಯಕ್ತಿಗಳನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ತಿಂದದ್ದು ಸರಿಯಾಗಿ ಜೀರ್ಣವಾಗದೇ ಇರುವುದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಿರಬಹುದು. ಗ್ಯಾಸ್ಟ್ರಿಕ್ ಸಮಸ್ಯೆ ಪುರುಷರು ಮತ್ತು ಮಹಿಳೆಯರಲ್ಲೂ ಸಹ ಕಂಡುಬರುತ್ತದೆ.
ಈ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ...
ಸೋಂಪು ತಿನ್ನಿ :
ಒಂದು ಚಮಚ ಸೋಂಪು ತಿನ್ನಿ ಅಥವಾ ಇದರ ಚಹಾ ಮಾಡಿ ಸೇವಿಸಿ. ಇದರಿಂದ ಒಂದು ನಿಮಿಷದಲ್ಲಿ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.
ಒಣ ಶುಂಠಿ :
ಅರ್ಧ ಚಮಚ ಒಣ ಶುಂಠಿ ಪೌಡರ್ ಮತ್ತು ಒಂದು ಚಿಟಿಕೆ ಹಿಂಗುವಿಗೆ ಒಂದು ಕಪ್ ಬಿಸಿ ನೀರು ಮಿಕ್ಸ್ ಮಾಡಿ ಕುಡಿಯಿರಿ.
ಪುದೀನಾ :
ಒಂದು ಕಪ್ ಪುದೀನಾ ಚಾಹ ದಿನವೂ ಸೇವಿಸಿ. ಇದರಿಂದ ಹೊಟ್ಟೆನೋವು ಕಡಿಮೆಯಾಗಿ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.
ಕೊತ್ತಂಬರಿ ಸೊಪ್ಪು :
ಗ್ರಾಸ್ಟ್ರಿಕ್ ಸಮಸ್ಯೆ ಉಂಟಾದರೆ ಕೊತ್ತಂಬರಿ ಸೊಪ್ಪು ಕಷಾಯ ಮಾಡಿ ಕುಡಿಯುವುದರಿಂದಲೂ ನಿವಾರಣೆಯಾಗುತ್ತದೆ. ಹೊಟ್ಟೆ ನೋವು ಸಹ ನಿವಾರಣೆಯಾಗುತ್ತದೆ.
ತುಳಸಿ :
ತುಳಸಿ ಎಲೆಗಳನ್ನು ಹಾಗೇ ತಿನ್ನುವುದರಿಂದ ಸಹ ಗ್ಯಾಸ್‌ನಿಂದ ಶೀಘ್ರ ಮುಕ್ತಿ ದೊರೆಯುತ್ತದೆ.
ಚೀನಿಕಾಯಿ :
ಪ್ರತಿದಿನ ಊಟದ ಜೊತೆ ಒಂದು ಕಪ್ ಚೀನಿಕಾಯಿ ತಿನ್ನುವುದರಿಂದ ಗ್ಯಾಸ್ಟ್ರಿಕ್‌ನಿಂದ ಮುಕ್ತಿ ಸಿಗುತ್ತದೆ. ಯಾಕೆಂದರೆ ಇದರಲ್ಲಿ ವಿಟಾಮಿನ್ ಎ, ಪೊಟ್ಯಾಶಿಯಂ ಮತ್ತು ಫೈಬರ್ ಇರುತ್ತದೆ.
ಮೊಸರು :
ಇದರಲ್ಲಿ ಬಹುಪಯೋಗಿ ಬ್ಯಾಕ್ಟೀರಿಯಾ ಇರುತ್ತದೆ. ಇದರಿಂದ ಹೊಟ್ಟೆ ಯಾವಾಗಲೂ ಸರಿಯಾಗಿರುತ್ತದೆ. ತಿಂದದ್ದು ಸರಿಯಾಗಿ ಜೀರ್ಣವಾಗುತ್ತದೆ.
ಲಿಂಬೆಹಣ್ಣು :
ಬೆಳಗ್ಗೆ ಯಾವಾಗಲೂ ಒಂದು ಲೋಟ ನಿಂಬೆ ರಸವನ್ನು ಬಿಸಿನೀರಿನ ಜೊತೆ ಕುಡಿಯುವುದರಿಂದ ಗ್ರಾಸ್ಟ್ರಿಕ್ ಸಮಸ್ಯೆ ಉಂಟಾಗುವುದಿಲ್ಲ.
Subscribe , Follow on