-->

ಆರೋಗ್ಯ ಕಾಪಾಡುವ ಅರಶಿನ - Turmeric Health Benefits

 ಆರೋಗ್ಯ ಕಾಪಾಡುವ ಅರಶಿನ(ತುಳುವಿನಲ್ಲಿ ಮಂಜಲ್): ಎರಡು ಮೂರು ದಿವಸದಿಂದ ತಡೆಯಲಾಗದ ತಲೆನೋವು. ನನ್ನನ್ನು ನಾನು ಮನೆ ಮದ್ದುಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಂಡು ಏನಾದರೂ ಸಾದಿಸಬೇಕೆಂಬ ಛಲ.ಮಾತ್ರೆ,ಕಷಾಯ,ಗುಳಿಗೆ ಯಾವುದರಿಂದಲೂ ಪ್ರಯೋಜನ ಕಾಣದಿದ್ದಾಗ ಸೀದಾ  ಅಡುಗೆ ಕೋಣೆಗೆ ಬಂದೆ.ಅರಶಿಣದ ಪ್ಲಾಸ್ಟಿಕ್ ಡಬ್ಬಿಯಿಂದ ಒಂದು ಟೀ ಸ್ಪೂನ್ ಅರಸಿಣ 5 ಸ್ಪೂನು ನೀರಿಗೆ ಹಾಕಿ ಕಲಡಿಸಿ ಕುಡಿದೆ. ಹೊಟ್ಟೆಯಲ್ಲಿ ಏನೋ ತಳಮಳವಾಗತೊಡಗಿತು. 2 ನಿಮಿಷ ಬಿಟ್ಟು ಒಂದು ಸಣ್ಣ ತಂಬಿಗೆ ನೀರು ಕುಡಿದೆ. ಪವಾಡವೋ ಎಂಬಂತೆ 2 ದಿವಸದಿಂದ ಕಾಡುತ್ತಿದ್ದ ತಲೆನೋವು 2 ಘಂಟೆಯಲ್ಲಿ ಗುಣಮುಖ ವಾಗಿ ಇದೀಗ ಆರಾಮವಾಗಿ ತಮಗೆಲ್ಲರಿಗೂ ತಿಳಿಸುವ ಮನಸಾಯಿತು,ತಿಳಿಸುತ್ತಿದ್ದೇನೆ! ಅರಶಿನದ ಮಹತ್ವದ ನಿಜವಾದ ಸ್ವತಃ  ಅನುಭವ.
 
ಮೊದಲೆಲ್ಲ ನಮ್ಮ ಮನೆಯ ಸುತ್ತಲೂ ಸಿಗುವ ಸೊಪ್ಪು, ತರಕಾರಿಗಳು, ಗಿಡ ಮೂಲಿಕೆಗಳನ್ನೇ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೆವು. ಉದಾಹರಣೆಗೆ ನಮ್ಮ ಮನೆಯಲ್ಲಿರುತ್ತಿದ್ದ ಅರಶಿನ ಕೂಡ ಹಲವು ಸಂದರ್ಭಗಳಲ್ಲಿ ಔಷಧಿಯಾಗಿ ಬಳಕೆಯಾಗುತ್ತಿತ್ತು. ಇದರಲ್ಲಿರುವ ರೋಗ ನಿರೋಧಕ ಶಕ್ತಿಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತಿತ್ತು. ಆದ್ದರಿಂದ ಇದನ್ನು ಮನೆ ಮದ್ದಾಗಿ ಉಪಯೋಗಿಸುತ್ತಿದ್ದರು. ಇವತ್ತು ಹೆಚ್ಚಿನವರಿಗೆ ಅರಶಿನದಲ್ಲಿ ಏನೇನು ಗುಣಗಳಿವೆ ಎಂಬುದೇ ಗೊತ್ತಿಲ್ಲ.



ಹಾಗೆ ನೋಡಿದರೆ ಅರಶಿನದಲ್ಲಿ ಬಹಳಷ್ಟು ಔಷಧೀಯ ಗುಣಗಳಿರುವುದನ್ನು ನಾವು ಕಾಣಬಹುದು.

1. ಮೇಲೆ ತಿಳಿಸಿದ ಸ್ವಂತ ಅನ್ವೇಷಣೆಯಂತೆ ಕಫ,ಶೀತ,ಬಾಯಿಹುಣ್ಣು,ತಲೆನೋವಿಗೆ  ರಾಮ ಬಾಣ.

2. ಅರಶಿನದಪುಡಿಯನ್ನು ಸಮಭಾಗ ಸುಣ್ಣದೊಂದಿಗೆ ಕೂಡಿಸಿ ಮಿಶ್ರಣವನ್ನು ಚೆನ್ನಾಗಿ ಅರೆದು ದಪ್ಪವಾಗಿ ಲೇಪಿಸಿ ಉಗುರಿಗೆ ಕಟ್ಟಿದರೆ ಉಗುರು ಸುತ್ತು ಗುಣಮುಖವಾಗುತ್ತದೆ.

3. ಚಳಿಗಾಲದಲ್ಲಿ ತುಟಿ, ಅಂಗೈ, ಅಂಗಾಲು ಸಾಮಾನ್ಯವಾಗಿ ಬಿರುಕು ಬಿಡುತ್ತದೆ. ಈ ಸಂದರ್ಭ ಅರಶಿನ ಗಂಧವನ್ನು ಹಾಲಿನ ಕೆನೆಯಲ್ಲಿ ಚೆನ್ನಾಗಿ ಮಿಶ್ರಮಾಡಿ ಬಿರುಕುಗಳಿಗೆ ಲೇಪಿಸಿದರೆ ಬಿರುಕುಗಳು ಮಾಯವಾಗುತ್ತವೆ.

4. ಅರಶಿನದ ಚೂರ್ಣವನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯಲ್ಲಿ ಮಿಶ್ರಮಾಡಿ ಅಂಗಾಂಗಳಿಗೆ ಹಚ್ಚಿ ಚೆನ್ನಾಗಿ ಸ್ನಾನ ಮಾಡಿದ್ದೇ ಆದರೆ  ಅಂಗಾಂಗಳ ನೋವು ನಿವಾರಣೆಯಾಗಿ ದೇಹಕ್ಕೆ ವಿಶ್ರಾಂತಿ ದೊರಕುವುದರೊಂದಿಗೆ ನಿದ್ದೆಯೂ ಚೆನ್ನಾಗಿ ಬರುತ್ತದೆ.

5. ಎಲೆಅಡಿಕೆ ತಿನ್ನುವಾಗ ಒಮ್ಮೊಮ್ಮೆ ಸುಣ್ಣ ಜಾಸ್ತಿಯಾಗಿ ನಾಲಿಗೆ ಬೆಂದು ಹೋದರೆ ಹಸಿ ಅರಶಿನದ ಕೊಂಬನ್ನು ನೀರಿನಲ್ಲಿ ತೇದು ನಾಲಿಗೆ ಮೇಲೆ ಬೆಂದ ಭಾಗಕ್ಕೆ ಲೇಪಿಸಬಹುದು.

6. ಕೆಮ್ಮು, ನೆಗಡಿ, ಗಂಟಲು ನೋವು, ಕಾಣಿಸಿಕೊಂಡಾಗ ಬೆಳ್ಳುಳ್ಳಿ ಶುಂಠಿಯೊಂದಿಗೆ ಅರಶಿನದ ಪುಡಿಯನ್ನು ಸೇರಿಸಿ ಕುದಿಸಿದ ಹಾಲಿನೊಂದಿಗೆ ಮಲಗುವ ಮುನ್ನ ಸೇವಿಸಿದರೆ ನಿವಾರಣೆಯಾಗುತ್ತದೆ.

7. ಸ್ತ್ರೀಯರ ಮೈಯ್ಯಲ್ಲಿ ಅನಾವಶ್ಯಕ ಕೂದಲುಗಳಿದ್ದರೆ ಸ್ನಾನಕ್ಕೆ ಮುನ್ನ ಕೆನ್ನೆ, ಕೈಕಾಲುಗಳಿಗೆ ಅರಶಿನವನ್ನು ಹಚ್ಚಿ ಬಳಿಕ ಸ್ನಾನ ಮಾಡಿದರೆ ಕೂದಲು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಜತೆಗೆ ಮೊಡವೆಗಳು ಕೂಡ ಮಾಯವಾಗುತ್ತವೆ.

8. ಅರಶಿನದ ಬೇರಿನಲ್ಲಿ ಶೇ.5ರಷ್ಟು ವಿರ್ಮೆರಾಲ್ ಎಣ್ಣೆಯ ಅಂಶಗಳಿದ್ದು ಆಹಾರ ಪದಾರ್ಥಗಳಿಗೆ ರಂಗು ನೀಡುತ್ತದೆ.

ಹುಡಿ ಮಾಡಿದ ಅರಶಿನ ಅಥವಾ ಹಳದಿ ಸರ್ವರೋಗಕ್ಕೂ ಪರಿಹಾರಕವಾಗಿದೆ. ಬರೀ ಅಡುಗೆಮನೆಯಲ್ಲಿ ಮಾತ್ರ ಇದರ ಬಳಕೆಯಲ್ಲ ನಮ್ಮ ಪ್ರತೀ ಚಟುವಟಿಕೆಯಲ್ಲೂ ಇದು ಕಾರ್ಯವ್ಯಾಪಿಯಾಗಿದೆ. ಸುಟ್ಟ ಗಾಯಗಳಿಂದ ನಮ್ಮ ದೇಹವನ್ನು ಅರಶಿನ ಕಾಪಾಡುತ್ತದೆ. ಮುಖದ ಸೌಂದರ್ಯಕ್ಕೂ ಇದರ ಕೊಡುಗೆ ಅಪಾರ.

 9.ಗಾಯ ಮತ್ತು ಸುಟ್ಟ ನೋವುಗಳಿಂದ ನಮ್ಮನ್ನು ರಕ್ಷಿಸುವ ಅರಶಿನ ನೈಸರ್ಗಿಕ ಆಂಟಿಸೆಪ್ಟಿಕ್ ಮತ್ತು ಬ್ಯಾಕ್ಟಿರಿಯಾ ವಿರೋಧಿ ಅಂಶವಾಗಿದೆ.

10.ಜಠರವನ್ನು ನೈಸರ್ಗಿವಾಗಿ ಶುದ್ಧ ಮಾಡುವಲ್ಲಿ ಅರಶಿನದ ಪಾತ್ರ ಹಿರಿದು.

 11.ಮೆದುಳಿನಲ್ಲಿ ರಚಿತವಾದ ಅಮ್ಲೋಯ್ಡ್ ಲೋಳೆಯನ್ನು ತೆಗೆದುಹಾಕಿ ಅಲ್ಙೀಮೀರ್ ರೋಗದ ಪ್ರಕ್ರಿಯೆಯನ್ನು ನಿರ್ಬಂಧಿಸಿ ಮೆದುಳನ್ನು ಆರೋಗ್ಯವಾಗಿರಿಸುತ್ತದೆ.

12. ಕ್ಯಾನ್ಸರ್‌ನ ಹಲವು ಬಗೆಗಳಲ್ಲಿ ಸಂಭವಿಸುವ ಸ್ಥಾನಾಂತರಗಳನ್ನು (ದ್ವಿತೀಯ ಹಾನಿಕಾರಕ ಟ್ಯೂಮರ್) ಅರಶಿನ ತೊಡೆದುಹಾಕುತ್ತದೆ.

13.ಇದೊಂದು ನೈಸರ್ಗಿಕ ಉರಿಯೂತ ವಿರೋಧಿ ಶಕ್ತಿಯಾಗಿದ್ದು ಹಲವಾರು ರೋಗಕ್ಕೆ ಉರಿಯೂತ ವಿರೋಧಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ.

 14..ಅರಶಿನ ನೈಸರ್ಗಿಕ ನೋವು ನಿವಾರಕವಾಗಿದ್ದು ಸಿಒಎಕ್ಸ್-2 ಇದರಲ್ಲಿದೆ (ಉರಿಯೂತ ವಿರೋಧಿ).

15.ಇದು ಕೊಬ್ಬನ್ನು ಕರಗಿಸುವ ಗುಣವನ್ನು ಹೊಂದಿದ್ದು ತೂಕ ನಿಯಂತ್ರಣಕ್ಕೆ ಸಹಕಾರಿ.

 16.ಖಿನ್ನತೆಯ ಚಿಕಿತ್ಸೆಗಾಗಿ ಚೀನಾದಲ್ಲಿ ಅರಶಿನವನ್ನು ಬಳಸಲಾಗುತ್ತದೆ.

 17.ಅರಶಿನ ನೈಸರ್ಗಿಕ ಉರಿಯೂತ ನಿವಾರಕವಾಗಿರುವುದರಿಂದ ಸಂಧಿವಾತಕ್ಕೆ ಇದನ್ನು ಬಳಸಲಾಗುತ್ತದೆ.

 18.ಅರಶಿನವು ಪಾಕ್ಲಿಟೇಕ್ಸಲ್‌ನೊಂದಿಗೆ ಕೀಮೋಥೆರಪಿಯ ಪರಿಣಾಮಗಳನ್ನು ಹೆಚ್ಚಿಸುತ್ತದೆ ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

 19.ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಉತ್ತಮ ಔಷಧಿ ಅರಶಿನವಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

 20.ಮಲ್ಟಿಮಲ್ ಮೈಲೋಮಾ (ಕ್ಯಾನ್ಸರ್ ಪ್ಲಾಸ್ಮಾ ಕೋಶಗಳು) ವನ್ನು ತೊಡೆದುಹಾಕುವಲ್ಲಿ ಅರಶಿನದ ಮಹತ್ವದ ಕುರಿತು ಸಂಶೋಧನೆಗಳು ಜಾರಿಯಲ್ಲಿದೆ.

 21.ಟ್ಯೂಮರ್‌ನಲ್ಲಿ ಉಂಟಾಗುವ ಹೊಸ ರಕ್ತ ಕಣಗಳ ಬೆಳವಣಿಗೆಯನ್ನು ಅರಶಿನವು ನಿಲ್ಲಿಸುತ್ತದೆ.

22.ಗಾಯ ಒಣಗುವುದರಲ್ಲಿ ಮತ್ತು ಹೊಸ ಚರ್ಮ ಬರುವಂತೆ ಮಾಡುವಲ್ಲಿ ಅರಶಿನದ ಪಾತ್ರ ಹಿರಿದಾದುದು.

23.ಸೋರಿಯಾಸಿಸ್ ಹಾಗೂ ಇತರ ಚರ್ಮ ರೋಗಗಳನ್ನು ಉಪಚರಿಸುವಲ್ಲಿ ಅರಶಿನ ಸಹಾಯ ಮಾಡುತ್ತದೆ. ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

24.ಎದೆ ನೋವಿಗಾಗಿ ಮತ್ತು ಹೊಟ್ಟೆ ನೋವು ನಿವಾರಣೆಗಾಗಿ ಚೀನಾದಲ್ಲಿ ಅರಶಿನವನ್ನು ಬಳಸುತ್ತಾರೆ.

25.ಸಾಮಾನ್ಯ ಉರಿಯೂತ ಪರಿಸ್ಥಿತಿಗಳನ್ನು ಉಪಚರಿಸಲು ಭಾರತದಲ್ಲಿ ಅರಶಿನ ಉಪಯೋಗಕಾರಿಯಾಗಿದೆ.

26. ಹೊಟ್ಟೆಯ ಅಲ್ಸರ್ ಅನ್ನು ನಿವಾರಣೆ ಮಾಡಲು ಅರಶಿನ ಸಹಕಾರಿಯಾಗಿದೆ.

 27.ಇಲಿಗಳಲ್ಲಿರುವ ಬಹು ಸ್ಕೆಲೋರಿಸೀಸ್ (ರೋಗವನ್ನು ಹರಡಬಲ್ಲ ಗುಣ) ಬೆಳವಣಿಗೆಯನ್ನು ನಿಧಾನವಾಗಿಸುವ ಗುಣ ಅರಶಿನಕ್ಕಿದೆ ಎಂಬುದನ್ನು ಕಂಡುಹಿಡಿಯಲಾಗಿದೆ.

28.

 1) ಹಾಲು ಹಾಗೂ ಅರಶಿನಗಳಲ್ಲಿ ಪ್ರಕೃತಿ ಸಹಜವಾದ ಅನೇಕ ಔಷಧೀಯ ಗುಣಗಳಿವೆ. ಹಾಲು ನಮ್ಮ ದೇಹಕ್ಕೆ ಸಂಪೂರ್ಣ ಪೋಷಕಾಂಶಗಳನ್ನು ಒದಗಿಸಿದರೆ ಅರಶಿನ ಅನಾರೋಗ್ಯಗಳು ಬರದಂತೆ ತಡೆಯುತ್ತದೆ. ಇದನ್ನು ಎರಡನ್ನೂ ಬೆರೆಸಿ ಕುಡಿಯುವುದರಿಂದ ನಮಗೆ ಅನೇಕ ಪ್ರಯೋಜನಗಳು ಆಗುತ್ತವೆ. ಈ ನಿಟ್ಟಿನಲ್ಲಿ ರಾತ್ರಿ ಮಲಗುವುದಕ್ಕೂ ಮುನ್ನ ಒಂದು ಲೋಟ ಹಾಲಿಗೆ ಕಾಲು ಚಮಚ ಅರಶಿನ ಬೆರೆಸಿ ಕುಡಿದರೆ ಆಗುವ ಲಾಭಗಳು:-

2) ರಾತ್ರಿ ಹಾಲಿಗೆ ಅರಶಿನ ಬೆರೆಸಿ ಕುಡಿದರೆ…ಶ್ವಾಸಕೋಶ ಸಮಸ್ಯೆಗಳಿಗೆ ಉಪಶಮನ ದೊರೆಯುತ್ತದೆ.

3) ಕೆಮ್ಮು,ನೆಗಡಿ ಕಡಿಮೆಯಾಗುತ್ತವೆ. ಶ್ವಾಸಕೋಶಗಳಲ್ಲಿ ಸೇರಿಕೊಂಡಿರುವ ಕಫ ಕರಗುತ್ತದೆ. ಈ ಋತುವಿನಲ್ಲಿ ಬರುವ ಶ್ವಾಸಕೋಶ ಸಮಸ್ಯೆಗಳಿಂದ ಉಪಶಮನ ಲಭಿಸುತ್ತದೆ.

4) ತಲೆ ನೋವಿನಿಂದ ನರಳುತ್ತಿರುವವರು, ನಿದ್ರಾ ಹೀನತೆ ಉಳ್ಳವರು ರಾತ್ರಿ ಮಲಗುವುದಕ್ಕೆ ಮುನ್ನ ಹಾಲಿಗೆ ಅರಶಿನ ಬೆರೆಸಿ ಕುಡಿದರೆ ಒಳ್ಳೆಯ ಫಲಿತಾಂಶ ಲಭಿಸುತ್ತದೆ. ಬೆಳಗಾಗುವಷ್ಟರಲ್ಲಿ ತಲೆ ನೋವು ಮಾಯವಾಗಿರುತ್ತದೆ. ನಿದ್ದೆ ಚೆನ್ನಾಗಿ ಬಂದಿರುತ್ತದೆ.

5) ಅರಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಪದಾರ್ಥವು ನಮ್ಮ ಶರೀರದಲ್ಲಿರುವ ಲಿವರ್, ಹೊಟ್ಟೆಯ ಸುತ್ತಲೂ ಕೊಬ್ಬು ಸಂಗ್ರಹಗೊಳ್ಳದಂತೆ ನೋಡಿಕೊಳ್ಳುತ್ತದೆ. ಇದರಿಂದಾಗಿ ಶರೀರದ ಅಧಿಕ ಭಾರ ಕಡಿಮೆಯಾಗುತ್ತದೆ.

6) ಸ್ತ್ರೀಯರಿಗೆ ಋತು ಸಮಯದಲ್ಲಿ ಬರುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.

7) ಸಕ್ಕರೆ ಖಾಯಿಲೆ ಹತೋಟಿಯಲ್ಲಿರುತ್ತದೆ. ಫಾಸ್ಟಿಂಗ್ ಬ್ಲಡ್ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ.

8) ಕಾಮಾಲೆ ರೋಗದಿಂದ ಬಳಲುತ್ತಿರುವವರು ಈ ಮಿಶ್ರಣವನ್ನು ಸೇವಿಸಿದಲ್ಲಿ ಈ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.
 

9) ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸೋಂಕು ಹತ್ತಿರ ಸುಳಿಯುವುದಿಲ್ಲ. ನೋವುಗಳು ನಿವಾರಣೆ ಯಾಗುತ್ತವೆ. ಅರಶಿನ ದಲ್ಲಿರುವ ಸಹಜ ಸಿದ್ಧವಾದ ಆಂಟೀ ಇನ್ ಫ್ಲಮೇಟರಿ ಗುಣದಿಂದ ನೋವು,ಬಾವು ಕಡಿಮೆಯಾಗುತ್ತದೆ.

10)  ಕೀಲು ನೋವುಗಳೂ ಕಡಿಮೆಯಾಗುತ್ತವೆ.
ರಕ್ತ ಶುದ್ಧಿಯಾಗುತ್ತದೆ. ಚರ್ಮ ರೋಗಗಳು ನಿವಾರಣೆಯಾಗುತ್ತವೆ.

11) ಜೀರ್ಣಾಶಯ ಸಮಸ್ಯೆಗಳಾದ ಗ್ಯಾಸ್,ಅಸಿಡಿಟೀ,ಅಜೀರ್ಣ, ಮಲಬದ್ಧತೆ ಹತ್ತಿರ ಸುಳಿಯುವುದಿಲ್ಲ. ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

12)  ಅರಶಿನ ಬಳ್ಳಿ :- ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆಯುವ ಸಸ್ಯ ಸಂಪನ್ಮೂಲ. ದ್ವಿದಳ ಸಸ್ಯವಾದ ಇದರ ಎಲೆ ಮೇಲ್ನೋಟಕ್ಕೆ ವೀಳ್ಯದೆಲೆಯಂತೆ ಗೋಚರಿಸಿದರೂ, ಇದರ ಮೇಲೈ ವೀಳ್ಯದೆಲೆಯಷ್ಟು ನುಣುಪಾಗಿಲ್ಲ, ಅಲ್ಲದೇ ಗಾತ್ರದಲ್ಲಿಯೂ ದೊಡ್ಡದು. ಎಲೆಯ ಹಿಂಭಾಗ ಬೆಳ್ಳಿಯ ಹೊಳಪು. ಚಿಗುರಿನ ಬಣ್ಣವೂ ಬೆಳ್ಳಿಯದ್ದೇ. ಸಂತಾನಾಭಿವೃದ್ಧಿ ಬೀಜದಿಂದ. ಗಾಢ ಅರಶಿನ ಬಣ್ಣದ ಇದರ ಕಾಂಡದ ರುಚಿ ಕಹಿ. ಈ ಬಳ್ಳಿಯ ಬೆಳವಣಿಗೆ ನಿಧಾನ.

ಅರಿಶಿನ ಹಾಲು  CONTENTS  ಅಮೃತದಂತಹ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ! ನಂಬುತ್ತೀರಾ?  ಅರಿಶಿನ ಹಾಲಿನ ಉಪಯೋಗಗಳು
ಉಸಿರಾಟದ ತೊಂದರೆ
ಕ್ಯಾನ್ಸರ್
ನಿದ್ರಾಹೀನತೆ
ಶೀತ ಮತ್ತು ಕೆಮ್ಮು
ಸಂಧಿವಾತ
ನೋವು ಮತ್ತು ವೇದನೆ
ಉತ್ಕರ್ಷಣ ನಿರೋಧಕ
ರಕ್ತ ಶುದ್ಧೀಕರಣ
ಲಿವರ್ ಕ್ರಿಯೆಗೆ ಸಹಾಯ
ಮೂಳೆಗಳ ಆರೋಗ್ಯ
ಜೀರ್ಣಕ್ರಿಯೆ
ಮುಟ್ಟಿನ ಸೆಳೆತ
ಗುಳ್ಳೆಗಳು ಮತ್ತು ಚರ್ಮ ಕೆಂಪಾಗುವುದು
ತೂಕ ನಷ್ಟ (ತೂಕ ಕಡಿಮೆಯಾಗುವುದು)


ಅಮೃತದಂತಹ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ! ನಂಬುತ್ತೀರಾ?
ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ ಅದು ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿರು ಎಂದೇ ಹಿರಿಯರು ಆಶೀರ್ವಾದಿಸುವುದೂ ಹಾಲಿನ ಗುಣವನ್ನು ಎತ್ತಿಹಿಡಿಯುತ್ತದೆ. ಮಗುವಿನ ಜನನವಾದ ಬಳಿಕ ಮೊತ್ತಮೊದಲಾಗಿ ಕುಡಿಯುವುದೇ ಹಾಲನ್ನು. ಆದರೆ ವಯಸ್ಕರಾದ ಬಳಿಕ ಹಾಲು ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವುವಂತೆಯೇ ಕೊಂಚ ಕೆಟ್ಟದನ್ನೂ ಮಾಡುತ್ತದೆ ಎಂದರೆ ನಂಬುತ್ತೀರಾ? ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ !

ಅಡುಗೆ ಮನೆಯಲ್ಲಿರುವ ಅರಿಶಿನ ಮತ್ತು ಹಾಲು ಸೂಕ್ಷ್ಮ ಜೀವ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ನಿಮ್ಮ ನಿತ್ಯದ ಇತರ ಆಹಾರಗಳೊಂದಿಗೆ ಈ ಎರಡು ವಸ್ತುಗಳನ್ನು ಬಳಸುವುದರಿಂದ ನೀವು ಸಾಮಾನ್ಯವಾಗಿ ಕಂಡುಬರುವ ಹಲವು ಅನಾರೋಗ್ಯ ತೊಂದರೆಗಳಿಂದ ದೂರವಿರಬಹುದು. ಅರಿಶಿನಕ್ಕೆ ಹಾಲನ್ನು ಸೇರಿಸಿ ಬಳಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಇವು ಪರಿಸರದ ಅಪಾಯಕಾರಿ ಜೀವಾಣುಗಳ ವಿರುದ್ಧ ಹೋರಾಡಲು ಅತ್ಯಂತ ಸಹಾಯಕಾರಿ.

ಅರಿಶಿನ ಮತ್ತು ಹಾಲಿನ ರೆಸಿಪಿ / ಉಪಯೋಗ ಒಂದು ಇಂಚಿನ ಅರಿಶಿನ ಬೇರು/ಅರಿಶಿನ ಕೊಂಬನ್ನು ತೆಗೆದುಕೊಳ್ಳಿ. ಇದನ್ನು ಹಾಲಿನಲ್ಲಿ 15 ನಿಮಿಷಗಳ ಕಾಲ ಕುದಿಸಿ. ನಂತರ ಅರಿಶಿನ ತುಂಡನ್ನು ತೆಗೆದು ಹಾಲನ್ನು ತಣಿಸಿ ಕುಡಿಯಿರಿ. ಈ ಅದ್ಭುತ ನೈಸರ್ಗಿಕ ಕೊಡುಗೆಯಿಂದ ಉಂಟಾಗುವ 15 ಕ್ಕೂ ಹೆಚ್ಚಿನ ಉಪಯೋಗಗಳನ್ನು ನೋಡೋಣ:

ಅರಿಶಿನ ಹಾಲಿನ ಉಪಯೋಗಗಳುಉಸಿರಾಟದ ತೊಂದರೆ
ಅರಿಶಿನ ಹಾಲು ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ವೈರಸ್ ಸೋಂಕುಗಳು ಆಕ್ರಮಿಸುವುದನ್ನು ವಿರೋಧಿಸುತ್ತದೆ. ಇದು ಉಸಿರಾಟದ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹ ಉಷ್ಣವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆನ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು.

ಕ್ಯಾನ್ಸರ್
ಈ ಅರಿಶಿನ ಹಾಲು, ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಸ್ತನ, ಚರ್ಮ, ಶ್ವಾಸಕೋಶ, ಪ್ರಾಸ್ಟೇಟ್ ಮತ್ತು ಗುದನಾಳದ ಕ್ಯಾನ್ಸರ್ ನಂತಹ ಬೆಳವಣಿಯನ್ನು ತಡೆಯುತ್ತದೆ. ಇದು ಹಾನಿಕಾರಕ ಡಿಎನ್ಎಯ ಕ್ಯಾನ್ಸರ್ ಜೀವಕೋಶಗಳನ್ನು ತಡೆಯುತ್ತದೆ ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ನಿದ್ರಾಹೀನತೆ
ಬಿಸಿ ಅರಿಶಿನ ಹಾಲು ಅಮೈನೊ ಆಮ್ಲ, ಟ್ರಿಪ್ಟೊಫಾನ್ ನ್ನು ಉತ್ಪಾದಿಸುತ್ತದೆ ಇದು ಶಾಂತಿಯುತ ಮತ್ತು ಸುಖ ನಿದ್ರೆಗೆ ಕಾರಣವಾಗುತ್ತದೆ.

ಶೀತ ಮತ್ತು ಕೆಮ್ಮು
ಅರಿಶಿನ ಹಾಲು ವೈರಸ್ ವಿರೋದಿ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ತ್ವರಿತ ಪರಿಹಾರ ನೀಡುತ್ತದೆ.

ಸಂಧಿವಾತ
ಅರಿಶಿನ ಹಾಲು, ಸಂಧಿವಾತವನ್ನು ಹೋಗಲಾಡಿಸಲು ಮತ್ತು ಸಂಧಿವಾತಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯಮಾಡುತ್ತದೆ. ಕೀಲು ಮತ್ತು ಸ್ನಾಯುಗಳಲ್ಲಿನ ನೋವುಗಳನ್ನೂ ಸಹ ನಿವಾರಿಸುವಲ್ಲಿ ಸಹಕಾರಿಯಾಗಿದೆ.

ನೋವು ಮತ್ತು ವೇದನೆ
ಅರಿಶಿನ ಹಾಲಿನಲ್ಲಿ ಸಕಲ ನೋವುಗಳನ್ನು ನಿವಾರಿಸಬಲ್ಲ ಶಕ್ತಿಯಿದೆ. ಇದು ದೇಹದಲ್ಲಿ ಬೆನ್ನುಮೂಳೆಯ ಮತ್ತು ಕೀಲುಗಳ ಬಲಪಡಿಸಲು ಮಾಡಬಹುದು .

ಉತ್ಕರ್ಷಣ ನಿರೋಧಕ
ಅರಿಶಿನ ಹಾಲು ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. ಇದರಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು.

ರಕ್ತ ಶುದ್ಧೀಕರಣ
ಅರಿಶಿನ ಹಾಲು, ಆಯುರ್ವೇದ ಸಂಪ್ರದಾಯದಲ್ಲಿ ಅತ್ಯುತ್ತಮ ರಕ್ತ ಶುದ್ದೀಕರಣ/ ಕ್ಲಿನ್ಸರ್ ಎಂದು ಪರಿಗಣಿಸಲಾಗುತ್ತದೆ . ಇದು ದೇಹದಲ್ಲಿ ರಕ್ತ ಪರಿಚಲನೆಯ ಪುನಶ್ಚೇತನಗೊಳಿಸಲು ಮತ್ತು ವರ್ಧಿಸಲು ಸಹಾಯ ಮಾಡಬಹುದು. ಇದು ದುಗ್ಧನಾಳ ವ್ಯವಸ್ಥೆ ಮತ್ತು ಎಲ್ಲಾ ರಕ್ತನಾಳಗಳು ಶುದ್ಧೀಕರಿಸಲು ಕೂಡ ಅತ್ಯವಶ್ಯಕ.

ಲಿವರ್ ಕ್ರಿಯೆಗೆ ಸಹಾಯ
ಅರಿಶಿನ ಹಾಲು ಪಿತ್ತಜನಕಾಂಗದ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಶುದ್ಧೀಕರಣ ಮಾಡುವ ಲಿವರ್ ನ್ನು ಬೆಂಬಲಿಸುತ್ತದೆ ಮತ್ತು ದುಗ್ಧನಾಳ ವ್ಯವಸ್ಥೆ ಶುದ್ಧೀಕರಿಸುತ್ತದೆ.

ಮೂಳೆಗಳ ಆರೋಗ್ಯ
ಅರಿಶಿನ ಹಾಲು, ಮೂಳೆಗಳು ಆರೋಗ್ಯಕರ ಮತ್ತು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಒಂದು ಉತ್ತಮ ಮೂಲವಾಗಿದೆ. ಭಾರತದ ಕ್ರಿಕೆಟ್ ದಂತಕಥೆಯಾದ ಸಚಿನ್ ತೆಂಡೂಲ್ಕರ್, ಉತ್ತಮ ಮೂಳೆ ಆರೋಗ್ಯಕ್ಕೆ ಅರಿಶಿನ ಹಾಲನ್ನೇ ದಿನವೂ ಕುಡಿಯುತ್ತಾನೆ. ಅರಿಶಿನ ಹಾಲು ಮೂಳೆ ಸವೆತ ಮತ್ತು ಸಂಧಿವಾತ ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆ
ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಹೊಟ್ಟೆಯ ಹುಣ್ಣುಗಳು ಮತ್ತು ಕೊಲೈಟಿಸ್ ನ್ನು ಕಡಿಮೆಗೊಳಿಸುತ್ತದೆ. ಇದು ಒಂದು ಪ್ರಬಲ ನಂಜುನಿರೋಧಕವೂ ಆಗಿದೆ . ಇದು ಉತ್ತಮ ಜೀರ್ಣಕಾರಿ ಶಕ್ತಿ ಹೊಂದಿದ್ದು, ಹುಣ್ಣುಗಳು, ಅತಿಸಾರ ಮತ್ತು ಅಜೀರ್ಣವನ್ನು ತಡೆಯುತ್ತದೆ.

ಮುಟ್ಟಿನ ಸೆಳೆತ
ಇದು ಮುಟ್ಟಿನ ಸೆಳೆತ ಮತ್ತು ನೋವು ಸರಾಗಗೊಳಿಸುವ ಆಂಟಿಸ್ಪಾಸ್ಮೊಡಿಕ್ ನ್ನು ಹೊಂದಿರುವ ಅರಿಶಿನ ಹಾಲು ಅದ್ಭುತ ಶಕ್ತಿಯನ್ನು ಹೊಂದಿದೆ. ಗರ್ಭಿಣಿ ಮಹಿಳೆಯರ ಸುಲಭ ಹೆರಿಗೆಗೆ ಅರಿಶಿನ ಹಾಲು ಸೇವಿಸುವುದು ಅತ್ಯಂತ ಒಳ್ಳೆಯದು. ಅಂಡಾಶಯದ ವೇಗವಾದ ಸಂಕೋಚನಕ್ಕೆ ಅರಿಶಿನ ಹಾಲನ್ನು ಸೇವಿಸಬಹುದು.

ಗುಳ್ಳೆಗಳು ಮತ್ತು ಚರ್ಮ ಕೆಂಪಾಗುವುದು
ಕ್ಲಿಯೋಪಾತ್ರ, ಮೃದು ಮತ್ತು ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲಿನ ಸ್ನಾನವನ್ನೇ ಮಾಡುತ್ತಿದ್ದರು ಎನ್ನಲಾಗುತ್ತದೆ.

 ಹೊಳೆಯುವ ಚರ್ಮಕ್ಕಾಗಿ ಅರಿಶಿನ ಹಾಲನ್ನು ಕುಡಿಯುವುದು ಒಳಿತು. ಹತ್ತಿಯಲ್ಲಿ ಅರಿಶಿನ ಹಾಲನ್ನು ನೆನೆಸಿ ಚರ್ಮ ಕೆಂಪಾಗಿರುವ ಜಾಗದಲ್ಲಿ ಅದ್ದಿ 15 ನಿಮಿಷಗಳ ಕಾಲ ಬಿಟ್ಟರೆ ಪೀಡಿತ ಪ್ರದೇಶವು ಬಹಳ ಬೇಗ ಗುಣವಾಗುತ್ತದೆ. ಇದು ಮೊದಲಿಗಿಂತ, ಚರ್ಮ ಹೆಚ್ಚು ಹೊಳೆಯುವಂತೆ ಮಾಡುತ್ತದೆ.

ತೂಕ ನಷ್ಟ (ತೂಕ ಕಡಿಮೆಯಾಗುವುದು)
ಅರಿಶಿನ ಹಾಲು ಆಹಾರದಲ್ಲಿರುವ ಕೊಬ್ಬಿನ ಅಂಶವನ್ನು ಸ್ಥಗಿತಗೊಳಿಸುತ್ತದೆ. ಈ ತೂಕವನ್ನು ನಿಯಂತ್ರಿಸಲು ಉಪಯೋಗಕಾರಿಯಾಗಿದೆ.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ



–>