ಒಮ್ಮೆ ನಾಯಿ ಮತ್ತು ಕತ್ತೆಯ ನಡುವೆ ಓಟದ ಸ್ಪರ್ಧೆ ನಡಿತಾಯಿತ್ತು.!
ನಾಯಿಯು ತನ್ನ ಮನಸ್ಸಿನಲ್ಲಿ ಸಂತೋಷಪಡುತ್ತಾ ಕತ್ತೆ ಜೊತೆ ನನ್ನ ಸ್ಪರ್ಧೆ ಎಂದು ಮುಗುಳ್ ನಗುತ್ತ, ಬಹಳ ಅಂತರದಿಂದ ಗೆಲ್ಲುವೆ ಎಂಬ ಆತ್ಮ ವಿಶ್ವಾಸದಿಂದ ಸ್ಪರ್ಧೆಗೆ ಇಳಿದಿತ್ತು.!
ಓಟ ಪ್ರಾರಂಭವಾಯಿತು, ನಾಯಿಯು ತನ್ನ ಸಂಪೂರ್ಣ ಬಲವನ್ನು ಉಪಯೋಗಿಸಿ ಕತ್ತೆಗಿಂತ ಮುಂದೆ ಓಡತೊಡಗಿತು.!
ಒಂದು ಓಣಿಯಿಂದ ಇನ್ನೊಂದು ಓಣಿಗೆ ಹೋಗುತ್ತಲೇ ಶುರುವಾಯಿತು ನೋಡಿ ಎದುರಾಳಿಗಳ ಕಾಟ, ಎದುರಾಳಿಗಳು ಯಾರಂತಿರಾ? ತನ್ನ ಕುಲ ಬಾಂಧವರೇ ! ತಾನು ಓಡುವುದನ್ನು ನೋಡಿ ಆ ಓಣಿಯ ನಾಯಿಗಳು ಅದನ್ನ ತಡೆಯಲು ಪ್ರಾರಂಭಿಸಿದವು, ಜಗಳಕ್ಕೆ ನಿಂತವು.
ಆಗ ಅದು ತನ್ನೆಲ್ಲ ಬಲವನ್ನು ಉಪಯೋಗಿಸಿ ಅಲ್ಲಿಂದ ಮುಂದೆ ಸಾಗಿತು, ಮುಂದೆ ಸಾಗಿದಂತೆ ಮತ್ತೊಂದು ಓಣಿ, ಆ ಓಣಿ ಹೊಕ್ಕಿತು ಅಲ್ಲಿ ಹಿಂದಿನ ಓಣಿಕ್ಕಿಂತ ಹೆಚ್ಚು ನಾಯಿಗಳು ಎದುರು ನಿಂತವು, ಇದನ್ನು ಮುಂದೆ ಹೋಗದಂತ್ತೆ ತಡೆದು ಅದರ ಮೇಲೆ ಹರಿಹಾಯಿದವು, ಕಾಲೆಳೆಯಲು ಪ್ರಾರಂಭಿಸಿದವು. ತಾನು ತನ್ನ ಕುಲಬಾಂಧವರಿಂದ ತಪ್ಪಿಸಿಕೊಂಡು ಓಡಿ ತನ್ನ ಗುರಿತಲುಪವಷ್ಟರಲ್ಲಿ ಆ ಕತ್ತೆ ಯಾವುದೇ ಅಡೆ ತಡೆಯಿಲ್ಲದೇ ವಿಜಯವನ್ನು ಸಾಧಿಸಿಬಿಟ್ಟಿತ್ತು.
ಅದನ್ನು ಕಂಡ ನಾಯಿ ತನ್ನ ಮನಸ್ಸಿನಲ್ಲೇ, ನನ್ನವರೇ ನನಗೆ ಶತ್ರುಗಳಾದರಲ್ಲ ಎಂದು ಮರುಗಿ, ಸೋತು ಸಣ್ಣಗಾಯಿತು..!
ಗೆಳೆಯರೇ ಈ ರೀತಿಯ ಸನ್ನಿವೇಶಗಳು ನಮ್ಮ ಬಹುಜನರ ಬಾಳಿನಲ್ಲಿ ನಡೆಯುತ್ತಲೇ ಬಂದಿವೆ.
ನಮ್ಮನಮ್ಮಲ್ಲಿ ಹೊಡೆದಾಡುವುದು, ಕಾಲೆಳೆಯುವುದು ನಮ್ಮ ಸಮಾಜದಲ್ಲಿ ಕಂಡು ಬರುತ್ತದೆ. ಎಲ್ಲಿಯವರೆಗೆ ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ಶತ್ರುಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಇದು ಸದ್ಯದ ಮಟ್ಟಿಗೆ ನಮ್ಮಲ್ಲೇ ನಡೆಯುತ್ತಿರುವ ನಿದರ್ಶನ ...
*********
On a thundering rainy day, Mom went to pick her six year son from school thinking that he will fear lightning.
But she found him smiling at the sky for every lightning..
She asks, "Why are you smiling..?"
Son : "God is taking my Pictures & I need to look good.."
Life is simple.
we complicate it...
*********
*ಮಗ:* ಅಪ್ಪಾ, ನಾ ಸಾಲಿ ಬಿಡತೇನಿ😭
*ಅಪ್ಪ:* ಯಾಕಲೆ😳
*ಮಗ:* ಅಲ್ಲಪಾ, ಒಬ್ಬೊಬ್ರು
ಒಂದ್ ನಮೂನಿ ಕಲಸ್ತಾರ..
"Cell " ಅಂದ್ರ
Biology teacher ಜೀವ ಕೋಶ ಅಂತಾರ....
Physics madam battery ಅಂತಾರ....
History sir ಜೈಲು ಅಂತಾರ...
Electronics sir ಮೊಬೈಲ ಅಂತಾರ....
ಒಬ್ಬರದೊಬ್ಬರಿಗೆ ತಾಳ ಇಲ್ಲ, ತಂತಿ ಇಲ್ಲ
ಇಂಥ ಸಾಲ್ಯಾಗ ಕಲ್ತು ನಾ ಏನ್ ಉಳ್ಳಾಗಡ್ಡಿ ಸಿಪ್ಪಿ ಸುಲೀಲಿ....?
😆😆😜😜🤣🤣😝😝
*********
*ಹೆಂಡತಿ*:ರೀ ನೀವು ಗೋವಾಕ್ಕೆ ಹೋಗುವಾಗ ನನ್ನನ್ನೂ ಕರಕೊಂಡು ಹೋಗ್ರಿ 😘😘
*ಗಂಡ*: ಲೇ ಹುಚ್ಚಿ ಯಾರಾದರೂ ಹೋಟೆಲ್ ಗೆ ಹೋಗುವಾಗ *TIFFIN* ತಗೊಂಡು ಹೋಗ್ತಾರ್ ಏನು...😆😆😆
*********
ಗುರುವೇ...ನನ್ನ ತಪ್ಪುಗಳನ್ನು ನಾನು ಕಂಡು ಹಿಡಿಯುವುದು ಹೇಗೆ?
ಮಗನೇ... ನಿನ್ನ ಪತ್ನಿಯೊಂದಿಗೆ ಅವಳ ಒಂದು ತಪ್ಪನ್ನು ಹೇಳು..,ಆಗ ಅವಳು ನಿನ್ನ ಮಾತ್ರವಲ್ಲ, ನಿನ್ನ ಕುಟುಂಬದವರ ತಪ್ಪನ್ನೂ ಹೇಳುತ್ತಾಳೆ😀😀
*********
ಡಾಕ್ಟರ ಅಂದರೆ ಹೇಗಿರಬೇಕು ಗೊತ್ತಾ !!!
ಕಳೆದ ಶತಮಾನದಲ್ಲಿ ಶಿವಮೊಗ್ಗ ನಗರದಲ್ಲಿದ್ದ ಡಾ॥ಕೃಷ್ಣಮೂರ್ತಿ ಎಂಬ ಜನಪ್ರಿಯ ವೈದ್ಯರನ್ನು ಕಾಣಲು ದೂರದ ಮದರಾಸಿನಿಂದ ರಾಮನಾಥ ಚೆಟ್ಟಿಯಾರ್ ಮತ್ತು ಅವರ ಮಗಳು ಮುತ್ತುಲಕ್ಷ್ಮಿ ಎಂಬುವವರು ಬಂದರು. ಚೆಟ್ಟಿಯಾರರು ತಮ್ಮ ಮಗಳು ಒಪ್ಪಿದ ಹುಡುಗನೊಡನೆ ಒಂದು ವರ್ಷದ ಹಿಂದೆ ಆಕೆಯ ಮದುವೆ ಮಾಡಿದ್ದರು. ಮದುವೆಯಾದ ಸ್ವಲ್ಪ ದಿವಸಕ್ಕೆ ಅವಳಿಗೆ ವಿಪರೀತ ತಲೆನೋವು ಶುರುವಾಯಿತು. ಅದರಿಂದ ಅವಳ ಜೀವನವು ದುರ್ಭರವಾಯಿತು. ತಂದೆ ಅವಳನ್ನು ಮದರಾಸಿನ ಅನೇಕ ಪ್ರಸಿದ್ಧ ವೈದ್ಯರುಗಳಿಗೂ, ವೆಲ್ಲೂರಿನ ಜಗತ್ಪ್ರಸಿದ್ಧ ಆಸ್ಪತ್ರೆಗೂ ಕರೆದುಕೊಂಡು ಹೋಗಿ ತೋರಿಸಿದ್ದರು. ಎಲ್ಲೂ ಪ್ರಯೋಜನವಾಗಲಿಲ್ಲ. ಅವಳನ್ನು ಪರೀಕ್ಷಿಸಿದ ವೈದ್ಯರುಗಳು ಅವಳಿಗೆ ಯಾವ ಖಾಯಿಲೆಯೂ ಇಲ್ಲವೆನ್ನುತ್ತಿದುದೂ ನಿಜ!
ಆದರೆ ಆಕೆಗೆ ಸಹಿಸಲಾಗದಷ್ಟು ತಲೆನೋವು ಇರುತ್ತಿದುದೂ ನಿಜ! ಚೆಟ್ಟಿಯಾರರು ಹತಾಶರಾಗಿದ್ದಾಗ ಸ್ನೇಹಿತರೊಬ್ಬರು ಈ ವೈದ್ಯರ ಬಗ್ಗೆ ಹೇಳಿ, ಅವರು ಎಂತೆಂತಹುದೋ ಖಾಯಿಲೆಗಳನ್ನು ವಾಸಿಮಾಡಿದ್ದಾರಂತೆ. ಒಮ್ಮೆ ಅವರಿಗೂ ತೋರಿಸಿ ನೋಡಿ ಎಂದಿದ್ದರು. ತಕ್ಷಣ ಚೆಟ್ಟಿಯಾರ್‌ರವರು ಮಗಳನ್ನು ಕರೆದುಕೊಂಡು ಕಾರಿನಲ್ಲಿ ಶಿವಮೊಗ್ಗಕ್ಕೆ ಧಾವಿಸಿದ್ದರು. ಚೆಟ್ಟಿಯಾರರು ಹೇಳಿದ ವಿವರಗಳನ್ನೆಲ್ಲಾ ಡಾ॥ಕೃಷ್ಣಮೂರ್ತಿಯವರು ಶಾಂತವಾಗಿ ಕೇಳಿಸಿಕೊಂಡರು. ಆನಂತರ ಮುತ್ತುಲಕ್ಷ್ಮಿಯ ಮದುವೆಗೆ ಮುಂಚಿನ ಆರೋಗ್ಯದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.
ಚೆಟ್ಟಿಯಾರರು ಮದುವೆಗೆ ಮುಂಚೆ ಅವಳ ಆರೋಗ್ಯ ಬಹಳ ಚೆನ್ನಾಗಿತ್ತು ಎಂದರು. ನಂತರ ವೈದ್ಯರು ಮುತ್ತುಲಕ್ಷ್ಮಿಯ ಕಡೆ ತಿರುಗಿ ಮಗೂ, ನಿನ್ನ ಮೂಗುಬೊಟ್ಟನ್ನು ತೆಗೆದು ನನಗೆ ಕೊಡುತ್ತೀಯಾ? ಎಂದರು. ಈ ವಿಚಿತ್ರ ಬೇಡಿಕೆಗೆ ಆಕೆ ಅವಾಕ್ಕಾದಳು. ಆದರೂ ತಂದೆಯವರು ಕೊಡಲು ಸೂಚಿಸಿದಾಗ ಅವಳು ಮೂಗುತಿಯನ್ನು ತೆಗೆದು ಕೊಟ್ಟಳು. ಆನಂತರ ವೈದ್ಯರು ಹೊರಗೆ ಹೋಗಿ ಸ್ವಲ್ಪ ಹೊತ್ತು ಸುತ್ತಾಡಿ ಬಾರಮ್ಮಾ ಎಂದರು. ಆಕೆ ಮರುಮಾತನಾಡದೆ ಹೊರನಡೆದಳು. ಹೊರಗಡೆ ಬಂದ ಮುತ್ತುಲಕ್ಷ್ಮಿ ಹಸಿರು ಗಿಡ-ಮರ, ಅಂದದ ಹೂವು-ಹಕ್ಕಿಗಳನ್ನು ನೋಡುತ್ತಾ ಅಡ್ಡಾಡಿದಳು. ಅಲ್ಲಿಯ ಬಿಸಿಲು ಮತ್ತು ಗಾಳಿ ಮುಖಕ್ಕೆ ಸೋಕಿದಂತೆ, ಒಂದು ಹೊಸ ಚೈತನ್ಯ, ಹುಮ್ಮಸ್ಸು, ಆನಂದ ಅವಳಿಗೆ ಉಂಟಾಯಿತು. ಸುಮಾರು ಅರ್ಧ ಘಂಟೆ ಸುತ್ತಾಡಿ ಒಳ ಬಂದಳು.
ಅವಳು ಬಿಸಿಲಿಗೆ ಬೆವರಿದ್ದಳು. ಆದರೆ ಮುಖದಲ್ಲಿ ಸಂತಸದ ಕಳೆ ಮೂಡಿತ್ತು. ತಲೆನೋವು ಮಾಯವಾಗಿತ್ತು. ವೈದ್ಯರು ಈಗ ಹೇಗನಿಸುತ್ತೇ? ಪ್ರಶ್ನಿಸಿದರು. ಮುತ್ತುಲಕ್ಷ್ಮಿಯು ಈಗ ನನಗೆ ತಲೆನೋವೇ ಇಲ್ಲ ಉತ್ತರಿಸಿದಳು. ಡಾ॥ಕೃಷ್ಣಮೂರ್ತಿ ಹೇಳಿದರು ಚೆಟ್ಟಿಯಾರ್‌ರವರೇ, ನಿಮ್ಮ ಮಗಳ ತಲೆನೋವಿಗೆ ಕಾರಣ ಅವಳ ಮೂಗುತಿ! ಅದರ ವಜ್ರ ಪ್ರತಿಫಲಿಸಿ ಅವಳ ಕಣ್ಣಿಗೆ ಆಯಾಸ ಮಾಡುತ್ತಿತ್ತು. ಅದರಿಂದ ತಲೆನೋವು ಬರುತ್ತಿತ್ತು. ಅದನ್ನು ತೆಗೆಯುತ್ತಲೆ ತಲೆನೋವು ಮಾಯವಾಯಿತು ಎಂದು ಹೇಳಿ ಅವಳ ಮೂಗುತಿಯನ್ನು ವಾಪಸ್ಸು ಕೊಟ್ಟರು. ಚೆಟ್ಟಿಯಾರ್ ಮತ್ತು ಅವರ ಮಗಳ ಆನಂದಕ್ಕೆ ಪಾರವೇ ಇರಲಿಲ್ಲ. ಚೆಟ್ಟಿಯಾರರು ವೈದ್ಯರಿಗೆ ಅಪಾರ ವಂದನೆಗಳನ್ನು ಸಲ್ಲಿಸಿದರು ಮತ್ತು ನೋಟುಗಳ ಒಂದು ಕಂತೆಯನ್ನು ತೆಗೆದು ಡಾಕ್ಟರ ಮೇಜಿನ ಮೇಲಿಟ್ಟರು. ವೈದ್ಯರು ಇಷ್ಟೆಲ್ಲ ದುಡ್ಡು ನನಗೆ ಬೇಡ. ನನ್ನ ಫೀಸು ಹತ್ತು ರುಪಾಯಿ ಮಾತ್ರ. ಅಷ್ಟು ಕೊಟ್ಟರೆ ಸಾಕು ಎಂದರು. ಚೆಟ್ಟಿಯಾರರು ಎಷ್ಟು ಒತ್ತಾಯ ಮಾಡಿದರೂ ಅದಕ್ಕಿಂತ ಜಾಸ್ತಿ ತೆಗೆದುಕೊಳ್ಳಲು ವೈದ್ಯರು ಒಪ್ಪಲಿಲ್ಲ. ವಿಸ್ಮಯಗೊಂಡ ಚೆಟ್ಟಿಯಾರ್‌ರವರು ಭಗವಂತ! ಜಗತ್ತಿನಲ್ಲಿ ಇಂತಹ ಅದ್ಭುತ ವ್ಯಕ್ತಿಗಳು ಇದ್ದಾರೆಯೇ? ಎಂದುಕೊಳ್ಳುತ್ತಾ ಹೊರಟರು.
ಡಾ॥ಕೃಷ್ಣಮೂರ್ತಿಯವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಹಾಗೂ ಭಾರತೀಯ ವಿದ್ಯಾಭವನದ ಭವ್ಸ್ ಜರ್ನಲ್ ಮಾಸಪತ್ರಿಕೆಯಲ್ಲಿ 1995ರಲ್ಲಿ ಪ್ರಕಟವಾಗಿದ್ದ ಈ ಘಟನೆಯನ್ನು ಮನ್ನಾರ್ ಕೃಷ್ಣರಾವ್ ಮಾಸ್ತರರು ತಮ್ಮ ಬದುಕು-ಬೆಳಕು ಭಾಗ-1ರಲ್ಲಿ ಉಲ್ಲೇಖಿಸಿದ್ದಾರೆ. ಅವರಿಗೂ ಧನ್ಯವಾದಗಳು. ಈ ಶತಮಾನದ ಹೈಟೆಕ್ ಆಸ್ಪತ್ರೆಗಳನ್ನೂ, ಅದರ ವೈದ್ಯರುಗಳ ದುಬಾರಿ ಚಿಕಿತ್ಸೆಗಳನ್ನೂ ಕಂಡಿರುವ ನಮ್ಮೆಲ್ಲರಿಗೂ ಈ ಘಟನೆ ವಿಸ್ಮಯಕಾರಿ ಅಲ್ಲವೆ?
*********
*A sign in a shoe repair store*: "We will heel you, We will save your sole,
We will even dye for you!"
At an *Eye Clinic* : "If you don't see what you're looking for, You've come to the right place.”;
On a *Plumber's truck* : "We repair what your husband fixed”;
On an *Electrician's truck* : "Let us remove your shorts”;
In a *Non-smoking Area* : "If we see smoke, we will assume you are on fire and will take appropriate action”;
At a *Car Dealership* : "The best way to get back on your feet - miss a car payment.”;
At the *Electric Company* : "We would be delighted if you send in your payment on time. However, if you don't, YOU will be de-lighted.”;
In a *Restaurant window* : "Don't stand there and be hungry; come on in and get fed up.”;
In the front yard of a *Funeral Home* : "Drive carefully. We'll wait.”;
Last but not least and I LOVE THIS..........
Sign on the back of *Septic Tank Truck* :
*"Caution - This Truck is full of Political Promises"*
*********
ಈಗಷ್ಟೇ ಓದಿದ್ದು...
ಅದೊಂದು ಪುಟ್ಟ ಊರು. ಕೋರ್ಟ್ ನಲ್ಲಿ ಒಂದು ಕೇಸ್ ನ ವಿಚಾರಣೆ ನಡೆಯುತ್ತಾ ಇರುತ್ತೆ. ಆ ಕೇಸ್ ನಲ್ಲಿ ನಮ್ಮ ಗುಂಡಮ್ಮಜ್ಜಿಯನ್ನು ಸಾಕ್ಷಿಯಾಗಿ ಕರೆದಿದ್ದರು.
ಅಷ್ಟೊಂದು ವಯಸ್ಸಾಗಿದೆ ಅಂದ ಮೇಲೆ ಅಷ್ಟು ವಯಸ್ಸಾಗಿದ್ದರೂ ಅವರು ಹುಷಾರಾಗಿ ಇದ್ದಾರೆ .. ಅವರಿಗೆ ಎಲ್ಲ ವಿಷಯ ಗೊತ್ತು.. ಯಡವಟ್ಟಾಗೋದಿಲ್ಲ ಅಂತ ಜಡ್ಜ್ ಗೆ ಮನವರಿಕೆ ಮಾಡಿ ಕೊಡಬೇಕಾಗುತ್ತೆ ಅಲ್ವಾ?
ಹಾಗಾಗಿ ಅಜ್ಜಿಯನ್ನು ಕಟಕಟೆಯಲ್ಲಿ ನಿಲ್ಲಿಸಿದ ವಕೀಲರು ಕೇಳಿದರು "ಅಜ್ಜಿ, ನಿಮಗೆ ನಾನು ಯಾರು ಅಂತ ಗೊತ್ತಾ?"
ಗುಂಡಮ್ಮಜ್ಜಿ ಕೂಲ್ ಆಗಿ ಉತ್ತರಿಸಿದರು "ಗೊತ್ತಿಲ್ಲದೆ ಏನು? ನೀನು ಮೂರ್ತಿ ಅಲ್ವಾ? ಮುಂಡೇದೆ... ನೀನು ಕೂಸಿದ್ದಾಗಿನಿಂದ ನಿನ್ನ ನೋಡಿದ್ದೀನಿ. ಹೇತು ಕೊಳ್ತಾ ಇದ್ದ್ಯ. ಎಷ್ಟು ಸಲ ತೊಳೆದಿಲ್ಲ! ದೊಡ್ಡೋನಾದ್ ಮೇಲೆ ಕಮ್ಮೀನಾ? ಬರೀ ಸುಳ್ಳು ಹೇಳೋದು.. ಹೆಂಡತಿಗೆ ಮೋಸ ಮಾಡಿರೋದು.. ಜನರ ಬೆನ್ನ ಹಿಂದೆ ಮಾತಾಡೋದು.. ನಿನ್ನ ಬಗ್ಗೆ ನನಗೆ ಗೊತ್ತಿಲ್ವಾ? ಪಾಪಿ ಮುಂಡೇದೆ.." ಅಂದರು.
ಮೂರ್ತಿ ತಬ್ಬಿಬ್ಬಾದ. ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಸರಿ.. ಅಲ್ಲಿಯೇ ಇದ್ದ ಡಿಫೆನ್ಸ್ ವಕೀಲರ ಕಡೆ ಕೈ ತೋರಿಸಿ ಕೇಳಿದ:
"ಹೋಗಲಿ.. ಅಜ್ಜಿ.. ಇವರು ಯಾರು ಅಂತ ಗೊತ್ತಾ?"
"ಅಯ್ಯೋ.. ಇವನು ನಮ್ಮ ಕೃಷ್ಣಸ್ವಾಮಿ ಅಲ್ವೇ... ಕಿಟ್ಟಪ್ಪ ಅಂತ ಇದ್ದೇ.. ಈ ಮುಂಡೇದು ಗೊತ್ತಿಲ್ಲ ಅಂದರೆ ಏನು? ಇವನ್ನೂ ಕೂಸಿದ್ದಾಗನಿಂದ ನೋಡಿದ್ದೀನಿ. ನಮ್ಮ ವಠಾರ ದಲ್ಲಿಯೇ ಇದ್ದಿದ್ದು. ಮುಂಡೇದು.. ಬರೀ ಸೊಂಭೇರಿ.. ಇನ್ನೊಬ್ಬರು ಹೇಳಿದ್ದು ಕೇಳೋದಿಲ್ಲ. ತನ್ನದೇ ತನಗೆ... ಕೆಟ್ಟ ಕುಡುಕ ಬೇರೆ.. ಯಾರ ಹತ್ತ್ರಾನೂ ಸಂಬಂಧ ನೆಟ್ಟಗಿರೋದಿಲ್ಲಾ. ಇಡೀ ಊರಲ್ಲಿರೋ ದರಿದ್ರ ವಕೀಲ ಅಂದರೆ ಇವನೇ.. ಹೆಂಡತಿಗೆ ಮೋಸ ಮಾಡಿ 3 ಜನ ಹೆಂಗಸರ ಜೊತೆ ಸಂಬಂಧ ಇಟ್ತ್ಕೊಂಡಿದಾನೆ. ಅದರಲ್ಲಿ ಒಬ್ಬಳು ನಿನ್ನ ಹೆಂಡತಿ.. ಈ ಮುಂಡೆದಾ? ಗೊತ್ತಿಲ್ಲದೆ ಏನು?" ಅಂದರು.
ವಕೀಲ ಮೂರ್ಛೆ ಬೀಳೋದೊಂದೇ ಬಾಕಿ.
ಅಲ್ಲಿಯೇ ಕೂತಿದ್ದ ಜಡ್ಜ್ ಸಾವರಿಸಿಕೊಂಡು ಇಬ್ಬರು ವಕೀಲರನ್ನೂ ಕರೆದರು.. "ನೀವಿಬ್ಬರೂ ಈಡಿಯಟ್ ಗಳು ಈ ಅಜ್ಜೀನ ಏನಾದ್ರೂ "ಈ ಜಡ್ಜ್ ಗೊತ್ತಾ?" ಅಂತ ನನ್ನ ಬಗ್ಗೆ ಕೇಳಿದರೆ.. ನಿಮ್ಮಿಬ್ಬರಿಗೂ ಎಲೆಕ್ಟ್ರಿಕ್ ಕುರ್ಚಿ ಮೇಲೆ ಕೂರಿಸಿಬಿಡ್ತೀನಿ.. ಹುಷಾರು!"
😂😂😂😂😂😂😂😂
*********
"ದಂಡಂ ದಶಗುಣಂ" ಅಂತ ಜನಪ್ರಿಯ ನುಡಿಗಟ್ಟು ಇರುವುದು. ನಾವು ಸಾಮಾನ್ಯವಾಗಿ ಈ ಮಾತಿಗೆ *ಹೊಡೆಯುವುದಕ್ಕಾಗಿ ಉಪಯೋಗಿಸುವದು*, ಎಂದು ಬಿಟ್ಟರೆ ಬೇರೆ ಏನನ್ನೂ ತಿಳಿದುಕೊಳ್ಳುವ ಗೋಜಿಗೆ ಹೋಗಿಲ್ಲ. ಕೋಲಿನ ಹತ್ತು ಬೇರೆಬೇರೆ ಉಪಯೋಗಗಳ ಬಗ್ಗೆ ಸಂಸ್ಕೃತದಲ್ಲಿ ಒಂದು ಚಮತ್ಕಾರೀ ಶ್ಲೋಕ ಈ ರೀತಿ ಇದೆ:
ವಿಶ್ವಾಮಿತ್ರಾಹಿ ಪಶ್ವಾದಿ ತಾಡನೇಽಪ್ಸುಚ ಕರ್ದಮೇ |
ಅಂಧೇ ತಮಸಿ ವಾರ್ಧಕ್ಯೇ ದಂಡಂ ದಶಗುಣಂ ಭವೇತ್ ||
ಇದರ ಅರ್ಥ:
1. ವಿ = ವಿಹಂಗಮ; ಹಕ್ಕಿಗಳನ್ನು ಓಡಿಸಲು
2. ಶ್ವಾ = ಶ್ವಾನ; ನಾಯಿಯನ್ನು ಓಡಿಸಲು
3. ಅಮಿತ್ರ = ವೈರಿ; ನಮಗಾಗದವರನ್ನು ತಿವಿಯಲು
4. ಅಹಿ = ಸರ್ಪ; ಹಾವನ್ನು ಓಡಿಸಲು
5. ಪಶ್ವಾದಿ ತಾಡನೇ = ಕತ್ತೆ, ಕುರಿ ಮುಂತಾದವನ್ನು ಹೊಡೆಯಲು
6. ಅಪ್ಸು ಚ = ನೀರನ್ನು (ಹೊಳೆಯನ್ನು) ದಾಟುವಾಗಲೂ
7. ಕರ್ದಮೇ = ಕೊಚ್ಚೆಯಲ್ಲಿ ಕಾಲೂರಿಕೊಂಡು ನಡೆವಾಗ ಆಧಾರಕ್ಕೆ
8. ಅಂಧೇ = ಕುರುಡರಿಗೆ ಕಣ್ಣಾಗಿ
9. ತಮಸಿ = ಕತ್ತಲಿನಲ್ಲಿ ತಡಕಾಡುವುದಕ್ಕೆ
10. ವಾರ್ಧಕ್ಯೇ = ಮುಪ್ಪಿನಲ್ಲಿ ಊರುಗೋಲಾಗಿ.
*********
ಇತ್ತೀಚೆಗೆ ಸುಪ್ರೀಂ ಕೋರ್ಟ್ ನಲ್ಲಿ ಲಾಯರೊಬ್ಬನು ಈ ರೀತಿ ವಾದ ಮಾಡಿದನಂತೆ.....
"ಹೆಂಡತಿಯ ಅನುಮತಿ ಇಲ್ಲದೇ ಗಂಡನು ಆಕೆಯ ದೈಹಿಕ ಸಂಪರ್ಕ ಹೊಂದುವುದನ್ನು ನ್ಯಾಯಾಲಯ 'ರೇಪ್' ಎನ್ನುವುದಾದರೆ, ಗಂಡನ ಅನುಮತಿ ಇಲ್ಲದೆ ಹೆಂಡತಿ ಶಾಪಿಂಗ್ ಮಾಡುವುದನ್ನು 'ದರೋಡೆ' ಎಂದು ನಿರ್ಧರಿಸಬೇಕು"
ಇದನ್ನು ಕೇಳಿ ಪ್ರಜ್ಞೆ ತಪ್ಪಿ ಬಿದ್ದ ನ್ಯಾಯಾಧೀಶರು ಇನ್ನೂ ಚೇತರಿಸಿಕೊಂಡಿಲ್ಲವಂತೆ..!!
*********
ಹೆಂಡತಿ : ರೀ..ಒಂದು ಪ್ರಶ್ನೆ ಮೋದಿಜೀ ಒಂದೇ ದಿನದಲ್ಲಿ ಮೂರು ದೇಶ ಹೇಗೆ ಸುತ್ತಿ ಬರುತ್ತಾರೆ?
ಗುಂಡ : ಹೆಂಡತಿ ಜೊತೆಲಿ ಇಲ್ಲ ಅಂದರೆ ಚೀನಾ, ಜಪಾನ್ ,ರಷ್ಯ ಸುತ್ತಿ ವಾಪಸ್ಸು ಡೆಲ್ಲಿ ಗೆ ಬರಬಹುದು
ಹೆಂಡತಿ ಜೊತೆ ಇದ್ದರೆ ಬಿಗ್ ಬಜಾರ್ ನಲ್ಲೇ ಸಂಜೆ ಆಗತ್ತೆ.
*********
You relax in an *aeroplane* though you do not know the *pilot*,
You relax in a *ship* though you do not know the *captain*,
You relax in the *train* without knowing the *motorman*,
You relax in the *bus* not knowing the *driver*,
why don't you relax in your life while you know that *God is its controller*?
*Trust your lord..*
*********
ಜೀವನದಲ್ಲಿ ಒಂದು ಮಾತು ನೆನಪಿನಲ್ಲಿ ಇಡಿ.
ನಿಮ್ಮ ಕಣ್ಣಿನಲ್ಲಿ ನೀರು ಬಂದರೆ ಒರೆಸಲು ನೂರಾರು ಮಂದಿ ಬರುತ್ತಾರೆ.
ಆದರೆ
ಮೂಗಿನಲ್ಲಿ ನೀರು ಬಂದರೆ ಒರೆಸಲು ಯಾರೂ ಬರಲ್ಲ
Take care of your health.
It's rainy season
😜😜😜☔😥😥
*********
Subscribe , Follow on
Facebook Instagram YouTube Twitter X WhatsApp