-->

ವಯಸ್ಸಾದಾಗ ಕೇಳುವುದು ಒಂದು ಹೊತ್ತ ಊಟ, ಸ್ವಲ್ಪ ಆಶ್ರಯ - Parents , a short story

 ಹಿಂದಿನ ಕಾಲದಲ್ಲಿ ಆದ್ಯಾವುದೋ ಒಂದು ದೇಶದಲ್ಲಿ ಒಂದು ವಿಚಿತ್ರವಾದ ಪದ್ದತಿ ಇತ್ತಂತೆ...


ಅದೇನಪ್ಪ ಅಂದ್ರೆ ವಯಸ್ಸಾದ ತಂದೆ ತಾಯಿಯರನ್ನು ಒಂದು ಬೆಟ್ಟದ ತುದಿಯಲ್ಲಿ ಬಿಟ್ಟು ಬರುವ ಪದ್ದತಿ ಕಾರಣ ವಯಸ್ಸಾದ ಮುದುಕರು ಯಾವ ಕೆಲಸಕ್ಕೆ ಬರುವುದಿಲ್ಲ ಸುಮ್ನೆ ವನಾಸ ಎಂದು, ಅವರು ಯಾವುದೇ ದುಡಿಮೆ ಮತ್ತು ಕೆಲಸದಲ್ಲಿ ಪಾಲ್ಗೋಳ್ಳುವುದಿಲ್ಲ, ಅವರಿಂದ ಯಾವುದೇ ಉಪಯೋಗ ಇಲ್ಲವೆಂದು ತಿಳಿದು ಅವರನ್ನು ಬೆಟ್ಟದ ತುದಿಯಲ್ಲಿ ಬಿಟ್ಟು ಬರುತ್ತಿದ್ದರು... ಅವರ ಕೆಲಸವೇ ಅವರು ಮಾಡಿಕೊಳ್ಳದ ಸ್ಥಿತಿಯಲ್ಲಿ ಇರುವ ವಯಸ್ಸಾದ ವೃದ್ದರು ದಿನಗಳು ಕಳೆದಂತೆ ಆಹಾರ ನೀರು ಇಲ್ಲದೆ ಉಪವಾಸ ದಿಂದ ನರಳುತ್ತ ಒಂದು ದಿನ ಸಾಯುತ್ತಿದ್ದರು... ಇದೇ ರೀತಿಯಲ್ಲಿ ಒಂದು ದಿನ ಒಬ್ಬ ವ್ಯಕ್ತಿಯು ತನ್ನ ವಯಸ್ಸಾದ ತಾಯಿಯನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಬೆಟ್ಟದ ತುದಿಯನ್ನು ಹತ್ತುತ್ತಾ ಇದ್ದ... ಆ ವಯಸ್ಸಾದ ತಾಯಿಯು ಬೆನ್ನ ಮೇಲೆ ಏನೋ ಗೀಚುತ್ತಿರುವ ಅನುಭವ ಮಗನಿಗೆ ಆಗುತ್ತದೆ, ಅದನ್ನು ಲೆಕ್ಕಿಸದೆ ಮುಂದೆ ಮುಂದೆ ನಡೆದು ತನ್ನ ತಾಯಿಯನ್ನು ಒಂದು ನಿರ್ಜನ ಪ್ರದೇಶದಲ್ಲಿ ಇಳಿಸುತ್ತಾನೆ... ಆಗ ಮಗ ಕೇಳುತ್ತಾನೆ ಏನು ನನ್ನ ಬೆನ್ನ ಹಿಂದೆ ಗೀಚುತ್ತಿರ ಹಾಗೆ ಮಾಡಿದೆ ಯಾಕೆ ಎಂದು... ಅದಕ್ಕೆ ತಾಯಿಯ ಉತ್ತರ: *ಮಗ ನೀನು ನನ್ನನ್ನು ಬೆನ್ನ ಮೇಲೆ ಕೂರಿಸಿಕೊಂಡ ಬರುವಾಗಲೆ ನನಗೆ ತಿಳಿಯಿತು ನೀನು ನನ್ನನ್ನು ಬೆಟ್ಟದ ತುದಿಯಲ್ಲಿ ಬಿಟ್ಟುಬರಲು ನಿಶ್ಚಯಿಸಿರುವೆ ಎಂದು ಅದು ಇರಲಿ ನಾನು ಏಕೆ ಆರೀತಿಯಲ್ಲಿ ಮಾಡಿದೆ ಎಂದರೆ ನೀನು ಬರ ಬರತ್ತಾ ತುಂಬಾ ದೂರ ಬಂದಿರುವೆ... ಅದು ಬೇರೆ ಇದು ತುಂಬಾ ನಿರ್ಜನ ಪ್ರದೇಶ ಇಲ್ಲಿ ತಪ್ಪಿ ಹೊಗುವ ಸಾದ್ಯತೆ ಹೆಚ್ಚು...* *ಆ ಕಾರಣದಿಂದ ನೀನು ನನ್ನ ಹೊತ್ತು ತರಬೇಕಾದರೆ ಕೈಗೆ ಸಿಕ್ಕ ಕೊಂಬೆ ರೆಂಬೆಗಳನ್ನು ಎಲೆಗಳನ್ನು ನಾನು ದಾರಿಯ ತುಂಬಾ ಹಾಕಿಕೊಂಡು ಬಂದಿರುವೆ...* *ಈಗ ನೀನು ಯಾವುದೇ ಭಯವಿಲ್ಲದೆ ನಾನು ದಾರಿಯ ತುಂಬಾ ಹಾಕಿಕೊಂಡು ಬಂದಿರುವ ಕೊಂಬೆ ರೆಂಬೆಗಳ ಸಹಾಯದಿಂದ ನೀನು ಸುರಕ್ಷಿತವಾಗಿ ಮನೆಯನ್ನು ಸೇರಬಹುದು ಎಂದು ತಾಯಿಯು ಮಗನ ಒಳಿತನ್ನು ಬಯಸಿ ಹೇಳುತ್ತಾಳೆ...* *ಯಾವುದೇ ತಂದೆ ತಾಯಿ ಮಕ್ಕಳಿಂದ ಬಯಸುವುದು ಒಂದೆರಡು ಒಳ್ಳೆಯ ಮಾತುಗಳು ಮತ್ತು ಸ್ವಲ್ಪ ಪ್ರೀತಿ... ವಯಸ್ಸಾದಾಗ ಕೇಳುವುದು ಒಂದು ಹೊತ್ತ ಊಟ ಸ್ವಲ್ಪ ಆಶ್ರಯ ಯೋಚಿಸಿ ನೋಡಿ ನಾವು ಚಿಕ್ಕವರು ಇದ್ದಾಗ ನಮ್ಮ ತಂದೆತಾಯಿಗಳು ನಮಗಾಗಿ ಏನೆಲ್ಲ ಮಾಡಿದ್ದಾರೆ ಎಂದು...* ಆಗ ನಿಮ್ಮ ಕಣ್ಣುಗಳಲ್ಲಿ ಕಂಬನಿಯು ತಾನಾಗಿಯೇ ಬರುತ್ತದೆ... ಈ ಕಥೆಯು ನಿಮಗೆ ಇಷ್ಟವಾದರೆ ನಿಮ್ಮ ಮನಸ್ಸಿಗೆ ನಾಟಿದರೆ... ನನಗೆ ಧನ್ಯವಾದ ಹೇಳುವ ಅವಶ್ಯಕತೆ ಇಲ್ಲ... ಆದರೆ ನನ್ನದೊಂದು ಕೋರಿಕೆ... ನೀವು ಕೆಲಸದ ನಿಮಿತ್ತ ಬೇರೆ ಸ್ಥಳಗಳಲ್ಲಿ ಇದ್ದರೆ ಅಥವಾ ತಂದೆ ತಾಯಿಯಿಂದ ಬೇರೆ ಇದ್ದರೆ ದಯವಿಟ್ಟು ಒಂದು ನಿಮಿಷ ಬಿಡುವು ಮಾಡಿಕೊಂಡು ನಿಮ್ಮ ತಂದೆ ತಾಯಿಗೆ ಒಂದು ಕರೆಯನ್ನು ಮಾಡಿ ಮಾತನಾಡಿಸಿ... ಇದೇ ನೀವು ನನಗೆ ತಿಳಿಸುವ ಕೃತಜ್ಞತೆ....
 
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ  
Terms | Privacy | 2024 🇮🇳
–>