🌺Sree Ram Jaya Ram🌺
Wishing all a very Happy Rama Navami. May the blessings of Maha Pabu Sri Ram bring peace and harmony to everyone.
Sri Ramar Navami which marks the appearance day of Sri Ramachandra Moorthi.
On this blessed day chant Sri Rama Rama Rameti with heart full of devotion. When Maha Prabu's name is chanted with all sincerity and devotion one gets the effect of chanting the whole of Vishnu Sahasranama Stotra.
Shri Rama Rama Rameti, Rame Rame Manorame;
Sahasrenama tattulyam, Rama Nama Varanane
Meaning:
1: By meditating on "Rama Rama Rama" (the Name of Rama), my Mind gets absorbed in the Divine Consciousness of Rama, which is Transcendental,
2: The Name of Rama is as Great as the Thousand Names of God (Vishnu Sahasranama-stotra, Uttara-khanda, Padma Purana 72.335).
Or you may simply chant Sri Ram Jaya Ram Jaya Jaya Ram 108 times
Chanting Ramar Namam
instills confidence and promotes peace and harmony. More importantly Sri Ram, Hanuman and Sri Raghavendra Swamy will bless you and your family.
*************************
ಶ್ರೀರಾಮ ರಾಮ ರಾಮೇತಿ ರಮೇರಾಮೇ ಮನೋರಮೇ।
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ।।
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ।
ರಘುನಾಥಾಯ ನಾಥಾಯ
ಸೀತಾಯಾಃ ಪತಯೇ ನಮಃ।।
🙏🙏ಈ ಶ್ರೀರಾಮನವಮಿಯು ಸರ್ವರಿಗೂ ಸನ್ಮಂಗಲವನ್ನುಂಟುಮಾಡಿ ಸರ್ವರೋಗ ರುಜಿನಗಳು ದೂರವಾಗಿ, ಆ ಸೀತಾಸಮೇತ ಶ್ರೀ ರಾಮನು ಸಮಸ್ತ ಜೀವಿಗಳಿಗೂ ಆಯುರಾರೋಗ್ಯ ಐಶ್ವರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ 🙏🙏
**************************
॥ನಾಮರಾಮಾಯಣಂ॥
॥ಬಾಲಕಾಂಡಃ॥
ಶುದ್ಧಬ್ರಹ್ಮಪರಾತ್ಪರ ರಾಮ॥೧॥
ಕಾಲಾತ್ಮಕಪರಮೇಶ್ವರ ರಾಮ॥೨॥
ಶೇಷತಲ್ಪಸುಖನಿದ್ರಿತ ರಾಮ॥೩॥
ಬ್ರಹ್ಮಾದ್ಯಮರಪ್ರಾರ್ಥಿತ ರಾಮ॥೪॥
ಚಂಡಕಿರಣಕುಲಮಂಡನ ರಾಮ॥೫॥
ಶ್ರೀಮದ್ದಶರಥನಂದನ ರಾಮ॥೬॥
ಕೌಸಲ್ಯಾಸುಖವರ್ಧನ ರಾಮ॥೭॥
ವಿಶ್ವಾಮಿತ್ರಪ್ರಿಯಧನ ರಾಮ॥೮॥
ಘೋರತಾಟಕಾಘಾತಕ ರಾಮ॥೯॥
ಮಾರೀಚಾದಿನಿಪಾತಕ ರಾಮ॥೧೦॥
ಕೌಶಿಕಮಖಸಂರಕ್ಷಕ ರಾಮ॥೧೧॥
ಶ್ರೀಮದಹಲ್ಯೋದ್ಧಾರಕ ರಾಮ॥೧೨॥
ಗೌತಮಮುನಿಸಂಪೂಜಿತ ರಾಮ॥೧೩॥
ಸುರಮುನಿವರಗಣಸಂಸ್ತುತ ರಾಮ॥೧೪॥
ನಾವಿಕಧಾವಿತಮೃದುಪದ ರಾಮ॥೧೫॥
ಮಿಥಿಲಾಪುರಜನಮೋಹಕ ರಾಮ॥೧೬॥
ವಿದೇಹಮಾನಸರಂಜಕ ರಾಮ॥೧೭॥
ತ್ರ್ಯಂಬಕಕಾರ್ಮುಕಭಂಜಕ ರಾಮ॥೧೮॥
ಸೀತಾರ್ಪಿತವರಮಾಲಿಕ ರಾಮ॥೧೯॥
ಕೃತವೈವಾಹಿಕಕೌತುಕ ರಾಮ॥೨೦॥
ಭಾರ್ಗವದರ್ಪವಿನಾಶಕ ರಾಮ॥೨೧॥
ಶ್ರೀಮದಯೋಧ್ಯಾಪಾಲಕ ರಾಮ॥೨೨॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅಯೋಧ್ಯಾಕಾಂಡಃ॥
ಅಗಣಿತಗುಣಗಣಭೂಷಿತ ರಾಮ॥೨೩॥
ಅವನೀತನಯಾಕಾಮಿತ ರಾಮ॥೨೪॥
ರಾಕಾಚಂದ್ರಸಮಾನನ ರಾಮ॥೨೫॥
ಪಿತೃವಾಕ್ಯಾಶ್ರಿತಕಾನನ ರಾಮ॥೨೬॥
ಪ್ರಿಯಗುಹವಿನಿವೇದಿತಪದ ರಾಮ॥೨೭॥
ತತ್ಕ್ಷಾಲಿತನಿಜಮೃದುಪದ ರಾಮ॥೨೮॥
ಭರದ್ವಾಜಮುಖಾನಂದಕ ರಾಮ॥೨೯॥
ಚಿತ್ರಕೂಟಾದ್ರಿನಿಕೇತನ ರಾಮ॥೩೦॥
ದಶರಥಸಂತತಚಿಂತಿತ ರಾಮ॥೩೧॥
ಕೈಕೇಯೀತನಯಾರ್ಥಿತ ರಾಮ॥೩೨॥
ವಿರಚಿತನಿಜಪಿತೃಕರ್ಮಕ ರಾಮ॥೩೩॥
ಭರತಾರ್ಪಿತನಿಜಪಾದುಕ ರಾಮ॥೩೪॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಅರಂಯಕಾಂಡಃ॥
ದಂಡಕಾವನಜನಪಾವನ ರಾಮ॥೩೫॥
ದುಷ್ಟವಿರಾಧವಿನಾಶನ ರಾಮ॥೩೬॥
ಶರಭಂಗಸುತೀಕ್ಷ್ಣಾರ್ಚಿತ ರಾಮ॥೩೭॥
ಅಗಸ್ತ್ಯಾನುಗ್ರಹವರ್ಧಿತ ರಾಮ॥೩೮॥
ಗೃಧ್ರಾಧಿಪಸಂಸೇವಿತ ರಾಮ॥೩೯॥
ಪಂಚವಟೀತಟಸುಸ್ಥಿತ ರಾಮ॥೪೦॥
ಶೂರ್ಪಣಖಾರ್ತ್ತಿವಿಧಾಯಕ ರಾಮ॥೪೧॥
ಖರದೂಷಣಮುಖಸೂದಕ ರಾಮ॥೪೨॥
ಸೀತಾಪ್ರಿಯಹರಿಣಾನುಗ ರಾಮ॥೪೩॥
ಮಾರೀಚಾರ್ತಿಕೃತಾಶುಗ ರಾಮ॥೪೪॥
ವಿನಷ್ಟಸೀತಾಂವೇಷಕ ರಾಮ॥೪೫॥
ಗೃಧ್ರಾಧಿಪಗತಿದಾಯಕ ರಾಮ॥೪೬॥
ಶಬರೀದತ್ತಫಲಾಶನ ರಾಮ॥೪೭॥
ಕಬಂಧಬಾಹುಚ್ಛೇದನ ರಾಮ॥೪೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಕಿಷ್ಕಿಂಧಾಕಾಂಡಃ॥
ಹನುಮತ್ಸೇವಿತನಿಜಪದ ರಾಮ॥೪೯॥
ನತಸುಗ್ರೀವಾಭೀಷ್ಟದ ರಾಮ॥೫೦॥
ಗರ್ವಿತವಾಲಿಸಂಹಾರಕ ರಾಮ॥೫೧॥
ವಾನರದೂತಪ್ರೇಷಕ ರಾಮ॥೫೨॥
ಹಿತಕರಲಕ್ಷ್ಮಣಸಂಯುತ ರಾಮ॥೫೩॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಸುಂದರಕಾಂಡಃ॥
ಕಪಿವರಸಂತತಸಂಸ್ಮೃತ ರಾಮ॥೫೪॥
ತದ್ಗತಿವಿಘ್ನಧ್ವಂಸಕ ರಾಮ॥೫೫॥
ಸೀತಾಪ್ರಾಣಾಧಾರಕ ರಾಮ॥೫೬॥
ದುಷ್ಟದಶಾನನದೂಷಿತ ರಾಮ॥೫೭॥
ಶಿಷ್ಟಹನೂಮದ್ಭೂಷಿತ ರಾಮ॥೫೮॥
ಸೀತಾವೇದಿತಕಾಕಾವನ ರಾಮ॥೫೯॥
ಕೃತಚೂಡಾಮಣಿದರ್ಶನ ರಾಮ॥೬೦॥
ಕಪಿವರವಚನಾಶ್ವಾಸಿತ ರಾಮ॥೬೧॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಯುದ್ಧಕಾಂಡಃ॥
ರಾವಣನಿಧನಪ್ರಸ್ಥಿತ ರಾಮ॥೬೨॥
ವಾನರಸೈನ್ಯಸಮಾವೃತ ರಾಮ॥೬೩॥
ಶೋಷಿತಸರಿದೀಶಾರ್ಥಿತ ರಾಮ॥೬೪॥
ವಿಭೀಷಣಾಭಯದಾಯಕ ರಾಮ॥೬೫॥
ಪರ್ವತಸೇತುನಿಬಂಧಕ ರಾಮ॥೬೬॥
ಕುಂಭಕರ್ಣಶಿರಶ್ಛೇದಕ ರಾಮ॥೬೭॥
ರಾಕ್ಷಸಸಂಘವಿಮರ್ದಕ ರಾಮ॥೬೮॥
ಅಹಿಮಹಿರಾವಣಚಾರಣ ರಾಮ॥೬೯॥
ಸಂಹೃತದಶಮುಖರಾವಣ ರಾಮ॥೭೦॥
ವಿಧಿಭವಮುಖಸುರಸಂಸ್ತುತ ರಾಮ॥೭೧॥
ಖಃಸ್ಥಿತದಶರಥವೀಕ್ಷಿತ ರಾಮ॥೭೨॥
ಸೀತಾದರ್ಶನಮೋದಿತ ರಾಮ॥೭೩॥
ಅಭಿಷಿಕ್ತವಿಭೀಷಣನತ ರಾಮ॥೭೪॥
ಪುಷ್ಪಕಯಾನಾರೋಹಣ ರಾಮ॥೭೫॥
ಭರದ್ವಾಜಾಭಿನಿಷೇವಣ ರಾಮ॥೭೬॥
ಭರತಪ್ರಾಣಪ್ರಿಯಕರ ರಾಮ॥೭೭॥
ಸಾಕೇತಪುರೀಭೂಷಣ ರಾಮ॥೭೮॥
ಸಕಲಸ್ವೀಯಸಮಾನತ ರಾಮ॥೭೯॥
ರತ್ನಲಸತ್ಪೀಠಾಸ್ಥಿತ ರಾಮ॥೮೦॥
ಪಟ್ಟಾಭಿಷೇಕಾಲಂಕೃತ ರಾಮ॥೮೧॥
ಪಾರ್ಥಿವಕುಲಸಮ್ಮಾನಿತ ರಾಮ॥೮೨॥
ವಿಭೀಷಣಾರ್ಪಿತರಂಗಕ ರಾಮ॥೮೩॥
ಕೀಶಕುಲಾನುಗ್ರಹಕರ ರಾಮ॥೮೪॥
ಸಕಲಜೀವಸಂರಕ್ಷಕ ರಾಮ॥೮೫॥
ಸಮಸ್ತಲೋಕಾಧಾರಕ ರಾಮ॥೮೬॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಉತ್ತರಕಾಂಡಃ॥
ಆಗತಮುನಿಗಣಸಂಸ್ತುತ ರಾಮ॥೮೭॥
ವಿಶ್ರುತದಶಕಂಠೋದ್ಭವ ರಾಮ॥೮೮॥
ಸಿತಾಲಿಂಗನನಿರ್ವೃತ ರಾಮ॥೮೯॥
ನೀತಿಸುರಕ್ಷಿತಜನಪದ ರಾಮ॥೯೦॥
ವಿಪಿನತ್ಯಾಜಿತಜನಕಜ ರಾಮ॥೯೧॥
ಕಾರಿತಲವಣಾಸುರವಧ ರಾಮ॥೯೨॥
ಸ್ವರ್ಗತಶಂಬುಕಸಂಸ್ತುತ ರಾಮ॥೯೩॥
ಸ್ವತನಯಕುಶಲವನಂದಿತ ರಾಮ॥೯೪॥
ಅಶ್ವಮೇಧಕ್ರತುದೀಕ್ಷಿತ ರಾಮ॥೯೫॥
ಕಾಲಾವೇದಿತಸುರಪದ ರಾಮ॥೯೬॥
ಆಯೋಧ್ಯಕಜನಮುಕ್ತಿದ ರಾಮ॥೯೭॥
ವಿಧಿಮುಖವಿಬುಧಾನಂದಕ ರಾಮ॥೯೮॥
ತೇಜೋಮಯನಿಜರೂಪಕ ರಾಮ॥೯೯॥
ಸಂಸೃತಿಬಂಧವಿಮೋಚಕ ರಾಮ॥೧೦೦॥
ಧರ್ಮಸ್ಥಾಪನತತ್ಪರ ರಾಮ॥೧೦೧॥
ಭಕ್ತಿಪರಾಯಣಮುಕ್ತಿದ ರಾಮ॥೧೦೨॥
ಸರ್ವಚರಾಚರಪಾಲಕ ರಾಮ॥೧೦೩॥
ಸರ್ವಭವಾಮಯವಾರಕ ರಾಮ॥೧೦೪॥
ವೈಕುಂಠಾಲಯಸಂಸ್ಥಿತ ರಾಮ॥೧೦೫॥
ನಿತ್ಯಾನಂದಪದಸ್ಥಿತ ರಾಮ॥೧೦೬॥
ರಾಮ ರಾಮ ಜಯ ರಾಜಾ ರಾಮ॥೧೦೭॥
ರಾಮ ರಾಮ ಜಯ ಸೀತಾ ರಾಮ॥೧೦೮॥
ರಾಮ ರಾಮ ಜಯ ರಾಜಾ ರಾಮ।
ರಾಮ ರಾಮ ಜಯ ಸೀತಾ ರಾಮ॥
॥ಇತಿ ನಾಮರಾಮಾಯಣಂ ಸಂಪೂರ್ಣಂ॥
*************************
ಸರ್ವರಿಗೂ ಶ್ರೀರಾಮ ನವಮಿಯ ಶುಭಾಶಯಗಳು
Wishes of Safe and Happy Shrirama navami to everyone
**************************
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ.. ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು🕉️🙏ಜೈ ಶ್ರೀ ರಾಮ
**************************
🌸On this holy occasion of Rama Navami, I am wishing that blessings of Shri Rama be with you. Your heart and home be filled with happiness, peace and prosperity. Happy Ram Navami🌸
**************************
ಮಾನ್ಯರೇ, ಸರ್ವರಿಗೂ ಶ್ರೀ ರಾಮ ನವಮಿ ಶುಭಾಶಯಗಳು ಸಾಮಾನ್ಯ ವಾಗಿ ನಾವು ಪಠಿಸುವ ಶ್ರೀ ರಾಮ ಶ್ಲೋಕದ ಅರ್ಥ ಈ ಶುಭದಿನದಲ್ಲಿ ತಿಳಿಯುವ ಪ್ರಯತ್ನ ...... **_ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ|||**
ರಾಮ - ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ರಾಮಾ ಎಂದು ಕರೆಯುತ್ತಿದ್ದನಂತೆ.
ರಾಮಚಂದ್ರ - ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು ವಾತ್‌ಲ್ಯದಿಂದ ರಾಮಭದ್ರ ಎನ್ನುತ್ತಿದ್ದಳಂತೆ.
ರಾಮಚಂದ್ರ - .ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು. ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು.!
ವೇಧಸೇ - ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದೂ, ವೇದಪ್ರತಿಪಾದ್ಯನೆಂದೂ ತಿಳಿದು ವೇಧಸೇ ಎಂದು ಕರೆಯುತ್ತಿದ್ದರು.
ರಘುನಾಥ - ಅಯೋಧ್ಯೆಯ ಪುರಜನರೆಲ್ಲಾ ರಘುವಂಶದ ಅತ್ಯಂತ ಸಮರ್ಥ ರಾಜ ಎಂಬರ್ಥದಲ್ಲಿ ರಘುನಾಥ ಎಂದು ಕರೆಯುತ್ತಿದ್ದರು.
ನಾಥ - ಸೀತಾದೇವಿ ಮಾತ್ರ. ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು. ಏಕಪತ್ನೀ ವ್ರತಸ್ಥ ರಾಮಚಂದ್ರನನ್ನು ನಾಥ ಎನ್ನುತ್ತಿದ್ದಳು.
ಸೀತಾಪತಯೇ ನಮಃ: - ಜನಕರಾಜಾದಿ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ ಸೀತಾಯ ಪತಯೇ ಎನ್ನುತ್ತಿದ್ದರು.
************************
||ರಾಮನಾಮ ಪಾಯಸಕ್ಕೆ
ಕೃಷ್ಣನಾಮ ಸಕ್ಕರೆ
ವಿಠಲನಾಮ ತುಪ್ಪವ ಬೆರೆಸಿ
||ಬಾಯಿ ಚಪ್ಪರಿಸಿರೊ|| ||
||ಒಮ್ಮನ ಗೋಧಿಯ ತಂದು
ವೈರಾಗ್ಯ ಕಲ್ಲಲಿ ಬೀಸಿ||
||ಸುಮ್ಮನೆ ಸಜ್ಜಿಗೆ ತೆಗೆದು
ಸಣ್ಣ ಶಾವಿಗೆಯ ಮಾಡಿರೊ||
||ರಾಮನಾಮ ಪಾಯಸಕ್ಕೆ||
||ಹೃದಯವೆಂಬೊ ಮಡಿಕೆಯಲ್ಲಿ
ಭಾವವೆಂಬೊ ಎಸರು ಇಟ್ಟು||
||ಬುದ್ದಿಯಿಂದ ಪಕ್ವವ ಮಾಡಿ ಅರಿವಾಣದಿ ಬಡಿಸಿಕೊಂಡು||
||ಆನಂದ ಆನಂದವೆಂಬೊ
ತೇಗು ಬಂದಾಗ
ಎರಡು ತೇಗು ಬಂದಾಗ||
||ಆನಂದಮೂರುತಿ ನಮ್ಮ
ಪುರಂದರವಿಠಲನ ನೆನೆಯಿರೊ||
||ರಾಮನಾಮ ಪಾಯಸಕ್ಕೆ||
*******************
ಶ್ರೀ ರಾಮಚಂದ್ರನ ವಂಶವೃಕ್ಷ
ಬ್ರಹ್ಮನ ಮಗ ಮರೀಚಿ
ಮರೀಚಿಯ ಮಗ ಕಾಶ್ಯಪ
ಕಾಶ್ಯಪರ ಮಗ ಸೂರ್ಯ
ಸೂರ್ಯನ ಮಗ ಮನು
ಮನುವಿನ ಮಗ ಇಕ್ಷ್ವಾಕು
ಇಕ್ಷ್ವಾಕುವಿನ ಮಗ ಕುಕ್ಷಿ
ಕುಕ್ಷಿಯ ಮಗ ವಿಕುಕ್ಷಿ
ವಿಕುಕ್ಷಿಯ ಮಗ ಬಾಣ
ಬಾಣನ ಮಗ ಅನರಣ್ಯ
ಅನರಣ್ಯನ ಮಗ ಪೃಥು
ಪೃಥುವಿನ ಮಗ ತ್ರಿಶಂಕು
ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
ದುಂಧುಮಾರುವಿನ ಮಗ ಮಾಂಧಾತ
ಮಾಂಧಾತುವಿನ ಮಗ ಸುಸಂಧಿ
ಸುಸಂಧಿಯ ಮಗ ಧೃವಸಂಧಿ
ಧೃವಸಂಧಿಯ ಮಗ ಭರತ
ಭರತನ ಮಗ ಅಶೀತಿ
అಶೀತಿಯ ಮಗ ಸಗರ
ಸಗರನ ಮಗ ಅಸಮಂಜಸ
ಅಸಮಂಜಸನ ಮಗ ಅಂಶುಮಂತ
ಅಂಶುಮಂತನ ಮಗ ದಿಲೀಪ
ದಿಲೀಪನ ಮಗ ಭಗೀರಥ
ಭಗೀರಥನ ಮಗ ಕಕುತ್ಸು
ಕಕುತ್ಸುವಿನ ಮಗ ರಘು
ರಘುವಿನ ಮಗ ಪ್ರವುರ್ಧ
ಪ್ರವುರ್ಧನ ಮಗ ಶಂಖನು
ಶಂಖನುವಿನ ಮಗ ಸುದರ್ಶನ
ಸುದರ್ಶನನ ಮಗ ಅಗ್ನಿವರ್ಣ
ಅಗ್ನಿವರ್ಣನ ಮಗ ಶೀಘ್ರವೇದ
ಶೀಘ್ರವೇದನ ಮಗ ಮರು
ಮರುವಿನ ಮಗ ಪ್ರಶಿಷ್ಯಕ
ಪ್ರಶಿಷ್ಯಕನ ಮಗ ಅಂಬರೀಶ
ಅಂಬರೀಶನ ಮಗ ನಹುಶ
ನಹುಶನ ಮಗ ಯಯಾತಿ
ಯಯಾತಿಯ ಮಗ ನಾಭಾಗ
ನಾಭಾಗನ ಮಗ ಅಜ
ಅಜನ ಮಗ ದಶರಥ
ದಶರಥನ ಮಗ ರಾಮ
Happy ಶ್ರೀ ರಾಮ ನವಮಿ.
**********************
ಆಪದಾಮಪಹರ್ತಾರಂ ದಾತರಾಂ ಸರ್ವಸಂಪದಾಂ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ ||
ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯ ಪತಯೇ ನಮ: ||
ನೀಲಾಂಬುಜ ಶ್ಯಾಮಲಾ ಕೋಮಲಾಂಗಂ ಸೀತಾಸಮರೋಪಿತ ವಾಮಭಾಗಂ |
ಪಾಣೌ ಮಹಾಸಾಯಕಚಾರುಚಾಪಂ ನಮಾಮಿ ರಾಮಂ ರಘುವಂಶನಾಥಂ ||
ಮಾತಾ ರಾಮೋ ಮತ್ಪತಿತಾ ರಾಮಚಂದ್ರ: ಭ್ರಾತಾ ರಾಮೋ ಮತ್ಸಖಾ ರಾಘವೇಶ: |
ಸರ್ವಸ್ವಂ ಮೇ ರಾಮಚಂದ್ರೋದಯಾಲು: ನಾನ್ಯಂ ದೈವಂ ನೈವ ಜಾನೇ ನ ಜಾನೇ ||
ನಮೋಸ್ತು ರಾಮಾಯ ಸಲಕ್ಷಣಾಯ ದೇವೈ: ಚ ತಸ್ಮೈ ಜನಕಾತ್ಮಜಾಯೈ |
ನಮೋಸ್ತು ರುದ್ರೇಂದ್ರ ಯಮಾನಿಲೇಭ್ಯೋ ನಮಸ್ತು ಚಂದ್ರಾರ್ಕ ಮರುದ್ಗೇಣೇಭ್ಯ: ||
🙏🙏ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು, ರಾಮಚಂದ್ರಪ್ರಭು ಸಕಲರಿಗೂ ಆರೋಗ್ಯ ಭಾಗ್ಯ ದಯಪಾಲಿಸಲಿ, ಶುಭವಾಗಲಿ🙏🙏
*********
ಶ್ರೀ ರಾಮನವಮಿ ಆಚರಣೆಯ ಆಧ್ಯಾತ್ಮಿಕ ಮಹತ್ವವೇನು ಗೊತ್ತಾ?
ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ.
*ಪೌರಾಣಿಕ ಹಿನ್ನೆಲೆ*
ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.
*ರಾಮನವಮಿಯ ಮಹತ್ವ*
ಶ್ರೀರಾಮನು ಜನಿಸಿದ ದಿನವೆಂದು ಆಚರಿಸಲಾಗುವ ಹಬ್ಬ ರಾಮನವಮಿ. ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪುತ್ರನಾಗಿ ಮಹಾವಿಷ್ಣುವಿನ ಏಳನೇ ಅವತಾರವಾಗಿ ಶ್ರೀರಾಮನು ಜನಿಸುತ್ತಾನೆ. ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಪ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.
*ರಾಮನವಮಿಯ ಆಧ್ಯಾತ್ಮಿಕ ಮಹತ್ವ*
ರಾಮ ಎನ್ನುವ ಎರಡು ಅಕ್ಷರದಲ್ಲಿ ಮಹತ್ವಪೂರ್ಣವಾದ ಅರ್ಥವಿದೆ 'ರಾ' ಎಂದರೆ ಬೆಳಕು 'ಮ' ಎಂದರೆ ಒಳಗೆ. ಅಂದರೆ ನಿಮ್ಮೊಳಗಿನ ದೈವಿಕ ಬೆಳಕು ರಾಮ.
ದಶರಥ: ಶ್ರೀರಾಮನ ತಂದೆ ದಶರಥ 'ದಶ' ಎಂದರೆ ಹತ್ತು, 'ರಥ' ಎಂದರೆ ರಥ. ಹತ್ತು ರಥಗಳು ಎಂದರೆ ಐದು ಕಾರ್ಯ ಇಂದ್ರಿಯಗಳು. ಇದನ್ನು ಕರ್ಮೇಂದ್ರಿಯಗಳು ಎಂದೂ ಕರೆಯುತ್ತಾರೆ. ಇದರಲ್ಲಿ ಮಾತನಾಡುವ ಸಾಮರ್ಥ್ಯ, ಕೈಗಳು, ಕಾಲುಗಳು, ಚಲಿಸುವ ಭಾಗಗಳು ಹಾಗೂ ಜನನಾಂಗಗಳು ಸೇರಿವೆ. ಉಳಿದವು ಐದು ಜ್ಞಾನೇಂದ್ರಿಗಳು ಇದರಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಸ್ಪರ್ಶ ಪ್ರಜ್ಞೆ ಸೇರಿದೆ.
ಕೌಸಲ್ಯಾ: ಕೌಸಲ್ಯೆ ರಾಮನ ತಾಯಿ. ಕೌಸಲ್ಯಾ ಹೆಸರಿನ ಅರ್ಥ 'ಕೌಶಲ್ಯ' . ಒಬ್ಬ ನುರಿತ ರಥಿಕನು ಹತ್ತು ರಥಗಳನ್ನು ಸವಾರಿ ಮಾಡುತ್ತಾನೆ. ಇಂತಹ ಶಕ್ತಿಯು ರಾಮನಲ್ಲಿದೆ.
ಆಯೋಧ್ಯೆ: ಶ್ರೀರಾಮನು ಜನಿಸಿದ ಸ್ಥಳ. 'ಯೋಧ್ಯಾ' ಎಂದರೆ ಯುದ್ಧ, 'ಅ' ಎಂದರೆ ಯುದ್ಧದ ಋಣಾತ್ಮಕ ಪೂರ್ವಪ್ರತ್ಯಯ. ಅಂದರೆ ಯುದ್ಧವಿಲ್ಲದ, ಸಮೃದ್ಧಿ ಹಾಗೂ ನ್ಯಾಯಯುತವಾಗಿರುವ ಸ್ಥಳವನ್ನು ಅಯೋಧ್ಯೆ ಎಂದು ಕರೆಯುತ್ತಾರೆ.
*ಶ್ರೀರಾಮನ ಕುರಿತಾಗಿರುವ ಅಚ್ಚರಿಯ ಸಂಗತಿಗಳು ಏನು ಗೊತ್ತಾ?*
ನಮ್ಮೊಳಗಿರುವ ಶ್ರೀ ರಾಮ
ಸತ್ಯಯುಗದಲ್ಲಿ ವಿವಿಧ ಗ್ರಹಗಳ ದೇವರು ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದವು. ತ್ರೇತಾಯುಗದಲ್ಲಿ ಒಂದೇ ಗ್ರಹದಲ್ಲಿ ವಾಸಿಸುತ್ತಿದ್ದ ದೇವರು ಮತ್ತು ಅಸುರರ ಮಧ್ಯೆ ಯುದ್ಧ ನಡೆದವು. ಅಂದರೆ ಅಯೋಧ್ಯೆಯಿಂದ ರಾಮ ಹಾಗೂ ಲಂಕೆಯ ರಾವಣನ ಮಧ್ಯೆ ಯುದ್ಧ ನಡೆಯಿತು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಅಂದರೆ ಪಾಂಡವರು ಮತ್ತು ಕೌರವರ ಮಧ್ಯೆ. ಕಲಿಯುಗದಲ್ಲಿ ಯುದ್ಧಗಳು ನಮ್ಮೊಳಗೇ ನಡೆಯುತ್ತಿವೆ.
ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಾನ್ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು, ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ.
*ರಾಮ ನವಮಿಯ ಆಚರಣೆ*
ಅನೇಕ ಕಡೆಗಳಲ್ಲಿ ಚೈತ್ರ ಮಾಸದ ಪ್ರತಿಪಾದದಿಂದ ಒಂಭತ್ತು ದಿನಗಳವರೆಗೆ ರಾಮನವಮಿ ಉತ್ಸವವು ನಡೆಯುತ್ತದೆ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿ, ಅರ್ಚಿಸಲಾಗುತ್ತದೆ.ಈ ದಿನದಂದು ಉಪವಾಸವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ರಾಮನವಮಿಯಂದು ಬೆಳಗ್ಗೆಯಿಂದ ಮರುದಿನ ಬೆಳಗ್ಗೆಯವರೆಗೂ ಉಪವಾಸವನ್ನು ಕೈಗೊಳ್ಳಬೇಕು. ಈ ಸಮಯದಲ್ಲಿ ಶ್ರೀರಾಮ ಜಪ, ರಾಮಾಯಣ ಪಾರಾಯಣ, ಶ್ರೀ ರಾಮ ಸೀತಾ ಕಲ್ಯಾಣ್ಯೋತ್ಸವವನ್ನೂ ಮಾಡಬಹುದು.
ಕೆಲವೆಡೆ ಪ್ರತಿಪಾದದಿಂದ ನವಮಿಯವರೆಗೂ ಒಂಭತ್ತು ದಿನಗಳಲ್ಲಿ ಭಜನೆ ಹಾಗೂ ಕೀರ್ತನೆಗಳನ್ನು ಆಯೋಜಿಸುತ್ತಾರೆ.ಈ ದಿನ ಕೆಲವು ಭಕ್ತರು ಕಟ್ಟುನಿಟ್ಟಾದ ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ನಿರಾಹಾರ ಉಪವಾಸವನ್ನೂ ಮಾಡುವವರಿದ್ದಾರೆ. ಕೆಲವರು ಸೌಮ್ಯವಾದ ಉಪವಾಸವನ್ನು ಆಚರಿಸಿ, ನೀರು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ರಾಮನವಮಿಯಂದು ಶ್ರೀರಾಮನ
ಜನ್ಮಸ್ಥಳವಾದ ಅಯೋಧ್ಯೆಗೆ ಭೇಟಿ ನೀಡಿ ಸರಯೂ ನದಿಯಲ್ಲಿ ಮಿಂದು ಶ್ರೀರಾಮನ ದರ್ಶನ ಮಾಡಿ ಪಾವನರಾಗುತ್ತಾರೆ. ಧರ್ಮವನ್ನು ರಕ್ಷಿಸಲು ಮತ್ತು ಉತ್ತಮ ನಡತೆಯ ಮಾದರಿಯನ್ನು ಹೊಂದಿಸಲು ಅವರು ತಮ್ಮ ಇಡೀ ಜೀವನವನ್ನು ಪಣಕ್ಕಿಟ್ಟರು, ಅವರು ತಮ್ಮನ್ನು ತಾವು ಆದರ್ಶ ಪುರುಷ ಎಂದು ಜೀವನದುದ್ದಕ್ಕೂ ನೋಡಿಕೊಂಡರು. ಈ ಕಾರಣದಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಂದು ಕರೆಯುತ್ತಾರೆ. ಕಷ್ಟಕಾಲದಲ್ಲಿಯೂ ಶ್ರೀರಾಮನು ಧರ್ಮ ಮಾರ್ಗವನ್ನು ಅರ್ಧಕ್ಕೆ ಬಿಡದೆ ಸಮಾಜದ ಮುಂದೆ ತಾನೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಸಾಬೀತುಪಡಿಸಿದನು.
*ರಾಮ ನವಮಿಯ ಪೂಜೆ ವಿಧಾನ:*
- ರಾಮ ನವಮಿಯ ದಿನದಂದು ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿದ ನಂತರ ಶುಭ್ರವಾದ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ಉಪವಾಸದ ಪ್ರತಿಜ್ಞೆ ಮಾಡಿ. ಇದರೊಂದಿಗೆ ಗಂಗಾಜಲವನ್ನು ಸಿಂಪಡಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ.
- ರಾಮನ ಪೂಜೆಯಲ್ಲಿ ತುಳಸಿ ಪತ್ರೆಗಳು ಮತ್ತು ಕಮಲದ ಹೂವು ಕಡ್ಡಾಯವಾಗಿರಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
- ಮರದ ಪೀಠವನ್ನು ತೆಗೆದುಕೊಂಡು, ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ಅದರ ಮೇಲೆ ರಾಮನು ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವನ್ನು ಅಥವಾ ವಿಗ್ರಹವನ್ನು ಸ್ಥಾಪಿಸಿ.
- ಇದರ ನಂತರ ಗಂಗಾಜಲವನ್ನು ಸಿಂಪಡಿಸಿ ಮತ್ತು ಅಕ್ಕಿಯಿಂದ ಅಷ್ಟದಳವನ್ನು ಮಾಡಿ. ಅಷ್ಟದಳದ ಮೇಲೆ ತಾಮ್ರದ ಕಲಶವನ್ನು ಇಟ್ಟು ನಾಲ್ಕು ಮುಖದ ದೀಪವನ್ನು ಬೆಳಗಿಸಿ.
- ಬೇಕಿದ್ದರೆ ತೊಟ್ಟಿಲಿನಲ್ಲಿ ಬಾಲ ರಾಮನ ಅಥವಾ ರಾಮ ಲೀಲೆಯ ವಿಗ್ರಹವನ್ನು ಇಟ್ಟು ತೂಗಿ, ನಂತರ ರಾಮನಿಗೆ ಆರತಿಯನ್ನು ಮಾಡಬೇಕು ಅಥವಾ ವಿಷ್ಣು ಸಹಸ್ರನಾಮ ಪಠಿಸಬಹುದು. ಇದರ ನಂತರ, ಖೀರ್ ಅಂದರೆ ಪಾಯಸ, ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
- ಈ ದಿನ ನೀವು ರಾಮನ ಭಕ್ತಿಯಲ್ಲಿ ಮುಳುಗಿ ಕೀರ್ತನೆಯನ್ನು ಹಾಡಬಹುದು. ಹಾಗೂ ಈ ದಿನ ರಾಮಚರಿತ ಮಾನಸ ಮತ್ತು ರಾಮ ಸ್ತೋತ್ರವನ್ನು ಸಹ ಪಠಿಸಬಹುದು. ಇದರೊಂದಿಗೆ ಸಂಜೆ ರಾಮನಿಗೆ ಸಂಬಂಧಿಸಿದ ಕಥೆಯನ್ನು ಕೂಡ ಕೇಳಿ.
- ರಾಮನವಮಿ ಉಪವಾಸವನ್ನು ಆಚರಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಇದು ಶ್ರೀರಾಮನ ಆಶೀರ್ವಾದವನ್ನು ಪಡೆದುಕೊಳ್ಳಲು ಕೂಡ ಹೆಚ್ಚು ಸಹಕಾರಿಯಾಗಿದೆ.
ರಾಮ ನವಮಿಯಂದು ಈ ಮೇಲಿನಂತೆ ರಾಮನನ್ನು ಪೂಜಿಸುವುದರಿಂದ ಅಥವಾ ರಾಮ ನವಮಿ ವ್ರತವನ್ನು ಆಚರಿಸುವುದರಿಂದ ಭಗವಾನ್ ರಾಮನ ಆಶೀರ್ವಾದವನ್ನು ಪಡೆದುಕೊಳ್ಳಬಹುದು. ರಾಮ ನವಮಿ ದಿನದಂದು ಶುಭ ಮುಹೂರ್ತದಲ್ಲಿ ರಾಮನನ್ನು ಪೂಜಿಸಿದರೆ ಪೂಜೆಯ ಫಲ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುವುದು ವಾಡಿಕೆ.
Subscribe , Follow on
Facebook Instagram YouTube Twitter X WhatsApp