-->

What is No Mind ? ಮನೋಲಯˌ ಮನೋನಾಶ ಎಂದರೇನು?

ಮನೋಲಯವೆಂದರೆˌˌ ಕೆಲವೊತ್ತು ಇದ್ದು ˌ  ಕೆಲಹೊತ್ತು ಇಲ್ಲದಂತೆ ತೋರಿˌ ಮತ್ತೆ ಇರುವಂತೆ ತೋರುವದು...ಮನೋನಾಶವೆಂದರೆˌ ಅದು ಸದಾ ಇಲ್ಲವಾಗವುದು ನಾಶ. ಒಂದು ಮಡಿಕೆ ಒಡೆದ ನಂತರ ಸದಾ ಮಡಿಕೆಯಿಲ್ಲದಂತೆಯಾಗುವುದು. ಅದನ್ನು ನಾಶವೆನ್ನುತ್ತೇವೆ. ಅದು ಮೊದಲಿನಂತೆ ಎಂದಿಗೂ ತೋರದಿರುವುದು.

ಮನಸ್ಸೆಂಬುವದು ಸದಾ ಇರುತ್ತದೆ. ಅದು ಇಲ್ಲದಂತೆ ಇರುತ್ತದೆ. ಅದನ್ನು ಜ್ಞಾನಿಯೊಬ್ಬ ತನ್ನೊಳಗಿನ ಅಂರ್ತಜ್ಞಾನದಿಂದ ಕಂಡುಕೊಳ್ಳುವನು. ಆಗ ಅವನಿಗೆ ಮನಸ್ಸು ತೊಂದರೆಯಲ್ಲ. ಬುದ್ದಿ ತೊಂದರೆಯಲ್ಲ.  ಅವನಿಗೆ ಮನಸ್ಸು ಇದೆ ಆದರೆˌ ಅದು ಅವನಿಗೆ ಇಲ್ಲದಂತೆ. ಇದನ್ನೆ ಬುದ್ದ ಧಮ್ಮಪದದಲ್ಲಿ ಹೇಳುವದು 'ಶುದ್ದ ಮನಸ್ಸು'. ಈ 'ಶುದ್ದ' ಮನ್ಸಸೆಂದರೇ ಏನೂ? ಅದು ಇದ್ದೆಯೇ? ಶುದ್ದ ಮನಸ್ಸು ಅದು ಇದೆ ಮತ್ತು ಇರದಂತೆ. ಅಂದರೆˌ ಉದಾ: ನಿಮ್ಮ ಕಾಲಲ್ಲಿ ಚಪ್ಪಲ್ಲಿ ಇದೆ. ಆ ಚಪ್ಪಲ್ಲಿ ಸ್ಪಲ್ಪ ಸಡಿಲವಾದ್ರೂ ಮತ್ತು ಬಿಗಿಯಾದ್ರೂ ನಿಮಗೆ ಅದು ನಿಮಗೆ ತೊಂದರೆ. ಅದರ ಇರುವಿಕೆಯನ್ನು ತೋರಿಸುತ್ತದೆ. ಅದು ತೊಂದರೆ ಕೊಡುತ್ತೆ. ಅದು ಸರಿಯಾಗಿ ನಿಮ್ಮ ಕಾಲಿಗೆ ಹೊಂದಿಕೆಯಾದ್ದರೆˌ ಅದು ಇದ್ದು ಇಲ್ಲದಂತೆ. ಅದನ್ನು ಧರಿಸಿಯೂ ಧರಿಸದಂತೆ. ಹಾಗೆ ಮನಸ್ಸು ಚಪ್ಪಲಿಯಿದ್ದಂತೆ. ಸರಿಯಾಗಿದ್ರೆ ಅದು ಇಲ್ಲದಂತೆ. ಇಲ್ಲವಾದ್ರೆ ಅದು ಇದ್ದು ತೊದರೆಯಾದಂತೆ.

What is No Mind ? ಮನೋಲಯˌ ಮನೋನಾಶ ಎಂದರೇನು?


ಹಾಗೇˌ ಮನಸ್ಸು ಸ್ಪಲ್ಪ ಸಡಿಲವುಗೊಳ್ಳಬಾರದು ಮತ್ತು ಬಿಗಿಯುಯಾಗಬಾರದು. ಅದಕ್ಕೆ ಬುದ್ದ ಹೇಳುತ್ತಾನೆˌ ವೀಣೆಯ ತಂತಿಯನ್ನು ಬೀಗಿಯಾಗಿ ಕಟ್ಟಿದ್ದರೆ ಸಂಗೀತ ಹೋರಡದು ಮತ್ತು ಸಡಿಲವಾಗಿ ತಂತಿ ಬೀಗಿದರು ಅದರಿಂದ ಸಂಗೀತ ಹೊಮ್ಮದು. ಅದನ್ನು ಸಮನಾಗಿ ಕಟ್ಟಿದ್ದಾಗ ಮಾತ್ರ ಅದರಿಂದ ಸಮ ಶೃತಿ ಹೋರಡುವದು. ಮತ್ತು ಸುಶ್ರಾವ್ಯ ಸಂಗೀತ ಕೇಳುವದು. ಅದು ಶುದ್ದ ಮನಸ್ಸು.

ಶುದ್ದವಾದ ಮನಸ್ಸು ಹಗುರವಾಗಿದೆ. ಹಗುರವಾದ ಮನಸ್ಸು ˌ ಇದ್ದು ಇಲ್ಲದಂತೆ. ಅದು ನಿಮಗೆ ಯಾವ ಭಾದಕ ಮಾಡಲಾರದು. ಅದು ನಿಜವಾದ No mind. ಮನಸ್ಸು ಇದೆ. ಮತ್ತು ಅದು ಶುದ್ದವಾಗಿದೆ. ಅದು ಇಲ್ಲದಂತೆ ಇರುವದು.

ಅಶುದ್ದವಾದ ಮನಸ್ಸು ಭಾರ. ಅದು ಯಾವಗಲೂ ತನ್ನ ಇರುವಿಕೆಯನ್ನೂ ತೋರುವದು. ಅದು ಭಾದಕವಾಗಿದೆ. ಅದು ಮನುಷ್ಯನ ಪ್ರತಿ ಚಟುವಟಿಕೆಯಲ್ಲಿ ಪ್ರಕ್ಪೇಪಿಸುವದು. ಅದು ಯಾವಗಲೂ ತೋರುವದು. ಇಲ್ಲದಲ್ಲೆಯೂ ತಾನು ಇರುವಂತೆ ತೋರುವದು.

ಜ್ಞಾನಿಯಾದವನುˌ ಮನಸ್ಸನ್ನುˌ ಭ್ರಮೆಯೆಂದು ತಿಳಿಯುವನು. ಅದು ಸುಳ್ಳೆಂದು ಅರಿಯುವನು. ಅವನು ಅದನ್ನು ತನ್ನ ಜ್ಞಾನ ಮೂಲಕ ಕಂಡುಕೊಳ್ಳುವನು. ಊದಾ; ಅಲ್ಲಿ ಚೇಳಿದೆ ಎಂದು ನಾನು ನೋಡಿ ಭಯಗೊಂಡೆˌ ಸ್ನೇಹಿತ ಬಂದು ಹೇಳಿದˌ ಅದು ನಿಜವಾದ ಚೇಳಲ್ಲ . ಅದು ಪ್ಲಾಸ್ಟಿಕ್ ಚೇಳೆಂದು. ಆಗ ನನಗೆ ಆ ಚೇಳಿನ ಭಯ ಹೋಯಿತ್ತು. ಅಂದರೆˌ ನನ್ನ ಭಯ ಭ್ರಮಿತವಾಗಿತ್ತು. ಈಗ ನಾನು ಆ ಚೇಳನ್ನು ಏಷ್ಟೊತ್ತು ನೋಡಿದ್ದರು ಭಯವಾಗುವುದಿಲ್ಲ. ಯಾಕೇಂದ್ರೆ ನನಗೆ ಚೇಳಿನ ಭಯ ಭ್ರಮಿತವಾಗಿತ್ತು. ನನಗೆ ಚೇಳಲ್ಲವೆಂಬುವದು ತಿಳಿದಿದೆ. ಅದು ಪ್ಲಾಸ್ಟಿಕ್ ಎಂಬುವದು "ಜ್ಞಾನ"ವಾಗಿದೆ. ಜ್ಞಾನ ಪ್ರಾಪಂಚಿಕವಾದ ಇಲ್ಲದೆ ಇರುವ  ಚೇಳಿನಂತೆ. ನಿಮಗೆ ಜ್ಞಾನವಾದ ನಂತರ ಅದು ಇಲ್ಲವಾಗುವದು. ಇಲ್ಲಿ ಪ್ರಾಪಂಚಿಕ ವ್ಯವಹಾರಗಳು ಇದ್ದು ಇಲ್ಲದಂತೆ. ನಡೆದು ನಡೆಯದಂತೆ. ಪ್ರಪಂಚವೆಂಬುವದು ಮನಸ್ಸು ಸೃಷ್ಟಿಸಿರುವ ಮಾಯೆ. ಅದು ಮನಸ್ಸಿನ ಭ್ರಮೆಯಾಗಿದೆ ಎಂದು ಜ್ಞಾನಿಯು ತಿಳಿಯುವನು.

ಮನಸ್ಸೆಂಬುವದು ಅಜ್ಞಾನ. ಅದು ಅಜ್ಞಾನವೆಂದು ತಿಳಿದುಕೊಳ್ಳುವದು ಜ್ಞಾನ. ಮನಸ್ಸಿನ ಮೂಲಕವೇ ಈ ಪ್ರಪಂಚವು  ಅದು ನಿಜವಾದ ಚೇಳಿನಂತೆ ಕಾಣುವದುˌ ಅದು ಚೇಳಲ್ಲ ಎಂದು ಜ್ಞಾನವಾದ ನಂತರ ಅದು ಭ್ರಮೆ. ಭ್ರಮೆ ನಾಶ ಮಾಡಿರುವದು ಜ್ಞಾನ.

ನೀವು ಸ್ವಾಸ್ಥ್ಯವಾಗಿರುವಾಗ ಆರೋಗ್ಯವೆನೆಂದು ತಿಳಿಯದು. ನಿಮ್ಮ ಕಾಲಿನ ಬೆರಳಿಗೆ ನೋವಾಗದ ಹೊರತುˌ ಅದು ಇದ್ದೆಯೆಬುವದು ತಿಳಿಯದು. ನಿಮಗೆ ಅದಕ್ಕೆ ಅಸ್ವಾಸ್ಥ್ಯ ಅಥವ ಗಾಯವಾದಗಲೇ ಅದು ಇದೆ ಎಂದು ಅರಿವಾಗುವದು. ಮನಸ್ಸು ಅಸ್ವಾಸ್ಥ್ಯವಾಗಿರುವನ್ನಲ್ಲಿ ಅದು ಸದಾ ಇರುವಂತೆ ತೋರುವದು.

ಮನಸ್ಸೆಂಬುವದು ಅಸ್ವಾಸ್ಥ್ಯ ಮತ್ತು ಅಶುದ್ದವಾದ ಮನದಲ್ಲಿ ಮನಸ್ಸು ಇರುವದು. ಶುದ್ದವಾದ ಮನ ಅಥವ ಸ್ವಾಸ್ಥ್ಯಯಾದಲ್ಲಿ ಅದು ಕಾಣುವುದಿಲ್ಲ. ಆದರೆ ಅದು ಶುದ್ದವಾದಲ್ಲಿ ಅದು ಇದೆˌ ಅದು ಕಾಣುವುದಿಲ್ಲ ಅದು NO MIND.

 - ನಮ್ಮ ಓದುಗರು ನೀಡಿದ ಲೇಖನ

–>