ಒಂದು ಮನೆಗೆ ಬೆಂಕಿ ಬೀಳುತ್ತದೆ. ಜನ ನೋಡುತ್ತಾ ನಿಂತಿರುತ್ತಾರೆ. ಮನೆ ಯಜಮಾನ ದೂರದಲ್ಲಿ ಅಳುತ್ತ ನಿಂತಿರುತ್ತಾನೆ. ಬಹಳ ಸುಂದರವಾದ ಮನೆ. ಎರಡು ಪಟ್ಟು ಬೆಲೆ ಕೊಡುತ್ತೇನೆಂದರೂ ಮಾರಿರಲಿಲ್ಲ. ಅದಕ್ಕೆ ಅಷ್ಟು ದುಃಖ.
ಅಷ್ಟರಲ್ಲಿ ...ಹಿರಿಯ ಮಗನು ಬಂದನು. " ನಿನಗೆ ಗೊತ್ತಿಲ್ವಾ ಅಪ್ಪಾ ? ಮೂರು ಪಟ್ಟು ಬೆಲೆ ಬಂದಿದಕ್ಕೆ ನೆನ್ನೇ ತಾನೇ ಮನೆ ಮಾರಿದೆ. ನಿನಗೆ ತಿಳಿಸೋದಕ್ಕೆ ಟೈಂ ಇರಲಿಲ್ಲ " ಎಂದನು. ಕೈಯಿಂದ ಒರೆಸಿ ಹಾಕಿದ ಹಾಗೆ ಅವನ ದುಃಖ ಕಡಿಮೆಯಾಯ್ತು. ಸಂತೋಷದಿಂದ ಒಮ್ಮೆ ಜೋರಾಗಿ ಉಸಿರಾಡಿದನು.
ಆ ನಂತರ ಗುಂಪಿನ ಜನರ ಜೊತೆ ಮಾತನಾಡುತ್ತ ಉರಿಯುತ್ತಿರುವ ಮನೆ ಕಡೆ ನೋಡುತ್ತ ನಿಂತನು.ಅದೇ ಮನೆ ಅದೇ ಬೆಂಕಿ ಕ್ಷಣದ ಹಿಂದೆ ಇದ್ದ ಆಟ್ಯಾಚ್‌ಮೆಂಟ್ ಹೋಗಿಬಿಟ್ಟಿತು. ಈಗ ನಿರಾಳವಾಗಿ ( ಕೊಂಚ ಸಂತೋಷದಿಂದ ) ಇದ್ದನು.
ಆಗ ...ಎರಡನೆಯ ಮಗ ಬಂದನು. "ನೀನು ಸಹಿ ಮಾಡದೆ ಮಾರಾಟ ಹೇಗೆ ಪೂರ್ತಿ ಆಗತ್ತೆ ಆಪ್ಪಾ ? ಅಷ್ಟೂ ಗೊತ್ತಿಲ್ಲವಾ ?" ಎಂದನು ಅಷ್ಟೇ. ಮತ್ತೆ ಅವನನ್ನು ದುಃಖ ಆವರಿಸಿಕೊಂಡಿತು.
ಅಷ್ಟರಲ್ಲಿ ...ಮೂರನೆಯ ಮಗ ಬಂದವನೇ - "ಮಾತಿನ ಮೇಲೆ ನಿಲ್ಲುವ ಪ್ರಾಮಾಣಿಕ ಮನುಷ್ಯ ಆತ. ಮಾತಿನಲ್ಲೇ ಮಾರಾಟ ಪೂರ್ತಿ ಆಯಿತು. ಅರ್ಧ ದುಡ್ಡು ಕೊಟ್ಟನು " ಎಂದಾಗ ದುಃಖ ಮರೆಯಾಗಿ ಮತ್ತೆ ಸಂತೋಷವಾಯಿತು.
"ಇದು ನನ್ನದು" ಅಂದರೆ ದುಃಖವಾಗುತ್ತದೆ, ಅಲ್ಲ ಅಂದುಕೊಂಡರೆ ದುಃಖ ದೂರವಾಗುತ್ತದೆ. ನಿಜಕ್ಕೂ ಏನೂ ಬದಲಾವಣೆ ಇರುವುದಿಲ್ಲ. ಇದೇ ಗುರುವರೇಣ್ಯರು ಹೇಳಿದ ನಿರ್ವಿಕಾರಯೋಗ. ಬೇರೆಯವರ ಪ್ರೀತಿ/ಮಾನ್ಯತೆಗಾಗಿ ಒಳ್ಳೆಯತನದಿಂದ ಬದುಕಿರಿ. ನಿಮಗಾಗಿ ಬದುಕಿರಿ. ಆಗ ದುಃಖವು ನಿಮ್ಮನ್ನು ತೊರೆಯುವುದಕ್ಕೆ ದುಃಖಿ
- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter WhatsApp