-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 4

 “ಜೀವನವೆಂದರೆ ಸಂತೋಷ, ದುಃಖ,ಪ್ರೇರಣೆ ಇತ್ಯಾದಿಗಳನ್ನು ತುಂಬಿಕೊಂಡ ಪುಸ್ತಕ....ಮುಂದಿನ ಪುಟದಲ್ಲೇನಿದೆ ಎಂಬ ಕುತೂಹಲದೊಂದಿಗೆ ಓದುತ್ತ ಸಾಗೋಣ...."

 

ಸಂತೋಷ ಕೂಟ, ದುಃಖ, ಕ್ಷಾಮ, ಶತ್ರುವಿನೊಡನೆ ಕಾದಾಟ, ರಾಜಗೃಹ, ಶ್ಮಶಾನ ಮೊದಲಾದ ಸಂದರ್ಭಗಳಲ್ಲಿ ಯಾರು ನಮ್ಮ ಜೊತೆಗಿರುವರೋ ಅವರೇ ನಿಜವಾದ ಬಂಧುಗಳು.

 

ಯಾರು ಓದುತ್ತಾನೋ, ಬರೆಯುತ್ತಾನೋ, ಸುತ್ತಲಿನ ಪ್ರಪಂಚವನ್ನು ನೋಡುತ್ತಾನೆಯೋ, ಹೇಗೆ? ಯಾಕೆ? ಎಂದು ಪ್ರಶ್ನಿಸುತ್ತಾನೆಯೋ, ಪಂಡಿತರನ್ನು ಆಶ್ರಯಿಸಿ ಕಲಿಯುತ್ತಾನೆಯೋ ಅವನ ಬುದ್ಧಿಯು ಸೂರ್ಯನ ಕಿರಣಗಳಿಂದ ತಾವರೆಯ ದಳಗಳು ವಿಕಸಿಸುವಂತೆ ವಿಕಾಸವಾಗುತ್ತದೆ


ನಾವು ನೆಡೆಯುವ ದಾರಿ ನ್ಯಾಯ, ನೀತಿ,     ಧರ್ಮಗಳೆಂಬ ರಾಜಮಾರ್ಗವಾಗಿದ್ದರೆ
ಯಾರಿಗೂ ತಲೆ ಬಾಗಿಸುವ ಪ್ರಮೇಯ   ಜೀವನದಲ್ಲಿ ಬರದು.
ಅಹಂಕಾರದಲ್ಲಿ ತಾನು ನೆಡೆದದ್ದೇ ದಾರಿ   ಎಂದು ಭಾವಿಸಿದರೆ ಮುಂದೆ ಎಲ್ಲರ
ಎದುರು ತಲೆಬಾಗಿಸುವ ಕಾಲ ಬರಬಹುದು
ನಾವು ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು ಅವರ ಮುಂದೆ ನಮ್ಮ ಮನದಾಳದ ಮಾತು ಹೇಳಿಕೊಳ್ಳುತ್ತೇವೆಯೋ ಅವರೇ ಸುಲಭವಾಗಿ ಮೋಸ ಮಾಡುತ್ತಾರೆ.!

 

ಒರಟಾದ  ವಜ್ರಕ್ಕೆ ಸುವಾಸನೆಯಿಲ್ಲ , ಆದರೆ ಸೌಂದರ್ಯವಿದೆ ,ಆಯುಷ್ಯವಿದೆ . ಮೃದುವಾದ  ಮಲ್ಲಿಗೆಗೆ ಆಯುಷ್ಯ ಇಲ್ಲ . ಆದರೆ ಸುವಾಸನೆಯಿದೆ ,ಆಕರ್ಷಣೆಯಿದೆ
  ಇದ್ದುದರಲ್ಲಿಯೇ ತೃಪ್ತಿಯಿರಲಿ

ತನ್ನೊಳಗಿರುವ  ನೆಮ್ಮದಿಯನ್ನು ಕಡೆಗಣಿಸಿ , ಪ್ರಪಂಚದಲ್ಲಿರುವ ಸಾಸಿವೆ ಕಾಳಷ್ಟು ಸುಖಕ್ಕೋಸ್ಕರ ಬೆಟ್ಟದಷ್ಟು ನೊವು ಪಡುವ  ಏಕೈಕ ಜಿವಿ ಅಂದ್ರೆ ಅದು ಮನುಷ್ಯ .
ಕೆಲಸವನ್ನು ಮಾಡುವುದರಿಂದ ಮಾತ್ರ ಕಾರ್ಯಸಿದ್ದಿಯಾಗುತ್ತದೆಯೇ ಹೊರತು ಕೆಲಸದ ಬಗ್ಗೆ ಯೋಚನೆ ಮಾಡುವುದರಿಂದಲ್ಲ...ಸಿಂಹವು ತಾನು ವನರಾಜ ಎಂದು ಗುಹೆಯಲ್ಲೇ ಕುಳಿತರೆ ಯಾವ ಪ್ರಾಣಿಯೂ ಅದರ ಬಾಯಿಗೆ ಬಂದು ಬೀಳುವುದಿಲ್ಲ ಅದು ಬೇಟೆಯಾಡಿದರೆ ಮಾತ್ರವೇ ಅದಕ್ಕೆ ಆಹಾರ ದೊರಕುವುದು...!!

 ಜೀವನ ಎಂಬ ಒಂದು ಸುಂದರವಾದ ತೋಟದಲ್ಲಿ ಮನಸ್ತಾಪ ಅನ್ನೋ ಕಳೆ ಸಾಕಷ್ಟು ಬರ್ತಾವೆ ಆದರೆ ಆ ಮನಸ್ತಾಪದ ಕಳೆ ಕಿತ್ತು ಹಾಕಿ ನಗುವಿನ ಹೂ ಬಿಡುವಂತೆ ನೋಡಿಕೊಂಡಾಗ ಮಾತ್ರ  ಜೀವನ ಸುಖಮಯವಾಗಿರುತ್ತದೆ.
ಅಸಮರ್ಥನಾದವರ ಕೋಪ  ಅವರಿಗೇ ತೊಂದರೆಗೆ ದಾರಿಮಾಡಿಕೊಡುತ್ತದೆ. ಮಣ್ಣಿನ ಮಡಿಕೆಯಲ್ಲಿ ನೀರು ತೀವ್ರವಾಗಿ ಕುದಿಯುವಾಗ ತನ್ನ ಹೊರಬದಿಯೇ ಸುಟ್ಟುಹೋಗುತ್ತದೆ.

Don’t live as a person live as personality.
Person will die one day personality will live forever.

 

Kannada subhashitha - ಕನ್ನಡ ಸುಭಾಷಿತ ಸಂಗ್ರಹ 4
 

ಯಾವಾತನಿಗೆ ಮಾಡಿದ ಉಪಕಾರವು ಅಲ್ಲಿಯೇ ಕ್ಷೀಣಿಸುವದಿಲ್ಲವೋ ಆತನೇ ಪುರುಷ . ಇನ್ನೊಬ್ಬನು ಮಾಡಿದ ಉಪಕಾರಕ್ಕಿಂತ ಹೆಚ್ಚಿನ ಪ್ರತ್ಯುಪಕಾರವನ್ನು ಮಾಡಬೇಕು.

ದೊರೆಯ ಅಥವಾ ಶ್ರೀಮಂತನ ಆದೇಶದಿಂದ ಒಬ್ಬ ಸೇವಕನು ಸುವರ್ಣರತ್ನಖಚಿತವಾದ, ಹಂಸತೂಲಿಕಾತಲ್ಪದಲ್ಲಿ ಸುಂದರವಾದ ಶಯ್ಯೆಯಲ್ಲಿ ಕುಳಿತು ತನ್ನ ಯಜಮಾನನ
 ಶಿರ -ಹಸ್ತ -ಚರಣಾದಿಗಳ ಸಂವಹನ ರೂಪದ ಸೇವೆಯನ್ನು ಮಾಡುತ್ತಿರುತ್ತಾನೆ. ಆದರೆ ಆ ಸೇವಕನು ರಮಣೀಯ ಮಂಚದಲ್ಲಿ ಕುಳಿತಿದ್ದಾನೆ ಎಂದ ಮಾತ್ರಕ್ಕೆ ಅವನಿಗೆ ಗೌರವ ಕಿಂಚಿತ್ತೂ ಅಧಿಕವಾಗುವುದಿಲ್ಲ.ರಾಜನಂತೆ ಮಾನ್ಯನಾಗಲು ಸಾಧ್ಯವಿಲ್ಲ. ಸಿಂಹಾಸನ -ರತ್ನಪೀಠದಲ್ಲಿ ಕೂಡುವುದರಿ0ದಲೇ ದೊರೆಯಾಗಲು ಸಾಧ್ಯವಿಲ್ಲ. ಯೋಗ್ಯತೆ ಇರಬೇಕು. ಸಿಂಹದಂತೆ ಗಾ0ಭೀರ್ಯ, ಧೈರ್ಯ ಇರುವ ವ್ಯಕ್ತಿಯು ಎಲ್ಲಿ ಆಸೀನನಾಗುತ್ತಾನೆಯೋ ಅದೇ ಸಿಂಹಾಸನ ಎಂದೆನಿಸುತ್ತದೆ.

ಶುಭಜೀವಿಗಳಿಗೆ ಪ್ರೀತಿಯನ್ನು ಕೊಟ್ಟಾಗ ಅವರು ಅದನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಆದರೆ ದುಷ್ಟರಿಗೆ ಪ್ರೀತಿಯನ್ನು ತೋರಿಸಿದರೆ ಅವನು ಪ್ರೀತಿಯನ್ನು ಕೊಟ್ಟವನ ಅಸಾಮರ್ಥ್ಯ ಮತ್ತು ತನ್ನ ಬಲಾಶ್ರಯದ ಅಪೇಕ್ಷೆಗಾಗಿ ಪ್ರೀತಿಸುತ್ತಾನೆ ಎಂದು ಅನ್ಯಥಾ ಭಾವಿಸಿ ಪ್ರೀತಿಯನ್ನು ಗೌಣವಾಗಿ ಕಾಣುತ್ತಾನೆ. ಒಂದೊಮ್ಮೆ ಉತ್ತಮ ವಸ್ತುವನ್ನು ದಾನಮಾಡಿದರೆ ಆ ಖಲನು ಪದೇ ಪದೇ ಬೇಡುತ್ತಾನೆ. ಪೀಡಿಸುತ್ತಾನೆ. ಆದರೆ ಪ್ರತ್ಯುಪಕಾರದಿಂದ ಅವನು ಮಿತ್ರನಂತೆ ವಶವಾಗುತ್ತಾನೆ.

ಓದಲು ಒಂದು ಕ್ಷಣ ಬೇಕಾಗುತ್ತದೆ ಯೋಚನೆ ಮಾಡಲು ಒಂದು ನಿಮಿಷ ಬೇಕಾಗುತ್ತದೆ ತಿಳಿದುಕೊಳ್ಳಲು ಒಂದು ದಿನ ಬೇಕಾಗುತ್ತದೆ ಆದರೆ ಉಳಿಸಿಕೊಳ್ಳಲು ಪೂರ್ತಿ ಜೀವನವೇ..... ಬೇಕಾಗುತ್ತದೆ ಅದೇ... "ವಿಶ್ವಾಸ".......

 

ಇನ್ನೊಬ್ಬರಿಗೆ ಕೆಸರೆರಚಲು ಹೊದರೆ ಮೊದಲು ನಿಮ್ಮ ಕೈ ಕೆಸರಾಗುವುದು. ಅದೇ ಇನ್ನೊಬ್ಬರಿಗೆ ಗಂಧ ಹಚ್ಚಲು ಹೊದರೆ ಮೊದಲು ನಿಮ್ಮ ಕೈ ಗಂಧವಾಗುವುದು.
ಕೆಸರೊ, ಗಂಧವೋ ಆಯ್ಕೆ ನಿಮ್ಮದು 

 

ಬೆಂಕಿ ಮತ್ತು ವೈಮನಸ್ಸು ಎರಡು ಕೂಡ ಸಣ್ಣದಾಗಿ ಶುರುವಾಗುತ್ತದೆ. ಅದನ್ನು ನಿರ್ಲಕ್ಷಿಸಿದರೆ. ಅದರ ಪರಿಣಾಮ ಮುಂದೆ ತುಂಬ ಭೀಕರವಾಗಿರುತ್ತದೆ.
ಬೆಂಕಿ ತನ್ನ ಸುತ್ತಮುತ್ತ ಇರುವ ಪ್ರದೇಶವನ್ನು ಸುಟ್ಟರೆ..
~ವೈಮನಸ್ಸು ನಮ್ಮ  ಸುತ್ತಮುತ್ತಲಿನ ಸಂಬಂಧಗಳನ್ನು  ಸುಟ್ಟು ಹಾಕುತ್ತೆ
ಆದ್ದರಿಂದ ಅದು ಸಣ್ಣದಿರುವಾಗಲೇ ಆರಿಸಿ ಬೀಡಿ

Knowledge decides what to say, Skill decides how to say, Attitude decides how much to say & Wisdom decides whether to say or not

Terms | Privacy | 2024 🇮🇳
–>