ಪ್ರತಿಯೊಬ್ಬ ಮನುಷ್ಯನು ಪ್ರತಿದಿನ ಸುಮಾರು ಅರವತ್ತು ಸಾರದಷ್ಟು ಆಲೋಚನೆಗಳನ್ನು ಮಾಡುತ್ತಾನಂತೆ. ಏಳು ಗಂಟೆ ಮಲಗುತ್ತೇವೆ ಎಂದುಕೊಳ್ಳಿ. ಪ್ರತಿ ಸೆಂಕೆಂಡಿಗೆ ಒಂದು ಆಲೋಚನೆ ಬಂದು ಹೋಗುತ್ತದೆ. ಆದರೆ ನಾವು ಅದನ್ನು ಗಮನಿಸುವುದೇ ಇಲ್ಲ. ಪ್ರತಿ ಕ್ಷಣಕ್ಷಣಕ್ಕೂ ಆಲೋಚನೆಗಳ ಸಮೂಹ ನಮ್ಮ ಮನಸ್ಸಿನ ಮುಖಾಂತರ ಹಾದು ಹೋಗುತ್ತಲೆ ಇರುತ್ತದೆ. ಯಾವ ಆಲೋಚನೆ ಹಾದು ಹೋಯಿತು ಎಂದು ಸಾಮಾನ್ಯರಿಗೆ ತಿಳಿಯುವುದು ಅಸಾಧ್ಯದ ಮಾತು.
ಆದರೆ ಯೋಗಿಗಳು ಇದರ ಬಗ್ಗೆ ಜಾಗೃತರಾಗಿರುತ್ತಾರೆ. ತಮಗೆ ಬೇಕಿರುವ ಆಲೋಚನೆಗಳನ್ನು ಮಾತ್ರ ಅವರು ಸೆಳೆಯುತ್ತಿರುತ್ತಾರೆ. ಹೀಗಾಗಿ ಜೀವನ ಅವರು ಅಂದುಕೊಂಡಂತೆ ನಡೆಯುತ್ತದೆ. ಅವರ ಜೀವನ ಅವರ ಕೈಯಲ್ಲಿಯೇ ಇರುತ್ತದೆ. ಜೀವನ ಏರು ಪೇರಾಗುವುದು ನಾವು ಮಾಡುವ ಆಲೋಚನೆಯಿಂದಲೆ. ಭಗವಂತನ ದೃಷ್ಟಿಯಲ್ಲಿ ಕಣ್ಣಿಗೆ ಕಾಣದ ಸೂಕ್ಷಣಕ್ಕೂ ಮಹಾಕಾಯದ ಆನೆಗೂ ವ್ಯತ್ಯಾಸವೆ ಇಲ್ಲ. ಇದರಲ್ಲಿರುವ ಶಕ್ತಿ ಅದರಲ್ಲೂ ಇದೆ. ಆದರೆ ಆಲೋಚಿಸುವ ಭಾವನೆಯಲ್ಲಿನ ವ್ಯತ್ಯಾಸವೇ ಹೊರತು ಶಕ್ತಿಯಲ್ಲಲ್ಲ . ಏನನ್ನಾದರೂ ತ್ಯಾಗ ಮಾಡದ ಹೊರತು ಏನೂ ದೊರೆಯದು ಎಂಬ ಸಿದ್ಧಾಂತ ವಿದೆ. ಕರ್ಮಕ್ಕೆ ತಕ್ಕಂತೆ ಕಾರ್ಯ, ಕಾರ್ಯಕ್ಕೆ ತಕ್ಕಂತೆ ಫಲ. ಧ್ಯಾನದಿಂದ ಕೇವಲ ಶೇ. ಒಂದರಷ್ಟು ಜನ ಬದಲಾಗಬಹುದೆ ವಿನಃ ಉಳಿದ ಶೇ.99 ರಷ್ಟು ಜನರ ಆಲೋಚನೆ ಅವರವರ ನಂಬಿಕೆಯಂತೆಯೇ ಇರುತ್ತದೆ. ನಂಬಿಕೆ ಬದಲಿಸದಿದ್ದರೆ ಜೀವನವು ಬದಲಾಗುವುದಿಲ್ಲ. ನಂಬಿಕೆ ಬದಲಾದರೆ ಆಲೋಚನೆ ಬದಲಾಗುತ್ತವೆ. ಆಲೋಚನೆಗಳು ಬದಲಾದರೆ ಆಡುವ ಮಾತು, ಮಾಡುವ ಕೆಲಸದಲ್ಲಿ ಬದಲಾವಣೆ ಉಂಟಾಗುತ್ತದೆ. ಫಲಿತಾಂಶ ನಾವು ಅಂದುಕೊಂಡಂತೆ ಬರಬೇಕಾದರೆ ಕಾರ್ಯ ನಾವು ಅಂದುಕೊಂಡಂತೆಯೇ ಇರಬೇಕು. ಕಾರ್ಯದಲ್ಲಿ ಹೆಚ್ಚುಕಡಿಮೆಯಾದರೆ ಫಲಿತಾಂಶದಲ್ಲಿಯೂ ಹೆಚ್ಚುಕಡಿಮೆಯಾಗುತ್ತದೆ. ಸರಿಯಾದ ಆಲೋಚನೆ ಮಾಡುವುದರಿಂದ ಮಾತ್ರ ಉತ್ತಮ ಜೀನವ ನಡೆಸಲು ಸಾಧ್ಯ. ನಾವು ನಂಬುತ್ತಿರುವ ನಂಬಿಕೆಗಳನ್ನು ಪ್ರಶ್ನಿಸುತ್ತಾ ಹೋದಂತೆ ಆಗ ತಿಳಿಯುತ್ತದೆ ನಂಬಿಕೆಗಳು ಎಷ್ಟು ನಿಜವೆಂದು. ಆಲೋಚನೆಗಳು ಸರಿ ಪಡಿಸಿಕೊಳ್ಳಲು ವಿಶ್ವಾಸಬೇಕು. ವಿಶ್ವಾಸದಿಂದ ನಂಬಿಕೆ ಹುಟ್ಟುತ್ತದೆ. ಪ್ರತಿ ಆಲೋಚನೆಯೂ ಉದ್ಭವವಾಗುವುದು ಭಗವಂತನಿಂದಲೆ ಎನ್ನುವ ಸತ್ಯವನ್ನು ಅರಿತುಕೊಂಡರೆ ದೇವರ ಮೇಲಿನ ವಿಶ್ವಾಸವು ಭರವಸೆಯತ್ತ ಸಾಗುತ್ತದೆ. ಭರವಸೆಯಲ್ಲಿಯೇ ಭಗವಂತ ನಿದ್ದಾನೆ ಎಂದು ನಂಬಬೇಕು. ಆಲೋಚನೆಗಳನ್ನು ಗಮನಿಸಬೇಕಾದರೆ ಗಮನಿಸುವ ಕಾರ್ಯವನ್ನು ಪ್ರಾರಂಭಿಸಬೇಕು. ಗಮನಿಸುವುದು ಧ್ಯಾನನದಿಂದಲೇ ಆರಂಭವಾಗುತ್ತದೆ. ಧ್ಯಾನವು ನಮ್ಮನ್ನು ಭಗವಂತನ ಕಡೆಗೆ ಕರೆದುಕೊಂಡು ಹೋಗುತ್ತದೆ. ಕೆಟ್ಟ ಆಲೋಚನೆುಂದ ಮನಸ್ಸು ವಿಕೃತಗೊಳ್ಳುತ್ತದೆ. ಕೆಟ್ಟ ಕಾರ್ಯಕ್ಕೆ ಇದು ನಾಂದಿಯಾಗುತ್ತದೆ. ಯಾವಾಗಲೂ ಒಳ್ಳೆ ಆಲೋಚನೆ ಮಾಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಉತ್ತಮ ಸಾಧನೆ ಮಾಡಲು ಸಾಧ್ಯ. ಅಶಾಂತಿ ಮೂಡಲು ಕೆಟ್ಟ ವಿಚಾರಗಳೆ ಕಾರಣವಾಗಿವೆ. ಇನ್ನೊಬ್ಬರಿಗೆ ಕೆಡಕು ಮಾಡುವ ಆಲೋಚನೆ ಪ್ರತಿಯೊಬ್ಬರಲ್ಲಿ ಬೆಳೆಯುತ್ತಿರುವುದು ವಿಷಾಧಕರ ಸಂಗತಿ. ನಂಬಿ ಆಚರಿಸುವ ನಮ್ಮ ಆಲೋಚನೆಗಳಲ್ಲಿಯೇ ವ್ಯತ್ಯಾಸವಿದೆ. ಆಲೋಚನಾ ವಿಧಾನವನ್ನು ಸರಿಪಡಿಸಿಕೊಂಡರೆ ಆಚರಣಾ ವಿಧಾನವು ತನ್ನಷ್ಟಕ್ಕೆ ತಾನೆ ಸರಿಹೊಂದುತ್ತದೆ. ಉತ್ತಮ ಆಲೋಚನೆ ಮಾಡಿ ಎಲ್ಲರೂ ಮಾನವರಾಗಿ ಬಾಳುವುದನ್ನು ಕಲಿಯಬೇಕಿದೆ.
ಶಾಮಸುಂದರ ಕುಲಕರ್ಣಿ, ಕಲಬುರ್ಗಿ (9886465925)
Subscribe , Follow on
Facebook Instagram YouTube Twitter WhatsApp