💟ಯಾರೇ ಆಗಿರಲಿ ಮಗಳು ಮದುವೆಯಾಗಿ ಹೋದ ಮನೆಯಲ್ಲಿ ಚೆನ್ನಾಗಿರಬೇಕೆಂಬುದು ಪ್ರತಿ ಯೊಬ್ಬ ಹೆತ್ತವರ ಆಸೆ. ಆದರೆ ಅತಿಯಾಸೆ ಎಷ್ಟು ಸರಿ? ಬರೋ ಅಳಿಯ ಇಂಜನೀಯರ್ರೇ ಆಗಿರಬೇಕಾ? ಡಾಕ್ಟರೇ ಆಗಬೇಕಾ? ಅವರನವನ ಬಿಟ್ಟು ಉಳಿದ ಹುಡುಗರು ಮನುಷ್ಯರಲ್ಲವಾ? ಅವರಿಗೂ ಒಂದು ಮನಸು ಅನ್ನೊದಿಲ್ವಾ? ನಮಗಿಂತ ಹೆಚ್ಚು ಶ್ರೀ ಮಂತರನ್ನ ನೋಡಿ ಮಗಳನ್ನ ಮದುವೆ ಮಾಡಿಕೊಟ್ಟರೆ ಒಂದಲ್ಲ ಒಂದು ದಿನ ನಮ್ಮ ಹೆತ್ತವರಿಗೋ,ಸ್ವತಃ ಮಗಳಿಗೋ ಹೇಳಲಾಗದ ಅವಮಾನವನ್ನು ಅನುಭವಿಸುವ ಪರಿಸ್ಥಿತಿ ಬಂದರೂ ಆಶ್ಚರ್ಯವೇನಿಲ್ಲ.
💟ಯಾಕೆಂದರೆ ಎಲ್ಲರೂ ಒಳ್ಳೆಯವರು ಇರುತ್ತಾರೆ ಎನ್ನುಂತಿಲ್ಲ. ಇಂಜನಿಯರ್,ಡಾಕ್ಟರ್ , ಅವರನ್ನು ಬಿಟ್ಟು ಉಳಿದ ಹುಡುಗರು ಮನುಷ್ಯರಲ್ಲವಾ? ಅವರಿಗೂ ಒಂದು ಮನಸು ಅನ್ನೊದಿಲ್ವಾ? ತಿಂಗಳಿಗೆ ಲಕ್ಷಗಟ್ಟಲೇ ದುಡ್ಡು ಬರಬೇಕಾ? ಹುಡುಗಿ ಕಡೆಯವರ ಇತ್ತೀಚಿನ ಅಪೇಕ್ಷೆಗಳು,ಬೆಂಗಳುರಲ್ಲಿ ಸ್ವಂತ ಮನೆ ಇರಬೆಕು.ಲಕ್ಷಗಟ್ಟಲೆ ದುಡ್ಡಿರಬೇಕು.ಮನೆಲಿ ಅತ್ತೆ ಮಾವ ನಾದಿನಿ ಇವರ್ಯಾರೂ ಇರಬಾರದು.ಇದ್ದರೂ ಬೇರೇನೇ ಇರಬೇಕು. ಈ ಥರ ವಿಚಾರಗಳು ಹುಡುಗೀರ ತಲೇಲಿ ತುಂಬ್ತಿರೋರು ಹೆತ್ತವರೇ ಅಲ್ವಾ? ಯಾಕೆ ಹೀಗಾದ್ರು ಅಂತ ಅರ್ಥವೇ ಆಕ್ತಿಲ್ಲ. ಮಾತಿಗೆ ಬಂದಾಗ ಯಾರಿಗೇ ಕೇಳಿ ನೋಡಿ ನಮ್ಮ ಮನೆಲಿ ವರ ಇದ್ದಾನೆ ,ಒಂದು ಹುಡುಗಿ ಇದ್ದರೆ ತಿಳಿಸಿ ಎಂದು ಸಹಜವಾಗಿ ಹೇಳಿದರೆ ಸಾಕು.
💟ನಮ್ಮ ಹುಡುಗ ಮಾಸ್ತರ್ ನೌಕ್ರಿ ಮಾಡ್ತಿದಾನೆ ಅಂತಲೋ,ಕ್ಲರ್ಕ ಆಗಿದಾನೆ ಅಂತಲೋ,ದೇವಸ್ಥಾನ ದ ಮ್ಯಾನೇಜರ್ ಆಗಿದಾನೆ ಅಂತಲೋ,ಹೇಳಿದರೆ ಸಾಕು , ಅಯ್ಯೋ ಎಲ್ಲಿ ಕನ್ಯ ರೀ? ಎಂತೆಂಥ ಇಂಜನೀಯರು ಡಾಕ್ಟರುಗಳಿಗೇ ಸಿಕ್ತಿಲ್ಲ ಇನ್ನು ಇವರಿಗೇನು ಸಿಗುತ್ತೆ ಕನ್ಯ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ.ಹೀಗೆ ಹೇಳಬೇಕಾದರೆ ಬೇರೆಯವರ ಮನಸ್ಸಿಗೆ ನೋವಾಗುತ್ತದೆ ಅನ್ನುವ ಪರಿಜ್ಞಾನವೂ ಇಲ್ಲದವರಿಗೆ ಇತರರ ಮನಸ್ಸಿನ ಸಂಕಟ,ನೋವು,ಎಲ್ಲಿ ಅರ್ಥವಾಗುತ್ತದೆ. ಮಕ್ಕಳನ್ನು ಸಾಲಸೋಲ ಮಾಡಿ ,ವಿಪರೀತ ಓದಿಸಿಬಿಡುವುದು.ಅವರು ಹೆತ್ತವರ ಜೊತೆ ಇರಬೇಕಾದ ಸಮಯದಲ್ಲಿ ವಿದೆಶಕ್ಕೆ ಹಾರಿಬಿಡುವುದು.ಹೆತ್ತವರು ಮಕ್ಕಳಿದ್ದರೂ ಅನಾಥರಂತೆ ದೊಡ್ಡ ಮನೆಯಲ್ಲಿ ಬಿಕೋ ಎನ್ನುವಂತೆ ಒಂಟಿ ಪಿಶಾಚಿಗಳಂತೆ,ಯಾಂತ್ರಿಕ ವಾಗಿ ಬದುಕುವುದು.ಈ ಸಂಭ್ರಮ ಕ್ಕೆ ಯಾಕೆ ಬೇಕು ಹೆಚ್ಚಿನ ಓದು ಬರಹ ಓದಲಿ.ಓದುವುದಕ್ಕೆ ಬೇಡ ಅನ್ನುತ್ತಿಲ್ಲ.ಹೆಣ್ಣು ಹೆತ್ತವರು ಕಷ್ಟ ಸುಖ ಗೊತ್ತಿದ್ದು ,ಒಳ್ಳೆಯ ಪರಿಸರದಲ್ಲಿ ಬೆಳೆದು,ಉತ್ತಮ ಸಂಸ್ಕಾರ ಹೊಂದಿದವರಿಗೆ ಈ ಮಾತು ಅನ್ವಯವಾಗುವುದಿಲ್ಲ. ಶ್ರಿಮಂತಿಕೆಯ ಭ್ರಮೆಯಲ್ಲಿರುವವರಿಗೆ ಮಾತ್ರ ಈ ಮಾತು.
💟ಇದೆಲ್ಲದರ ಆಚೆಗೆ ನಿಂತು ಬರೀ ದುಡ್ಡಿನ ಸುರಿಮಳೆಯಲ್ಲೇ ಮಗಳು ತೇಲಾಡಬೇಕು.ಮೈಮುರಿದು ಮನೆಗೆಲಸ ಮಾಡಬಾರದು.ಅರಾಮಾಗಿ ಕುಳಿ ತಲ್ಲೇ ಮೂರು ಹೊತ್ತು ತಿಂದು ತೇಗಿ ಬರದೇ ಇರುವ ಜಡ್ಡುಗಳನ್ನೆಲ್ಲ ಬರಿಸಿಕೊಂಡು,ಮತ್ತೆ ಡಾಕ್ಟರ್ ಹೇಳಿದ ಹಾಗೆ ಅನ್ನ ಬಿಟ್ಟು, ಎಣ್ಣೆ ಹಚ್ಚದ ಒಣ ಚಪಾತಿ ತಿನ್ನಿ ,ಅಂತ ಸಾವಿರಾರುಗಟ್ಟಲೇ ಫೀಸು ತಗೊಂಡು ಐಷಾರಾಮಿ ಕಾರ ಲ್ಲಿ ಓಡಾಡುತ್ತಾ ಇದ್ದರೆ ಅದೇ ಸುಖ ಇವರಿಗೆ. ಈ ಸುಖ ಬಯಸುವ ಹೆತ್ತವರು ಮಕ್ಕಳನ್ನು ಇಂಜನೀಯರ್ರು,ಡಾಕ್ಟರು,ಅಂತ ಮಕ್ಕಳ ತಲೇಲಿ ತುಂಬುತ್ತಿರುವುದಕ್ಕೆ ಮದುವೆ ಮುಗಿದ ಸ್ವಲ್ಪ ದಿನಗಳಿಗೇ ಡೈವೋರ್ಸಗಳಾಗುತ್ತಿರೋದು.ಹೊಂದಿಕೊಂಡು ಬಾಳುವುದನ್ನು ಕಲಿಸುವ ತಂದೆತಾಯಿ ಯಾವತ್ತೂ ಈ ರೀತಿ ವಿಚಾರ ಮಾಡಲು ಸಾಧ್ಯವಿಲ್ಲ. ಕೆಲಸಕ್ಕೆ ಹೋಗುವಳಾಗಿದ್ದರೆ ಅವಳೂ ಇಡೀ ದಿನ ದುಡಿದು ಮನೆಗೆ ಪರಕೀಯರಂತಾಗಿ ಬಂದು ಬ್ರೆಡ್ಡು ಜಾಮು ತಿಂದು ಮಲಗಬೇಕು.
ಇನ್ನು ಹಬ್ಬವೆಲ್ಲಿ? ಹರಿದಿನವೆಲ್ಲಿ?
💟ಮನೆಯವರೊಡನೆ ಬೆರೆತಾಗಲೇ ಕಷ್ಟ ಸುಖ,ಪ್ರೀತಿ ಕಾಳಜಿಯ ಅರಿವಾಗುವುದು. ಅದಕ್ಕೇ ಆಸ್ಪದವಿಲ್ಲದಿದ್ದರೆ? ಇಲ್ಲ ಬಡವರ ಮನೆ ಹುಡುಗಿಯೋ,ಮಧ್ಯಮ ವರ್ಗದ ಮನೆಯ ಹುಡುಗಿಯೋ ಆಗಿದ್ದು ಕೆಲಸಕ್ಕೆ ಹೋಗದಿದ್ದರೆ ಇಡೀ ದಿನ ಅವಳು ಒಬ್ಬಂಟಿಯಾಗೇ ಕಾಲ ಕಳಿಬೇಕು.ಟಿ.ವಿ.ಫ್ರಿಜ್ಜು.ಐಷಾರಾಮಿ ವಸ್ತುಗಳೊಂದಿಗೆ ಸಂಸಾರ ಮಾಡಲು ಆಗುತ್ತದಾ? ನೆಮ್ಮದಿಯಿಂದ ಬದುಕಲು ಆಗುತ್ತದಾ? ಶ್ರೀಮಂತಿಕೆ ಇದ್ದರೆ ಮಾತ್ರ ಸುಖವಾಗಿರುತ್ತಾಳೆ ಎನ್ನುವುದು ನಿಜವಾಗಿಯೂ ಮೂರ್ಖತನದ ಪರಮಾವಧಿ. ಎಲ್ರಿಗೂ ಇಂಜನೀಯರೇ ಬೇಕು ಅಂದ್ರೆ ಉಳಿದವರೆಲ್ಲ ಮನುಷ್ಯರಲ್ವಾ? ಹಳ್ಳಿಯಲ್ಲಿ ಕಷ್ಟಪಟ್ಟು ಬೆಳೆದಿರುವ ಹುಡುಗರು,ಹೊಲ ಮನೆ ನೋಡಿಕೊಂಡು ಹೋಕ್ತಿರುವ ಹುಡುಗರು,ವಿದ್ಯಾಪೀಠ ದಂತಹ ಗುರುಕುಲ ಪದ್ಧತಿಯಲ್ಲಿ ಓದಿ ಬೆಳೆದ ಹುಡುಗರು ,ಅಡಿಗೆ ಗುತ್ತಿಗೆದಾರರು,ಮೆಡಿಕಲ್ ರೆಪ್ರೆಸೆಂಟೇಟಿವ್ಸ್, ಈ ಎಲ್ಲ ಕೆಲಸ ಮಾಡೊರಿಗೆ ಬೆಲೇನೇ ಇಲ್ವಾ? ಹೆತ್ತವರನ್ನ,ಒಡಹುಟ್ಟಿದವರನ್ನ ಚೆನ್ನಾಗಿ ನೋಡಿಕೊಂಡು ಹೋಗುವ ಹುಡುಗರು, ಸಂಸ್ಕ್ರತಿ, ಸಂಪ್ರದಾಯದೊಂದಿಗೆ ಕಿರಿಕಿರಿಯಾಗದಂತೆ ಸಂಸಾರವನ್ನು ತೂಗಿಸಿಕೊಂಡು ಹೋಗುವ ಷ್ಟು ಸಮರ್ಥರಿರುತ್ತಾರೆ. ಹೆಂಡತಿ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ.
💟ದುಡ್ಡಿರುವ ಇಂಜನೀಯರ್ ಮಾತ್ರ ಹೆಂಡತಿ ಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬುದು ನಿಜಕ್ಕೂ ಮೂರ್ಖತನ. ಇತ್ತೀಚಿನ ದಿನಗಳಲ್ಲಿ ಕಂಡಂತೆ ಹುಡುಗಿಯರೇ ಬೇರೆ ಜಾತಿಯವರ ಹುಡುಗರೊಂದಿಗೆ ಶೋಕಿಗಾಗಿ ತಿರುಗಾಡಿ.ಪ್ರೀತಿ ಎನ್ನುವ ಹೆಸರು ಕೊಟ್ಟು ಐಷಾರಾಮಿ ಬದುಕಿನ ಆಸೆಗಾಗಿ ಓಡಿಹೋದವರಿದ್ದಾರೆ.ಜೀವನ ಹಾಳು ಮಾಡಿಕೊಂಡು ಬಂದವರಿದ್ದಾರೆ.ಹೆತ್ತವರ ಮನಸ್ಸಿಗೆ ನೋವು ಕೊಟ್ಟು ಮದುವೆ ಆದ ಎಷ್ಟೋ ಉದಾಹರಣೆಗಳಿವೆ. ಇನ್ನು ಕೆಲ ಹುಡುಗಿಯರು ಸುಖಾಸುಮ್ಮನೆ ಹುಡುಗರನ್ನು ಕೆಣಕುವುದು.ಅಥವಾ ಅವರ ಮನಸ್ಸು ಕೆಡಿಸುವುದು.
💟ಸಲಿಗೆಯಿಂದ ತಾವಾಗೇ ಮಾತಾಡಿ ಹುಡುಗರಲ್ಲಿ ಇಲ್ಲ ಸಲ್ಲದ ಆಸೆಗಳನ್ನು ತುಂಬಿ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ ಈ ಹುಡುಗಿಯರಿಗೆ ಹೆತ್ತವರ ನೆನಪಾಗುತ್ತದೆ.ಅಷ್ಟೊತ್ತಿಗೆ ಹುಡುಗರ ಮನಸ ಹ್ಸು ಮದುವೆಯ ಆಶಾಗೋಪುರ ಕಟ್ಟಿಕೊಂಡಾಗಿರುತ್ತದೆ. ಈ ವಿಷಯದಲ್ಲಿ ಲೆಕ್ಕ ಹಾಕಿದರೆ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ಜವಾಬ್ದಾರಿ ಯಿಂದ ನಡೆದುಕೊಳ್ಳುವುದು. ಅದಕೆ ಕಾರಣವೂ ಇದೆ. ಹುಡುಗರು ವಾಸ್ತವದ ಸತ್ಯ ಅರಿತವರಾಗಿರುತ್ತಾರೆ.ಮದುವೆ,ಬಯಕೆ, ಬಾಣಂತನ,ಮಕ್ಕಳು,ಅವರ ಲಾಲನೆ ಪಾಲನೆ ಎಲ್ಲ ವಿಷಯಗಳ ಜವಾಬ್ದಾರಿ ಸಾಮಾನ್ಯವಲ್ಲ ಅದಕ್ಕೆ ಮನೆ,ತಂದೆ ತಾಯಿ ಎಲ್ಲರ ಸಹಾಯ ಸಹಕಾರ ಬೇಕಾಗುತ್ತದೆ,ಅದೇ ಸಂಸಾರ ಎನ್ನುವ ಸರ್ವಸಾಮಾನ್ಯವಾದ ತಿಳುವಳಿಕೆಯನ್ನು ಹೊಂದಿದವರಾಗಿರುತ್ತಾರೆ.
💟ಹುಡುಗರನ್ನು ಹುಚ್ಚು ಮಾಡುವಾಗ,ಅವರ ಹಿಂದೆ ಬಿದ್ದು ಅವರ ತಲೆ ಕೆಡಿಸಿ.ಅವರಿಂದ ತಮಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುವಾಗ ಈ ಹುಡುಗಿಯರಿಗೆ ಹೆತ್ತವರ ಭಯ.ಚಿಂತೆ ಇರುವುದಿಲ್ಲ.ಮದುವೆ ವಿಷಯ ಬಂದಾಕ್ಷಣ ಹೆತ್ತವರ ಮನಸಿಗೆ ನೋವು ಕೊಡಲು ನಾವು ತಯಾರಿಲ್ಲ.ಅವರು ತೋರಿಸಿದ ಕಡೆಯೇ ಮದುವೆಯಾಗುತ್ತೇವೆ.
💟ಎಂದು ಹೇಳಿ ಜಾರಿಕೊಂಡರೆ ಅದು ಪ್ರೀತಿ ಎನಿಸುತ್ತದೆಯಾ? ಸುಮ್ಮನೆ ಹುಡುಗರ ಮನಸ್ಸು ಹಾಳು ಮಾಡಿದರೆ .ಮಗನನ್ನೇ ನಂಬಿರುವ ಮನೆಯವರ ಗತಿ ಏನಾಗಬಹುದು?
💟ವರ ಕನ್ಯ ಅನ್ವೇಷಣೆಯ ವಿಷಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಈ ಘಟನೆ ಗಳು ಬಹಳ ಜನರಿಗೆ,ನೋವುಂಟು ಮಾಡುತ್ತಿವೆ. ಇರಲಿ ನಮ್ಮ ಮಕ್ಕಳು.ನಮ್ಮಿಷ್ಟ.ಯಾರು ಬೇಡ ಎನ್ನುತ್ತಾರೆ? ನಾಳೆ ಏನಾದರೂ ಹೆಚ್ಚು ಕಮ್ಮಿಯಾದರೆ ನಮ್ಮ ಮಕ್ಕಳಿಗೆ ನಾವೇ ಜವಾಬ್ದಾರಿ ಹೊರುತ್ತೇವೆ.
💟ಸಾಮಾನ್ಯ ಹುಡುಗರೂ ಸಹ ,ಜೀವನ ಮಾಡಲು ಅವಶ್ಯಕತೆ ಗೆ ತಕ್ಕಷ್ಟು ದುಡ್ಡು ಬೇಕು.ಇನ್ನೂ ಸ್ವಲ್ಪ ಐಷಾರಾಮಿ ಬಯಸಿದರೆ ಅದೂ ತಪ್ಪಲ್ಲ .ಮನೆಗೆ ಬೇಕಾದ ಅವಶ್ಯಕತೆ ಇರುವ ಎಲ್ಲ ವಸ್ತುಗಳನ್ನು ಬಹಳ ಸಂತೋಷ ದಿಂದಲೇ ತಂದುಕೊಡುತ್ತಾರೆ.
💟ಇಂಜನೀಯರು ಡಾಕ್ಟರುಗಳಿಗಿಂತ ಜೀವನವನ್ನು ಅತಿ ಹತ್ತಿರದಿಂ ದ,ಅನುಭವಿಸಿ,ಹೆಂಡತಿ ಯ ಪ್ರತಿ ಹೆಜ್ಜೆಯಲ್ಲೂ ತಾವಿದ್ದು ಅವಳ ಸಂತೋಷ ದಲ್ಲಿ ತಾವು ಸಂಭ್ರಮ ಕಾಣುತ್ತಾ ಸಂಸಾರದ ನೊಗವನ್ನು ಹೊತ್ತು ನೋವು ಮರೆತು ನಗುನಗುತ್ತಾ,ನಗಿಸುತ್ತಾ ಬದುಕುವುದು ಮಧ್ಯಮ ವರ್ಗದ ಹುಡುಗರೇ.ಅವರಿಂದಲೇ ಸುಖಸಂಸಾರ ಸಾಧ್ಯ. ಹೆಂಡತಿ ಯ ಪ್ರತೀ ಕಷ್ಟ ಸುಖಗಳಲ್ಲಿ,ಸಣ್ಣಪುಟ್ಟ ಕೆಲಸಗಳಲ್ಲಿ ಭಾಗಿಯಾಗುವ ಪ್ರೀತಿ,ಮನಸ್ಸು, ಮಾನವೀಯತೆ,ಇರುವುದು ಇಂತಹ ಹುಡುಗರಲ್ಲಿಯೇ ಹೆಚ್ಚಾಗಿರುವುದು.ಇದರಲ್ಲಿ ಯಾವ ಸಂಶಯವೂ ಇಲ್ಲ.
ಅದೇ ತನ್ನ ಮನೆಗಾಗಿ ಹಗಲೂ ರಾತ್ರಿ ದುಡಿಯುವ ಹೆಂಡತಿ ಗೆ ನೆಗಡಿಯೋ,ಕೆಮ್ಮೋ ಆದಾಗ ಗಂಡನಾದವನು ಹತ್ತಿರ ಬಂದು ಕಾಳಜಿ ತೋರಿಸಿ ,ಒಂದು ಕಪ್ಪು ಕಶಾಯ ಮಾಡಿ ಕುಡಿಸುವ ,ಆರೈಕೆ ಮಾಡುವ,ಪ್ರೀತಿ ತೋರಿಸುವ ಕೆಲಸ ದುಡ್ಡು ಕೊಡುವುದಿಲ್ಲ.ಅದು ಮಾನವೀಯತೆ ಇರುವ ಒಬ್ಬ ಸಾಮಾನ್ಯ ಮನುಷ್ಯ ಮಾಡುವ ಕೆಲಸ.ಅದು ನಮ್ಮ ಸುಸಂಸ್ಕಾರವಂತ ಹುಡುಗರು ಮಾಡಿಯೇ ಮಾಡುತ್ತಾರೆ.
💟ಆದರೆ ಇಷ್ಟೆಲ್ಲದರ ತಾತ್ಪರ್ಯ ಒಂದೇ .
ಬರೀ ಇಂಜನೀಯರ್ರು,ಡಾಕ್ಟರು,
ಆಸ್ತಿವಂತರಿಗೆ ಮಾತ್ರ ಕನ್ಯ ಕೊಡಲು ಯೋಗ್ಯರಲ್ಲ.
💟ಅವರ ಹೊರತಾಗಿ ಒಂದು ಜವಾಬ್ದಾರಿ ಇರುವ ಮಗನಾಗಿ ಇರುವ ಎಲ್ಲ ಯೋಗ್ಯ ವರಗಳೂ ನಮ್ಮ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಕಷ್ಟವಿದ್ದಾಗಲೇ ಸುಖದ ಅರಿವಾಗುವುದು.ಸುಖದ ಸುಪ್ಪತ್ತಿಗೆಯಲ್ಲೇ ಮಗಳು ಇರಬೇಕೆಂದು ಬಯಸುವುದು ಖಂಡಿತ ತಪ್ಪು.ದುಡ್ಡು ಜೀವನಕ್ಕೆ ಅವಶ್ಯಕತೆ ಅಷ್ಟೇ. ದುಡ್ಡೇ ಜೀವನವಲ್ಲ.
💟ಇಲ್ಲಿ ಯಾರ ಮನಸ್ಸಿಗೂ ನೋವುಂಟು ಮಾಎಉವ ಉದ್ದೇಶವಿಲ್ಲ.ಆದರೆ ಹೆಣ್ಣು ಹೆತ್ತವರು ಒಂದು ಘಳಿಗೆ ಯೋಚನೆ ಮಾಡಿದರೆ ಒಳ್ಳೆಯ ಗುಣವಿರುವ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಅವಳು ಖಂಡಿತ ಸುಖವಾಗಿರುತ್ತಾಳೆ. ಮಧ್ಯಮ ವರ್ಗದ ಮನೆಗಳಲ್ಲಿ ಇಂದಿಗೂ ಸಣ್ಣ ಪುಟ್ಟ ಸಾಲಸೋಲಗಳು ಇರುವುದು ನಿಜ. ಅಂತಹ ಸಂಸಾರ ವೇ ಒಂದು ಹಬ್ಬದಂತೆ. ಸದಾ ಸುಖ,ಸಂತೋಷ, ಸಂಭ್ರಮ, ನೆಮ್ಮದಿ ತುಂಬಿರುತ್ತದೆ.ತುಂಬಿದ ಮನೆಯಲ್ಲಿ ಮಗಳು ನಿಜಕ್ಕೂ ಸುಖವಾಗಿರುತ್ತಾಳೆ. ಯಾವತ್ತೂ ಅವಳಿಗೆ ಒಂಟಿತನ ಕಾಡುವುದಿಲ್ಲ.ಮಧ್ಯಮ ವರ್ಗದ ಹುಡುಗರೂ ಜವಾಬ್ದಾರಿ ಉಳ್ಳವರೇ ಆಗಿರುತ್ತಾರೆ. ದುಡ್ಡಿನ ಮುಂದೆ ಒಳ್ಳೆಯ ಗುಣಕ್ಕೆ ,ಒಳ್ಳೆಯ ಹುಡುಗರ ವ್ಯಕ್ತಿತ್ವಕ್ಕೆ ಬೆಲೆ ಇಲ್ಲದಂತಾಗಿದೆ.ಅದು ಮನಸಿಗೆ ತುಂಬಾ ನೋವಾಗುವ ವಿಚಾರ.
ಹಾಗಂತ ಇಂಜನೀಯರುಗಳು,ಡಾಕ್ಟರ್ ಗಳು,ಶ್ರೀ ಮಂತರು ಮನುಷ್ಯತ್ವ ಇಲ್ಲದವರು ಅಂತಲ್ಲ.ಅವರಿಗೆ ಒಳ್ಳೆಯದು ಕೆಟ್ಟದರ ಅರಿವೂ ಕೂಡಾ ಇರದಷ್ಡು ಒಳ್ಳೆಯವರಾಗಿರುತ್ತಾರೆ. ಆದರೆ ಹೆಣ್ಣು ಹೆತ್ತವರು ಸ್ವಲ್ಪ ವಿಚಾರ ಮಾಡಬೇಕಲ್ಲವಾ? ತಮಗೆ ಗೊತ್ತಿರುವ ಹುಡುಗನನ್ನೇ ಆರಿಸುವುದು ಸೂಕ್ತವಲ್ಲ ವೇ?
💟ಇನ್ನು ಸ್ನೆಹಿತರಿಗೆ,ತಮ್ಮ ಸ್ನೇಹಿತರಲ್ಲಿ ಯಾರು ಹೇಗೆ ಎನ್ನುವ ವಿಚಾರ ತಿಳಿದೇ ಇರುತ್ತದೆ.ಅಂತಹ ಸಮಯದಲ್ಲಿ ತಮ್ಮ ಅಕ್ಕ ತಂಗಿಯರನ್ನ ಗೊತ್ತಿರುವವರಿಗೇ ಕೊಟ್ಟು ಮದುವೆ ಮಾಡಿದರೆ ನಮ್ಮ ಹುಡುಗಿ ನಮ್ಮ ಕಣ್ಣೇದುರೇ ಇದ್ದ ಹಾಗಾಗುತ್ತದೆ,ಸ್ನೇಹಸಂಬಂಧ ಇನ್ನೂ ಗಟ್ಡಿಯಾಗುತ್ತದೆ.ಇದು ನನ್ನ ಅಭಿಪ್ರಾಯ. ನಿಮ್ಮ ಅಭಿಪ್ರಾಯ ಖಂಡಿತ ತಿಳಿಸಿ. ಇಷ್ಟು ರೀತಿಯಾಗಿ ಈ ವಿಚಾರದಿಂದ ಮನಸು ವಿಚಲಿತವಾಗಲು ಕಾರಣ ಕಣ್ಣೆದುರು ನಡೆದಿರುವ,ನಡೆಯುತ್ತಿರುವ ಘಟನೆಗಳು.ಹೆತ್ತವರ ನುಂಗಲಾರದ ನೋವು. ಪ್ರೀತಿ, ಪ್ರೇಮ, ವಿಶ್ವಾಸ,ನಂಬಿಕೆಗಳಿಗೆ ಬೆಲೆ ಕೊಡುವವರು ಯಾವತ್ತೂ ವಣಪ್ರತಿಷ್ಠೆ ಹಾಗೂ ಶಾಶ್ವತವಲ್ಲದ ಶ್ರೀಮಂತಿಕೆಯ ಹಿಂದೆ ಬಿದ್ದು ತಮ್ಮತನವನ್ನು ಕಳೆದುಕೊಳ್ಳುವುದಿಲ್ಲ. ಬೇರೆ ಕೆಲಸ ಮಾಡೊರಿಗೆ ಬೆಲೇನೇ ಇಲ್ವಾ?
ಯಾವ ವಧುವರರ ಜಾಹಿರಾತು ಮಾಹಿತಿಗಳನ್ನು ನೋಡಿದರೂ ಹೆಚ್ಚು ಬಿ.ಈ.ಬೀಟೆಕ್ ,ಎಮ್ಟೆಕ್,ಇಂಜನೀಯರ್,ಡಾಕ್ಟರ್, ಅಪೆಕ್ಷೆಯೇ
ಇರುತ್ತವೆ.
💟 ಮಗಳು ಡಾಕ್ಟರ್, ಇಂಜನೀಯರ್,ಸಿ.ಎ.ಇದ್ದಾಳೆ ಸರಿ ಅವಳಿಗೆ ತಕ್ಕ ಹುಡುಗನನ್ನ,ಅದೇ ಪ್ರೊಫೇಶನ್ನಲ್ಲಿ ಇರೋರನ್ನ ನೋಡಿ ಮದುವೆ ಮಾಡಿದರೆ ಇಬ್ಬರೂ ಚೆನ್ನಾಗಿರುತ್ತಾರೆ ಎಂದುಕೊಂಡರೆ ಅದೂ ತಪ್ಪೇ.ಎಷ್ಟೋ ಕೇಸುಗಳು ಮಗು ಹುಟ್ಟುವ ಮುಂಚೆಯೇ ವಿಚ್ಛೇದನಕ್ಕೆ ಬಂದು ನಿಂತಿರುತ್ತದೆ.ಯಾಕೆಂದರೆ ಇಬ್ಬರಿಗೂ ಮಗು ಬೇಕಿಲ್ಲ.ಮಗು ಹುಟ್ಟಿದ್ದೇ ಆದರೆ ಆ ಮಗುವಿನ ಜೀವನವಿಡೀ ಆಯಾ ಳ ಕೈಯ್ಯಲ್ಲೇ.ತಾಯಿ ಕೈತುತ್ತು ಇಲ್ಲ.ತಂದೆಯ ಮಮತೆ ಕಾಣಲ್ಲ.
💟ಇಬ್ಬರೂ ದುಡಿಯುವವರು.ಇಬ್ಬರಿಗೂ ಸರಿಸಮ ದುಡ್ಡು.ದೊಡ್ಡ ಫ್ಲಾಟ್ ನಲ್ಲಿ ಐಷಾರಾಮಿ ಜೀವನ. ಬ್ರೆಡ್ಡು.ಜಾಮು.ಪೀಜಾ.ಬರ್ಗರು,ಇದೇ ಹೊಟ್ಟೆಗೆ.ಇರೋ ಒಂದು ಸಂಡೇ ,ವೀಕೆಂಡು ಹೋಟೆಲು. ಮಾಲ್ ಗಳಲ್ಲಿ ಓಡಾಟ.ಮುಗಿತು ಮತ್ತೆ ಸೋಮವಾರದಿಂದ ಅದೇ ಯಾಂತ್ರಿಕ ಜೀವನ. ಎಲ್ಲದಕಿಂತ ಹೆಚ್ಚಾಗಿ ಇಬ್ಬರ ನಡುವೆ ಈಗೋ ಪ್ರಾಬ್ಲಂ.ಒಬ್ಬರ ಬಗ್ಗೆ ಒಬ್ಬರು ಮಾತಾನಾಡುವ ಸ್ವಾತಂತ್ರವನ್ನೇ ಕಳೆದುಕೊಂಡಿರುವಾಗ ಪ್ರೀತಿಗೆ ಜಾಗವೆಲ್ಲಿ?
💟ಸರಿಸಮ ಓದಿದವರಿಗೆ ಕೊಟ್ಟು ಮದುವೆ ಮಾಡುವುದು ಒಂದು ಕಡೆ ಸರಿ.ಆದರೆ ಇನ್ನು ನಮ್ಮಂತಹ ಮಧ್ಯಮ ವರ್ಗದ ಹುಡುಗಿಗೂ,ತೀರಾ ಬಡತನದಲ್ಲಿ ಬೆಳೆದ ಮಗಳಿಗೂ ನಾವು ಇಂಜನೀಯರುಗಳಿಗೆ ಕೊಟ್ಟು ಮದುವೆ ಮಾಡುತ್ತ ಹೋದರೆ ಏನು ಕತೆ? ಮಗಳು ವಿದೆಶದಲ್ಲಿದಾಳೆ.ಅಳಿಯ ವಿದೇಶದಲ್ಲಿದಾನೆ ಅಂತ ಹೇಳಿಕೊಳ್ಳುವುದೇ ಒಂದು ಪ್ರತಿಷ್ಠೆ ಆಗಿ ಹೊಗಿದೆ.ಹಾಗಿದ್ದರೆ ನಮ್ಮ ದೇಶ,ನಮ್ಮ ಸಂಸ್ಕ್ರತಿ, ಸಂಪ್ರದಾಯಗಳಿಗೆ ನಾವೆಷ್ಟು ಮಹತ್ವ ಕೊಡುತ್ತಿದ್ದೇವೆ?
ಫೇಸ್ಬುಕ್ ನಿಂದ ಗಂಡುಹುಡುಗರು ಕೆಡುತ್ತಾರೆ ಎನ್ನುವ ಮಾತು ಹಿರಿಯರೊಬ್ಬರು ಹೇಳಿದಾಗ ನಿಜಕ್ಕೂ ಬೇಸರವಾಯಿತು. ಆ ಹಿರಿಯರಿಗೆ ಯುವ ಪೀಳಿಗೆಯ ನಡತೆ ಇನ್ನೆಷ್ಡು ನೋವಾಗಿರಲಿಕ್ಕಿಲ್ಲ.
💟ಕೆಡಬೇಕಾದರೆ ಫೇಸ್ಬುಕ್ಕೇ ಬೇಕಾಗಿಲ್ಲ.ಕುಳಿತಲ್ಲಿಯೇ ಕೆಡಬಹುದು.ಅದು ಮನಸ್ಸಿಗೆ ಬಿಟ್ಟ ವಿಚಾರ.
ಈ ವಿಷಯದಲ್ಲಿ ಲೆಕ್ಕ ಹಾಕಿದರೆ ಹುಡುಗಿಯರಿಗಿಂತ ಹುಡುಗರೇ ಹೆಚ್ಚು ಜವಾಬ್ದಾರಿ ಯಿಂದ ನಡೆದುಕೊಳ್ಳುವುದು.
💟ಆದರೆ ಕೆಲವು ಹುಡುಗಿಯರ ಹುಚ್ಚಾಟದಿಂದಾಗಿ ಹುಡುಗರ ಮನಸ್ಸು ಎಲ್ಲೋ ಒಂದುಕಡೆ ಮಂಕಾಗುತ್ತದೆ.ಆದರೆ ಹುಡುಗರು ಯಾವತ್ತೂ ಜೀವನ ಪರ್ಯಂತ ಬ್ರಹ್ಮಚಾರಿಗಳಾಗೇ ಕಾಲ ಕಳೆಯುವರೇ ಹೊರತು ಯಾವ ಹೆಣ್ಣಿನೊಂದಿಗೂ ಹುಚ್ಚಾಟವಾಡುಷ್ಟು ಕೆಟ್ಟುಹೋಗಿಲ್ಲ ನಮ್ಮ ಬ್ರಾಹ್ಮಣ ಹುಡುಗರು.
ಅವರಿಗೆ ತಮ್ಮದೇ ಆದ ಕನಸುಗಳಿವೆ.ಹೆತ್ತವರ ಬಗೆಗೆ ಕಾಳಜಿ ಇದೆ.ಸಂಸಾರದ ಬಗ್ಗೆ ಗಂಭೀರತೆ ಇದೆ.ಜೀವನದ ಬಗ್ಗೆ ಉತ್ಸಾಹವಿದೆ.ತಮ್ಮವರನ್ನೂ ಸಂತೋಷವಾಗಿಟ್ಟುಕೊಂಡು ತಾವೂ ಅದರಲ್ಲೇ ಸಂತೋಷ ಕಾಣುವ ಒಳ್ಳೆಯ ಮನಸ್ಸು ಇದೆ. ಮಗಳು ಸಂತೋಷವಾಗಿರಲು ಇಂತಹ ಒಳ್ಳೆಯ ಯೋಗ್ಯ ವರ ಸಾಕಲ್ಲವಾ? ಯಾರನ್ನೋ ಮೇಲೆತ್ತಿ ಇಂತಹ ಹುಡುಗರನ್ನು ತೀರಾ ಕೀಳಾಗಿ ಕಾಣಬೇಡಿ. ಹುಡುಗಿ ಕೊಡದಿದ್ದರೆ ಬೇಡ .ಆದರೆ ಇಂತಹವರಿಗೆ ಕನ್ಯ ಯಾರು ಕೊಡುತ್ತಾರೆ ಎನ್ನುವ ತಾತ್ಸಾರದ ಮಾತು ಬೇಡವಷ್ಟೆ.
💟ಇನ್ನು ಬ್ರಾಹ್ಮಣ ಹುಡುಗರು ಬೇರೆ ಜಾತಿಯ ಹುಡುಗಿಯರನ್ನು ಕಣ್ಣೆತ್ತಿ ನೋಡಲೂ ಹೆದರುತ್ತಾರೆ.ಯಾಕೆಂದರೆ ಅವರಿಗೆ ಪ್ರೀತಿ, ಮದುವೆ,ಹುಚ್ಚಾಟವಲ್ಲ.ಅವರಿಗೇ ಅವರದೇ ಆದ ಜವಾಬ್ದಾರಿಗಳಿವೆ.ತಾವು ಕೆಲಸ ಮಾಡುತ್ತಿರುವ ಕ್ಷೇತ್ರದಲ್ಲಿ ಅವರಿಗೇ ಅವರದೇ ಆದ ಸ್ಥಾನಮಾನವಿದೆ.ಎಲ್ಲದಕ್ಕೂ ಹೆಚ್ಚಾಗಿ ಸ್ವಾಭಿಮಾನ ದಿಂದ ಒಬ್ಬರಿಗೆ ಕೈಚಾಚದಂತೆ ಬದುಕುತ್ತಾರೆ. ಎಲ್ಲರಿಗೂ ಅವರದೇ ಆದ ಜೀವನವಿದೆ.ಮನಸಿದೆ,ಕನಸಿದೆ.ಯಾರಿಗೂ ನೋವು ಮಾಡುವ ಅಧಿಕಾರ ಯಾರಿಗೂ ಇಲ್ಲ.ಅವರವರ ಮನೆಗೆ ಅವರೇ ರಾಜಕುಮಾರರು.
ಅವರಿಗಾಗಿಯೆ ಹಗಲಿರುಳು ಪರಿತಪಿಸುವ ಕುಟುಂಬವಿದೆ.ಅಂತಹ ಕುಟುಂಬದವರ ಪ್ರೀತಿಯ ಮುಂದೆ ಕೋಟಿಗಟ್ಟಲೆ ಆಸ್ತಿ ನಮ್ಮ ಹುಡುಗರಿಗೆ ಲೆಕ್ಕ ಬರುವುದಿಲ್ಲ. ಒಂದು ಹುಡುಗಿ ಶ್ರೀಮಂತ ಮನೆಯ ಹುಡುಗನನ್ನು ಬಯಸಿದರೆ,ಒಂದು ಹುಡುಗ ಮಾತ್ರ ತಾನು ಮಾಡಿಕೊಳ್ಳುವ ಹುಡುಗಿ ಒಳ್ಳೆಯವಳಾಗಿದ್ದರೆ ಸಾಕು ಎನ್ನುತ್ತಾನೆ. ಶ್ರಿಮಂತಿಕೆ ಯಾವತ್ತೂ ಬಯಸುವುದಿಲ್ಲ.
💟ಯಾವುದೋ ಒಂದು ಘಳಿಗೆಯಲ್ಲಿ ದೇಹ,ಮನಸ್ಸು ಕುಸಿದು ನೆಲಕ್ಕೆ ಬಿದ್ದಾಗ ಬೇಕಾಗುವುದು ಹಣವಲ್ಲ.ಒಂದು ಹಿಡಿ ಪ್ರೀತಿ.ಒಂದು ಭರವಸೆಯ ಸಾಂತ್ವನ ನೀಡುವ ಕೈ.ಅದು ಮಧ್ಯಮವರ್ಗದ ನಮ್ಮ ಹುಡುಗರಲ್ಲೇ ಜಾಸ್ತಿ ಇದೆ.ಅದನ್ನು ಗುರುತಿಸಿದರೆ ಸಾಕು. ವರ ಕನ್ಯ ವಿಷಯವಾಗಿ, ಇಂದಿನ ಪ್ರಸ್ತುತ ವಿದ್ಯಾಮಾನದ ಬಗ್ಗೆ ನನಗೆ ಅನಿಸಿದ್ದನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಿ.
ಲೇಖನ: ವಿದ್ಯಾಶ್ರೀ ಕಟ್ಟಿ.
☰
MENU
🔍
SEARCH
🔖
FOLLOW
📢
SHARE
×
Search
ThinkBangalore
🏠 Home 🏛 City Connect 🌄 Tour 🏃 Health 🛒 Shopping 💡 Inspire 🙏 Culture 🧑 Jobs 📸 Gallery 😄 Leisure 📞 ContactNews Updates
🎤 Live Kannada News 📰 Bengaluru 📰 State 📰 National 🏏 Cricket 📰 Business 📰 Sports 📰 EntertainmentToday
♉ Horoscope ⛅ Weather 🔊 Day QuoteKannada Entertainment
🎬 Sandalwood 🎵 Music 🎞 Movies 🎥 Trailers 🎥 Comedy 🎥 Web Series
×
Share this page
ಮದುವೆ ವ್ಯಾಪಾರವಲ್ಲ - Marriage is not a bussiness
Read more on
#culture
#lifestyle
#relationship
Write / View Comments ( 0 )
Subscribe , Follow on
Facebook Instagram YouTube Twitter WhatsApp