-->

Jokes , Fun , Haasya , Humor , Quotes , Greetings - Part 99

Doctor : Your Liver is enlarged 

Patient : Does that mean it has space for more whisky ? 

(This is called "Positive Thinking" 😄😄)

Lady to her dietician :- What l am worried about is my height and not my weight.

Doc :- How come???

Lady :- According to my weight, my height should be 7.8 feet... 😜

(Now this is called "Positive Attitude" 👍)

A Man wrote to the bank. "My Cheque was returned with remark 'Insufficient funds'. I want to know whether it refers to mine or the Bank".

(This is self confidence in its peak 😂😂)

 This one is classic !!

A cockroach's last words to a man who wanted to kill it : "Go ahead and kill me, you coward. You're just jealous because I can scare your wife and you cannot..!!!!" 

*********

ಯದಾಯದಾಹಿ ಮೊಬೈಲಸ್ಯ
ಗ್ಲಾನಿರ್ಭವತಿ ಸಿಗ್ನಲ
ಅವುಟ್ ಆಫ್ ರೀಚ್ ಸೂಚನೇನ
ತ್ವರಿತ ಜಾಗ್ರುತ ಸಂಶಯಹ
ವಿಛ್ಹೆದಿತಾಮ್ ಸಂಪರ್ಕಾಹ
ಕಲಹಮ್ ಮಾತ್ರ ಭವಿಷ್ಯತಿ
ತಸ್ಮಾತ್ ಚಾರ್ಜಿಂಗ್ ಎವಮ್ ರಿಚಾರ್ಜಿಂಗ್
ಕುರ್ವಂತು ತವ ಸತ್ವರಮ್
ಮನಸ್ತೊಕ್ತಮ್ ಚಾಟಿಂಗ್
ಹಾಸ್ಯ ವಿನೋದೇವ ಟೆಕ್ಸ್ಟಿಂಗ್
ಸತ್ವರ ಸತ್ವರ ಫಾರ್ವಾಡಿಂಗ್
ಅಖಂಡಿತ ಸೇವಾಹ ಪ್ರಾರ್ಥಯಾಮಿ
ಟಚ್ ಸ್ಕ್ರಿನಮ್ ನಮಸ್ತುಭ್ಯಮ್
ಅಂಗುಳಿ ಸ್ಪರ್ಶಮ್ ಕ್ಷಮಾ ಸ್ವಮೆ
ಪ್ರಸನ್ನಾಯ ಇಷ್ಟ ಮಿತ್ರಾಣಮ್
ಅಹೋ ರಾತ್ರಿಮ್ ಮೆಸೇಜಮ್ ಕರಿಶ್ಯೆ
ಒಮ್ ಶಾಂತಿ ಶಾಂತಿ ಶಾಂತಿಃ

*********

" ಸಾಲ ತಗೊಂಡು ಒಂದು ವರ್ಷವಾಯ್ತು ಈಗಲಾದರೂ ತೀರಿಸುತ್ತೀರಾ ಇಲ್ವಾ...?"

" ಸಾಲ ತಗೊಂಡಾಗ್ಲೇ ಹೇಳಿದ್ನಲ್ವಾ ಸಾರ್...?"

" ಏನಂತ....?"

" ನಿಮ್ಮ ಋಣಾನ ಈ ಜನ್ಮದಲ್ಲಿ ತೀರಿಸೋಕಾಗಲ್ಲ ಅಂತ...!!"          😜😜😜😜

*********

Thought for the day.. 
ದೇವರಿಗೆ ಮತ್ತು ವೈದ್ಯರಿಗೆ ಕೋಪ ಬರುವಂತೆ ವರ್ತಿಸಬಾರದು. ದೇವರಿಗೆ ಕೋಪ ಬಂದ್ರೆ ವೈದ್ಯರಲ್ಲಿಗೆ ಕಳಿಸ್ತಾನೆ.ವೈದ್ಯರಿಗೆ ಕೋಪ ಬಂದ್ರೆ ದೇವರಲ್ಲಿಗೆ ಕಳಿಸ್ತಾರೆ.😜 lol..

*********

ಹೆಣ್ಣು ಮಕ್ಕಳು ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಯಾಕೆ ಇಷ್ಟಪಡುತ್ತಾರೆ ಗೊತ್ತಾ..?

1. ಪ್ರತಿ ತಂದೆಗೆ ತನ್ನ ಮಗಳೇ ಸರ್ವಸ್ವ. ಕೆಲವು ಸರಿ ತನ್ನ ಹೆಂಡತಿಯ ಮೇಲೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಮಗಳ ಮೇಲೆ ತೋರಿಸುತ್ತಾನೆ.

2. ಗಂಡಸರಿಗೆ ಮಾತ್ರ ಸಿಗುವ ಒಂದು ದೊಡ್ದ ವರ ಎಂದರೆ ತನ್ನ ಜೀವನದಲ್ಲಿ ಮೂವರು "ಅಮ್ಮಂದಿರನ್ನು" ಪಡೆಯುವುದು.
3. ಜನ್ಮಕೊಟ್ಟ ತಾಯಿ ತನ್ನ, ರಕ್ತ ಹಚ್ಚಿಕೊಂಡ ಸಹೋದರಿ(ಎರಡನೇ ತಾಯಿ), ತನಗೆ ಹುಟ್ಟಿದ ಮಗಳು (ಮೂರನೆಯ ತಾಯಿ),
4. ಪ್ರತಿ ಮಗಳಿಗೆ ತಂದೆ ನಿಜವಾದ ಆತ್ಮೀಯ. ನಂಬಿಕಸ್ಥ ಗೆಳೆಯ. ಆಪತ್ತಿನ ಸಮಯದಲ್ಲಿ ಜೊತೆಗಿರುವ ಜೊತೆಗಾರ.
5. ತಂದೆ ತನ್ನ ಆದಾಯ ಹೆಚ್ಚು ಹಣವನ್ನು ಖರ್ಚು ಮಾಡುವುದು ಮಗಳಿಗಾಗಿಯೇ...!
6. ಎಂತಹ ಸಂದರ್ಭದಲ್ಲೂ ತಂದೆಯೇ ಮಗಳಿಗೆ ರಕ್ಷಣೆ. ರಕ್ಷಣೆ ವಿಷಯದಲ್ಲಿ ತಾಯಿಗಿಂತ ತಂದೆ ಎಚ್ಚರವಹಿಸುತ್ತಾನೆ.
7. ಮಗನ ಮೇಲೆ ತೋರಿಸುವ ಕೋಪಕಿಂತ ಮಗಳ ಮೇಲೆ ಮಗಳ ಮೇಲೆ ತೋರಿಸುವ ಕೋಪ ತುಂಬಾ ಕಡಿಮೆ ಎಂದು ಹೇಳಬಹುದು.
8. ಗಂಡು ಮಕ್ಕಳ ಮೇಲೆ ಕೈ ಮಾಡಿರಬಹುದು. ಆದರೆ ಮಗಳ ಮೇಲೆ ಒಂದು ಏಟೂ ಹಾಕದ ತಂದೆಯರು ಇದ್ದಾರೆ‌.
9. ಮಗಳು ಏನಾದರೂ ಕೇಳಿದರೆ ಇಲ್ಲ ಎನ್ನದ ಒಂದೇ ಒಂದು ಜೀವಿ "ಅಪ್ಪ"
10. ಹೊರಗಡೆ ಹೋದಾಗ ತಡವಾದರೆ ಎಷ್ಟೊತ್ತಾದರೂ ತನಗಾಗಿ ಕಾಯುವವ ತಂದೆಯೊಬ್ಬನೇ.
11. ವಯಸ್ಸಿಗೆ ಬಂದಾಗ ಪ್ರೀತಿ ಎಂದರೇನು? ಆಕರ್ಷಣೆ ಅಂದರೆ ಏನು? ಎಂದು ನಿಧಾನವಾಗಿ ಅರ್ಥಮಾಡಿಸುವುದು ತಂದೆಯೊಬ್ಬನೇ.
12. ಮಗಳು ಎಂತಹದೇ ಕ್ಲಿಷ್ಟವಾದ ಪರಿಸ್ಥಿತಿಯಲ್ಲಿ ಸಿಲುಕಿದ್ದರೂ ಅದರಿಂದ ಹೊರತರುವುದು ತಂದೆ ಮಾತ್ರ.
13. ತಾಯಿ ಕೈತುತ್ತು ಕೊಟ್ಟು ಎಷ್ಟೇ ಚನ್ನಾಗಿ ನೋಡಿಕೊಂಡರೂ ಮಗಳಿಗೆ ಧೈರ್ಯ ತುಂಬುವುದು ತಂದೆನೇ.
14. ತಂದೆಗೆ ತನ್ನ ಮಗಳ ಜೀವನದ ಬಗ್ಗೆ ಸ್ವಲ್ಪ ಹೆಚ್ಚಿನ ಭಯವಿರುತ್ತದೆ. ಅದು ಭಯ ಅಲ್ಲ ಆಕೆಯ ಮೇಲೆ ತೋರಿಸುವ ಪ್ರೀತಿ, ಆಕ್ಕರೆ.
15. ಒಂದು ಹುಡುಗಿಯ ಜೀವನದಲ್ಲಿ ತಂದೆ ಎಂಬುವನು ಒಬ್ಬ ಸ್ನೇಹಿತ, ದಾರಿತೋರಿಸುವ ದೇವರು.
16. ಏನೇ ತಪ್ಪು ಮಾಡಿದರೂ ಎದೆಯಲ್ಲಿಟ್ಟುಕೊಂಡು ಕಾಪಾಡುವ ಕಾವಲುಗಾರ. ಒಬ್ಬ ಹೀರೋ, ಒಬ್ಬ ಆತ್ಮೀಯ.
"ಇಂತಹ ತಂದೆಯನ್ನು ಯಾವ ಮಗಳಾದರೂ ಇಷ್ಟಪಡುವುದರಲ್ಲಿ ಆಶ್ಚರ್ಯವಿಲ್ಲ" ....,

*********

ಒಂದೆಡೆ ಶ್ರೀಕೃಷ್ಣ ಹೇಳುತ್ತಾನೆ...

"ನನ್ನನ್ನು ನಂಬುತ್ತೀಯಾ....?
ನಂಬುವುದಾದರೆ ಪೂರ್ತಿಯಾಗಿ ನಂಬು... ಅನುಮಾನವಿಲ್ಲದೆ, ಶುದ್ಧ ಮನಸ್ಸಿನಿಂದ ಮಗು ತಾಯಿಯನ್ನು ಅಪ್ಪುವ ಹಾಗೆ ನಂಬು.... ಹಾಗಿದ್ದಲ್ಲಿ ಮಾತ್ರ ನಾನು ನಿನಗೆ ಸಿಗುತ್ತೇನೆ..."

ಶ್ರೀಕೃಷ್ಣ ಹುಟ್ಟುವ ಮೊದಲೇ ಆತನ ಸಾವು ಆತನಿಗಾಗಿ ಕಾಯುತ್ತಿತ್ತು...

ಸೋದರ ಮಾವನ ರೂಪದಲ್ಲಿ...

ಹೆತ್ತ ತಾಯಿಗೆ ಆತ ದಕ್ಕಲಿಲ್ಲ...

ಸಲುಹಿದ ತಾಯಿಗೆ ಆತ ಸಿಗಲಿಲ್ಲ...

ಪ್ರೀತಿಸಿದ ರಾಧೆಯ ಪ್ರೀತಿ ಪೂರ್ತಿ ಆಗಲಿಲ್ಲ....

ಆತ ತನಗೆ ಸಿಕ್ಕಿದ ಅಂತ ಅಂದು ಕೊಂಡವರಿಗೆ ಸುಳ್ಳಾದ...

ಒಟ್ಟಿನಲ್ಲಿ ಶ್ರೀಕೃಷ್ಣ ಒಂದು ಚೌಕಟ್ಟಿನಲ್ಲಿ ಸಿಗದ ವ್ಯಕ್ತಿತ್ವ....

ಪ್ರತಿಯೊಂದೂ ಸಂಬಂಧ... ಬಾಂಧವ್ಯವನ್ನೂ ಸಮರ್ಥವಾಗಿ ನಿಭಾಯಿಸಿದ ಆದರ್ಶ. ಶ್ರೀಕೃಷ್ಣ .

ಕೃಷ್ಣನ ಕಥೆ ಓದಿದ ಮೇಲೆ ನಮಗೆ ಅಲ್ಲಿ ಸಿಗುವುದೇನು?

ಪ್ರೀತಿಸಿ ಮುದ್ದಿಸ ಬೇಕಾದ  ಮಾವನಾದ "ಕಂಸ" ಪ್ರೀತಿ ನಮಗೂ ಸಿಗದಿರ ಬಹುದು...

ತಾಯಿಯಂತೆ ಬಂದು ಮೊಲೆಯುಣಿಸುವ "ಪೂತನಿಯೂ" ನಮಗೆ ಸಿಗ ಬಹುದು....

ಏನೂ ಬಯಸದ, ಶುದ್ಧ ಹೃದಯದ ಪ್ರೀತಿ ಕೊಡುವ "ರಾಧೆಯೂ" ನಮಗೆ ಭೇಟಿಯಾಗ ಬಹುದು....

"ಕೃಷ್ಣ" ಸಾಹಸವಂತ, ಲೋಕ ವಿಖ್ಯಾತ... ಎಂದು ಮದುವೆಯಾದ ರುಕ್ಮಿಣಿ....

ಪ್ರೀತಿಸಿ ಹಠ ಮಾಡಿ ಮದುವೆಯಾದ ಸತ್ಯಭಾಮೆ....

ಅಪ್ಪ, ಅಮ್ಮನಾದರೂ ಅನಿವಾರ್ಯವಾಗಿ ಪ್ರೀತಿ ಮಾಡಲಾಗದ ಜೊತೆಯಾಗಿ ಇರಲಾಗದ ಮುಗ್ಧ ಅಸಹಾಯಕರು...

ಯಾರದ್ದೋ ಮಗುವನ್ನು ತನ್ನದೆಂದು ಮುದ್ದಿಸುವ "ಯಶೋದೆ ನಂದಗೋಪನಂಥವರೂ" ನಮಗೆ ಸಿಗ ಬಹುದು....

ಧರ್ಮಜ... ಪ್ರತಿಕ್ಷಣವೂ ಧ್ಯಾನಿಸುವ ಅರ್ಜುನ... ನೀನೇ ದೈವ ಎಂದು ನಂಬಿ... ಪ್ರಾಣ ಕೊಡಲೂ ಸಿದ್ಧವಾಗಿರುವ ಕುಂತಿ ಮತ್ತು ಕುಂತಿ ಪುತ್ರರು ಮತ್ತು ಅವರ ಜವಾಬ್ದಾರಿಗಳು....

ಸಖಿಯಂಥಹ ಸಹೋದರಿ "ದ್ರೌಪದಿ"...

ಒಳಗೊಳಗೆ ದೈವವೆಂದು ಪ್ರಾರ್ಥಿಸುವ, ಎದುರಿಗೆ ಧರ್ಮಕ್ಕೆ ಗಂಟು ಬಿದ್ದು ವಿರೋಧಿಸುವ ಭೀಷ್ಮ, ದ್ರೋಣ, ಕೃಪಾಚಾರ್ಯ...

ಆತ್ತಿಗೆ ತಾಯಿಯೆಂದು ತಿಳಿದರೂ
ಮಾನಭಂಗಕ್ಕೆ ಎದುರಾಗುವ ದುರುಳರು... 

"ನಿನ್ನನ್ನು ನಂಬುವುದೇ ಇಲ್ಲ" ಎಂದು ಧಿಕ್ಕರಿಸಿ, ಎದುರಿಸುವ  ಧುರ್ಯೋಧನ... ಶಕುನಿ... ದುಶ್ಯಾಸನ... ಶಿಶುಪಾಲ... ಜರಾಸಂಧ....

ಮಗುವಿನಂಥಹ ಗೆಳೆಯ ಸುಧಾಮ... ದೈವವೆಂದು ಪ್ರಾರ್ಥಿಸುವ ಅಕ್ರೂರ, ವಿಧುರ...

ಸ್ವಲ್ಪ ಖ್ಯಾತಿ ಸಿಕ್ಕಿದರೆ ಸಾಕು, ತಾವು ದೈವ ವಂಶದವರು... ಎಂದು ಹಾರಾಡುವ ಯದು ವಂಶದವರು... ಕಷ್ಟದ ಮಹತ್ವ ತಿಳಿಯದ ಮಕ್ಕಳು...

ಹುಟ್ಟು... ಬದುಕಿನುದ್ದಕ್ಕೂ  ನ್ಯಾಯ,  ಧರ್ಮ ಸಂಸ್ಥಾಪನೆಗಾಗಿ ಹೋರಾಡಿ, ತಂತ್ರ, ಕಪಟ ನೀತಿಯನ್ನೂ ತನ್ನದಾಗಿಸಿ... ಜಗತ್ತು ಬಿಟ್ಟು ಹೋಗುವಾಗ ಎಲ್ಲವನ್ನೂ  ಇಲ್ಲಿಯೇ ಬಿಟ್ಟು
ಏನನ್ನೂ ತನ್ನೊಡನೆ ಒಯ್ಯದ... ಎಲ್ಲಾ ಐಹಿಕ, ಲೌಕಿಕ, ಲೋಕದೊಳಗಿದ್ದು, ಏನನ್ನೂ ಅಂಟಿಸಿ ಕೊಳ್ಳದೆ...

ಕೊನೆಯಲ್ಲಿ ತನ್ನ ಕುಲ, ವಂಶ ನಾಶ ಆಗುವುದನ್ನೂ ನೋಡಿ... ಕೇವಲ ಬದುಕಿನ ಕರ್ತವ್ಯವನ್ನು ನಿಭಾಯಿಸುವ ಶ್ರೀಕೃಷ್ಣ....

ದುಷ್ಟರನ್ನು ನಿಗ್ರಹಿಸಲು...
ಧರ್ಮ ಸಂಸ್ಥಾಪನೆಗಾಗಿ ಕೃಷ್ಣನ ಬಾಳು ... ದೇವರ ಅವತಾರವಷ್ಟೇ ಅಲ್ಲ....

ನಮ್ಮ ಪ್ರಸ್ತುತ ಬದುಕಿಗೂ ಉದಾಹರಣೆ ಮತ್ತು ಯಾವತ್ತಿಗೂ ನಮಗೆ ಆದರ್ಶ...

ನಮಗೂ ಸಹ ದುರ್ಯೋಧನ... ದುಶ್ಯಾಸನ.. ಶಕುನಿ, ಕರ್ಣರು... ಎದುರಾಗ ಬಹುದು...

ನಮಗೆ ಸಿಕ್ಕ ಪ್ರತಿಯೊಬ್ಬರೊಡನೆ  ನಾವು ಹೇಗಿರ ಬೇಕು? ಹೇಗೆ ವ್ಯವಹರಿಸ ಬೇಕು ?

ಶ್ರೀಕೃಷ್ಣ ಅತ್ಯುತ್ತಮ ಉದಾಹರಣೆ...

ವೈರಿಯೊಡನೆ, ಸ್ನೇಹಿತರೊಡನೆ, ಸಹೋದರಿ ದ್ರೌಪದಿಯಂತವರೊಡನೆ...  ಪ್ರೇಮಿ... ಮಡದಿ... ಗೆಳೆಯರೊಡನೆ ಹೇಗಿರ ಬೇಕು.. ?

ಸಂಬಂಧ...ಬಾಂಧವ್ಯ... ಬದುಕಿನ ರಾಜಕೀಯಗಳನ್ನು ಹೇಗೆ ನಿಭಾಯಿಸ ಬೇಕು? ಎನ್ನುವುದಕ್ಕೆ ಶ್ರೀಕೃಷ್ಣ... ನಮಗೆ ಅತ್ಯುತ್ತಮ ಆದರ್ಶ....

ಅಂದಿಗೂ... ಇಂದಿಗೂ... ಎಂದೆಂದಿಗೂ...

ಬದುಕಿನ ಪ್ರತಿಯೊಂದೂ ಕ್ಷಣಕ್ಕೂ ಆದರ್ಶ ಶ್ರೀಕೃಷ್ಣ...

ನಮ್ಮ  ಬದುಕಿನ ಕುರುಕ್ಷೇತ್ರದಲ್ಲಿಯೂ ಸಹ... ರಣರಂಗದ ಯುದ್ಧದಲ್ಲಿ  ನಾವಿದ್ದರೂ ಶಸ್ತ್ರ ಹಿಡಿಯದ... ಸಂಯಮ ಕಿರುನಗುವಿನ "ಶ್ರೀಕೃಷ್ಣ" ನಮಗೆ ಆದರ್ಶ.... 

ವಿಪರ್ಯಾಸ ಏನು ಗೊತ್ತಾ ?

ಆತ ಒಂದು ಚೌಕಟ್ಟಿನೊಳಗೆ ಎಂದೂ ಸಿಗುವುದೇ ಇಲ್ಲ....

ಶ್ರೀಕೃಷ್ಣ  ಹೀಗೆ ಎಂದು ಯಾವತ್ತಿಗೂ ಹೇಳಲಾಗುವದಿಲ್ಲ...

ನಮ್ಮ ಬುದ್ಧಿಮಟ್ಟ ಎಷ್ಟಿದೆಯೋ  ಅಷ್ಟು ಮಾತ್ರ ಆತ ನಮಗೆ ದಕ್ಕುತ್ತಾನೆ...

ಈ ಜಗತ್ತಿನ ಎಲ್ಲವೂ ನಮ್ಮದು... ನಮಗಾಗಿ ಎಂದು ಕೊಳ್ಳುತ್ತೇವೆ...

ನಿತ್ಯವೂ ಮಿಥ್ಯ ಭ್ರಮೆಯಲ್ಲಿ ಬದುಕುತ್ತೇವೆ...

ಈ ಜಗತ್ತು ನಮ್ಮದು. ಎಲ್ಲದೂ  ನಮ್ಮದು... ನನ್ನದು... ಹುಟ್ಟಿದ ಪ್ರತಿಕ್ಷಣವೂ ನಮ್ಮದು ....

ಬರಿಗೈಯಲ್ಲಿ ಹುಟ್ಟಿ... ಖಾಲಿ ಕೈಯಲ್ಲಿ ಮರಳುವುದು ನಮ್ಮ ಬದುಕು...

ಸಾವನ್ನು ಮರೆತು ಹಾರಾಡುವ ನಮ್ಮ ಬದುಕಿಗೆ ನಾವು ಹೇಗಿರ ಬೇಕು ?ಹೇಗೆ ಬಾಳ ಬೇಕು? ಎನ್ನುವುದಕ್ಕೆ ಶ್ರೀಕೃಷ್ಣ ನಮಗೆ ಆದರ್ಶ...

*********

ಒಬ್ಬ ಶಿಷ್ಯನು ತನ್ನ ಗುರುಗಳನ್ನು ಪ್ರಶ್ನಿಸುತ್ತಾನೆ: ಗುರುಗಳೆ ನಾಶವಾಗುವ ಈ ಶರೀರದಲ್ಲಿ ಎಂದಿಗೂ ನಾಶವಾಗದ ಆತ್ಮ ಹೇಗಿರಲು ಸಾಧ್ಯ? ಗುರುಗಳು ಹೀಗೆ ಉತ್ತರಿಸುತ್ತಾರೆ: ಹಾಲು ಉಪಯುಕ್ತವಾದುದು ಆದರೆ ಆ ಹಾಲು ಒಂದು ದಿನದ ನಂತರ ಹಾಳಾಗುವುದು, ಹಾಲಿಗೆ ಒಂದು ತೊಟ್ಟು ಮಜ್ಜಿಗೆ ಹಾಕಿಟ್ಟರೆ ಮೊಸರಾಗುವುದು ಆ ಮೊಸರು ಸಹ ಒಂದು ದಿನದ ನಂತರ ಹಾಳಾಗುವುದು ಮೊಸರನ್ನು ಕಡೆದರೆ ಬೆಣ್ಣೆ ಸಿಗುವುದು ಆ ಬೆಣ್ಣೆಯು ಸಹ ಒಂದು
ದಿನದ ನಂತರ ಹಾಳಾಗುವುದು ಬೆಣ್ಣೆಯನ್ನು ಕಾಯಿಸಿದಾಗ ಎಂದಿಗೂ ಹಾಳಾಗದ ತುಪ್ಪ ದೊರೆಯುತ್ತದೆ.  ಹೀಗೆಯೆ ನಾಶವಾಗುವ ಶರೀರದಲ್ಲಿ ಆತ್ಮವು ನೆಲೆಯಾಗಿರುವುದು. ಶರೀರವು ಹಾಲು, ಸಂಕೀರ್ತನೆ ಮೊಸರು ಸೇವೆ ಬೆಣ್ಣೆ ಮತ್ತು ಸಾಧನೆ ತುಪ್ಪ. ಗುರುವೆಂಬ ಕಡೆಗೋಲಿನಿಂದ ಮಥಿಸಲ್ಪಟ್ಟು ಸಂಸಾರವೆಂಬ ಶಾಖದಿಂದ ಪರಿಶುದ್ದರಾಗಿ ಜೀವನ್ಮುಕ್ತರಾದವರೇ ಶ್ರೇಷ್ಠರು.

*********

ಧರ್ಮದ ಹತ್ತು ಲಕ್ಷಣಗಳು

1. ಧೃತಿ : ಎಲ್ಲಕ್ಕಿಂತ ಮೊದಲು ಧೈರ್ಯವಿರಬೇಕು. ಮನದಲ್ಲಿ ಮೂಡಿದ ಒಂದು ಒಳ್ಳೆಯ ಚಿಂತನೆಯನ್ನು ಕಾರ್ಯರೂಪಕ್ಕೆ ತರುವೆನೆಂಬ ಧೈರ್ಯ, ಆತ್ಮ ವಿಶ್ವಾಸವಿದ್ದರೆ ಮುಂದಿನದೆಲ್ಲಾ ಸುಲಭ.
2. ಕ್ಷಮಾ : ನಿಂದೆ-ಸ್ತುತಿ, ಲಾಭ-ನಷ್ಟ, ಸುಖ-ದುಃಖ ಮೊದಲಾದ ದ್ವಂದ್ವಗಳಲ್ಲಿ ಸಹನೆಯನ್ನು ಕಾಪಾಡಿಕೊಳ್ಳುವ ಪರಿ. ಕಷ್ಟವಾದರೂ ಅಸಾಧ್ಯವೇನಲ್ಲ.
3. ದಮ : ಮನಸ್ಸು ಸದಾ ಧರ್ಮಮಾರ್ಗದಲ್ಲಿದಾಗ ಮಾತ್ರ ಅಧರ್ಮಾಚರಣೆಯನ್ನು ತಡೆಯಲು ಸಾಧ್ಯ. ಯಾವುದೇ ಕಾರಣಕ್ಕೂ ಅಧರ್ಮ ಮಾರ್ಗದಲ್ಲಿ ಹೋಗುವುದಿಲ್ಲವೆಂಬ ನಿರ್ಧಾರ.
4. ಅಸ್ತೇಯ ; ಪರರ ಸ್ವತ್ತು ನನಗೆ ಮಣ್ಣಿನ ಹೆಂಟೆಯೆಂಬ ಭಾವ ಬಂದಾಗ ಅದನ್ನು ಕದಿಯುವ ಮನಸ್ಸು ಬರುವುದಿಲ್ಲ. ಪರರ ಸ್ವತ್ತಿಗೆ ಆಸೆಪದದಿರುವುದೇ ಶ್ರೀಮಂತಿಕೆ.
5. ಶೌಚ : ರಾಗ ದ್ವೇಷ, ಪಕ್ಷಪಾತವನ್ನು ಮಾಡದಿರುವುದು ಒಳಗಿನ ಶೌಚ, ಸ್ನಾನ ಮಾಡುವುದು ಹೊರಗಿನ ಶೌಚ. ಎರಡೂ ಬೇಕು
6. ಇಂದ್ರಿಯ ನಿಗ್ರಹ : ಇದೊಂದು ಮನುಷ್ಯನಿಗೆ ಸದಾ ಕಾಟಕೊಡುವ ವಿಚಾರ.ಧರ್ಮ ಮಾರ್ಗದಲ್ಲಿದ್ದಾಗ  ಇಂದ್ರಿಯಗಳು ನಮಗೆ ಕಾಟಕೊಡಲಾರವು
7.ಧೀಃ   : ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯೋಗ, ಸಜ್ಜನರ ಸಹವಾಸ,ಶ್ರೇಷ್ಠಪದಾರ್ಥಗಳ ಸೇವನೆಯಿಂದ ಸಾಧ್ಯ. ಅದಕ್ಕೆ ವಿರುದ್ಧವಾದ ಮಾದಕದ್ರವ್ಯಗಳ ಸೇವನೆ,ಆಲಸ್ಯ, ದುಷ್ಟ ಸಂಗವು ಬುದ್ಧಿಯನ್ನು ನಾಶಮಾಡುತ್ತದೆ. ಇಂದಿನ ಕಾಲಕ್ಕೆ ದೂರದರ್ಶನ ಮತ್ತು ಅಂತರ್ಜಾಲದಲ್ಲಿ ಧೀಃ ಶಕ್ತಿಯನ್ನು ಹೆಚ್ಚಿಸಬಲ್ಲ ಕಾರ್ಯಕ್ರಮಗಳೂ ಇವೆ. ನಾಶಮಾಡುವ ಹೆಚ್ಚು ಕಾರ್ಯಕ್ರಮಗಳು ಇವೆ.ಆಯ್ಕೆ ನಮ್ಮದೇ.
8. ವಿದ್ಯಾ : ಪೃಥಿವಿಯಿಂದ ಪರಮೇಶ್ವರನವರೆಗೂ ಸರಿಯಾದ ಅರಿವು ಮತ್ತು ಯಥೋಚಿತ  ಉಪಯೋಗವೇ ವಿದ್ಯೆ. ಇದಕ್ಕೆ ವಿರುದ್ಧವಾದುದು ಅವಿದ್ಯೆ.
9. ಸತ್ಯ : ಅಂತರಾತ್ಮನಲ್ಲಿರುವಂತೆ ಮನದಲ್ಲಿ,ಮನದಲ್ಲಿರುವಂತೆ ವಾಣಿಯಲ್ಲಿ, ವಾಣಿಯಂತೆ ಕೃತಿಯಲ್ಲಿ ವರ್ತಿಸುವುದೇ ಸತ್ಯ. 
10. ಅಕ್ರೋಧ : ನಮ್ಮ ಸಿಟ್ಟು ನಮ್ಮನ್ನೇ ನಾಶಮಾಡುತ್ತದೆ. ಆದ್ದರಿಂದ ಸಿಟ್ಟು ಮಾಡದಿರುವುದು ನಮಗೇ ಕ್ಷೇಮ.


–>