![](https://blogger.googleusercontent.com/img/b/R29vZ2xl/AVvXsEhC3NHI5dZp5VbCCNl5zqFs5NCgt164McLc0_1fQ3979ZmJVFdGXBVTInQSmlyWuNL3m2eEw3zk1T5k-VZmnqQswcRQ988Pl31yCSjQGhU3StK9o2REjgTUlYuuF5VFaCEaOY5oThhMJSM/s1600-rw/akka+mahadevi.jpg)
*********
ನಮಗೆ ನಮ್ಮ ಲಿಂಗದ ಚಿಂತೆ
ನಮಗೆ ನಿಮ್ಮ ಭಕ್ತರ ಚಿಂತೆ
ನಮಗೆ ನಮ್ಮ ಚನ್ನಮಲ್ಲಿಕಾರ್ಜುನಯ್ಯನ
ಚಿಂತೆಯಲ್ಲದೆ ಲೋಕದ ಮಾತು ನಮಗೇತಕಣ್ಣ
We worry thinking on our soul
We worry thinking on our followers
We worry thinking on our God ChennaMallikarjuna
Why should we need to now worry about what world says ?
*********
ಹಸಿವಾದೊಡೆ ಭಿಕ್ಷಾನ್ನಗಳುಒಂಟು
ತೃಷೆಯಾದರೆ ಕೆರೆ ಹಳ್ಳ ಭಾವಿಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ
ಎನಗುಳ್ಳುದೊಂದು ಮನ
ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ
ಎನಗೆ ಭವ ಉಂಟೇ ? ಚೆನ್ನಮಲ್ಲಿಕಾರ್ಜುನಯ್ಯ
*********
ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೇ
ಸೂರ್ಯಕಾಂತಿಯಲ್ಲಿದ್ದಾಗ್ನಿಯ ನಾರುಬಲ್ಲರು
ಅಪಾರ ಮಹಿಮ ಚೆನ್ನಮಲ್ಲಿಕಾರ್ಜುನ
ನೀನೆನ್ನೊಳಗಿರ್ದ ಪರಿಯ ಬೇರಿಲ್ಲದೇ ಕಂಡು ಕಣ್ತೆರೆದೆನು
*********
ನಾಳೆ ಬರುವದು ನಮಗಿಂದೇಬರಲಿ
ಇಂದು ಬರವುದು ನಮಗೀಗಲೆ ಬರಲಿ
ಆಗೀಗ ಎನ್ನದಿರು ಚೆನ್ನಮಲ್ಲಿಕಾರ್ಜುನ *********
ಹೆದರದಿರು ಮನವೆ
ಬೆದರದಿರು ತನುವೆ
ನಿಜವನರಿತು ನಿಶ್ಚಿಂತನಾಗಿರು
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,
ಎಲವದ ಮರನ
ಇಡುವರೊಬ್ಬರ ಕಾಣಿ
ಭಕ್ತಿಯುಳ್ಳವರ
ಬೈವರೂಂದು ಕೋಟಿ
ನಿಮ್ಮ ಶರಣರ ನುಡಿಯೇ
ಎನಗೆ ಗತಿ ಸೋಪಾನ
ಚೆನ್ನ ಮಲ್ಲಿಕಾರ್ಜುನ.
ವಚನ ಭಾವಾರ್ಥ :ಪರಿಸರ,ಜನರ ಮನೋಭಾವ, ಪರಿಸ್ಥಿತಿ, ನಮ್ಮನ್ನು ಭಯಕ್ಕೆ ಆತಂಕಕ್ಕೆ ಚಿಂತೆಗೆ ಗುರಿಮಾಡುತ್ತದೆ. ಅದರಲ್ಲೂ ಸಜ್ಜನರಿಗೆ ಒಳ್ಳೆಯವರಿಗೆ ತೊಂದರೆ ಹೆಚ್ಚು.
ದುಷ್ಟರಿಂಗಿಂತ ಸಜ್ಜನರೇ ಪದೇ ಪದೇ ತೊಂದರೆಗೆ ಹೀಯಾಳಿಕೆಗೆ ಮಾನಸಿಕ ಹಿಂಸೆಗೆ ಗುರಿಯಾಗುತ್ತಾರೆ. ಪ್ರಯೋಜನ ಕಾರಿಯಾದ ಫಲಭರಿತ ಮಾವಿನ ಮರಕ್ಕೆ ಜನ ಕಲ್ಲು ಎಸೆಯುತ್ತಾರೆ. ಹಣ್ಣು ಬಿಡದ ಮರಕ್ಕೆ ಯಾರು ಕಲ್ಲು ಎಸೆಯುವುದಿಲ್ಲ. ಅದೇ ರೀತಿಯಲ್ಲಿ ಸಮಾಜದ ವರ್ತನೆ. ಇದನ್ನು ಅರಿತು ಹೆದರಬಾರದು ಬೆದರಬಾರದು. ವಾಸ್ತವವನ್ನು ಅರಿತು ನಿಶ್ಚಿಂತೆ ಮತ್ತು ಸಮಾಧಾನದಿಂದ ಇರಬೇಕು.ಶಿವಶರಣರ ವಚನಗಳೇ ಅಂತಹ ದಾರಿಯನ್ನು ತೋರಿಸುತ್ತವೆ ಎಂದು ಅಕ್ಕ ಅಭಿಪ್ರಾಯಪಟ್ಟಿದ್ದಾರೆ.
Subscribe , Follow on