ನಿಮ್ಮ ಉತ್ತರವನ್ನು "ಪಾ" ಅಕ್ಷರದಿಂದ ಪ್ರಾರಂಭಿಸಿ..
1 ಶಿವನ ಪುತ್ರನ ತಾಯಿ...
2 ಮಹಾಭಾರತದ ಸಹೋದರರು...
3 ವಿದ್ಯೆ ಕಲಿಯುವ ಸ್ಥಳ..
4 ಹೊರ ಹೋಗಲು ಇದು ಬೇಕು..
5 ಥರ್ಮಾಮೀಟರ್ ನಲ್ಲಿರುವುದು..
6 ಏನೂ ಅರಿಯದ ಇವನು ಪಂಡಿತನಿಗೆ ತದ್ವಿರುದ್ಧ..
7 ಪ್ರೇಮ ಪತ್ರ ರವಾನಿಸುವ ಪಕ್ಷಿ..
8 ದೇಹದ ಒಂದು ಅಂಗ..
9 ನಮ್ಮ ನೆರೆಯ ದೇಶ..
10 ಲಕ್ವ ಕಾಯಿಲೆಯ ಇನ್ನೊಂದು ಹೆಸರು..
11 ಅಡುಗೆ ಪುಸ್ತಕ...
12 ಸತ್ಯಭಾಮೆ ಮುನಿಸಿಕೊಂಡಿದ್ದು ಈ ಹೂವಿಗೆ..
13 ಸ್ವರ್ಗಕ್ಕೆ ಹೋಗಲು ಈತ ನಾಲಾಯಕ್ಕು..
14 ಶ್ರೀ ಕೃಷ್ಣ ಊದಿದ ಶಂಖ...
15 ಮಾಧವನ ಇನ್ನೊಂದು ಹೆಸರು...
16 ಶ್ರೀಶೈಲದ ಹತ್ತಿರವಿರುವ ಗಂಗೆ..
17 ಅಡುಗೆ ಮಾಡಲು ಇದು ಬೇಕೇಬೇಕು..
18 ರಸ್ತೆಯಲ್ಲಿ ನಡೆಯುವವ...
19 ಮಾಡಿಲಕ್ಕಿಯಲ್ಲಿ ಹಾಕುವ ಸಿಹಿ..
20 ಎಲ್ಲರ ಪ್ರಿಯವಾದ ಗಾಡಿ ತಿಂಡಿ...
21 ಗಣೇಶನ ವಾಹನವನ್ನು ಸಂಹರಿಸಲು ಇದು ಬೇಕು...
22 ದುಷ್ಟದ್ಯುಮ್ನನ ತಂಗಿ...
23 ಚಿಟ್ಟೆಯ ಇನ್ನೊಂದು ಹೆಸರು..
24 ಊಟದ ನಂತರ ಮೆಲ್ಲುವುದು...
25 ರಾಮನವಮಿಯ ಪೇಯ...
Answers / ಉತ್ತರಗಳು
1. ಪಾರ್ವತಿ
2. ಪಾಂಡವರು
3. ಪಾಠಶಾಲೆ
4. ಪಾದರಕ್ಷೆ
5. ಪಾದರಸ
6. ಪಾಮರ
7. ಪಾರಿವಾಳ
8. ಪಾದ
9. ಪಾಕಿಸ್ತಾನ
10. ಪಾರ್ಶ್ವವಾಯು
11. ಪಾಕಶಾಸ್ತ್ರ
12. ಪಾರಿಜಾತ
13. ಪಾಪಿ
14. ಪಾಂಚಜನ್ಯ
15. ಪಾಂಡುರಂಗ
16. ಪಾಪನಾಶಿನಿ
17. ಪಾತ್ರೆ
18. ಪಾದಚಾರಿ
19. ಪಾಕ
20. ಪಾನಿ ಪುರಿ
21. ಪಾಷಾಣ
22. ಪಾಂಚಾಲಿ
23. ಪಾತರಗಿತ್ತಿ
24. ಪಾನ್
25. ಪಾನಕ
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter WhatsApp