ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಆಚಾರ್ಯ ಚಾಣಾಕ್ಯ ತನ್ನ ಅರ್ಥ ಶಾಸ್ತ್ರ ಗ್ರಂಥದಲ್ಲಿ ಒಬ್ಬ ದೇಶ ಆಳುವ ನಾಯಕ/ರಾಜನಿಗೆ ಇರಬೇಕಾದ ಅರ್ಹತೆ, ಯೋಗ್ಯತೆಗಳನ್ನು ಸೊಗಸಾಗಿ ವಿವರಿಸಿದ್ದಾರೆ.
ಚಾಣಕ್ಯನ ಪ್ರಕಾರ ....
1. ಜಾನಪದಃ - ನಾಯಕನು ಸ್ವದೇಶೀಯನಾಗಿರಬೇಕು.
2. ಅಭಿಜಾತಃ - ಒಳ್ಳೆಯ ಸಂಸ್ಕಾರವಂತ ಮನೆತನದಲ್ಲಿ ಹುಟ್ಟಿರಬೇಕು.
3. ಸು+ಅವಗ್ರಹಃ - ಧರ್ಮಶೀಲರು ಸಾಧು ಸಂತರ ಮಾತುಗಳನ್ನು ಆಲಿಸುವ ತಾಳ್ಮೆ ಮತ್ತು ವಿಧೇಯತೆ ಇರಬೇಕು.
4. ಕೃತಶಿಲ್ಪಹಃ - ಯುದ್ಧವಿದ್ಯಾ ಪರಿಣಿತಿ ಇರಬೇಕು.
5. ಚಕ್ಷುಷ್ಮಾನ್ - ಗೂಢಚಾರರ ಪಡೆಯನ್ನು ಸಮರ್ಥವಾಗಿ ಇಟ್ಟಿರಬೇಕು.
6. ಪ್ರಾಜ್ಞಾಃ - ಸ್ವಂತ ಬುದ್ಧಿ ಉಳ್ಳವನಾಗಿರಬೇಕು.
7. ಧಾರಯಿಷ್ಣುಃ - ನೆನಪಿನ ಶಕ್ತಿ ಚೆನ್ನಾಗಿರಬೇಕು. ಇತಿಹಾಸ ಜ್ಞಾನ ಇರಬೇಕು.
9. ದಕ್ಷಃ - ಯೋಜನೆಗಳನ್ನು ಶೀಘ್ರವಾಗಿ ಜಾರಿಗೆ ತರುವ ಛಲ ಇರಬೇಕು.
9.ವಾಗ್ಮಿ - ಮಧುರವಾಗಿ, ಮೃದುವಾಗಿ, ಯುಕ್ತವಾದುದನ್ನು ಪ್ರಜೆಗಳಿಗೆ ಮನಸ್ಸಿಗೆ ಮುಟ್ಟುವಂತೆ ಹೇಳಬಲ್ಲ ವಾಗ್ಮಿಯಾಗಿರಬೇಕು.
10. ಪ್ರಗಲ್ಭಾಃ - ಪ್ರೌಢವಾಗಿ ಮಾತನಾಡಬಲ್ಲವನಾಗಿರಬೇಕು.
11. ಪ್ರತಿಪತ್ತಿಮಾನ್ - ಎದುರಾಳಿಗಳ ಆಕ್ಷೇಪಗಳಿಗೆ ಸಮರ್ಥ ಉತ್ತರ ಕೊಟ್ಟು ಸಮಾಧಾನ ಪಡಿಸುವ ಯೋಗ್ಯತೆ ಇರಬೇಕು.
12. ಉತ್ಸಾಹ ಪ್ರಭಾವಯುಕ್ತ - ಒಳ್ಳೆಯ ಸ್ನೇಹಿತರು,
ಉಪಕಾರಿಗಳು , ಹಿತೈಷಿಗಳ ಪ್ರಭಾವ ಮತ್ತು ಶಕ್ತಿಯನ್ನು ದೇಶದ ರಕ್ಷಣೆಗಾಗಿ ಬಳಸಿಕೊಳ್ಳುವ ಕಲೆಯನ್ನು ಅರಿತಿರಬೇಕು.
13. ಕ್ಲೇಶಸಹಃ - ಎಷ್ಟೇ ಟೀಕೆಗಳು ಎದುರಾದರೂ, ಎಷ್ಟೇ ಕಷ್ಟಗಳು ಎದುರಾದರೂ ತಾಳ್ಮೆ ಕಳೆದುಕೊಳ್ಳದೆ ಅವೆಲ್ಲವನ್ನೂ ತಡೆದುಕೊಳುವ ಕಷ್ಟ ಸಹಿಷ್ಣುತೆಯನ್ನು ಹೊಂದಿರಬೇಕು.
14. ಶುಚಿಃ - ಕೈ ಬಾಯಿ ಕಚ್ಚೆ ಗಳಲ್ಲಿ ಶುದ್ಧಿ ಇರಬೇಕು.
15. ಮೈತ್ರಃ - ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸುವ ಗುಣ ಹೊಂದಿರಬೇಕು.
16. ದೃಢಭಕ್ತಿಃ - ದೇಶಭಕ್ತಿ ಮತ್ತು ರಾಷ್ಟ್ರ ನಿಷ್ಠೆ ಇರುವವನಾಗಿರಬೇಕು.
17. ಶೀಲ ಬಲ ಆರೋಗ್ಯ ಸತ್ವ ಸಂಯುಕ್ತಃ - ಸದಾಚಾರ, ದೇಹ ಶಕ್ತಿಯುಳ್ಳವನೂ, ಆರೋಗ್ಯವಂತನೂ,
ಧೈರ್ಯವಂತನೂ ಆಗಿರಬೇಕು.
18. ಸ್ತಂಭ ಚಾಪಲ್ಯವರ್ಜಿತಃ - ಅಹಂಕಾರ, ಒಣಜಂಭ, ಚಪಲಗಳಿಂದ ಮುಕ್ತನಾಗಿರಬೇಕು.
19. ಸೌಮ್ಯದರ್ಶನ - ನೋಡುವುದಕ್ಕೆ ಶಾಂತ ಮುಖಮುದ್ರೆಯ ಆಕರ್ಷಕ ಕಳೆಯನ್ನು ಹೊಂದಿದವನಾಗಿರಬೇಕು.
20. ವೈರಾಣಾಂ ಅಕರ್ತಾ - ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಜಗಳ ತಂದು ಹಾಕುವ ಸ್ವಭಾವ ಇರಬಾರದು.
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter X WhatsApp