ವಿದ್ವಾಂಸರು ಅನ್ನದಾನವೇ ಶ್ರೇಷ್ಠವಾದ ದಾನ ಎಂದು ಹೇಳುತ್ತಾರೆ. ಅನ್ನದಾನದಿಂದಲೇ ರಂತಿದೇವನು ಸ್ವರ್ಗಕ್ಕೆ ಹೋಗಿದ್ದಾನೆ ಎಂದು ಭೀಷ್ಮರು ಧರ್ಮರಾಜನಿಗೆ ಅನ್ನ ದಾನದ ಮಹತ್ವ ಕುರಿತು ಹೇಳುತ್ತಾರೆ.ಹಸಿವಿನಿಂದ ಬಳಲಿ ಬೆಂಡಾಗಿರುವ ಮನುಷ್ಯನಿಗೆ
ಯಾರು ಅನ್ನ ದಾನ ಮಾಡುವರೋ ಅವರು ಬ್ರಹ್ಮನ ಪರಮಧಾಮಕ್ಕೆ ಹೋಗುವರು.
ಅನ್ನದಾನ ಮಾಡುವ ಮನುಷ್ಯರು ಯಾವ ರೀತಿಯಲ್ಲಿ ಶ್ರೇಯಸ್ಸನ್ನು ಹೊಂದುವರೋ ಅದೇರೀತಿಯಲ್ಲಿ ಸುವರ್ಣ ದಾನ, ವಸ್ತ್ರ,ಅಥವಾ ಯಾವುದೇ ದಾನ ಮಾಡುವುದರಿಂದಾಗಲಿ ಶ್ರೇಯಸ್ಸು ದೊರೆಯುವುದಿಲ್ಲ. ಅನ್ನವನ್ನು ಶ್ರೇಷ್ಠವಾದ ಸಂಪತ್ತು ಎಂದು ಹೇಳುತ್ತಾರೆ. ಅನ್ನದಿಂದಲೇ ಪ್ರಾಣ, ತೇಜಸ್ಸು, ವೀರ್ಯ, ಬಲಗಳು ಪುಷ್ಟವಾಗುತ್ತದೆ.
ಯಾವ ಮನುಷ್ಯನು ಏಕಾಗ್ರಚಿತ್ತನಾಗಿ ಯಾಚಕರಿಗೆ ಒಡನೇಯ ಅನ್ನವನ್ನು ನೀಡುವರೋ ಅಂಥವರು ಭವಸಾಗರ ದಾಟಲು ಅಸಾಧ್ಯವಾದ ಕಷ್ಟ ಹೊಂದುವುದಿಲ್ಲ.
ಕಾರ್ತಿಕಮಾಸ ಶುಕ್ಲ ಪಕ್ಷದಲ್ಲಿ ಅನ್ನದಾನ ಮಾಡುವರು ಅವಸಾನದ ನಂತರ ಪರಲೋಕಕ್ಕೆಹೋಗಿ ಅಕ್ಷಯವಾದ ಸುಖವನ್ನು ಅನುಭವಿಸುತ್ತಾರೆ.
ಅನ್ನದಾನ ಮಾಡುವವರು ಅತ್ಯಂತ ಕಠಿಣವಾದ ಆಪತ್ತಿನಲ್ಲಿ ಸಿಲುಕಿಕೊಂಡಿದ್ದರೂ ಅನ್ನದಾನದ ಫಲದಿಂದಾಗಿ ಪಾರಾಗುತ್ತಾರೆ ಎಂದು ಭೀಷ್ಮರು ಅನ್ನದಾನದ ಮಹಿಮೆ ಕುರಿತು ಹೇಳಿದರು.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)
Subscribe , Follow on
Facebook Instagram YouTube Twitter X WhatsApp