-->

ಆಚಾರ ವಿಚಾರ Significance of giving coconut at special occassions

ತೆಂಗಿನಕಾಯಿಯನ್ನು ನಾವು ಪೂರ್ಣ ಫಲ ಅಂತ ಹೇಳುತ್ತೇವೆ . ಬಹಳ ಉಪಕಾರಿ , ತೆಂಗಿನ ಮರವನ್ನುಚಿಕ್ಕದಿದ್ದಾಗ ಸ್ವಲ್ಪ ನೀರು ಹಾಕಿ ಬೆಳೆಸಿದ ಮಾತ್ರಕ್ಕೆ ಉಪಕಾರವಾಗಿ ಜೀವನ ಪೂರ್ತಿ ನಮಗೆ ಸಿಹಿಯಾದ ಎಳೆನೀರನ್ನು ಕೊಡುತ್ತದೆ... ಇಂತಹ ಒಂದು ಪೂರ್ಣ ಫಲವನ್ನು ವಿಶೇಷ ದಿನಗಳಲ್ಲಿ ಹಬ್ಬ ಹುಣ್ಣಿಮೆ, ಮನೆಯಲ್ಲಿ ವಿಶೇಷ ಸಮಾರಂಭಗಳಲ್ಲಿ ಮುತ್ತೈದೆಯರಿಗೆ , ಬ್ರಾಹ್ಮಣನಿಗೆ ತಾಂಬೂಲ ದಕ್ಷಿಣೆ ಸಹಿತ ಪೂರ್ಣ ಫಲವನ್ನು ಕೊಟ್ಟರೆ ಏನು ಫಲ ಕೇಳಿ


Significance of giving coconut at special occassions

ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ.. ಅದಕ್ಕೆ ದೇವರಿಗೆ ಹರಿಕೆ ಕಟ್ಟಿಕೊಳ್ಳುವಾಗ  ಪೂರ್ಣ ಫಲದ ಜೊತೆಗೆ ತಾಂಬೂಲ ದಕ್ಷಿಣೆ ಇಟ್ಟು ಹರಿಕೆ ಕಟ್ಟಿಕೊಂಡರೆ  ಇಷ್ಟಾರ್ಥ ಬೇಗ ಸಿದ್ಧಿಯಾಗುತ್ತದೆ.. , 
ಹಬ್ಬ ಹರಿದಿನಗಳಲ್ಲಿ ತೆಂಗಿನಕಾಯಿ ದಾನದಿಂದ 
ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..

ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ  ದಾನದಿಂದ ಸರ್ವಕಾರ್ಯ ವಿಜಯವಾಗುತ್ತದೆ..
ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
ಮನೆಯಲ್ಲಿ ಕಲಹಗಳು ಶಾಂತವಾಗುತ್ತದೆ..
ಬರೀ ತೆಂಗಿನಕಾಯಿ ಕೊಡಬಾರದು ಜೊತೆಗೆ ವಿಳ್ಯದೆಲೆ , ಅಡಿಕೆ ದಕ್ಷಿಣೆ ಇಟ್ಟು ಕೊಡಬೇಕು .ವಿಳ್ಯದೆಲೆ ಧನಲಕ್ಷ್ಮೀ ಸ್ವರೂಪ ,ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌ ಇದರ ಜೊತೆಗೆ ಇಷ್ಟಾರ್ಥ ಸಿದ್ಧಿಗಾಗಿ ಅಡಿಕೆ  ಅಂದರೆ ಪೂಗಿಫಲ ಸಂಸ್ಕೃತದಲ್ಲಿ ಹೇಳುತ್ತೇವೆ.. ಯಾರಿಗೂ ತಪ್ಪಿಯು  ಬರಿ ವಿಳ್ಯದೆಲೆಯನ್ನು ಕೊಡಬಾರದು ಜೊತೆಗೆ ಅಡಿಕೆ ಇಟ್ಟು ಕೊಡಬೇಕು , ಏನೊ ಪಕ್ಕದ ಮನೆಯವರು ಎಲೆ ಇದೆಯಾ ಅಂತ ಕೇಳ್ತಾರೆ  ಆಗ ನೀವು ಬರಿ ವಿಳ್ಯದೆಲೆ ಕೊಡಬಾರದು ಅಡಿಕೆ ಜೊತೆಗೆ ಕೊಡಿ , ಅಕಸ್ಮಾತ್ತಾಗಿ ಅಡಿಕೆ ಇಲ್ಲದಿದ್ದರೆ ಒಣಕೊಬ್ಬರಿ ಚೂರು ಇಟ್ಟು ಕೊಡಿ ...ಬರಿ ಎಲೆ ಕೊಟ್ಟರೆ ದಾರಿದ್ರ್ಯ ಬರುತ್ತದೆ ಅಂತ ಅಮ್ಮ ಹೇಳುತ್ತಿದ್ದರು... 
ನಾವು ತಾಂಬೂಲವನ್ನು ಹಾಕಿಕೊಳ್ಳುವುದರಿಂದ  ಮುತ್ತೈದೆತನ ಹೆಚ್ಚಾಗುತ್ತದೆ... ಸುಣ್ಣವಿಲ್ಲದೆ ಬರಿ ವಿಳ್ಯದೆಲೆ ಅಡಿಕೆ ಹಾಕಿಕೊಳ್ಳಬಾರದು ಬ್ರಹ್ಮ ಹತ್ಯಾ ದೋಷ ಬರುತ್ತದೆ.....

✍️✍️ವೀಣಾ ಜೋಶಿ - ಸಂಗ್ರಹ ಲೇಖನ
Terms | Privacy | 2024 🇮🇳
–>