-->

Part 121 - Jokes , Fun , Haasya , Humor , Quotes , Greetings

Some funny but heart opening life facts…

👉Airports have seen more affectionate hugs than Wedding Halls..

👉The walls of Hospitals have heard more sincere prayers than the walls of Temples, Masjids & Churches…

👉Good Days or Bad Days depend on your thinking. What you call ” Suffocation” in local train becomes an “Atmosphere” in Disco…

👉Pizza always confuses us. It comes in a square box. When you open it, its round. When you start eating it, its triangle. Life & People are like Pizza. Looks different. Appears different & Behave absolutely different.

👉Position matters..!!!!
Part 121 - Jokes , Fun , Haasya , Humor , Quotes , Greetings
*********

ಮಧ್ಯಾಹ್ನದ ಹೊತ್ತಲ್ಲಿ ಹೆಂಡತಿ ಊಟ ಮುಂದಿಟ್ಟು 
"ಹ್ಯಾವ್ ಡಿನ್ನರು" ಅಂದಳು... 
☺☺

"ಇಟ್ ಈಸ್ ನಾಟ್ ಡಿನ್ನರ್,
ಇಟ್ ಈಸ್ ಲಂಚ್, ಡೋಂಟ್ ಯೂ ಅಂಡರ್ ಸ್ಟ್ಯಾಂಡ್... " ಎಂದು ಗಂಡ ಬೈಯ್ಯಲಾರಂಭಿಸಿದ.😡😡

ಅಷ್ಟರಲ್ಲಿ ಅವಳಂದ್ಲು : 

" ಜಾಸ್ತಿ ಎಗರಾಡಬೇಡಿ...😏

ಜಗತ್ತಿನಲ್ಲಿ ಇಲ್ದಿರೋ ಜ್ಞಾನ ಇಟ್ಟುಕೊಂಡಿರೋರ್ ಥರಾ..😠

ಅದು ನಿನ್ನೆ ರಾತ್ರಿ ಉಳ್ದಿರೊ ಅನ್ನ. ಸುಮ್ನೆ ಊಟ ಮಾಡಿ.😏 
ನಮಗೂ ಗೊತ್ತು ಕಣ್ರೀ ಯಾವಾಗಿನ್ ಊಟಕ್ಕೆ ಏನಂತಾರೆ ಅಂತ"😡

ಗಂಡ : 🙄😳🙄😳🙄😳

*********

ಹುಟ್ಟು...ನಾವು ಕೇಳದೇ ಸಿಗುವ ವರ(ಶಾಪ).
ಸಾವು....ನಾವು ಹೇಳದೇ ಹೋಗುವ ಜಾಗ.
ಬಾಲ್ಯ....ಮೈಮರೆತು ಆಡುವ ಸ್ವರ್ಗ.
ಯೌವನ...ಅರಿವಿದ್ದರೂ ಅರಿಯದ ಮಾಯೆ.
ಮುಪ್ಪು....ಕಡೆಯ ಆಟ.
ಸ್ನೇಹ.....ಶಾಶ್ವತವಾಗಿ ಉಳಿಯೋ ಬಂಧ.
ಪ್ರೀತಿ ....ಪ್ರಾಣಕ್ಕೆ ಹಿತವಾದ ಅನುಬಂಧ.
ಪ್ರೇಮ...ತ್ಯಾಗಕ್ಕೆ ಸ್ಪೂರ್ತಿ....
ಕರುಣೆ...ಕಾಣುವ ದೇವರು.
ಮಮತೆ...ಕರುಳಿನ ಬಳ್ಳಿ.
ದ್ವೇಷ ...ಉರಿಯುವ ಕೊಳ್ಳಿ...
ತ್ಯಾಗ.... ದೀಪ.
ಉಸಿರು...ಮೌನದಲೆ ಜೊತೆಗಿರುವ ಗೆಳೆಯ.
ಹ್ರದಯ....ಎಚ್ಚರಿಕೆ ಗಂಟೆ.
ಕಣ್ಣು.....ಸ್ರಷ್ಟಿಯ ಕನ್ನಡಿ...
ಮಾತು..ಬೇಸರ ನೀಗುವ ವಿದ್ಯೆ.
ಮೌನ.....ಭಾಷೆಗೂ ನಿಲುಕದ ಭಾವ.
ಕಣ್ಣೀರು....ಅಸ್ತ್ರ
ನೋವು...ಅಸಹಾಯಕತೆ
ನಗು...ಔಷಧಿ.
ಹಣ...ಅವಶ್ಯಕತೆ.
ಗುಣ...ಆಸ್ತಿ.
ಕಲೆ....ಜ್ಞಾನ
ಧರ್ಮ...ಬುನಾದಿ 
ಕರ್ಮ....ಕಾಣದಾ ಕೈ ಆಟ
ಕಾಯಕ..ದೇಹ ,ಮನಸಿಗೆ ಮಿತ್ರ.
ಸಂಸ್ಕೃತಿ ..ನೆಲೆ
ಸಾಧನೆ ...ಜೀವಕ್ಕೆ ಜೀವನಕ್ಕೆ ಬೆಲೆ.

*********

A Guy went to a Bar & orders 3 mugs of
Beer & was drinking one by one from
every mug.
Bar attender asked him the reason.
Guy said: We were 3 friends & each of
us r in different cities now and v had
decided that all 3 of us will drink always
like this.
This went on for yrs.
Once the guy came and asked only for 2
mugs.
Bar attender consoled him, asking
whether anyone is no more/passed
away.
The guy said " all are very much alive,
"ACTUALLY, I HAVE
QUIT DRINKING!"

*********

ಒಬ್ಬ ವ್ಯಕ್ತಿ  ಒಬ್ಬರು ವಯಸ್ಸಾದ ಮಹಿಳೆಯಿಂದ ಯಾವಾಗಲೂ  ಆರೆಂಜ್ ಗಳನ್ನು ಖರೀದಿಸುತ್ತಿದ್ದ. ದುಡ್ಡು ಕೊಟ್ಟು ತೂಕಮಾಡಿದ ಆರೆಂಜ್ ಗಳನ್ನು ಚೀಲದೊಳಗೆ ಹಾಕಿದ ನಂತರ ಅದರಿಂದ ಒಂದನ್ನು ತೆಗೆದು ಸುಲಿದು ಒಂದು ಎಸಳನ್ನು ತಿಂದು ಇದು ಹುಳಿಯಾಗಿದೆ ಅಂತ ಆ ಆರೆಂಜನ್ನು ಆ ಮಹಿಳೆಗೆ ಕೊಡುತ್ತಿದ್ದ. ಆಕೆ ಅದನ್ನು ತಿಂದು ಇದು ಸಿಹಿಯಾಗಿದೆ ಅಲ್ಲಾ ಅನ್ನುವಷ್ಟರಲ್ಲಿ ಆತ ಹೊರಟು ಹೋಗಿರುತ್ತಿದ್ದ.ಇದು ಪ್ರತಿದಿನ ಆವರ್ತಿಸುತ್ತಿದ್ದ. 
      ಆತನ ಪತ್ನಿಯು ಕೇಳುತ್ತಾಳೆ - ಆರೆಂಜುಗಳು ಸಿಹಿಯಾಗಿದ್ದರೂ, ನೀವು ಯಾಕೆ ಈತರ ದೂರು ಹೇಳಿ ನಾಟಕ ಮಾಡುತ್ತಿದ್ದೀರಾ?
      ಆತ ನಗುತ್ತಾ ಹೇಳುತ್ತಾನೆ - ಆ ಮಹಿಳೆ ಸಿಹಿಯಾದ ಆರೆಂಜ್ ಗಳನ್ನು ಮಾರುತ್ತಿದ್ದರೂ ಒಂದನ್ನು ಕೂಡಾ ತಿನ್ನುವುದಿಲ್ಲ. ನಾನು ಹೀಗೆ ಮಾಡುವುದರಿಂದ ಆಕೆಯು ಹಣವಿಲ್ಲದೇ ಅಥವಾ ನಷ್ಟವಿಲ್ಲದೆ  ಒಂದು ಆರೆಂಜನ್ನು ತಿನ್ನಬಹುದಲ್ಲಾ?.
      ಎಲ್ಲಾ ದಿನವೂ ಆ ಅಂಗಡಿಯ ದೃಶ್ಯವನ್ನು  ನೋಡುತ್ತಿದ್ದ ಪಕ್ಕದ ಅಂಗಡಿಯಾಕೆ ಆ ವಯಸ್ಸಾದ  ಮಹಿಳೆಯತ್ರ ಕೇಳುತ್ತಾಳೆ - ಆತ ಪ್ರತಿದಿನ ನಿಮ್ಮ ಆರೆಂಜ್ ಹುಳಿಯಾಗಿದೆ ಅಂತ ದೂರುತ್ತಿದ್ದರೂ ತೂಕದಲ್ಲಿ ಯಾಕೆ ಹೆಚ್ಚು ಕೊಡುತ್ತಿದ್ದೀರಾ?
      ಅದಕ್ಕೆ ಆ ವಯಸ್ಸಾದ  ಮಹಿಳೆ ನಗುತ್ತಾ ಹೇಳುತ್ತಾಳೆ - ನನಗೆ ಗೊತ್ತು ಆತ ಆರೆಂಜ್ ನ್ನು ದೂರುತ್ತಾ ಒಂದು ಆರೆಂಜ್ ನ್ನು ಕೊಡುತ್ತಿರುವುದು ನನಗೆ ತಿನ್ನೋಕೆ ಅಂತ . ಆದರೆ ಆ ವಿಷಯ ನನಗೆ ಗೊತ್ತಿದೆ ಅಂತ ಆತನಿಗೆ ಗೊತ್ತಿಲ್ಲ ....! ಆದ್ದರಿಂದಲೇ ತೂಕದಲ್ಲಿ ನಾನು ಒಂದು ಆರೆಂಜನ್ನು ಹೆಚ್ಚಾಗಿ ಕೊಡುತ್ತಿರುವುದು ...!

ಜೀವನದ ಮಾಧುರ್ಯವು ನಾವು ನಮ್ಮ ಸಹಜೀವಿಗಳಲ್ಲಿ ತೋರಿಸುವ  ಪ್ರೀತಿಯತೆಯ ಸ್ನೇಹ ಸೌಹಾರ್ದ, ಗೌರವೀಯತೆ, ದಯನೀಯತೆ, ಮಾನವೀಯತೆ ಎಲ್ಲವೂ ಆಗಿದೆ.

*********

🎄ಓದುವುದನ್ನು ಹವ್ಯಾಸವಾಗಿಸಿ ಇದರಿಂದ ಜ್ಞಾನ ವಿಸ್ತಾರವಾಗುತ್ತದೆ

☘ಅಗತ್ಯವಿದ್ದರೆ ನಿಮಗಿಂತ ಕಿರಿಯರ ಸಲಹೆ ಪಡೆಯಲು ಹಿಂಜರಿಯಬೇಡಿ

🌲ನಿಮ್ಮ ಶತ್ರುಗಳೆ ಒಳ್ಳೆಯ ಕೆಲಸ ಮಾಡಿದರೆ ಹೊಗಳಿ

🌳ತಿಳಿದಿದ್ದು ತಿಳಿಸೋದು ತಿಳಿಯದೆ ಇರೊದನ್ನ ಬೇರೆಯವರಿಂದ ತಿಳ್ಕೊಳ್ಳೊದು ಜಾಣರ ಲಕ್ಷಣ

🌴ಯಾರನ್ನೂ ನಿರ್ಲಕ್ಷಿಸಿ ಮಾತನಾಡಬೇಡಿ (ಕಾಲ ಅನ್ನೋದು ಕಲ್ಲನ್ನು ಶಿಲ್ಪಕಲೆಯಾಗಿ ಮಾಡಲುಬಹುದು)

🌿ನಿಮ್ಮ ಕೋಪ ಕಡಿಮೆಯಾಗ್ತಿದೆ ಎಂದರೆ ಜ್ಞಾನ ವಿಸ್ತರಣೆಯಾಗ್ತಿದೆ ಎಂದರ್ಥ

🌵ಯಾರಾದರು ತಪ್ಪು ಮಾಡಿದರೆ ಬಯ್ಯುವ ಬದಲು ತಿಳಿಸಿ

🌱ದೇವರ ಮೇಲೆ ನಂಬಿಕೆ ಇರಲಿ ಇದೊಂದು ಆಧ್ಯಾತ್ಮಿಕ ಶಕ್ತಿ

🌾ನಾನೆ ಸರಿ ಎಂಬ ನಿಲುವು ಬಿಟ್ಟು ಬಿಡಿ

🌻ಸಾಮಾನ್ಯ ವ್ಯಕ್ತಿ ಪುಸ್ತಕದ ಜೊತೆ ಇದ್ರೆ ಅಸಾಮಾನ್ಯ ವ್ಯಕ್ತಿ ಪುಸ್ತಕದಲ್ಲಿ ಇರ್ತಾನೆ

🐸ಭವಿಷ್ಯ ಅನ್ನೋದು ನಮ್ಮ ಯೋಜನೆಯಲ್ಲ ಅದು ಇವತ್ತು ಮಾಡಿದ ಕೆಲಸದ ಫಲಿತಾಂಶ

🐻ನಿಮ್ಮ ಗೆಲುವಿಗೆ ಕಾರಣ ಬಹಳಷ್ಟು ಜನರಿರ್ತಾರೆ ಆದರೆ ನಿಮ್ಮ ಸೋಲಿಗೆ ಕಾರಣ ನೀವು ಮಾತ್ರ

🐥ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ ಅದರಿಂದ ಮನಸ್ಸು ಉಲ್ಲಾಸವಾಗುತ್ತದೆ

🐨ಸೋಲುವದು ತಪ್ಪಲ್ಲ ಪ್ರಯತ್ನಿಸದೆ ಸೋಲುವದು ತಪ್ಪು

🙊ಯಾರಾದರು ಬಿದ್ದಾಗ ನಗಬೇಡಿ ಬಿದ್ದಾಗಲೆ ಮೇಲೆಳಲು ಸಾಧ್ಯ

🐬ಆದಷ್ಟು ಮಾತಿನಲ್ಲಿ ಸತ್ಯ ಹೇಳಲು ಪ್ರಯತ್ನಿಸಿ

🦂ಜಗತ್ತಿನಲ್ಲಿ ಯಾವ ವ್ಯಕ್ತಿಯೂ ಕೆಟ್ಟವರಲ್ಲ ಪರಿಸ್ಥಿತಿ ಅವರನ್ನ ಕೆಟ್ಟವರನ್ನಾಗಿ ಮಾಡಿರುತ್ತೆ

🐉ವಯಸ್ಸಾದವರಿಗೆ ಗೌರವ ಕೊಡಿ ಅಸಹಾಯಕರಿಗೆ ಸಹಾಯ ಮಾಡಿ ತಪ್ಪು ಮಾಡಿದವರನ್ನು ಕ್ಷಮಿಸಿ

**********

One who loves till you close your eyes, is a *Mother*.
One who loves without an expression in the eyes, is a *Father*.
____________________________
*Mother* - Introduces you to the world.
*Father* - Introduces the world to you.
___________________________
*Mother* : Gives you life
*Father*   : Gives you living
__________________________
*Mother* : Makes sure you are not starving.
*Father*  : Makes sure you know the value of starving
__________________________
*Mother* : Personifies Care
*Father*: Personifies Responsibility
__________________________
*Mother* : Protects you from a fall
*Father* : Teaches you to get up from a fall.
__________________________
*Mother* : Teaches you walking.
*Father* : Teaches you walk of life
__________________________
*Mother* : Teaches from her own experiences.
*Father* : Teaches you to learn from your own experiences.
__________________________
*Mother* :  Reflects Ideology
*Father* :  Reflects Reality
___________________________
*Mother's* love is known to you since birth.
*Father's* love is known when you become a Father.
___________________________
Enjoy what your father says.
Keep loving your mother.


**********

*ಚಾರ್ಲಿ ಚ್ಯಾಪ್ಲೀನ್* ಒಂದು ಜೋಕ್ ಹೇಳಿದ್ರು ಆಗ ಅಲ್ಲಿದ್ದ ಎಲ್ಲರೂ ನಕ್ಕರು.... 
ಚಾರ್ಲಿಅವರು ಅದೇ ಜೋಕನ್ನು. ಇನ್ನೊಮ್ಮೆ ಹೇಳಿದ್ರು, ಕೆಲವರು ಇನ್ನೊಮ್ಮೆ ನಕ್ಕರು.....! 
ಅವರು ಅದನ್ನೇ ಮತ್ತೊಮ್ಮೆ ಹೇಳಿದ್ರು ಆದ್ರೆ ಈ ಸಲ ಯಾರೂ ನಗಲಿಲ್ಲ....! 
ಆಗ ಅವರು ಒಂದು ಕಿವಿಮಾತು ಹೇಳಿದ್ದರು... 
"ಒಂದೇ ಜೋಕಿನ ಮೇಲೆ ಪದೇ ಪದೇ ನಗುವುದು ನಿಮ್ಮಿಂದ ಸಾಧ್ಯವಿಲ್ಲ; ಹಾಗಾದ್ರೆ *ಒಂದೇ ಚಿಂತೆಯ ಮೇಲೆ ಪದೇ ಪದೇ ಯಾಕೆ ಅಳುತ್ತೀರಿ*"

ಆದ್ದರಿಂದ ಜೀವನದಲ್ಲಿ ಪ್ರತಿಯೊಂದು ಕ್ಷಣದ ಆನಂದವನ್ನು ಪಡೆಯಿರಿ; ಬಲು ಸುಂದರ ಈ ಜೀವನ...! 
ಇಂದು ಚಾರ್ಲಿ ಚ್ಯಾಪ್ಲಿನ್ ಅವರ 125ನೇ ಜಯಂತಿ... ಈ ಮೂರು ಹ್ರು‌ದಯ ಸ್ಪರ್ಶಿಸುವ ಸಂಗತಿಗಳನ್ನು ಸ್ಮರಿಸುವ ದಿನ. 
1) *ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ... ನಮ್ಮ ತೊಂದರೆಗಳೂ ಸ್ಥಿರವಲ್ಲ*... |
2) *ನನಗೆ ಮಳೆಯಲ್ಲಿ ನೆನೆಯುತ್ತಾ ನಡೆಯುವುದು ತುಂಬಾ ಇಷ್ಠ ಆಗ ನನ್ನ ಕಷ್ಟದ ಕಂಬನಿಗಳು ಯಾರಿಗೂ ಕಾಣಿಸುವುದಿಲ್ಲ*. |
3) *ನಾವು ನಗದಿದ್ದ ದಿನ ಅದು ನಮ್ಮ ಜೀವನದಲ್ಲಿ ವ್ಯರ್ಥವಾಗಿ ಹೋದ ಒಂದು ದಿನ* |
       ಯಾರು ಯಾವಾಗಲೂ ನಗು ನಗುತ್ತಾ ಇರ ಬೇಕೆಂದು ನೀವು ಬಯಸುತ್ತೀರೋ ಅವರಿಗೆ ಈ ಮೆಸೆಜನ್ನು ಫಾರ್ವರ್ಡ್ ಮಾಡಿ ಮತ್ತು  ನೀವೂ ನಗು ನಗುತ್ತಾ ಇರಿ

**********

ಸಂಜೆಯ ವಾಕಿಂಗ್ ಮುಗಿಸಿ ಪಾರ್ಕಿನ ಹುಲ್ಲಿನ ಮೇಲೆ ವಿಶ್ರಮಿಸಲು ಕುಳಿತಿದ್ದೆ.

ಪಕ್ಕದಲ್ಲಿಯೇ ಇರುವೆಗಳ ದೊಡ್ಡ ಸಾಲು ಮಿಲಿಟರಿಯ ಶಿಸ್ತಿನಿಂದ ಒಂದರ ಹಿಂದೆ ಒಂದು ಉದ್ದವಾಗಿ ಸಾಗುತ್ತಿದ್ದವು. 

ಆ ಶಿಸ್ತನ್ನು ನೋಡಿ ಅಶಿಸ್ತಿನ ನನಗೆ ಸಹಿಸಿಕೊಳ್ಳಲಾಗಲಿಲ್ಲ. ಅದರಲ್ಲಿ ಒಂದು ಇರುವೆಯನ್ನು ಕಿಡ್ ನ್ಯಾಪ್ ಮಾಡಿ ಅಂಗ್ಯೆಯಲ್ಲಿ ಇಟ್ಟುಕೊಂಡು ಕೇಳಿದೆ.
" ಎಲ್ಲಿಗೆ ಹೋಗುತ್ತಿರುವಿರಿ. " 

ಇರುವೆ, " ಅಲ್ಲಿ ಒಂದು ನೊಣ ಸತ್ತು ಬಿದ್ದಿದೆ. ಊಟಕ್ಕಾಗಿ ಅದನ್ನು ತರಲು ಎಲ್ಲರೂ ಹೋಗುತ್ತಿದ್ದೇವೆ  ".

ನನಗೆ ಮ್ಯೆ ಉರಿದು ಹೋಯಿತು. 
' ಅಲ್ಲಾ ಎಲ್ಲಾದರೂ Free ಊಟ ಇದ್ದಾಗ ನಾವು ನೂಕುನುಗ್ಗಲಿನಲ್ಲಿ ಹೊಡೆದಾಡಿ ತಿನ್ನುವವರು. ಇದು ಬಹುಶಃ ನನ್ನನ್ನೇ ಹಂಗಿಸುತ್ತಿರಬಹುದು ' ಎಂದು ಭಾವಿಸಿ ಪಟಾರನೆ ಹೊಸಕಿ ಹಾಕಿದೆ. 

ಸಮಾಧಾನವಾಗಲಿಲ್ಲ ಇನ್ನೊಂದನ್ನು ಬಂಧಿಸಿ ಬೇರೆ ಪ್ರಶ್ನೆ ಕೇಳಿದೆ. 

" ಅಲ್ಲಾ ಅಲ್ಲಿ ಇರುವುದು ಒಂದೇ ಸಣ್ಣ ಸತ್ತ ನೊಣ. ಅಮ್ಮಮ್ಮಾ ಎಂದರೆ ನೂರು ಇರುವೆಗಳಿಗೆ ಊಟವಾಗಬಹುದು. ನೀನು ಯಾಕೆ ನಿಮ್ಮ ಸಂಬಂದಿಗಳನ್ನು ಮಾತ್ರ ಕರೆದುಕೊಂಡು ಹೋಗದೆ ಸಾವಿರಾರು ಹೊರಟಿದ್ದೀರಿ. " . 

ಇರುವೆ ಹೇಳಿತು." ನಮಗೆ ಎಷ್ಟೇ ಆಹಾರ ಸಿಕ್ಕಿದರೂ ಸಮನಾಗಿ ಹಂಚಿಕೊಂಡು ತಿನ್ನುತ್ತೇವೆ. ನಮ್ಮಲ್ಲಿ ಬೇದ ಭಾವ ಇಲ್ಲ.ಒಗ್ಗಟ್ಟೇ ನಮ್ಮ ಶಕ್ತಿ.". 

ನನಗ್ಯಾಕೋ ಪಿತ್ತ ನೆತ್ತಿಗೇರಿತು. ನನ್ನ ಜಾತಿ,ಧರ್ಮ,ಭಾಷೆ,ಊರು,ಸಂಬಂದಿಗಳು ಎಲ್ಲಾ ನೆನಪಾದರು. ನನ್ನನ್ನೇ ಮೂದಲಿಸುವಷ್ಟು ಸೊಕ್ಕೆ ಇದಕ್ಕೆ ಎಂದು ಸಾಯಿಸಿಬಿಟ್ಟೆ. 

ಇನ್ನೊಂದನ್ನು ಎತ್ತಿಕೊಂಡು ಕೇಳಿದೆ. 
" ಅಲ್ಲಾ, ನಿಮ್ಮಲ್ಲೇ ಯಾರಾದರೂ ಗುಂಪು ಮಾಡಿಕೊಂಡು ಬೇರೆಯವರಿಗೆ ಗೊತ್ತಾಗದಂತೆ ನೊಣ ತಿಂದು ಮುಗಿಸಿ ನಿಮಗೆ ಮೋಸ ಮಾಡಿದರೆ ಏನು ಮಾಡುವಿರಿ.". 

ಇರುವೆ ಹೇಳಿತು," ಅಯ್ಯಾ, ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ. 'ಮೋಸವೆಂದರೆ ಏನು. ? "
ನಾವು ಇರುವೆಗಳು. ಎಂದಿತು‌.

 ಈಗ ನನಗೆ ಕೋಪ ಬರಲಿಲ್ಲ. ' ನಾವು ಇರುವೆಗಳು ' ಎಂಬ ಪದ ನನ್ನ ಹೃದಯವನ್ನೇ ಇರುವೆಯೊಂದು ಕಚ್ಚಿದ ಹಾಗಾಯಿತು. ಇರುವೆಗಳಿಗೆ ಮೋಸವೇ ಗೊತ್ತಿಲ್ಲ. ಆದರೆ ಮನುಷ್ಯರಾದ ನಮಗೆ ಗೊತ್ತಿರುವುದೇ ಮೋಸ,ಕಪಟ,ವಂಚನೆ.
ಆಗ ಅರ್ಥವಾಯಿತು ನಾನು ಇರುವೆಗಿಂತ ಸಣ್ಣವನು.
ಅಮಾನವೀಯವಾಗಿ ಇರುವೆಯನ್ನು ಕೊಂದ ಪಾಪಿ ಎಂದು.ಛೆ....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ನಶ್ವರವಾದ ಈ ಶರೀರಕ್ಕೆ ಶಾಶ್ವತವಾದ ದೊಡ್ಡ ಮನೆ.
ಏಕಾಂಗಿಯಾಗಿ ಹೋಗೊ ಪ್ರಾಣಕ್ಕೆ ಸಾವಿರಾರು ಸಂಬಂಧಗಳು...
ಆದರೇ ಕೊನೆ ತನಕ ಉಳಿಯುವುದು ನಿನ್ನ ಸತ್ಕಾರ್ಯಗಳು ಹೊರತು ನೀನು ಸಂಪಾದಿಸಿದಲ್ಲ...

*********

ಒಮ್ಮೆ ದಾರಿಹೋಕನು ಸಾಗುತ್ತ ಸಾಗುತ್ತ ಹಸಿವೆಯಿಂದ , ಬಾಯಾರಿಕೆಯಿಂದ ಸುಸ್ತಾಗಿ ದಾರಿಯ ಪಕ್ಕದಲ್ಲೆ ಇರುವ ತೋಟದಲ್ಲಿ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತನು. ಹಸಿವೆ,ಬಾಯಾರಿಕೆ ಈಡೇರಿಸಿಕೊಳ್ಳಲು ಸುತ್ತಮುತ್ತ ಏನಾದರೂ ಸಿಗಬಹುದೇನೊ ಅಂತ ಕಣ್ಣಾಡಿಸಿದನು. ಸುತ್ತಮುತ್ತ ತೋಟದ ತುಂಬ ಕುಂಬಳಕಾಯಿಗಳದ್ದೇ ಸಾಮ್ರಾಜ್ಯ. ಕುಂಬಳಕಾಯಿ ತೋಟದಲ್ಲಿ ಮಧ್ಯ ಮಧ್ಯ ಕೋಲಿಗೆ ಬಳ್ಳಿಯನ್ನು ಸುತ್ತಿ ದ್ರಾಕ್ಷಿ ಬೆಳೆದಿರುವ ದೃಶ್ಯ .
ಮನುಷ್ಯನಿಗೆ ತಡೆಯಲಾರದ ಕೋಪ ಬಂತು. ದೇವರಿಗೆ ಬೈಯಲು ಪ್ರಾರಂಭಿಸಿದ. ಅವನ ಮಾತುಗಳು ಹೀಗಿದೆ" ಅದೇನ್ ದೇವರೋ ನಾ ಕಾಣೆ,ಬಹಳ ಪೆದ್ದ ದೇವರು. ತಿನ್ನುವ ದ್ರಾಕ್ಷಿಯನ್ನು ಕೈಗೆ ನಿಲುಕದ ಹಾಗೆ ಮೇಲಕ್ಕೆ ಇರಿಸಿರುವ. ಹಾಗೆಯೇ ತಿನ್ನಲು ಬಾರದ ಈ ಕುಂಬಳಕಾಯಿಯನ್ನು ನೆಲದಲ್ಲಿರಿಸಿರುವ.ಈ ಕುಂಬಳಕಾಯಿಯನ್ನು ಕಿತ್ತು ತಿನ್ನಲು ಬರುವದಿಲ್ಲ.ಶುದ್ದ ಪೆದ್ದ ದೇವರು"ಎಂದು ಅನ್ನುವ ವೇಳೆ ಮೇಲೆ ಬೆಳೆದಿದ್ದ ದ್ರಾಕ್ಷಿಯ ಗೊಂಚಲು ಇವನ ತಲೆಯ ಮೇಲೆ ಬಿದ್ದಿತು.ಆಗ ತಕ್ಷಣವೇ ಈತನಿಗೆ ಜ್ಞಾನೋದಯವಾಯಿತು. ಮತ್ತೆ ಹೇಳಿದ" ಅಯ್ಯೋ ನಾನು ಎಷ್ಟು ಮೂರ್ಖ. ದೇವರಿಗೆ ಪೆದ್ದ ಅನ್ನುತ್ತಿರುವೆ.
ಆಕಸ್ಮಾತಾಗಿ ದೇವರು ಮೇಲೆ ಬೆಳೆದಿರುವ ದ್ರಾಕ್ಷಿಯನ್ನು ನೆಲದಲ್ಲಿ ಬೆಳೆಸಿ,ಕುಂಬಳಕಾಯಿಯನ್ನು ಮೇಲೆ ಬೆಳೆದಿದ್ದರೆ ಇಷ್ಟು ಹೊತ್ತಿಗೆ ನನ್ನ ತಲೆ ಎರಡು  ಹೋಳಾಗಿರುತ್ತತ್ತು .
ಆದ್ದರಿಂದ ಓ ದೇವರೆ ನನ್ನನ್ನು ಕ್ಷಮಿಸು.ನಿನಗಿಂತ ಯಾರು ಜಾಣರಲ್ಲ. ನಿನಗೆ ಸಮಾನರಾರಿಲ್ಲ ಎಂದು ಹೇಳಿ ಬಿದ್ದ ದ್ರಾಕ್ಷಿಯನ್ನು ತಿಂದು ತನ್ನ ಪ್ರಯಾಣ ಮುಂದುವರೆಸಿದ.


ಆದ್ದರಿಂದ ದೇವರು ಎಲ್ಲ ಸೃಷ್ಟಿಯನ್ನು ಅನೂಕೂಲಕ್ಕೆ ತಕ್ಕಂತೆಯೇ ಮಾಡಿದ್ದಾನೆ.ಎಲ್ಲ ಸೃಷ್ಟಿಗೆ ಕಾರಣವಿದೆ. ಆದರೆ ನಾವು ಮನುಷ್ಯರು ಮಾತ್ರ ಅದನ್ನ ತಿಳಿದುಕೊಳ್ಳಬೇಕು.ಆ ಪರಮಾತ್ಮನೇ ಇಷ್ಟೆಲ್ಲ ಸೃಷ್ಟಿ ಮಾಡಿದ್ದಕ್ಕಾಗಿ ಅವನನ್ನು ನೆನೆಯೋಣ.

*********

ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು: ಮಧ್ಯವಯಸ್ಸಿನ ನಂತರ 

೧.  ಜೀವನದ ರಹಸ್ಯ

                        ಮಧ್ಯವಯಸ್ಸಿನ ವರೆಗೆ :   ಹೆದರ  ಬೇಡಿ

                        ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವ ವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.

೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವದು ಬೇಡ

೧೨.  ಹಳೆಯ ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ    
             ೧.   ನಿಮ್ಮ ಹಳೆಯ ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ  
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.  
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ) 
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

೧೨.  ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ  ಮತ್ತು ನಗುತ್ತಿರಿ 

೧೩. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು,ಅಂತೆಯೇ ನಮ್ಮ ಜೀವನ, ಅದಕ್ಕೇ ಸಂತಸವಾಗಿಸಿರಿ.

೧೪. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

Terms | Privacy | 2024 🇮🇳
–>