ಪ್ರತಿಯೊಬ್ಬರೂ ಸುಖವಾಗಿ ಮತ್ತು ನೆಮ್ಮದಿಯ ಜೀವನ ನಡೆಸುವ ಗುರಿ ಹೊಂದಿರುತ್ತಾರೆ. ಅದು ತಪ್ಪೆನೆಲ್ಲ. ಮಾನವ ಸಂಘ ಜೀವಿ ಪರಸ್ಪರ ನಂಬಿಕೆ, ವಿಶ್ವಾಸದಿಂದ ಬದುಕಬೇಕಾಗುತ್ತದೆ. ಉತ್ತಮ ಜೀವನಕ್ಕೆ ಸಂಶಯ ಎಂಬ ಭಯಾನಕ ರೋಗ ಅಂಟಿಕೊಂಡಿತು ಎಂದರೆ ಜೀವನ ವಿನಾಸದತ್ತ ಸಾಗುತ್ತದೆ. ಸಂಶಯ ಎಂಬುದು ಮನುಷ್ಯನ ಜೀವನ ವಿನಾಸದ ಸಂಕೇತವಿದ್ದಂತೆ. ಪತಿ ಪತ್ನಿಯರಲ್ಲಿ ಒಬ್ಬರಿಗೆ ತಲೆಯಲ್ಲಿ ಸಂಶಯ ಸೇರಿಕೊಂಡಿತು ಎಂದರೆ ಮುಗಿತು ಕುಟುಂಬ ಹಾಳಾಗುವ ವರೆಗೂ ತಲೆಯಿಂದ ಹೊರಗೆ ಹೋಗುವುದಿಲ್ಲ.
ಸಂಶಯ ಎಷ್ಟೊಂದು ಪರಿಣಾಮಕಾರಿಯಾಗಿರುತ್ತದೆ ಎಂದರೆ. ಒಂದು ಸುಂದರ ಕುಟುಂಬ ಚೂರು ಚೂರು ಮಾಡಿಬಿಡುತ್ತದೆ.
ನಂಬಿಕೆಯೇ ಜೀವನ. ಜೀವನಲ್ಲಿ ಯಾರನ್ನೂ ನಂಬದೆ ಬದುಕು ಸಾಗಿಸಲಾಗುದು. ಬೇರೆಯವರನ್ನು ನಂಬುವುದಿರಲಿ ಇಂದು ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ನಂಬದಂಥ ಕಾಲ ಬಂದಿದೆ. ಅದಕ್ಕೆ ನೂರಾರು ಕಾರಣಗಳಿರಬಹುದು. ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡಬೇಕು ಎಂಬ ಹಿರಿಯರ ಮಾತು ಅಕ್ಷರಸ ಸತ್ಯವಾಗಿದೆ. ಏನೋ ತಪ್ಪು ಕಲ್ಪನೆಯಿಂದಾಗಿ ಸಂಶಯ ಶರುವಾಗುತ್ತದೆ. ಆದರೆ ಅದನ್ನು ಪರಾಮಷರ್ಿ ನೋಡಬೇಕು. ತಪ್ಪು ಕಲ್ಪನೆಗೆ ಅವಕಾಶ ಕಲ್ಪಿಸಬಾರದು. ಇಂದು ಕ್ಷುಲ್ಲಕ ವಿಷಯಗಳೆ ದೊಡ್ಡದಾಗುತ್ತಿವೆ. ಸಂಸಯ ಪಡುವ ಮೋದಲು ಆ ಕುರಿತು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು. ಸಂಶಯ ಎಂಬುವುದು ನಮುಷ್ಯನ ವಿನಾಶದತ್ತ ಕೊಂಡೊಯ್ಯುತ್ತದೆ. ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಹಜ. ಎಂಥ ಕಷ್ಟ ಬಂದರೂ ಅದಕ್ಕೆ ಪರಿಹಾರ ಕಂಡಕೊಳ್ಳಬಹುದು ಆದರೆ ಸಂಶಯಕ್ಕೆ ಮದ್ದೆ ಇಲ್ಲ. ಒಂದು ಸಲ ಒಬ್ಬ ವ್ಯಕ್ತಿಯ ಮೇಲೆ ಸಂಶಯ ಶುರುವಾದರೆ ಕೊನೆವರೆಗೂ ಉಳಿದುಕೊಳ್ಳುತ್ತದೆ. ಪ್ರೀತಿ, ವಿಶ್ವಾಸ, ನಂಬಿಕೆ ಇವು ಜೀವನದ ಸಫಲತೆಗಳು ಇವುಗಳಲ್ಲಿ ಒಂದು ಕೊರತೆಯಾದರೂ ಜೀವನ ದುಸ್ತರವಾಗುತ್ತದೆ. ನಮ್ಮ ಜೀವನ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇರುತ್ತದೆ. ಇದು ಎಲ್ಲರಿಗೂ ಗೊತ್ತು. ಆದರೂ ಸಂಶಯ ಪಟ್ಟು ಸಂಸಾರ ಹಾಳು ಮಾಡಿಕೊಳ್ಳುವವರ ಸಂಖ್ಯೆಗೇನು ಕಡಿಮೆಯಿಲ್ಲ. ನಂದನ ವನದಂಥ ಕುಟುಂದಲ್ಲಿ ಸಂಶಯ ಸೇರಿಕೊಂಡು ಸ್ಮಶಾನದಂತೆ ಮಾಡಿಬಿಡುತ್ತದೆ. ಈ ಸಂಶಯಕ್ಕೆ ಅವಕಾಶ ಕೊಡಬಾರದು ಎಂದರೆ ತಾಳ್ಮೆ ಬೇಕು. ಮತ್ತು ವಿಚಾರ ಶಕ್ತಿ ಬೇಕು. ಹೆಂಡತಿ ಯಾರ ಜತೆ ಮಾತಾಡಿದ್ದಾಳೆ ಎಂದು ಸಂಶಯ ಪಡುವುದು ತಪ್ಪು. ತಾಳ್ಮೆಯಿಂದ ವಿಚಾರಿಸಬೇಕು. ಸತ್ಯ ಅರಿತುಕೊಳ್ಲಲು ಪ್ರಯತ್ನಿಸಬೇಕು. ಅಧುನಿಕ ಯುಗದಲ್ಲಂತೂ ಮೋಬೈಲ್, ವಾಟ್ಸಪ್, ಮತ್ತು ಫೆಸ್ಬುಕ್ ಗಳು ಸಂಸಾರ ಒಡೆಯುಲು ಪ್ರೇರಣೆ ನೀಡುತ್ತಿವೆ. ಅಂತರ್ ಜಾಲ ತಾಣ ಮಿತವಾಗಿ ಬಳಸಬೇಕು. ಒಂದೊಂದು ಸಲ ಯಾರೋ ಪರಿಚಯವೇ ಇರುವುದಿಲ್ಲ ತಟ್ಟಂತ ಮೆಸೆಜ್ ಬರುತ್ತದೆ. ಅದು ಗಂಡ ನೋಡಿ ಯಾರೂ, ನಿನಗೇಕೆ ಕಳಿಸಿದ, ಏನು ಸಂಬಂಧವಿದೆ ಹೀಗೆಲ್ಲ ಜಗಳಕ್ಕೆ ಕಾರಣವಾಗುತ್ತದೆ. ಅದರಲ್ಲಿ ಹೆಂಡತಿಯದು ತಪ್ಪು ಇರುವುದಿಲ್ಲ. ಯಾರೂ ಅಂತನೇ ಗೊತ್ತಿರುವುದಿಲ್ಲ. ಸಂಶಯ ಪಡುವಕ್ಕಿಂತ ಮುಂಚೆ ಯಾರೂ , ಯಾಕೆ ಕಳಿಸಿದ ಅಂತ ಹೆಂಡತಿಗೆ ಕೇಳಿ ತಿಳಿದುಕೊಳ್ಳಬಹುದು. ಯುವಕರು ಕೂಡ ಮಹಿಳೆಯರಿಗೆ ಮೆಸೆಜ್ ಮಾಡುವಾಗ ಇದೆಲ್ಲ ವಿಚಾರ ಮಾಡಬೇಕು. ನನ್ನಿಂದ ಒಂದು ಸಂಸಾರ ಹಾಳಾಗುತ್ತದೆ ಎಂಬ ಪರಿಜ್ಞಾನ ಹೊಂದಿರಬೇಕು.
ಸಂಶಯದಿಂದ ಸಂಸಾರ ಹಾಳಾಗುವುದರ ಜತೆಗೆ ಮಾನಸಿಕ, ದೈಹಿಕವಾಗಿಯೂ ಕಷ್ಟ ಅನುಭವಿಸಬೇಕಾಗುತ್ತದೆ. ಸಂಶಯ ಪಡುವ ಮುನ್ನ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಯಾರೂ ಯಾವತ್ತೂ ಸಂಶಯ ಪಟ್ಟು ಸಂಸಾರ ಸ್ಮಶಾನದಂತೆ ಮಾಡಿಕೊಳ್ಳಲು ಆಸ್ಪದ ನೀಡದೆ ಸುಂದರ, ಸುಮಧುರ ಜೀವನ ನಡೆಸುವ ಮೂಲಕ ಕುಟುಂಬಗಳು ನಂದನವನದಂತೆ ಸೃಷ್ಟಿಸಲು ಪ್ರಯತ್ನಿಸಬೇಕು.
ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter WhatsApp