-->

Tips for 60 years and above , 60 ವರ್ಷ ಮೇಲ್ಪಟ್ಟವರಿಗೆ

60 ವರ್ಷ ಮೇಲ್ಪಟ್ಟವರಿಗೆ ದಯವಿಟ್ಟು ತಾಳ್ಮೆಯಿಂದ ಪೂರ್ತಿ ಓದಿರಿ.        
 

1. ಸ್ನಾನ ಮಾಡುವಾಗ ಸುಮ್ಮನೆ ಬಾಗಿಲು ಹಾಕಿಕೊಳ್ಳಿ, ಚಿಲಕ ಹಾಕಬೇಡಿ. ಸ್ಟೂಲು ಅಥವಾ ಚೇರ್ ಮೇಲೆ ಕೂತ್ಕೊಂಡು ಸ್ನಾನ ಮಾಡಬೇಕು. ನಿಂತುಕೊಂಡು ಸ್ನಾನ ಮಾಡಬಾರದು.
2 . ಕಮೋಡ್ ಮೇಲೆ ಕೂತುಕೊಂಡಾಗ ಏಳುವುದಕ್ಕೂ, ಕುಳಿತುಕೊಳ್ಳುವುದಕ್ಕೂ ಒಂದು ರಾಡನ್ನು ಹಾಕಿಸಿಕೊಳ್ಳುವುದು ಸಪೋರ್ಟ್ ಗೆ.               
3. ಹೆಂಗಸರಾಗಲಿ ಗಂಡಸರಾಗಲಿ ಪ್ಯಾಂಟನ್ನು ಹಾಕಿಕೊಳ್ಳುವಾಗ ಚೇರ್ ಮೇಲೆ ಅಥವಾ ಬೆಡ್ ಮೇಲೆ ಕೂತ್ಕೊಂಡು ಹಾಕಿಕೊಳ್ಳಬೇಕು ನಿಂತಿ ಕೊಂಡು ಹಾಕಿಕೊಳ್ಳಬಾರದು.          
4. ನಿದ್ದೆ ಮಾಡಿ ಎಳುವಾಗ ಎದ್ದು ಕೂತುಕೊಂಡು 30 ಸೆಕೆಂಡು ನಂತರ ಓಡಾಡಬೇಕು ಮುಖ್ಯವಾಗಿ ರಾತ್ರಿಯ ಹೊತ್ತು 5. ಒದ್ದೆ ಅಂದರೆ ನೀರು ಇರುವ ಜಾಗದಲ್ಲಿ ಓಡಾಡಬಾರದು.
6. ಚೇರ್, ಬೆಂಚ್ ಇವುಗಳ ಮೇಲೆ ನಿಂತು ಯಾವುದೇ ಕೆಲಸವನ್ನು ಮಾಡಬೇಡಿ.
7. ವಾಹನಗಳನ್ನು ಓಡಿಸುವಾಗ ಕಾರ್ ಅಥವಾ ಬೈಕ್ ಒಬ್ಬರೇ ಹೋಗಬೇಡಿ ಯಾರಾದರೂ ಜೊತೆಯಲ್ಲಿ ಇರಬೇಕು.
8. ಯಾವುದೇ ಮೆಡಿಸನ್ ತೆಗೆದುಕೊಂಡರೆ ಡಾಕ್ಟರನ್ನು ಕೇಳಿ ತೆಗೆದುಕೊಳ್ಳಿ ನೀವಾಗೆ ತೆಗೆದುಕೊಳ್ಳಬೇಡಿ.             
9. ನಿಮಗೆ ಏನು ಅನಿಸುತ್ತೋ ಅದನ್ನೇ ಮಾಡಿ ನಿಮಗೆ ಸಮಾಧಾನವಾಗುತ್ತದೆ ಯಾರೋ ಹೇಳಿದರು ಅಂತ ಮಾಡಬೇಡಿ.          
10. ಎಲ್ಲಿಗಾದರೂ (ಬ್ಯಾಂಕ್, ಶಾಪ್, ಶಾಪಿಂಗ್, ಮಾರ್ಕೆಟ್) ಹೋಗಬೇಕಾದರೆ ಗಂಡ ಅಥವಾ ಹೆಂಡತಿ ಇಲ್ಲಾಂದರೆ ಮಕ್ಕಳು ಯಾರಾದರೂ ಸರಿ ಅವರ ಜೊತೆ ಹೋಗಬೇಕು 


 

Tips for 60 years and above , 60 ವರ್ಷ ಮೇಲ್ಪಟ್ಟವರಿಗೆ

 11. ಮನೆಯಲ್ಲಿ ಒಬ್ಬರೇ ಇರಬೇಕಾದರೆ ಗುರುತು ಪರಿಚಯವಿಲ್ಲದ ವರನ್ನು ಮನೆಯೊಳಗೆ ಸೇರಿಸಬೇಡಿ
 12. ಮನೆಯ ಮೇನ್ ಡೋರ್ ಕಿ ಗಂಡನ ಹತ್ತಿರ ಒಂದು ಹೆಂಡತಿಯ ಹತ್ತಿರ ಒಂದು ಇರಬೇಕು.           
13. ನಿಮ್ಮ ಬೆಡ್ ರೂಮಿನಲ್ಲಿ ಒಂದು ಕಾಲ್ ಬೆಲ್ ಇದ್ದರೆ ಒಳ್ಳೆಯದು ಎಮರ್ಜೆನ್ಸಿ ಇದ್ದರೆ ಕರೆಯುವುದಕ್ಕೆ.
14. ಎಲ್ಲರ ಜೊತೆಯಲ್ಲೂ ನಯ ವಿನಯದಿಂದ ಮಾತಾಡಿ   15. ಯಾವಾಗಲೂ ನಿಮ್ಮ ಹಿಂದಿನ ಮುಂದಿನ ವಿಷಯಗಳ ಬಗ್ಗೆ ಯೋಚನೆ ಮಾಡಬೇಡಿ ಈಗ ನಡೆಯುವ ಬಗ್ಗೆ ಯೋಚಿಸಿ ಇದು ಮುಖ್ಯವಾದ ವಿಷಯ.                       
16. ಈ ವಯಸ್ಸಿನಲ್ಲಿ ನೆಮ್ಮದಿಯ ಜೀವನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಖುಷಿಯಾಗಿರುವುದು ಒಳ್ಳೆಯ ಸಂಬಂಧಗಳು ಒಳ್ಳೆಯ ಸ್ನೇಹಿತರು ಇದು ಮುಖ್ಯವಾದದ್ದು.

 - ನಮ್ಮ ಓದುಗರು ನೀಡಿದ ಲೇಖನ

Terms | Privacy | 2024 🇮🇳
–>