ಕಾಮಾಕ್ಷಿ ದೀಪ ಎಂದರೇನು ? ಮತ್ತು ಅದರ ಮಹತ್ವ ಏನು ?. - ಕಾಮಾಕ್ಷಿ ದೀಪ ಎಂದರೆ ಗಜಲಕ್ಷ್ಮಿ ದೇವಿಯ ಚಿತ್ರವಿರುವ ದೀಪವೇ ಗಜಲಕ್ಷ್ಮಿ ದೀಪ ಅಥವಾ ಕಾಮಾಕ್ಷಿ ದೀಪ.
ಈ ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪವೆ೦ದು ಸಹ ಕರೆಯುತ್ತಾರೆ.ಈ ದೀಪದ ಬೆಳಕಿನಲ್ಲಿ ಕಾಮಾಕ್ಷಿ ದೇವಿಯೂ ನೆಲೆಸಿರುವಳು.ಕಾಮಾಕ್ಷಿ ದೇವಿಯು ಸರ್ವ ದೇವತೆಗಳಿಗೆ ಶಕ್ತಿ ಕೊಡುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.
ಆದ್ದರಿಂದಲೇ ಕಾಮಾಕ್ಷಿ ದೇವಸ್ಥಾನವನ್ನು ಬೇರೆ ದೇವಸ್ಥಾನಗಳಿಗಿಂತ ಬೆಳಗಿನ ಜಾವ ಬೇಗನೆ ತೆರೆಯುತ್ತಾರೆ.ಹಾಗೆಯೇ ರಾತ್ರಿಯ ಸಮಯದಲ್ಲಿ ಎಲ್ಲ ದೇವಸ್ಥಾನಗಳ ಬಾಗಿಲು ಮುಚ್ಚಿದ ನಂತರವೇ ಈ ಕಾಮಾಕ್ಷಿ ದೇವಿಯ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ದೇವಿಯ ಅವತಾರವಾದ ಈ ಕಾಮಾಕ್ಷಿ ದೀಪ ಬೆಳಗುವ ಮನೆ ಅಖಂಡ ಐಶ್ವರ್ಯದಿಂದ ಕೂಡಿರುತ್ತದೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಚಿನ್ನದ ಆಭರಣಗಳನ್ನು ವಂಶ ಪರಂಪರೆಯಾಗಿ ಹೇಗೆ ಮುಂದಿನ ಪೀಳಿಗೆ ನೀಡುತ್ತಾರೋ. ಹಾಗೆಯೇ ಇದನ್ನೂ ಸಹ ಜಾಗ್ರತೆಯಿಂದ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬಳುವಳಿಯಾಗಿ ಕೊಡುತ್ತಾರೆ.
ಮನೆಯಲ್ಲಿ ವ್ರತಗಳು, ಗೃಹಪ್ರವೇಶ ಪೂಜೆಯನ್ನು ಮಾಡುವಾಗ ಅಖಂಡ ದೀಪವನ್ನು ಹಚ್ಚಬೇಕು ಎನ್ನುವವರು ಕಾಮಾಕ್ಷಿ ದೀಪವನ್ನು ಹೆಚ್ಚಾಗಿ ಬಳಸುತ್ತಾರೆ.ಹೀಗೆ ಪುರಾಣಗಳಲ್ಲಿ ವ್ರತಗಳಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಕಾಮಾಕ್ಷಿ ದೀಪಗಳನ್ನು ದೀಪಾರಾಧನೆಗೆ ಬಳಸಿದರೆ ಒಳ್ಳೆಯದು. ದೀಪಾರಾಧನೆ ಮಾಡುವಾಗ ದೀಪಕ್ಕೆ ಕುಂಕುಮವನ್ನು ಇಟ್ಟು, ಹೂವನ್ನು ಅರ್ಪಿಸಿ, ದೀಪವನ್ನು ಬೆಳಗಿಸಿ ನಂತರ ಮೊದಲು ದೀಪಕ್ಕೆ ಪೂಜೆ ಮಾಡಬೇಕು ನಂತರ ದೇವರ ಪೂಜೆ ಮಾಡುವುದು ನಮ್ಮ ಸಂಪ್ರದಾಯದ ರೂಢಿಯಲ್ಲಿದೆ .
ಹಾಗೆಯೇ ಕಾಮಾಕ್ಷಿ ದೀಪವನ್ನು ಬಳಸುವಾಗ ಆ ದೀಪಕ್ಕೆ ಕುಂಕುಮ ಇಟ್ಟ ನಂತರ ಅದೇ ಕೈಯಿಂದ ದೇವರ ರೂಪಕ್ಕೂ ಕುಂಕುಮ ಇಟ್ಟು, ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ ಆ ದೀಪವನ್ನು ನೆಲಕ್ಕೆ ತಾಕದಂತೆ ಒಂದು ತಾಮ್ರದ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಇರಿಸಬೇಕು. ಈ ದೀಪವನ್ನು ಎಳ್ಳೆಣ್ಣೆ ಅಥವಾ ಹಸುವಿನ ತಾಜಾ ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು.
ಕಾಮಾಕ್ಷಿ ದೀಪದ ಬತ್ತಿ ಹೇಗೆ ನಿಧಾನವಾಗಿ ಸುಡುತ್ತದೆಯೋ ಹಾಗೆಯೇ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸಹ ನಿಧಾನವಾಗಿ ತೊಲಗಿ ಆಚೆ ಹೋಗುತ್ತದೆ. ಯಾವಾಗಲೂ ದೀಪಾರಾಧನೆ ಮಾಡುವಾಗ ಎರಡು ಬತ್ತಿಗಳು ಸಾಮಾನ್ಯವಾಗಿ ಇರುವಂತೆ ನೋಡಿಕೊಳ್ಳಬೇಕು. ಕಾಮಾಕ್ಷಿ ದೀಪವನ್ನು ಯಾವಾಗಲೂ ಉತ್ತರ ಮತ್ತು ಪೂರ್ವ ದಿಕ್ಕನ್ನು ನೋಡುವಂತೆ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಖಚಿತವಾಗಿ ದೀಪಾರಾಧನೆ ಮಾಡಬಾರದು.
ಈ ದೀಪವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ತೊಳೆಯಬಾರದು. ಪ್ರತಿದಿನ ಬೆಳಗಿನ ಜಾವ ಮತ್ತು ಸಾಯಂಕಾಲದ ಸಮಯದಲ್ಲಿ ಕಾಮಾಕ್ಷಿಯ ದೀಪದಿಂದ ದೀಪಾರಾಧನೆಯನ್ನು ಮನೆಯಲ್ಲಿ ಮಾಡಿದರೆ ಸಕಲ ರೀತಿಯಲ್ಲಿಯೂ ಒಳ್ಳೆಯದಾಗುವುದು.
“ದೇವರ ದೀಪ” ಹಚ್ಚುವಾಗ ಯಾವಾಗಲು ಕುಳಿತು ಹಚ್ಚಬೇಕು..!
“ಮನೆಯಲ್ಲಿ ” ಬೆಣ್ಣೆ” ಕಾಯಿಸಿದ ತುಪ್ಪದಿಂದ ದೇವರಿಗೆ ದೀಪ ಹಚ್ಚಿದರೆ , ಆ ಮನೆಯಲ್ಲಿ ಅಭಿಷ್ಟ ಸಿದ್ಧಿಗಳು ಲಭಿಸುತ್ತವೆ..
ಲಕ್ಷ್ಮೀಕಟಾಕ್ಷ ಎಂದೆಂದೂ ಇರುತ್ತದೆ..!
1. “ತುಪ್ಪದ ದೀಪಗಳನ್ನು” ಸುಬ್ರಹ್ಮಣ್ಯ ಸ್ವಾಮಿ, ಸರ್ಪದೇವತೆಗಳ ಮುಂದೆ ಹಚ್ಚಿದರೆ , ಆ ಕುಟುಂಬದವರಿಗೆ ಎಂದೂ ಸರ್ಪದೋಷಗಳು ಬರುವುದುಲ್ಲ..!
2. “ಮಹಾಗಣಪತಿಗೆ” ೨೧ ದಿನ ತುಪ್ಪದ ದೀಪ ಹಚ್ಚಿದರೆ ನೆನೆದ ಕಾರ್ಯಗಳು ನೆರವೇರುತ್ತವೆ..
3. ದೇವಿ ದೇವಾಲಯಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ “ತುಪ್ಪದ ದೀಪ” ಹಚ್ಚಿ ಪ್ರಾರ್ಥಿಸಿದರೆ “ಕುಜದೋಷ” ನಿವಾರಣೆಯಾಗುತ್ತದೆ..
4. ಶ್ರೀಚಕ್ರ ದೇವತೆಗಳಿಗೆ, ಗಾಯತ್ರೀದೇವಿಗೆ, ಕಾಮಾಕ್ಷಿ ದೇವಿಗೆ, ಮೀನಾಕ್ಷಿ ದೇವಿ, ತ್ರಿಪುರಸುಂದರಿ ದೇವಿ .. ಇತ್ಯಾದಿ ದೇವತೆಗಳಿಗೆ “ತುಪ್ಪದ ದೀಪ” ಹಚ್ಚಿದರೆ “ನೆನೆದ ಕಾರ್ಯಗಳು” ಕ್ಷಿಪ್ರವಾಗಿ ನೆರವೇರುತ್ತವೆ..!
5. ” ಶ್ರೀ ರಾಮನವಮಿ” ದಿವಸ “ಶ್ರೀ ರಾಮಚಂದ್ರ” ದೇವರಿಗೆ “ತುಪ್ಪದ ದೀಪ” ಹಚ್ಚಿ ಯಾರು ಪೂಜಿಸುತ್ತಾರೋ , ಅವರ ಮನೆಯಲ್ಲಿ ಅಣ್ಣ ತಮ್ಮಂದಿರ ಕಲಹಗಳು ಇರುವುದಿಲ್ಲ..!
6. “ಶ್ರೀ ಕೃಷ್ಣಾಷ್ಟಮಿ” ದಿವಸ “ಶ್ರೀ ಕೃಷ್ಣನಿಗೆ” ತುಪ್ಪದ ದೀಪ ಹಚ್ಚಿ , “ಶ್ರೀ ಕೃಷ್ಣ ಸಹಸ್ರನಾಮ” ಹೇಳುತ್ತಾರೋ, ಅವರಿಗೆ ಪುತ್ರ ಸಂತಾನವಾಗುತ್ತದೆ..!
ಮಕ್ಕಳಿರುವವರು ಓದಿದರೆ ಮಕ್ಕಳು ಆರೋಗ್ಯವಾಗಿದ್ದು ಸನ್ಮಾರ್ಗದಲ್ಲಿ ನಡೆಯುತ್ತಾರೆ..!
7. ಯಾರಿಗೆ ಮಕ್ಕಳು ಆಗಿ ಹೋಗುತ್ತಿರುತ್ತವೆಯೋ ಮತ್ತು ಮಕ್ಕಳು ಬದುಕುವುದಿಲ್ಲವೋ, ಅಂಥವರು “ಸಂತಾನ ಗೋಪಾಲಕೃಷ್ಣ” ಸ್ವಾಮಿಗೆ, ತುಪ್ಪದ ದೀಪವನ್ನು ಹಚ್ಚಿ, “ಸಂತಾನಗೋಪಾಲಕೃಷ್ಣ” ಸ್ವಾಮಿಯ ಮೂಲಮಂತ್ರವನ್ನು ಭಕ್ತಿಯಿಂದ “ಜಪ” ಮಾಡಿದರೆ, ಅವರಿಗೆ “ಒಂದು ವರ್ಷದ ಒಳಗೆ ಪುತ್ರಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮಗುವು ಆಯುಷ್ಯವಂತನಾಗಿ ಇರುತ್ತಾರೆ…!
8. ” ಸ್ತ್ರೀ ಸಂತಾನ” ಬೇಕೆಂದು ಅಪೇಕ್ಷೆ ಪಡುವವರು, “ಶ್ರೀ ದುರ್ಗಾ ಸಪ್ತಶತಿ” ಪಾರಾಯಣ ಮಾಡುವಾಗ “ತುಪ್ಪದದೀಪ” ಹಚ್ಚಿ ಪ್ರಾರ್ಥನೆಯನ್ನು ಮಾಡುತ್ತಾರೋ ಅವರಿಗೆ, ಸಂವತ್ಸರದೊಳಗೆ ದೈವಭಕ್ತಳಾದ “ಸ್ತ್ರೀ” ಸಂತಾನವಾಗುತ್ತದೆ…!
9. ಯಾರಿಗೆ “ಸಂತಾನಭಾಗ್ಯ” ಇರುವುದಿಲ್ಲವೋ , ಅಂಥವರು ” ಶ್ರೀ ಷಷ್ಠೀದೇವತೆ” ಪೂಜೆ ಮಾಡಿ , ತುಪ್ಪದ ದೀಪ ಹಚ್ಚಿ, ಷೋಡಶೋಪಚಾರ ಪೂಜೆ ಮಾಡಿ, ಭಕ್ತಿಯಿಂದ ಪ್ರಸಾದ ಸ್ವೀಕರಿಸಿದರೆ, ದೈವಸಂಕಲ್ಪದಿಂದ ಸಂತಾನಭಾಗ್ಯವಾಗುತ್ತದೆ.
10. ಇಷ್ಟದೇವತೆ ಮತ್ತು ಕುಲದೇವತೆಯ ಮುಂದೆ ಯಾರು ತುಪ್ಪದ ದೀಪ ಹಚ್ಚಿ ಪೂಜಿಸುತ್ತಾರೋ, ಅವರ ಮನೆಯು ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ..
11. ನವರಾತ್ರಿ ಸಮಯದಲ್ಲಿ ದೇವಿಗೆ ತುಪ್ಪದ ದೀಪ ಹಚ್ಚಿ ಯಾರು ಪೂಜಿಸುತ್ತಾರೋ, ಅವರಿಗಿರುವ ಸಕಲ ಶತೃಕಾಟವು ನಿವಾರಣೆಯಾಗುತ್ತದೆ.. ಸಕಲ ದುಃಖಗಳಿಂದ ಬಿಡುಗಡೆ ಹೊಂದುತ್ತಾರೆ..
12. ಆಶ್ವೀಜ ಮಾಸ , ಕೃಷ್ಣಪಕ್ಷ, ಅಮವಾಸ್ಯೆಯ ದಿವಸ(ದೀಪಾವಳಿ ಅಮಾವಾಸ್ಯೆ) ಯಲ್ಲಿ ಯಾರು ಸಾಯಂಕಾಲ “ಗೋಧೂಳಿ” ಲಗ್ನದಲ್ಲಿ “ಶ್ರೀಮಹಾಲಕ್ಷ್ಮೀ” ದೇವಿಗೆ ತುಪ್ಪದ ದೀಪ ಹಚ್ಚಿ , ಶಾಸ್ತ್ರೋಕ್ತವಾಗಿ ಪೂಜಿಸಿ, ಸಿಹಿ ತಿಂಡಿ ನೈವೇದ್ಯ ಮಾಡಿ, ಮಕ್ಕಳಿಗೆ ಹಂಚುತ್ತಾರೋ, ಅಂಥವರಿಗೆ ಮತ್ತು ಆ ಮನೆಯವರಿಗೆ, ವರ್ಷಪೂರ್ತಿ ಹಣಕಾಸಿನ ಸಮಸ್ಯೆ ಬರದೆ ನೆಮ್ಮದಿಯಾಗಿ ಜೀವನ ಮಾಡುತ್ತಾರೆ..
ಓಂ ಅಸತೋಮ ಸದ್ಗಮಯ,
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿ
ದೀಪ ಎಂದರೆ ಶಾಂತಿ, ದೀಪ ಎಂದರೆ ಸಮೃದ್ಧಿ, ದೀಪ ಎಂದರೆ ಬೆಳಕು, ದೀಪ ಎಂದರೆ ಆರೋಗ್ಯ, ದೀಪ ಎಂದರೆ ಸಂಪತ್ತು, ದೀಪ ಎಂದರೆ ಪ್ರಖರತೆ.. ಹೀಗೆ ದೀಪ ಜೀವನದ ಒಂದು ಸಕಾರಾತ್ಮಕ ಬೆಳವಣಿಗೆ. ಇಂಥಹ ದೀಪವನ್ನು ಬೆಳಗಿಸುವುದು ದಿನವೂ ನಿಮ್ಮ ಜೀವನಕ್ಕೊಂದು ಸಂತೋಷ, ನೆಮ್ಮದಿ, ಶಾಂತಿಯನ್ನು ತರಬಲ್ಲುದು.
ದೇವರ ಧ್ಯಾನ, ಪ್ರಾರ್ಥನೆಯಲ್ಲಿ ದೊಡ್ಡ ಶಕ್ತಿಯಿದೆ. ಪ್ರಾರ್ಥನೆಯ ಮೂಲಕ ತನ್ನ ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಶಾಂತಿ, ಸೌಭಾಗ್ಯ ದೊರೆಯುತ್ತದೆ. ಮನೆಯಲ್ಲಿ ದೀಪ ಹಚ್ಚುವುದರಿಂದ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಕ್ಕೆ ಮಹತ್ವದ ಪ್ರಾಮುಖ್ಯತೆ ಇದೆ. ಯಾವುದೇ ಕಾರ್ಯಕ್ರಮ ಅಥವಾ ಪೂಜಾ ಕೈಂಕರ್ಯಗಳನ್ನು ನಡೆಸಬೇಕಾದರೆ ಆ ಕಾರ್ಯಕ್ರಮ, ಪೂಜೆ ನಡೆಯುವುದು ದೀಪ ಬೆಳಗುವ ಮೂಲಕವೇ. ಮನೆಯಲ್ಲಿ ದೀಪ ಹಚ್ಚುವುದರಿಂದ ಅಲ್ಲಿನ ವಾತಾವರಣ ಶಾಂತಿ, ನೆಮ್ಮದಿ ಹಾಗೂ ಧನಾತ್ಮಕ ಚಿಂತನೆಗಳು ಹೆಚ್ಚುತ್ತದೆ, ಇದು ವೈಜ್ಞಾನಿಕವಾಗಿಯೂ ಧೃಢವಾಗಿದೆ.
*ಸರ್ವೇಜನಾ ಸುಖಿನೋಭವಂತು ಕೃಷ್ಣಾರ್ಪಣಮಸ್ತು*
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter X WhatsApp