-->

ಆಚಾರ ವಿಚಾರ - ದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಯಾಕೆ ಶ್ರೇಷ್ಟ ನೈವೇದ್ಯ? Why Banana and coconut offering at temples


🍌🍌🍌🍌🍌🍌🍌🍌🍌🍌🍌🍌🍌🍌

ದೇವಸ್ಥಾನಕ್ಕೆ ಹೋಗವಾಗ *ಬಾಳೆಹಣ್ಣು* ಮತ್ತೆ *ತೆಂಗಿನಕಾಯಿ* ಯಾಕೆ ತೆಗೆದುಕೊಂಡು ಹೋಗುತ್ತೇವೆ?

ದೇವರಿಗೆ ಈ *ಬಾಳೆಹಣ್ಣು* ಮತ್ತು *ತೆಂಗಿನಕಾಯಿ* ಏಕೆ ಶ್ರೇಷ್ಠ?

ಬೇರೆ ಯಾವ ಹಣ್ಣನ್ನೂ ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ?

ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ *ಬಾಳೆ ಹಣ್ಣು* ನಿವೇದಿಸುತ್ತಾರೆ ಹಾಗೆಯೇ *ತೆಂಗಿನಕಾಯಿ* ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯವೇನು? 
 
Why Banana and coconut offering at temples



ಹೆಚ್ಚಾಗಿ ನಾವು ಒಂದು ಹಣ್ಣನ್ನು ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.

ಆದರೆ *ಬಾಳೆಹಣ್ಣ* ನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ *ಬಾಳೆಹಣ್ಣನ್ನೇ* ಹಾಗೇ ಎಸೆದರೂ ಅದು ಮತ್ತೆ ಬೆಳೆಯುವುದಿಲ್ಲ. *ತೆಂಗಿನಕಾಯಿ* ಯೂ ಅಷ್ಟೆ, ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ.

ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ *ಜನ್ಮವಿಲ್ಲದ ಮುಕ್ತಿ* ಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು. ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.

ಅಷ್ಟೇ ಅಲ್ಲ, ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ; ತೆಂಗಿನ ಮರ ಉಪಯೋಗಿಸದ ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.*

*ಪರಿಶುದ್ಧ* ವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ ಎಂಬ ತತ್ವವು ಇದರಲ್ಲಿದೆ.

ಇನ್ನೂ ಹೇಳಬೇಕೆಂದರೆ, *ಬಾಳೆ* ಮತ್ತು *ತೆಂಗಿನ* ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ ಎಲ್ಲರಿಗೂ ಉಪಯುಕ್ತವಾಗಿವೆ. ಹಾಗೆಯೇ ಬೇರೆಯವರಿಗೆ ಸಹಾಯ ಮಾಡುವುದೇ ನಮ್ಮ ಜನ್ಮಕ್ಕೆ ಸಫಲತೆ ನೀಡುವುದು ಎಂಬ ಗೂಢಾರ್ಥವಿದೆ.

ತೆಂಗಿನ ಕಾಯಿಯನ್ನು ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷವೂ ಕೂಡ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಆ ಶಕ್ತಿ ತೆಂಗಿನಕಾಯಿಗೆ ಇದೆ. ಆದಕಾರಣ *ತೆಂಗಿನಮರ* ವನ್ನು *ಕಲ್ಪವೃಕ್ಷ* ಎಂದು ಕರೆಯುತ್ತಾರೆ.

ನಮ್ಮ *ಸಂಪ್ರದಾಯ* ದಲ್ಲಿ ಇಷ್ಟೊಂದು ಅರ್ಥವಿರುವುದು ನಮ್ಮ *ಭಾರತದ ಪರಂಪರೆ* ಯ ಘನತೆಗೆ ಸಾಕ್ಷಿಯಾಗಿದೆ.

🌺🌻#ನಿಮ್ಮ_*ದೇವರು_ನೈವೇದ್ಯ*
#ತಿನ್ನುವರೇ?🌺🌻

*"ಒಂದು ಅದ್ಭುತ ವಿಚಾರದ ವಿಶ್ಲೇಷಣೆಯ ಸಂವಾದ ಈ ಕೆಳಗಿದೆ. ಓದಿ ಅನುಭವಿಸಿ ಮತ್ತು ಆನಂದಿಸಿ"*

*#ನೈವೇದ್ಯ* :- ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?

ಇದು ನಂಬಿಕೆಯಿಲ್ಲದವರ ಪ್ರಶ್ನೆ. ಇದಕ್ಕೆ ಉತ್ತರವೆನ್ನು -ವಂತೆ ಒಂದು ಸೂಕ್ತ ವಿವರಣೆ ನೀಡುವ ಪ್ರಾಮಾಣಿಕ ಪ್ರಯತ್ನ.
🌹"*"*"*"*🌺"*"*"*"*"*🌻"*"*'*"*🌷"*"*"*"*🌼

"" #ಒಬ್ಬ_*ಗುರು* ಮತ್ತು *#ಶಿಷ್ಯರ*_ಸಂವಾದ_ಹೀಗೆ #ನಡೆದಿತ್ತು.""

ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು *"ದೇವರು* ನಾವು ಮಾಡುವ *ನೈವೇದ್ಯ* ವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು *"'ಪ್ರಸಾದ"'* ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ.

ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ ತಯಾರಾಗಲು ಆದೇಶಿಸಿದರು.

*ಆ ದಿನ ಗುರುಗಳು '"ಉಪನಿಷತ್ತು'"* ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' *#ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ......* ಎಂಬ ಮಂತ್ರದ ಬೋಧನೆಯನ್ನು ಮಾಡಿ, *ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ,* ಎಂದು ವಿವರಿಸಿದರು.

ನಂತರ ಎಲ್ಲರಿಗೂ *#ಈಶಾವಾಸ್ಯೋಪನಿಷತ್* ನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರು ದಿನಗಳ ಸತತ ಅಭ್ಯಾಸದ ನಂತರ, ಗುರುಗಳು ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳುವಂತೆ, ಅಜ್ಞಾಪಿಸಿದರು. ಆ ಶಿಷ್ಯ ಕಂಠಸ್ಥ ಹೇಳಿ, ಒಪ್ಪಿಸಿದ.

ಆಗ ಗುರುಗಳು ಮುಗುಳುನಗುತ್ತಾ ''ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. 'ಹೌದು' ಗುರುಗಳೇ ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ ಎಂದು ಉತ್ತರಿಸಿದ.

"ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು, "ನಿನ್ನ ಮನಸ್ಸಿನಲ್ಲಿರುವ ಪದಗಳು ' *ಸೂಕ್ಷ್ಮ ಸ್ಥಿತಿ* ಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು ' *#ಸ್ಥೂಲಸ್ಥಿತಿ* ಯಲ್ಲಿವೆ ಎಂದರು.

ಹಾಗೆಯೇ ಆ ದೇವರೂ ಸಹ ' *#ಸೂಕ್ಷ್ಮಸ್ಥಿತಿ* ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ *'ಸ್ಥೂಲ ಸ್ಥಿತಿ'* ಯಲ್ಲಿದೆ. ಆದ್ದರಿಂದ *ಸೂಕ್ಷ್ಮ ಸ್ಥಿತಿ* ಯಲ್ಲಿರುವ ಆ ದೇವರು *ಸೂಕ್ಷ್ಮಸ್ಥಿತಿ* ಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ *ನೈವೇದ್ಯ* ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.

"ನಾವು ಮಾಡಿದ ನೈವೇದ್ಯವನ್ನು ಆ ದೇವರು *#ಸೂಕ್ಷರೂಪದಲ್ಲಿ* ಸ್ವೀಕರಿಸುತ್ತಾನೆ, ನಂತರ ನಾವು ಆ *ನೈವೇದ್ಯ* ವನ್ನೇ *#ಪ್ರಸಾದ*' ವೆಂದು *ಸ್ಥೂಲರೂಪ* ದಲ್ಲಿ ಪಡೆಯುತ್ತೇವೆಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ  *"ದೇವರಲ್ಲಿ"* ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಳಗಿನ ವಿಷಯಗಳನ್ನು ಗಮನಿಸಿ.

🌻ನಾವು ಉಣ್ಣುವ ಆಹಾರದಲ್ಲಿ *#ಭಕ್ತಿ* ಹೊಕ್ಕರೆ 
ಅದು ' *#ಪ್ರಸಾದ* ವಾಗುತ್ತದೆ.....

🌺ನಮ್ಮ ಹಸಿವಿಗೆ *#ಭಕ್ತಿ* ಹೊಕ್ಕರೆ 
ಅದು  *#ಉಪವಾಸ* ವಾಗುತ್ತದೆ......

🌻ನಾವು *#ಭಕ್ತಿ* ಯಿಂದ ಕುಡಿದರೆ ಅದು *#ಚರಣಾಮೃತ* ವಾಗುತ್ತದೆ......

🌹ನಮ್ಮ ಪ್ರಯಾಣ *#ಭಕ್ತಿ* ಪೂರ್ಣವಾದರೆ
ಅದು *#ತೀರ್ಥಯಾತ್ರೆ* ಯಾಗುತ್ತದೆ.......

🍁ನಾವು ಹಾಡುವ ಸಂಗೀತ *ಭಕ್ತಿ* ಮಯವಾದರೆ 
ಅದು *#ಕೀರ್ತನೆ* ಯಾಗುತ್ತದೆ......

🌼ನಮ್ಮ ವಾಸದ ಮನೆಯೊಳಗೆ *ಭಕ್ತಿ* ತುಂಬಿದರೆ, ನಮ್ಮ ಮನೆಯೇ *#ಮಂದಿರ* ವಾಗುತ್ತದೆ.......

🌽ನಮ್ಮ "ಕ್ರಿಯೆ" *#ಭಕ್ತಿ'* ಪೂರಿತವಾದರೆ, ನಮ್ಮ 'ಕಾರ್ಯಗಳು' *#ಸೇವೆ* ಯಾಗುತ್ತವೆ.....

🌳ನಾವು ಮಾಡುವ ಕೆಲಸದಲ್ಲಿ *ಭಕ್ತಿ* ಇದ್ದರೆ
ಅದು ನಮ್ಮ *#ಕರ್ಮ* ವಾಗುತ್ತದೆ.....

🍂ನಮ್ಮ ಹೃದಯದಲ್ಲಿ *ಭಕ್ತಿ* ತುಂಬಿದರೆ ನಾವು *ಮಾನವ* ರಾಗುತ್ತೇವೆ.....

🙏ನಮ್ಮ ವಿಚಾರವಿನಿಮಯದಲ್ಲಿ *ಭಕ್ತಿ* ಇದ್ದರೆ, ಅದು *#ಸತ್ಸಂಗ* ವಾಗುತ್ತದೆ.....
 
- ಓದುಗರ ಲೇಖನ


Terms | Privacy | 2024 🇮🇳
–>