ಆಸೆ ಇರಬೇಕು ಆದರೆ ದುರಾಸೆ ಇರಬಾರದು. ಜೀವನ ಅಮೃತವಿದ್ದಂತೆ. ಬದುಕನ್ನು ನಾವು ಶ್ರೀಮಂತಗೊಳಿಸಿಕೊಳ್ಳಬೇಕು. ನಮ್ಮ ಬದುಕಿನ ಉದ್ದೇಶವೇ ಬೇರೆ. ಹಣ ಸಂಪಾದಿಸುವುದೇ ಬದುಕಿನ ಉದ್ದೇಶವಲ್ಲ. ಎಲ್ಲಿ ಅಹಂಕಾರ ಪ್ರದರ್ಶನ ನಡೆಯುತ್ತಯೋ ಅಲ್ಲಿ ಯುದ್ಧ ಸಂಭವಿಸುತ್ತದೆ. ದುರ್ಯೋಧನನಲ್ಲಿದ್ದ ಅಹಂಕಾರವೇ ಕುರುಕ್ಷೇತ್ರಕ್ಕೆ ಕಾರಣವಾಯಿತು. ಮಹಾಭಾರತ, ರಾಮಾಯಣ ಕತೆಗಳೆಲ್ಲ ನೀತಿ ಕಲಿಸಿಕೊಡುವ ಪಾಠಗಳು.
ಒಬ್ಬ ವ್ಯಕ್ತಿ ಊರಿಗೆ ಹೋರಟಿದ್ದ, ಮಧ್ಯ ಕಾಡಿತ್ತು. ಕಾಡು ಬರುತ್ತಿದ್ದಂತೆ ಕತ್ತಲೆ ಆಯಿತು. ಅಲ್ಲೊಬ್ಬ ಸಂತ ವಾಸವಾಗಿದ್ದ. ರಾತ್ರಿಯಲ್ಲಿ ಕಾಡಿನಲ್ಲಿ ಹೋಗಬೇಡ ಎಂದು ಹೇಳಿದ. ಇಲ್ಲ ನಾನು ಹೋಗಲೇಬೇಕು ಎಂದು ಆ ವ್ಯಕ್ತಿ ಪಟ್ಟು ಹಿಡಿದ. ಆಗಾದರೆ ಎರಡು ವಸ್ತು ಕೊಡುವೆ. ಅವು ಮುಗಿಯುವುದರೊಳಗಾಗಿ ನೀನು ಕಾಡು ದಾಟಬೇಕು ಎಂದು ಹೇಳಿ ದಿವಟಿಗಿ ಮತ್ತು ಎಣ್ಣೆ ತುಂಬಿದ ಪಾತ್ರೆ ಕೊಟ್ಟ. ದೀಪ ನಂದುವುದರೊಳಗಾಗಿ ನೀನು ಕಾಡು ತಾಟಬೇಕು. ಇಲ್ಲವಾದರೇ ಪ್ರಾಣಿಗಳಿಗೆ ಬಿಲಿಯಾಗುವಿ. ಸಮುಯ ಹಾಳು ಮಾಡಬೇಡ ಎಂದು ಸಂತ ಹೆಚ್ಚರಿಸಿದ. ಆವ್ಯಕ್ತಿ ಎರಡನ್ನು ಪಡೆದು ಕಾಡು ಪ್ರವೇಶಿದ ದಿವಟಿಗಿ ಬೆಳಕಿನಲ್ಲಿ ಸಾಗುತ್ತಿದ್ದ. ದೂರದಲ್ಲಿ ಏನೂ ಮಿಂಚಿನ ಬೆಳಕು ಗೋಚರಿಸಿತು. ಏನಿರಬಹುದು ಎಂದು ಕುತೂಹಲದಿಂದ ಅತ್ತ ಹೋದ. ಸಂತನ ಮಾತು ಮರೆತ. ದೊಡ್ಡ ಪಾತ್ರೆಯಲ್ಲಿ ಚಿನ್ನದ ನಾಣ್ಯಗಳು ಕಂಡವು. ನಾಣ್ಯಗಳನ್ನು ಎಣಿಸತೊಡಗಿದ 999 ನಾಣ್ಯಗಳು ಲೆಕ್ಕಕ್ಕೆ ಸಿಕ್ಕವು. ಇನ್ನೂ ಒಂದು ಎಲ್ಲಿಗೆ ಹೋಯಿತು ಎಂದು ಮತ್ತೊಮ್ಮೆ ಎಣಿಸಿದ ಆಗ ಮತ್ತೆ ಒಂದು ನಾಣ್ಯ ಕಡಿಮೆ ಆಯಿತು. ಮತ್ತೆ ಮತ್ತೆ ಎಣಿಸಿದಾಗ ಸರಿ ಲೆಕ್ಕ ಸಿಕ್ಕಿತು. ಅಷ್ಟರಲ್ಲಿ ಎಣ್ಣೆ ಮುಗಿಯಿತು ದೀಪ ನಂದಿತು. ಪ್ರಾಣಿಗಳು ಆಕ್ರಮಣ ಮಾಡಿದವು.
ನಮ್ಮ ಜೀವನವು ಹಾಗೆ ಲೌಖಿಕ ಸಂಪತ್ತಿನ ಲೆಕ್ಕಾಚಾರದಲ್ಲಿ ಆಸೆ ಎಂಬ ಚಿನ್ನದ ಆಕರ್ಷಣೆ ಗೊಳಗಾಗುತ್ತವೆ. ಜ್ಞಾನದ ಬೆಳಕಿನ ನೆರವಿನಿಂದ ಸಂಸಾರ ಎಂಬ ಕಾಡು ದಾಟಿ ಭಗವಂತನ ಸನ್ನಿಧಾನ ಎಂಬ ಊರು ಸೇರಬೇಕು. ಜ್ಞಾನ ಎಂಬ ದೀಪ ಮತ್ತು ಆಯುಷ್ಯ ಎಂಬ ಎಣ್ಣೆ ಇರುವರೆಗೆ ಸಾಧನೆ ಮಾಡಬೇಕು. ಆಯುಷ್ಯ ಎಂಬ ಎಣ್ಣೆ ಖಾಲಿ ಆದರೆ ಜೀವನದ ದೀಪ ನಂದಿ ಬಿಡುತ್ತದೆ.
ವ್ಯಕ್ತಿಗೆ ಣಾಣ್ಯಗಳು ಸಿಕ್ಕದ್ದವು ಅವುಗಳನ್ನು ತೆಗೆದುಕೊಂಡು ದೀಪದ ಬೆಳಕು ಇರುವಷ್ಟರಲ್ಲಿ ಕಾಡು ದಾಟಬಹುದಿತ್ತು. ಆದರೆ ಅವನಲ್ಲಿ ಅತಿ ಆಸೆ ಹುಟ್ಟಿತು. ಅತಿ ಆಸೆ ಜೀವನ ಹಾಲು ಮಾಡುತ್ತದೆ ಎಂಬ ಸಂದೇಶ ಈ ಕತೆಯದ್ದಾಗಿದೆ.
ನಮ್ಮ ಜೀವನದಲ್ಲೂ ಭಗವಂತ ಕೊಟ್ಟ ಜ್ಞಾನ ಮತ್ತು ಆಯುಷ್ಯ ಎರಡನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ನಮಗೂ ದೇವರು ಅವಕಾಶ ಎಂಬ ಚಿನ್ನ ವನ್ನು ಕೊಡುತ್ತಾನೆ. ಸಿಕ್ಕ ಅವಕಾಶ ಪಡೆದುಕೊಂಡು ಜೀವನ ಸಾಗಿಸಿದರೆ ಉಜ್ಜೀವನ ವಾಗುತ್ತದೆ. ಅತಿ ಆಸೆ ಪಟ್ಟರೆ ಆ ವ್ಯಕ್ತಿಯ ಗತಿ ನಮಗೂ ಬರುತ್ತದೆ.
| ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ
Subscribe , Follow on
Facebook Instagram YouTube Twitter X WhatsApp