-->

Kannada Riddles part 8 , ಕನ್ನಡ ಜನಪದ ಒಗಟುಗಳು , Kannada Ogatugalu

Riddles are always interesting and helps one improving general knowledge. In Karnataka , most of the riddles were originated from the village people and hence popularly known as Janapada Ogatugalu . In this post , we collect most of the kannada riddles with a brief English translation. This post is to promote kannada riddles. you may also contribute by sharing your favorite riddles in the comments section.


ಒಗಟು  - ಕರಿ ಮಂಚದ ಮೇಲೆ , ಹಾಕುವ ಹಾಸಿಗೆ , ತೆಗೆಯುವ ಹಾಸಿಗೆ / On a black bed , a mattress is put and removed | ಉತ್ತರ  - ಕಾವಲಿ ದೋಸೆ / Dosa

ಒಗಟು  - ಅಪ್ಪ ಅಪ್ಪ ಮರ ನೋಡು , ಮರದೊಳಗೆ ಎಲೆ ನೋಡು , ಎಳೆಯೊಳಗೆ ತೂತು ನೋಡು , ತೂತೊಳಗೆ ಮಾತು ನೋಡು /  See the tree , leaves inside the tree , holes inside the leaves , words inside the holes | ಉತ್ತರ  - ಪುಸ್ತಕ   / Book

ಒಗಟು  - ತೂತಿಲ್ಲದ ಒಡವೆ / Ornament without hole | ಉತ್ತರ  - ಕುಂಕುಮ   / Vermeil 

ಒಗಟು  -  ನಿಂಗಕ್ಕ ನೀರಕ್ಕ , ಹಾಕುವವರುಂಟು ತೆಗೆಯುವವರಿಲ್ಲ , ಅದೇನಕ್ಕ ? / Ningakka , Neerakka , they are there to put nut none to remove , what is it ? | ಉತ್ತರ  -  ಹಚ್ಚೆ / Tattoo

ಒಗಟು  - ಬಂಡೆಯ ಮೇಲೆ ಮಲಗುತ್ತೆ , ತಂತಿ ಮೇಲೆ ಕುಣಿಯತ್ತೆ  / It sleeps on rock and dances on wire | ಉತ್ತರ  - ಒಣಗಲು ಹಾಕಿದ ಬಟ್ಟೆ / Wet clothes

ಒಗಟು  - ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ / On a green plant , curd is thrown | ಉತ್ತರ  - ಮಲ್ಲಿಗೆ / Jasmine

ಒಗಟು  -  ಬಿಳೀ ಕಲ್ಮೇಲೆ ಕರಿಕಲ್ಲು , ಕರೀ ಕಲ್ಮೇಲೆ ರಂಗೋಲೆ / Over a white stone is a black stone and over that black stone is a drawing | ಉತ್ತರ  - ಕಣ್ಣು / Eyes

ಒಗಟು  - ಗಿರಿರಾಜನ ಮಗಳ ಗಂಡನ ಹಿರಿ ಮಗನ ತಮ್ಮನ ವಾಹನದ ವೈರಿ  / GiriRaaja's daughter's husband's elder son's brother's vehicle's enemy | ಉತ್ತರ  - ನಾಯಿ / Dog

ಒಗಟು  - ಅಪ್ಪನ ದುಡ್ಡು ಎಣಿಸೊಕಾಗಲ್ಲ , ಅವ್ವನ ಸೀರೆ ಮಡಿಸೊಕ್ಕಾಗಲ್ಲ / Father's money cannot be counted , Mother's saree cannot be folded | ಉತ್ತರ  -  ನಕ್ಷತ್ರ ಆಕಾಶ / Stars & Sky

ಒಗಟು  - ಹತ್ತು ತಲೆಯುಂಟು ರಾವಣನಲ್ಲ , ಬಾಲವುಂಟು ಹನುಮಂತನಲ್ಲ , ಕಿರೀಟವುಂಟು ರಾಜನಲ್ಲ , ನಾನು ಯಾರು ? / I have 10 heads but I am not Raavana , I have a tail but not Hanuman , I have a crown but i am not a King , Who am I ! | ಉತ್ತರ  - ಹೀರೇಕಾಯಿ / Ridge Gourd

ಒಗಟು  - ಮೂವತ್ತೆರಡು ಜನ ಅಗಿತ್ತಾರೆ , ಒಬ್ಬ ರುಚಿ ನೋಡ್ತಾನೆ  / Thirty two people chew it , while one person tastes it | ಉತ್ತರ  - ಹಲ್ಲು ನಾಲಿಗೆ / Teeth and Tongue

ಒಗಟು  - ಮರದೊಳಗೆ ಮರ ಹುಟ್ಟಿ , ಭೂ ಚಕ್ರದ ಹಣ್ಣಾಗಿ , ತಿನ್ನಬಾರದ ಹಣ್ಣು ಬಲು ಚಂದ / A tree growing inside a tree in the form of a wheel has a beautiful fruit which cannot be eaten | ಉತ್ತರ  - ಎಳೇ ಕೂಸು / New born Child

ಒಗಟು  -  ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ / This black man climbs a tree which no one may climb + ಉತ್ತರ  - ಇರುವೆ  / Ant

Kannada riddles Janapada ogatugalu


ಒಗಟು  - ನೋಡಿದರೆ ಮಲ್ಲಿಗೆ ಹೂ , ಕೈಲಿ ತಕ್ಕಂಡು ಮುಟ್ಟೋಕ್ಕೆ  ಆಗೋದಿಲ್ಲ / Looks like Jasmine flower , but cannot touch and hold it in hand | ಉತ್ತರ  - ಚುಕ್ಕಿ / Star

ಒಗಟು  -  ನಾಲ್ಕು ಕಾಲುಂಟ್ಟು ಮೃಗವಲ್ಲ , ಹಾರೋದುಂಟು ಪಕ್ಷಿಯಲ್ಲ, ನಾನು ಕೂಸುಗಳನ್ನು ಪ್ರೀತಿಸುವ ಹಾಗೆ ಬೇರೆ ಯಾರು ಇಲ್ಲ ! / I have 4 legs but not an animal , I fly but I am not a bird , no one loves babies like me  | ಉತ್ತರ  - ತೊಟ್ಟಿಲು / Cradle

ಒಗಟು  -  ಬೆನ್ನಿನಿಂದ ತಿನ್ನುವುದು , ಬಾಯಿಂದ ಉಗುಳುವುದು , ಎದುರಾದವರನ್ನು ಕೊಲ್ಲುವುದು, ಹಾಗಾದರೆ ನಾನು ಯಾರು  / I eat from back , spit from mouth , kill who is in front of me , who am I | ಉತ್ತರ  - ಬಂದೂಕ / Gun

ಒಗಟು  -  ಕೆಂಪು ಹೆಣ್ಣಿನ ತುಟಿ ಕರೀಗಿದೆ  / A red woman's lips are black | ಉತ್ತರ  - ಗುಲಗಂಜಿ / Indian Licorice

ಒಗಟು  -  ಕಿರಿ ಮನೆಗೆ ಚಿನ್ನದ ಬೀಗ / A golden lock for a small home | ಉತ್ತರ  -   ಮೂಗುತಿ / Nose stud

ಒಗಟು  -  ಎಷ್ಟೇ ಮಳೆ ಬಂದರೂ ನೆನೆಯುವುದಿಲ್ಲ / It does not soak even with heavy rains | ಉತ್ತರ  -  ಎಮ್ಮೆ ಕೆಚ್ಚಲು  / Buffalo Udder

ಒಗಟು  -  ಊರಿನಲ್ಲಿ ಕುರಿ ಕೂಗಿದರೆ ಮೈಯೆಲ್ಲಾ ತೂತು / When sheep screams , this has holes all around its body | ಉತ್ತರ  -  ಒಂದರಿ / Sieve

ಒಗಟು  - ಆರು ಕಾಲು ಅಪ್ಪಣ್ಣ ಕೆರೆ ಬೋರಣ್ಣ ಕೂತುತಾವು ಮೀಸೆ ತಿರುವಣ್ಣ / Six legs Appanna , Sitting at lake Boranna twists its mustache | ಉತ್ತರ  - ಜಿರಲೆ / Cockroach 

ಒಗಟು  - ಬೇಲಿ ನುಗ್ಗೋ ನಾಯಿಗೆ ತಿಕದಲ್ಲಿ ಜನಿವಾರ / A thread is attached to bush entering dog's bums  | ಉತ್ತರ  - ಸೂಜಿ / Thread needle

ಒಗಟು  -  ನೀರುಂಟ್ಟು ಬಾವಿಯಲ್ಲ , ಜುಟ್ಟುಂಟು ಪೂಜಾರಿಯಲ್ಲ , ಮೂರು ಕಣ್ಣುಂಟು ಶಿವನಲ್ಲ / It has water but not a well, it has a crest but its not a priest , it has 3 eyes but it is not lord shiva | ಉತ್ತರ  -  ತೆಂಗಿನಕಾಯಿ / Coconut

ಒಗಟು  -  ಅಕ್ಕಣ್ಣನಿಗೆ ಆರು ಕಣ್ಣು , ಮುಕ್ಕಣ್ಣಂಗೆ ಮೂರು ಕಣ್ಣು , ಲಿಂಗಪ್ಪನಿಗೆ ಒಂದೇ ಕಣ್ಣು / akkanna has 6 eyes , Mukkanna has 3 eyes , Lingappa has only 1 eye. | ಉತ್ತರ  -  ಕೊಳಲು , ತೆಂಗಿನಕಾಯಿ , ಸೂಜಿ / Flute , Coconut , Thread Needle

ಒಗಟು  - ಒಬ್ಬಣ್ಣ ಇಳಿತಾನೆ ಒಬ್ಬಣ್ಣ ಹತ್ತುತ್ತಾನೆ  / One brother comes down while other goes up | ಉತ್ತರ  -  ರೊಟ್ಟಿ / Roti

ಒಗಟು  - ಅಂಕು ಡೊಂಕಿನ ಮರ, ಕಚ್ಚಿದವರ ಬಾಯಿಗೆ , ಉಚ್ಚಿ ಹುಯ್ಯುವ ಮರ / Curvy tree , if you bite it , it spills its urine !! | ಉತ್ತರ  - ಕಬ್ಬು / Sugarcane

ಒಗಟು  - ಅವ್ವ ನೋಡುದ್ರೆ ಕುಳ್ಳಿ , ಮಗಳ ನೋಡುದ್ರೆ ಮಾರುದ್ದ ಅವ್ಳೆ / Mother looks short , but daughter is very long | ಉತ್ತರ  - ಸೂಜಿ ದಾರ / Needle and Thread

ಒಗಟು  - ಕಪ್ಪೆ ಮುಟ್ಟದ ಕೈಲಾಸದ ನೀರು / Heaven's water which a frog cannot touch | ಉತ್ತರ  - ಎಳೆ ನೀರು  / Coconut water , Tender coconut

ಒಗಟು  - ಒಂದು ಹಸ್ತಕ್ಕೆ ನೂರೆಂಟು ಬೆರಳು / One hand has hundreds of fingers | ಉತ್ತರ  - ಬಾಳೆ ಗೊನೆ / Banana fruit branch

ಒಗಟು  - ಹರಯದಲ್ಲಿ ಹಸಿರು , ದುರದಲ್ಲಿ ಕೆಂಪು , ಮುಪ್ಪಿನಲ್ಲಿ ಕಪ್ಪು  /  It is green during teen , red during maturity and Black during old age | ಉತ್ತರ  - ನೆರಳೆ ಹಣ್ಣು / Jamun fruit

ಒಗಟು  - ಅಕ್ಕನ ಕೈಗೆ ಇಕ್ಕೊರುಂಟು , ಅಳಿಸೋರಿಲ್ಲ /  There are to put on sister's hand , but none to remove it | ಉತ್ತರ  - ಹಚ್ಚೆ / Tattoo

–>