-->

ಡಾ.ಅಬ್ದುಲ್ ಕಲಾಂ ಅವರ ಹಿತನುಡಿಗಳು , Dr.Abdul Kalaam quotes kannada

ಅಬ್ದುಲ್ ಕಲಾಂ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಸಾಧನೆ, ವ್ಯಕ್ತಿತ್ವಗಳು ನಮಗೆ ಸದಾ ಮಾರ್ಗದರ್ಶನ ಮಾಡುತ್ತಲೇ ಇರುತ್ತವೆ. ಅವರು ಬದುಕಿನ ಕೊನೆಯ ಘಳಿಗೆಯವರೆಗೂ ಮಾರ್ದರ್ಶಕರಾಗೇ ಬದುಕಿ ಸೈ ಎನಿಸಿದರು.
ಅವರ ಅನುಭವದಲ್ಲಿ ಬಂದ ವಿವೇಕಯುಕ್ತ ಮಾತುಗಳು ನಮ್ಮ ಜೀವನಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡಬಲ್ಲವು.
1) ನಿನ್ನ ಕನಸು ನನಸಾಗಬೇಕಿದ್ದರೆ.. ಮೊದಲು ನೀನು ಕನಸು ಕಾಣು.. 2) ನಿದ್ದೆಯಲ್ಲಿ ಕಾಣುವುದಲ್ಲ .. ನಿದ್ದೆಗೆಡಿಸಿ ಕಾಡುವುದು 3) ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ 4) ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು.. 5) ಸೋಲಿನ ಕತೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ .. 6) ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು.. 7) ನಮ್ಮ ಮಕ್ಕಳ ಉತ್ತಮ ನಾಳೆಗಾಗಿ ನಮ್ಮ ಇಂದನ್ನು ತ್ಯಾಗ ಮಾಡೋಣ.. 8) ಯಾವುದೇ ಸಮಸ್ಯೆಗೂ ಯುದ್ಧ ಅಂತಿಮ ಪರಿಹಾರವಲ್ಲ.. 9) ಅತೀ ಸಂತೋಷ ಅಥವಾ ಅತೀ ದುಃಖವಾದಾಗ ಮಾತ್ರ ಕವನ ಸೃಷ್ಟಿ 10) ಯುವಕರು ಕೆಲಸ ಹುಡುಕಬಾರದು.. ಕೆಲಸ ಉತ್ಪಾದಕರಾಗಬೇಕು 11) ವಿಜ್ಞಾನ ಮಾನವೀಯತೆಗೆ ಸುಂದರ ಉಡುಗೊರೆ. ನಾವು ಅದನ್ನು ವಿರೂಪಗೊಳಿಸಬಾರದು 12) ಮಳೆ ಬಂದಾಗ ಎಲ್ಲ ಹಕ್ಕಿಗಳು ಮರದ ಆಶ್ರಯ ಪಡೆಯುತ್ತವೆ. ಆದರೆ ಹದ್ದುಗಳು ಮೋಡದಿಂದಲೂ ಮೇಲಕ್ಕೆ ಹೋಗಿ ಹಾರಾಡುತ್ತವೆ. ಸಮಸ್ಯೆ ಎಲ್ಲರಿಗೂ ಇದೆ. ಆದರೆ ಅದನ್ನು ಹೇಗೆ ಎದುರಿಸ್ತೀರಿ ಎನ್ನುವುದು ಮುಖ್ಯ 13) ಯಾವುದರಲ್ಲೂ ತೊಡಗಿಸಿಕೊಳ್ಳದೇ ಇದ್ದರೆ ನೀವು ಯಶಸ್ವಿಯಾಗಲ್ಲ. ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಸೋಲಲ್ಲ 14) ನಮಗೆಲ್ಲರಿಗೂ ಒಂದೇ ಪ್ರತಿಭೆ ಹೊಂದಿಲ್ಲ. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿರುತ್ತೆ 15) ಸೂರ್ಯನಂತೆ ಪ್ರಜ್ವಲಿಸಬೇಕಿದ್ದರೆ, ಸೂರ್ಯನಂತೆ ಮೊದಲು ಉರಿಯಬೇಕು 16) ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ. ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ, ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ 17) ಕೆಲವರನ್ನು ಸೋಲಿಸುವುದು ಭಾರೀ ಸುಲಭ. ಆದ್ರೆ ಕೆಲವರನ್ನು ಗೆಲ್ಲುವುದು ಭಾರೀ ಕಷ್ಟ
–>