-->

Anger - ಕೋಪ ಬೇಕವೆ ನೀವೆ ಯೋಚಿಸಿ

 ಕೋಪ ಪ್ರತಿಯೊಬ್ಬರಲ್ಲೂ ಇರಲೇಬೇಕಾದದ್ದು, ಆದರೇ ಅದು ಯಾವಾಗ ಬೇಕಾದರೂ ಉಪಯೋಗಿಸದೇ ಸಮಯ ಬಂದಾಗ ಮಾತ್ರ ಬಳಿಸಿದರೆ ಬಾಳು ಬಂಗಾರವಾದಿತು. ಕೋಪ ವಿಕೋಪಕ್ಕೆ ಹೋದರೆ ಇಡೀ ಜೀವನವೇ ನಾಶವಾಗುತ್ತದೆ. ಕೋಪ ಬಂದಾಗ ಯಾವ ವಿಚಾರವೂ ಬರುವುದಿಲ್ಲ. ಮುಂದಾಗುವ ತೊಂದರೆ ಗೊತ್ತಾಗುವುದಿಲ್ಲ. ಅಂತಲೇ ಅದೆಷ್ಟೋ ಜನರು ಕೋಪ ದಿಂದ ಕೊಲೆ ಮಾಡಿ ತಮ್ಮ ಜೀವನವೇ ಕಾರಾಗ್ರಹದಲ್ಲಿ ಕಳೆಯುತ್ತಾರೆ. ಕ್ಷಣಕಾಲ ಮಾಡಿದ ತಪ್ಪು ನಮ್ಮನ್ನು ಕೊನೆಕಾಲದ ವರೆಗೆ ಶಿಕ್ಷೆ ಅನುಭವಿಸುವಂತೆ ಮಾಡುತ್ತದೆ. ಕೋಪ ಮಾಡಿಕೊಳ್ಳುವ ಮೊದಲು ಸ್ವಲ್ಪ ವಿಚಾರ ಮಾಡಬೇಕು. ಸಿಟ್ಟಿನ ಕೈಯಲ್ಲಿ ಬುದ್ದಿ ಕೊಡಬಾರದು ಎಂದು ನಮ್ಮ ಹಿರಿಯರು ಹಿತ ನುಡಿ ಹೇಳಿದ್ದಾರೆ. ಅದು ಸತ್ಯವೂ ಆಗಿದೆ. ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟರೆ ಅನಾಹುತ ಸಂಭವಿಸುತ್ತದೆ. ಕೆಲವೊಬ್ಬರೂ ಮಾತು ಮಾತಿಗೂ ಕೋಪಿಸಿಕೊಳ್ಳುತ್ತಾರೆ. ಕೋಪ ಮಾಡಿಕೊಳ್ಳದಿದ್ದರೆ ಅವರಿಗೆ ನೆಮ್ಮದಿಯೇ ಸಿಗುವುದಿಲ್ಲವೋ ಎಂಬಂತೆ ವರ್ತಿಸುತ್ತಾರೆ. ಕೋಪವನ್ನು ಬೆಳೆಸುವವರು ನಾವೆ. ಅದನ್ನು ಕಡಿಮೆ ಮಾಡಿಕೊಳ್ಳುವ ಶಕ್ತಿ ನಮ್ಮಿಲ್ಲಿರುತ್ತದೆ ಆದರೆ ನಾವು ಮನಸ್ಸು ಮಾಡುವುದಿಲ್ಲ. ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಕೋಪ ಕಡಿಮೆ ಮಾಡಿಕೊಂಡಷ್ಟು ಉತ್ತಮ. ಎಲ್ಲರೊಂದಿಗೂ ಪ್ರೀತಿಯಿಂದ ಇರಬೇಕಾದರೆ ಕೋಪ ಕಡಿಮೆ ಮಾಡಿಕೊಳ್ಳಲೇಬೇಕು. ಯಾವಾಗಲೂ ಕೋಪಿಸಿಕೊಳ್ಳುತ್ತಿದ್ದೇರೆ ಯಾರೂ ಅವರ ಹತ್ತಿರ ಸುಳಿಯುವುದಿಲ್ಲ. ಕೋಪ ಹೆಚ್ಚಾದಂತೆಲ್ಲ ತಾಪ ಹೆಚ್ಚಾಗುತ್ತದೆ. ತಾಪದಿಂದ ಅವಘಡಗಳು ಸಂಭವಿಸುತ್ತವೆ ಅಲ್ಲದೆ ಕೋಪವು ಅನೇಕ ರೋಗಳಿಗೆ ಮುಕ್ತ ಅವಕಾಶ ನಿಡುತ್ತೇದೆ. ಹಸನ್ಮುಖಿ ಸದಾ ಸುಖಿ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ಹಿರಿಯರು ಯಾವುದೆ ಉಪದೇಶ ನೀಡಿದರೂ ಮೊದಲು ತಾವು ಅನುಭವಿಸಿರುತ್ತಾರೆ. ತಾವು ಅನುಭವಿಸಿದ ಅನುಭವ ನಮಗೆ ಹಿತ ನುಡಿ ಮೂಲಕ ಹೇಳುತ್ತಾರೆ.


ಮನಸ್ಸಿಗೆ ಶಾಂತಿ ಸಿಗಬೇಕಾದರೆ ಮೊದಲು ನಾವು ಶಾಂತರಾಗಿರಬೇಕು. ಇನ್ನೊಬ್ಬರೂ ನೋಡಿದರೆ ಎಷ್ಟು ಶಾಂತ ಸ್ವಭಾವದವನಿದ್ದಾನೆ ಎನ್ನುವಂತಿರಬೇಕು. ಕೋಪಕ್ಕೂ ಒಂದು ಸಮಯವಿರುತ್ತದೆ. ಕೆಲ ಸಮಯದಲ್ಲಿ ಕೋಪ ಮಾಡಿಕೊಳ್ಳಲೇ ಬೇಕಾಗುತ್ತದೆ. ಹಾಗಂತ ಕೋಪವೇ ನಮ್ಮ ಉಸಿರು ಎಂದು ಭಾವಿಸುವುದು ತಪ್ಪು. ಕೆಲವೊಬ್ಬರೂ ಪ್ರತಿಷ್ಟೆಗಾಗಿ ಕೋಪ ಉಪಯೋಗಿಸಿಕೊಂಡರೆ ಮತ್ತೆ ಕೆಲವರು ರಕ್ಷಣೆಗಾಗಿ ಉಪಯೋಗಿಸುತ್ತಾರೆ. ಉಪಯೋಗಿಸುಕೊಳ್ಳುವ ವಿಧಾನ ಬೇರೆಯಾದರೂ ಕೋಪ ಕೋಪವೇ ಅಲ್ಲವೆ. ಕೋಪವನ್ನು ದೂರ ಸರಿಸುವ ವರೆಗೂ ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ. ಬೇಕಾದರೆ ಕೋಪ ಕಡಿಮೆ ಮಾಡಿಕೊಂಡು ಬದುಕಿ ನೋಡಿ ನಿಮಗೆ ಗೊತ್ತಾಗುತ್ತದೆ. ವಿನ ಕಾರಣ ಕೋಪಿಸುವುದು ನೋಡುವವರಿಗೂ ಸರಿಕಾಣುವುದಿಲ್ಲ. ಆರೋಗ್ಯಕ್ಕೂ ಉತ್ತಮ ಬೆಳವಣಿಗೆಯಲ್ಲ.  
`ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ' ಎಂದು ಹೇಳಿರುವ ಹಿರಿಯರ ಮಾತು ಅನುಭವಿಸಿ ನೋಡಿದಾಗ ಗೊತ್ತಾಗುತ್ತದೆ ಅದು ಅಕ್ಷರಸ ಸತ್ಯ ಎಂದು. ಸತ್ಯವನ್ನು ಹುಡುಕುತ್ತಾ ಹೋದರೆ ನಮಗೆ ಸತ್ಯದ ಅರಿವಾಗುತ್ತದೆ. ಕೋಪ ನಾನಾ ರೋಗಗಳನ್ನು ಸ್ವಾಗತಿಸುತ್ತದೆ. ಕೋಪದಿಂದ  ನಮಗೆ ಏನಾದರೂ ಲಾಭವಿದೆಯೇ.ಲಾಭಕ್ಕಿಂತ ನಷ್ಟವೇ ಜಾಸ್ತಿ, ಕೋಪಿಷ್ಟರಿಗೆ ಗೌರವವೂ ಸಿಗದು. ಶಾಂತಿಯಿಂದ ಸಿಗುವ ನೆಮ್ಮದಿ ಕೋಪ ಹಾಳು ಮಾಡುತ್ತಿದೆ. ಕ್ಷಣ ಕಾಲದ ಆವೇಷಕ್ಕೆ ತುತ್ತಾಗಿ ಜೀವನದುದ್ದಕ್ಕೂ ನರಳುವ ಪ್ರಸಂಗ ತಂದುಕೊಳ್ಳುತ್ತೇವೆ. ಕೋಪ ಬದಿಗಿಟ್ಟು ಜೀವಿಸಬೇಕು.
ಮಾನವರಿಗೆ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಲ್ಲೂ ಕೋಪ ಇದ್ದೇ ಇರುತ್ತದೆ. ಕೋಪ ಇರಬೇಕು ವಿಕೋಪಕ್ಕೆ ಹೋಗಬಾರದು. ಕ್ಷಣಕಾಲದ ಆವೇಷ ಅನೇಕ  ಅಹಿತಕರ ಘಟನೆಗೆ ಕಾರಣವಾಗುತ್ತದೆ. ನಂತರ ನಾನು ತಪ್ಪು ಮಾಡಿದೆನಲ್ಲ ಎಂದು ಕೊರಗುವಕ್ಕಿಂತ ಮೊದಲು ಒಂದು ಕ್ಷಣ ವಿಚಾರಿಸಿದರೆ ಅನಾಹುತ ತಪ್ಪಬಹುದು. ಕೋಪ ಹತ್ತಿರವಾದಂತೆ ಶಾಂತಿ, ನೆಮ್ಮದಿ ನಮ್ಮಿಂದ ದೂರಾಗುತ್ತದೆ. ಶಾಂತಿ ಹತ್ತಿರವಾಗಬೇಕಾದರೆ ಕೋಪ ದೂರಾಗಬೇಕು. ಒಂದನ್ನು ಪಡೆಯಬೇಕಾದರೆ ಒಂದನ್ನು ಕಳೆದುಕೊಳ್ಳಲೇ ಬೇಕು. ಓಳ್ಳೆಯದಕ್ಕಾಗಿ ಕೆಟ್ಟದ್ದನ್ನು ಕಳೆದುಕೊಳ್ಳಬೇಕೆ ಹೊರತು. ಕೆಟ್ಟದ್ದಕ್ಕಾಗಿ ಒಳ್ಳೆಯದನ್ನು ಕಳೆದುಕೊಳ್ಳಬಾರದು. ಶಾಂತಿಗಾಗಿ ಕೋಪ ಕಳೆದುಕೊಳ್ಳಬೇಕೆ ವಿನಃ ಕೋಪಕ್ಕಾಗಿ ಶಾಂತಿ,ನೆಮ್ಮದಿಯನ್ನು ಕಳೆದುಕೊಳ್ಳಬಾರದು. ಕೋಪದಿಂದಾಗುವ ಲಾಭವಾದರೂ ಏನು? ಎಂದು ಒಮ್ಮೆ ವಿಚಾರ ಮಾಡಿ ನೋಡಿ. ಕೋಪಕ್ಕೆ ತುತ್ತಾಗಿ ಅನೇಕರು ತಮ್ಮ ಅಮೂಲ್ಯ ಜೀವನವ್ನೇ ಕತ್ತಲಲ್ಲಿ ಕಳೆಯುತ್ತಿದ್ದಾರೆ. ಸಿಟ್ಟಿಗೆ ಬಲಿಯಾಗಿ ಅದೆಷ್ಟೋಕುಟುಂಬಗಳು ಬೀದಿಪಾಲಾಗಿವೆ.
ಕೋಪವನ್ನುತೊರೆದು ಸಮಾಧಾಶನದಿಂದ ಇದ್ದರೆ ಪ್ರೀತಿ ಬೆಳೆಯುತ್ತದೆ. ಪ್ರೀತಿಯಿಂದ ಸಮೃದ್ಧಿ,ಅನಂದ ಸಿಗುತ್ತದೆ. ಜತೆಗೆ ಉಲ್ಲಾಸದ ಜೀವನ ಸಾಗಿಸಬಹುದು. ಆರೋಗ್ಯವಂತರಾಗಿ ಬಾಳಬಹುದು. ಯಾವಾಗಲೂ ಸಿಟ್ಟಿನಲ್ಲಿದ್ದರೆ ಶಾಂತಿ ಕಳೆದುಕೊಂಡು, ದುಷ್ಟ ವಿಚಾರಗಳಿಗೆ ಆಸ್ಪದ ನೀಡಿದತಾಗುತ್ತದೆ.
ಒಂದು ಸಲ ವಿಚಾರಿಸಿ ನೋಡಿ, ಕೋಪವನ್ನು ಬಿಟ್ಟು ನಗುನಗುತ್ತಾ ಕಾಲ ಕಳೆದು ನೋಡಿ, ಅದರ ಅನುಭವವೇ ಬೇರೆ. ಅದನ್ನು ಪ್ರತಿ ದಿನ ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಕೆಲ ದಿನ ತ್ರಾಸ ಎನಿಸಬಹುದು, ಆದರೆ ಕೊನೆತನಕ ಸುಖ, ಶಾಂತಿ ನಿಮ್ಮದಾಗುತ್ತದೆ.
ಯಾವುದೆ ವಸ್ತು, ಅನುಭವಿಸಿದಾಗಲೇ ಅದರ  ಅದರ ನಿಜ ರೂಪ ಗೊತ್ತಾಗುತ್ತದೆ. ಅದರಂತೆ ಶಾಂತಿ, ಸಹನೆಯಿಂದ ಬಾಳುವುದನ್ನು ಅನುಭವಿಸಿ ನೋಡಿದಾಗಲೇ ಅದರ ಅದರ ಬೆಲೆ ಎಂಥದ್ದು ಎಂದು ತಿಳಿಯುತ್ತದೆ.
ಎಳೆ ವಯಸ್ಸಿನಲ್ಲಿ ಕೋಪ ಮಾಡಿಕೊಳ್ಳುವುದು ಒಳ್ಳೆದೆನಿಸಬಹುದು. ವೃದ್ಧರಾದ ಮೇಲೆ ಅದು ನಮ್ಮ  ಬದುಕಿಕೆ ಮುಳ್ಳಾಗುತ್ತದೆ ಎಂಬುನ್ನು ಯಾರೂ ಮರೆಯುವಂತಿಲ್ಲ.
ಮುಪ್ಪಪ್ಪಿನ ಕಾಲದಲ್ಲಿ ಮಕ್ಕಳು, ಮಮ್ಮಕ್ಕಳೋಂದಿಗೆ ಸುಖವಾಗಿ ಕಾಲ ಕಳೆಯಬೇಕಿದ್ದವರು ವೃದ್ಧಾಶ್ರದಲ್ಲಿ ಅನಾಥರಂತೆ ಜೀವನ ಸಾಗಿಸಬೇಕಾಗುತ್ತದೆ. ಕೋಪ ಬೇಕವೆ ನೀವೆ ಯೋಚಿಸಿ.
 
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925) 
–>