-->

ತುಪ್ಪದ ದೀಪ ಏಕೆ , why use ghee in diyas

 ದೇವರಿಗೆ ತುಪ್ಪದ ದೀಪ ಹಚ್ಚುವುದೇಕೆ?

ಹಿಂದೂ ದರ್ಮದಲ್ಲಿ ತುಪ್ಪದ ದೀಪಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಪೂಜೆ ಸಮಯದಲ್ಲಿ ಹಲವು ಜನರು ತುಪ್ಪದ ದೀಪ ಹಚ್ಚುವುದನ್ನು ನೋಡಿದ್ದೇವೆ.. ತುಪ್ಪದ ದೀಪ ಹಚ್ಚುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ. ದೇವರಿಗೆ ತುಪ್ಪದ ದೀಪ ಯಾಕೆ ಶ್ರೇಷ್ಠ.. ವಿಸ್ತಾರವಾಗಿ ಇಲ್ಲಿದೆ ಮಾಹಿತಿ
ದೇವರಿಗೆ, ತುಪ್ಪದ ದೀಪ ,

ಪ್ರಯೋಜನಗಳು,

ಹಿಂದೂ ಧರ್ಮ ಹಾಗೂ ಧರ್ಮ ಗ್ರಂಥಗಳಲ್ಲಿ ತುಪ್ಪದ ದೀಪಕ್ಕೆ ಸಾಕಷ್ಟು ಮಹತ್ವವಿದೆ. ಪ್ರತಿ ಹಿಂದೂ ಕುಟುಂಬದಲ್ಲಿ ಬೆಳಿಗ್ಗೆ, ಮತ್ತು ಸಂಜೆ ಮನೆಯಲ್ಲಿ ಮಹಿಳೆಯರು ದೇವರ ಮುಂದೆ ದೀಪವನ್ನು ಹಚ್ಚುವ ಪದ್ಧತಿ ಇದೆ. ದೀಪ ಹಚ್ಚುವುದರಿಂದ ದೇವತೆಗಳು ಸಂತೋಷವಾಗುತ್ತಾರೆ ಎಂದು ಹೇಳಲಾಗಿದೆ. ಆದ್ರೆ ಶಿವ ಪುರಾಣದ ಪ್ರಕಾರ, ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ದಿಸುತ್ತದೆ. ತುಪ್ಪದ ದೀಪ ಹಚ್ಚುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ, ಆದ್ದರಿಂದ ತುಪ್ಪದ ದೀಪಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.

ತುಪ್ಪದ ದೀಪ ಹಚ್ಚುವುದು ಏಕೆ..!

ದೇವರಿಗೆ ತುಪ್ಪ ದೀಪ ಹಚ್ಚುವುದು ಹಿಂದಿನ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ತುಪ್ಪದ ಆರತಿ ಬೆಳಗುವುದು, ತುಪ್ಪದ ದೀಪ ಹಚ್ಚುವುದು, ಹೋಮ ಹವನಗಳಲ್ಲಿ  ಅಗ್ನಿಗೆ ತುಪ್ಪ ಸುರಿಯುವುದು , ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಇದು ರೂಢಿಯಲ್ಲಿದೆ. ಈಗಲೂ ಪ್ರತಿ ದಿನ ದೇವರಿಗೆ ತುಪ್ಪದ ದೀಪ ಹಚ್ಚುವ ಪದ್ಧತಿ ಇದೆ
 

ಇನ್ನು ಪ್ರತಿಯೊಬ್ಬರು ದೇವರ ಮುಂದೆ ದೀಪ ಹಚ್ಚುತ್ತಾರೆ. ಈ ಮೂಲಕ ಆರಾಧನೆ ಮಾಡಿ, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ದೀಪ ಹಚ್ಚುತ್ತಾರೆ. ಈ ರೀತಿ ದೀಪ ಹಚ್ಚುವುದರಿಂದ ಮನೆಯಲ್ಲಿ ಇರುವ ಅಂಧಕಾರ ಹೋಗಿ ವಾಸ್ತು ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.

ತುಪ್ಪ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ..!

ತುಪ್ಪ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಚರ್ಮದ ಕೋಶಗಳನ್ನು ಸಕ್ರೀಯಗೊಳಿಸುತ್ತದೆ. ಇದು ಡರ್ಮಟೈಟಿಸ್ ನಂತಹ ಕಾಯಿಲೆಗಳನ್ನು ನಿವಾರಿಸುತ್ತದೆ. ಮನೆಯಲ್ಲಿ ಪ್ರತಿ ದಿನ ತುಪ್ಪದ ದೀಪ ಹಚ್ಚುವುದರಿಂದ ಮನೆಯ ವಾತಾವರಣದಲ್ಲಿರುವ ಇರುವ ಮಾಲಿನ್ಯವು ನಿವಾರಣೆಯಾಗುತ್ತದೆ.

ಇನ್ನು ತುಪ್ಪದ ದೀಪ ಹೊರಸೂಸುವ ಹೊಗೆ ಗಾಳಿಯ ಶುದ್ಧೀಕರಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮನೆಯ ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳನ್ನು ಸಹ ನಾಶಪಡಿಸುತ್ತದೆ. ತುಪ್ಪದ ದೀಪದ ಸುವಾಹಸೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. 

ತುಪ್ಪದ ದೀಪ ಏಕೆ , why use ghee in diyas



ತುಪ್ಪದ ದೀಪ ಹಚ್ಚಲು ಧಾರ್ಮಿಕ ಕಾರಣಗಳೇನು..?

ಹಿಂದೂ ಧರ್ಮದಲ್ಲಿ, ಬೆಂಕಿಯನ್ನು ದೇವತೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ರತಿ ಪೂಜೆಯನ್ನು ದೀಪವನ್ನು ಬೆಳಗಿಸುವ ಮೂಲಕ ಪ್ರಾರಂಭಿಸಲಾಗುತ್ತದೆ. ಅಲ್ಲದೇ ಮನೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸುವ ಮೂಲಕ ತಾಯಿ ಲಕ್ಷ್ಮೀ ದೇವಿ ಕೂಡಾ ಸಂತೋಷದಿಂದ ಮನೆಯಲ್ಲಿ ಶಾಶ್ವತವಾಗಿ ನೆಲಸುತ್ತಾಳೆ ಎಂದು ಹೇಳಲಾಗುತ್ತದೆ.

ದೀಪವನ್ನು ಬೆಳಗಿಸುವ ಸರಿಯಾದ ನಿಯಮಗಳೇನು..?


ದೀಪವನ್ನು ಹಚ್ಚುವುರದರಿಂದ ನೀವು ದೀಪದ ಜ್ವಾಲೆಯನ್ನು ಪೂರ್ವಕ್ಕೆ ಇಟ್ಟುಕೊಂಡರೆ, ಅದು ನಿಮ್ಮ ಜೀವತಾವಧಿಯನ್ನು ಹೆಚ್ಚಿಸುತ್ತದೆ.

ತುಪ್ಪದ ತುಪ್ಪದ ದೀಪವನ್ನು ಬೆಳಗಿಸುವಾಗ, ಅದರ ಜ್ವಾಲೆಯು ಪಶ್ಚಿಮಕ್ಕೆ ಹೋಗಲು ಬಿಡಬೇಡಿ, ಇಲ್ಲದಿದ್ದರೆ ಅದು ನಿಮ್ಮ ಮನೆಯಲ್ಲಿ ದುಃಖವನ್ನು ಹೆಚ್ಚಿಸುತ್ತದೆ.

ತುಪ್ಪದ ದೀಪದ ಜ್ವಾಲೆಯನ್ನು ನೀವು ಉತ್ತರ ದಿಕ್ಕಿನ ಕಡೆಗೆ ಇಟ್ಟುಕೊಂಡರೆ, ಇದರಿಂದ ನೀವು ಪ್ರಯೋಜನ ಪಡೆಯುತ್ ದೀಪವನ್ನು ಯಾವಾಗಲೂ ಬೆಳಗಿಸುವಾಗ, ತುಪ್ಪದ ದೀಪದ ಸುವಾಸನೆ ಇದು ಮನೆಯಲ್ಲಿ ಶಾಂತಿಯ, ವಾತಾವರಣವನ್ನು ಸೃಷ್ಟಿಸುತ್ತದೆ.

ದೇವರಿಗೆ, ತುಪ್ಪದ ದೀಪ , ಪ್ರಯೋಜನಗಳು,
ಪೂಜೆ ಮಾಡುವಾಗ ಎಂದಿಗೂ ತುಪ್ಪದ ದೀಪದಿಂದ ಅಗರಬತ್ತಿ ಹಚ್ಚಬೇಡಿ. ಇದ್ರಿಂದ ಬಡತನ ಹೆಚ್ಚಾಗುತ್ತದೆ. ಒಂದು ದೀಪವನ್ನು ಮತ್ತೊಂದು ದೀಪಕ್ಕೆ ಹಚ್ಚುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ.

ಅಂತೆಯೇ, ದೀಪದೊಂದಿಗೆ ದೀಪವನ್ನು ಎಂದಿಗೂ ಬೆಳಗಿಸಬೇಡಿ. ಇದು ಮನೆಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.ಅದೇ ರೀತಿ ದೀಪ ಹಚ್ಚುವಾಗ ಬೆಂಕಿ ಕಡ್ಡಿ ಬಳಸುತ್ತೀರಿ. ಆಗ ಬಾಯಿಂದ ಬೆಂಕಿ ಕಡ್ಡಿ ಆರಿಸಬೇಡಿ. ಕೈಯಿಂದ ನಂದಿಸಿ, ನೀವು ಬಾಯಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರೆ ಲಕ್ಷ್ಮೀ ಅಲ್ಲಿಂದ ಹೋಗುತ್ತಾಳೆ ಎನ್ನುವ ನಂಬಿಕೆ ಇದೆ.

ಪೂಜೆ ವೇಳೆ ಪ್ರಮುಖ ವಿಷಯವೆಂದರೆ, ಪೂಜೆಯ ಸಮಯದಲ್ಲಿ ಮತ್ತು ನಂತರದ ಹಲವು ಗಂಟೆಗಳ ಕಾಲ ದೀಪವನ್ನು ಬೆಳಗಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಎಣ್ಣೆಗಿಂತ ತುಪ್ಪ ಮುಖ್ಯ…

ಧರ್ಮಗ್ರಂಥಗಳಲ್ಲಿ ಎಣ್ಣೆಗಿಂತ ಹೆಚ್ಚು ತುಪ್ಪದ ದೀಪವನ್ನು ಬೆಳಗಿಸುವುದು ಹೆಚ್ಚು ಮುಖ್ಯ ಎಂದು ಹೇಳಲಾಗುತ್ತದೆ. ಎಣ್ಣೆ ಅಥವಾ ತುಪ್ಪದಿಂದ ದೀಪವನ್ನು ಹಚ್ಚಬೇಕು. ಅದರಲ್ಲೂ ತುಪ್ಪದ ದೀಪ ಹೆಚ್ಚು ಶ್ರೇಷ್ಠ .

- ನಮ್ಮ ಓದುಗರು ನೀಡಿದ ಲೇಖನ

–>