-->

ಸ್ಟೀವ್ ಜಾಬ್ಸ್ ಹೇಳಿದ ಈ ಕಟ್ಟಕಡೆಯ ಮಾತು

ಸಾಯೋ ಮುಂಚೆ ಸ್ಟೀವ್ ಜಾಬ್ಸ್ ಹೇಳಿದ ಈ ಕಟ್ಟಕಡೆಯ ಮಾತು ನಿಮಗೆ ಉಪಯೋಗಕ್ಕೆ ಬರುತ್ತೆ.
ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಮೇಲೆ ಮಲಗಿದ್ದಾಗ APPLE ಸಂಸ್ಥೆಯ ಹುಟ್ಟುಹಾಕಿದ ಸ್ಟೀವ್ ಜಾಬ್ಸ್ ಅವರ ಸಾಧನೆ-ಸಂಪತ್ತು ನೋಡಿ "ಅಬ್ಬಾ, ಈ ಮನುಷ್ಯ ಯಶಸ್ಸಿಗೆ ಇನ್ನೊಂದು ಹೆಸರು" ಅನ್ನುವಷ್ಟರ ಮಟ್ಟಿಗೆ ಕೊಂಡಾಡುವವರಿದ್ದಾರೆ. ಆದರೆ ತಮ್ಮ ಕೊನೆಯ ದಿನಗಳಲ್ಲಿ ಜಾಬ್ಸ್ ಅವರ ಮನದಾಳದ ಮಾತು ಬಿಸಿನೆಸ್, ದುಡಿಮೆ, ಆಸ್ತಿ, ಸಂಪತ್ತು ಇವುಗಳಿಗಿಂತ ಬೇರೆಯೇ ಆಗಿತ್ತು. ಸಾವಿನಂಚಿನಲ್ಲಿ ನಿಂತ ಸ್ಟೀವ್ ಜಾಬ್ಸ್ ಆಡಿದ ಮಾತುಗಳನ್ನು ನಿಜೆಲ್ ಡಂಕನ್ ಸ್ಮಿತ್ ಎನ್ನುವವರು ಫ಼ೇಸ್ಬುಕ್ಕಿನಲ್ಲಿ ಹಂಚಿಕೊಂಡರು.  ಅದನ್ನು ಓದಿದಾಗ ಜಗತ್ತನ್ನೇ ಬೆರಗಾಗಿಸಿದ ಒಬ್ಬ ಸಾಧಕನ ಮನದಲ್ಲಿ ಏನಿತ್ತು ಅನ್ನುವುದು ತಿಳಿಯುತ್ತದೆ. ಮುಂದೆ ಓದಿ:

"ನಾನು ನನ್ನ ಬಿಸಿನೆಸ್ಸಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದೇನೆ. ಜಗತ್ತಿನ ಕಣ್ಣಿಗೆ ನನ್ನ ಜೀವನವು ಒಂದು ಯಶಸ್ಸಿನ ಯಶೋಗಾಥೆಯಂತೆ ಕಾಣುತ್ತದೆ. ಆದರೆ, ನನ್ನ ಉದ್ಯೋಗದ ಪರಿಮಿತಿಯ ಹೊರಗೆ ನನ್ನ ಬಾಳಿನಲ್ಲಿ ಅಷ್ಟೇನೂ ನಲಿವಿಲ್ಲ. ಕೊನೆಗೆ, ನನ್ನ ಸಂಪತ್ತಿನೊಂದಿಗೇ ನನ್ನ ಜೀವನವನ್ನು ಗುರುತಿಸಿಕೊಳ್ಳುವುದು ರೂಡಿಯಾಗಿಹೋಗಿದೆ. ನನ್ನ ಜೀವನದ ಕೊನೆಯ ಕ್ಷಣಗಳನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಕಳೆಯುತ್ತಿರುವ
ನನಗೆ, ನನ್ನ ಬಾಳಿನುದ್ದಕ್ಕೂ ನಾನು ಯಾವುದನ್ನು ಸಂಪತ್ತು, ಸಾಧನೆಯೆಂದುಕೊಂಡು ಬೀಗುತ್ತಿದ್ದೆನೋ, ಅವೆಲ್ಲಾ ಏನೂ ಅಲ್ಲವೇನೋ ಅನ್ನಿಸುತ್ತಿದೆ."

"ಈ ಕತ್ತಲ ಹೊತ್ತಿನಲ್ಲಿ, ಕೃತಕ ಉಸಿರಾಟದ ಈ ಮಶೀನುಗಳಿಂದ ಬರೋ ಹಸಿರು ದೀಪ ಮತ್ತು ಗುಂಯ್ಗುಟ್ಟುವ ಸದ್ದಿನಿಂದ, ನನಗೆ ನನ್ನ ಸಾವು ನನ್ನನ್ನು ಆವರಿಸಿಕೊಳ್ಳುತ್ತಿರುವುದು ಕಾಣುತ್ತಿದೆ. ನನಗೀಗನ್ನಿಸುತ್ತಿದೆ, 
ಒಬ್ಬ ಮನುಷ್ಯ ಒಮ್ಮೆ ಜೀವನಕ್ಕೆಲ್ಲಾ ಆಗುವಷ್ಟು ದುಡ್ಡು ದುಡಿದಿಟ್ಟುಕೊಂಡ ಮೇಲೆ, ಹಣದ ಸಂಪಾದನೆಗೂ ಮೀರಿದ ಸಾಧನೆಗೆ ಇಳಿಯಬೇಕು. ಹಣಕ್ಕಿಂತ ತುಂಬಾ ಮುಖ್ಯವಾದುದಾಗಿರಬೇಕು ಆ ಸಾಧನೆ: ಉದಾಹರಣೆಗೆ, ಪ್ರೇಮ ಕಥೆಗಳು, ಕಲೆ, ಬಾಲ್ಯದ ಕನಸುಗಳನ್ನು ಮೆಲುಕು ಹಾಕುವುದು."

"ಕೇವಲ ಹಣದ ಸಂಪಾದನೆಯ ಹಿಂದೆ ಬೀಳಬೇಡಿ. ಅದರಿಂದ ನೀವೂ ನನ್ನಂತೆ ಕೆಲಸಕ್ಕೆ ಬಾರದವರಂತೆ ಆಗುತ್ತೀರಿ. ದೇವರು ನಮ್ಮೆಲ್ಲರನ್ನೂ ಯಾವುದೋ ಒಂದು ಬಗೆಯಲ್ಲಿ ಮಾಡಿದ್ದಾನೆ. ನಾವು ಒಬ್ಬರೆದೆಯಲ್ಲಿನ್ನೊಬ್ಬರು ಒಲವನ್ನು ಕಾಣಬಹುದೇ ಹೊರೆತು ನಾನು ಮಾಡಿದಂತೆ ಹೆಸರು, ದುಡ್ಡು ಇವುಗಳಿಂದ ಯಾರದೇ ಮನಸಿನಲ್ಲೂ ನೆಲೆಸಲು ಆಗುವುದಿಲ್ಲ. 
ಆ ಸಂಪತ್ತನ್ನು ನಾನು ಹೋಗುವಾಗ ನನ್ನೊಡನೆ ಕೊಂಡುಹೋಗಲೂ ಆಗದು. ನಾನು ನನ್ನೊಂದಿಗೇನಾದರೂ ಕೊಂಡುಹೋದರೆ ಅದು ಕೇವಲ ಒಲವಿನಿಂದ ಬೆಸೆದ ನೆನಪುಗಳನ್ನು ಮಾತ್ರ. ನಮ್ಮನ್ನು ಹಿಂಬಾಲಿಸುವ ಸಂಪತ್ತೂ ಅದೇ... ನಮ್ಮೊಡನೆ ಸದಾ ಇರುವಂಥದ್ದು, ನಮಗೆ ಶಕ್ತಿ ತುಂಬುವಂಥದ್ದು... ದಾರಿ ದೀಪವಾಗುವಂಥದ್ದು."

"ಪ್ರೇಮವೆನ್ನುವುದು ಸಾವಿರಾರು ಮೈಲಿ ಸಾಗಬಲ್ಲದು, ಬಾಳಲ್ಲಿ ಪ್ರೇಮವನ್ನು ತುಂಬಿಕೊಂಡಾಗ ಬಂಧನಗಳಿಂದ ಮುಕ್ತಿ ಸಿಗುತ್ತದೆ. ನಿಮಗೆ ಹೋಗಬೇಕೆನಿಸಿದಲ್ಲಿ ಹೋಗಿ. ನೀವು ಸಾಧಿಸಬೇಕೆನಿಸಿದ್ದನ್ನು ಸಾಧಿಸಿ. ಎಲ್ಲವೂ ನಿಮ್ಮೊಳಗೇ ಇದೆ... 
ನಿಮ್ಮ ಕೈಯ್ಯಲ್ಲೇ ಇದೆ."

ಈ ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಸಿಗೆ ಯಾವುದು ಗೊತ್ತೇ? 
ಅದು ಆಸ್ಪತ್ರೆಯ ಹಾಸಿಗೆ. ನಿಮ್ಮ ಬಳಿ ಹಣವಿದ್ದರೆ ಅದರಿಂದ ನಿಮ್ಮ ಕಾರಿಗೆ ಒಬ್ಬ ಡ್ರೈವರನ್ನು ನೇಮಿಸಬಹುದು, ಆದರೆ ನಿಮ್ಮ ಅನಾರೋಗ್ಯವನ್ನು ಎರವಲು ಪಡೆಯಲು ಯಾರಾದರೂ ಮುಂದೆ ಬರುತ್ತಾರೆಯೆ? ವಸ್ತುಗಳು ಒಮ್ಮೆ ಕಳೆದು ಹೋದರೆ ಮತ್ತೆ ಪಡೆದುಕೊಳ್ಳಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಹಿಂಪಡೆಯಲಾಗದ್ದು ಯಾವುದಾದರೂ ಇದ್ದರೆ ಅದು "ಜೀವನ" ಮಾತ್ರ.

"ನಾವು ಈಗ ಜೀವನದ ಯಾವುದೇ ಘಟ್ಟದಲ್ಲಿದ್ದರೂ ಮುಂದೊಂದು ದಿನ ತೆರೆಯು ಮುಚ್ಚಿ ಆಟ ಮುಗಿಯುವ ದಿನವನ್ನು ಎದುರಿಸಲೇಬೇಕು. 
ನಿಮ್ಮ ಮನೆಯವರ ಪ್ರೀತಿ, ಗಂಡ/ಹೆಂಡತಿಯ ಪ್ರೀತಿ, ಗೆಳೆಯರ ಪ್ರೀತಿ ಇವೆಲ್ಲವೂ ಅಮೂಲ್ಯವಾದುವು. ಅವನ್ನು ಕಾಪಾಡಿಕೊಳ್ಳಿ. ಎಲ್ಲರೊಡನೆ ಸಜ್ಜನಿಕೆಯಿಂದ ನಡೆದುಕೊಳ್ಳಿ, ನಿಮ್ಮ ಸುತ್ತಲ ಜನರೊಂದಿಗೆ ಒಳ್ಳೆಯ ಸಂಬಂಧವಿರಲಿ."

ಎಂಥಾ ಮಹಾನುಭಾವಿಯ ಮಾತುಗಳು! ಎಲ್ಲರ ಜೀವನದಲ್ಲೂ ಇದು ಉಪಯೋಗಕ್ಕೆ ಬರುತ್ತೆ ಅಂತ ನಮ್ಮ ಅನಿಸಿಕೆ... ಏನಂತೀರಿ?
Terms | Privacy | 2024 🇮🇳
–>