ಅದು ಒಂದು ಪ್ರವಚನ ಸಭೆ.ಗುರೂಜಿ ಮೂವತ್ತು ವರ್ಷದ ಮಂಜುನಾಥನಿಗೆ ಪ್ರಶ್ನಿಸಿದರು ....ನೀನು ಬೆಂಗಳೂರಿ ಎಂ.ಜಿ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಿ ಆಗ ನಿನ್ನ ಎದುರುಗಡಯಿಂದ ಒಬ್ಬಳು ಸುಂದರವಾದ ಯುವತಿ ಬರುತ್ತಾಳೆ.
ಆಗ ನೀನು ಏನು ಮಾಡುತ್ತಿ.
ಮಂಜುನಾಥ ಹೇಳಿದ ಸಹಜವಾಗಿ ಎಲ್ಲರಂತೆ ಆಕೆಯನ್ನು ನೋಡುತ್ತೇನೆ ಆಕೆಯ ದೇಹ ಸೌಂದರ್ಯವನ್ನು ಕಣ್ಣಿನಿಂದ ಸವಿಯುತ್ತೇನೆ.
ಗುರುಜಿ ಮತ್ತೆ ಪ್ರಶ್ನಿಸಿದರು ಅವಳು ನಿನ್ನನ್ನು ದಾಟಿಕೊಂಡು ಮುಂದೆ ಹೋದಮೇಲೂ, ತಿರುಗಿ ಆಕೆಯನ್ನು ನೋಡುತ್ತೀಯ ?.
ಹಾಂ.. ಗುರುಜಿ ನನ್ನ ಹೆಂಡತಿ ನನ್ನ ಜೊತೆ ಇರದಿದ್ದರೆ ಅಗತ್ಯವಾಗಿ ನೋಡುತ್ತೇನೆ.( ಸಭೆಯಲ್ಲಿದ್ದವರೆಲ್ಲಾ ಗೊಳ್ಳೆಂದು ನಗುತ್ತಾರೆ.)
ಗುರುಗಳು ಕೇಳಿದರು ನಿಜ ಹೇಳು ಆ ಸುಂದರ ಹುಡುಗಿಯ ಮುಖವನ್ನು ಎಷ್ಟು ಕಾಲ ನೀನು ನಿನ್ನ ನೆನಪಿನಲ್ಲಿಟ್ಟುಕೊಳ್ಳುತ್ತೀ...
ಜಾಸ್ತಿ ಎಂದರೆ 5-10 ನಿಮಿಷ, ಇನ್ನೊಂದು ಸುಂದರ ಹುಡುಗಿಯ ಮುಖ ಕಾಣಿಸುವವರೆಗೆ.
ಒಂದು ನಿಮಿಷ ಮೌನವಾಗಿದ್ದ ಗುರುಜಿ ಮಂಜುನಾಥ ನನ್ನು ಕುರಿತು ಹೇಳಿದರು. ಒಂದು ಸನ್ನಿವೇಶ ಸೃಷ್ಟಿ ಮಾಡಿಕೊ ನೀನು ಬೆಂಗಳೂರಿನಿಂದ ದಿಲ್ಲಿಗೆ ಹೊರಟ್ಟಿದ್ದೀಯ ನಾನು ನಿನಗೆ ಒಂದು ಪುಸ್ತಕದ ಗಂಟು ಕೊಟ್ಟು ದಿಲ್ಲಿಯಲ್ಲಿರುವ ನನ್ನ ಮಿತ್ರರೊಬ್ಬರಿಗೆ ತಲುಪಿಸಲು ಹೇಳುತ್ತೇನೆ.
ನೀನು ಅದರೊಂದಿಗೆ ದಿಲ್ಲಿಯ ಆ ಮಹಾನುಭಾವರ ಮನೆ ತಲುಪುತ್ತೀಯ,
ಮನೆಯ ಮುಂದೆ ನಿಂತ ದುಬಾರಿಯ ಹತ್ತು ಕಾರು, ಐದುಮಂದಿ ಕಾವಲುಗಾರರು ಮನೆಯಮುಂದೆ ನಿಂತಿರುವುದು ನೋಡಿಯೇ ಅರಿವಾಗುತ್ತದೆ ಅದು ಒಬ್ಬ ಆಗರ್ಭ ಶ್ರೀಮಂತರ ಮನೆ ಎಂದು.
ನೀನು ಪುಸ್ತಕದ ಗಂಟು ತಂದಿರುವ ವಿಷಯವನ್ನು ಯಜಮಾನರಿಗೆ ಹೇಳಿಕಳುಹಿಸುತ್ತೀಯ.
ತಕ್ಷಣವೇ ಮನೆಯ ಯಜಮಾನ ನಗು ನಗುತ್ತಾ ಓಡಿಬಂದು ನಿನಗೆ ಸ್ವಾಗತ ಕೋರಿ ಗಂಟನ್ನು ಸ್ವೀಕರಿಸಿ ಧನ್ಯವಾದ ಹೇಳುತ್ತಾನೆ. ನೀನು ವಂದನೆ ಹೇಳಿ ಹೊರಡಲು ಅಣಿಯಾದಾಗ ವಿನಂಮ್ರವಾಗಿ ಮನೆಯೊಳಗೆ ಬರುವಂತೆ ಆಹ್ವಾನಿಸಿ, ನಿನ್ನ ಪಕ್ಕದಲ್ಲೇ ಕುಳಿತು ಉಪಹಾರ ನೀಡಿ ಉಭಯ ಕುಶಲೋಪರಿ ಮಾತನಾಡಿ ನೀವು ಹೇಗೆ ಬಂದಿರಿ ಎಂದು ವಿಚಾರಿಸಿ, ನೀನು ಆಟೋದಲ್ಲಿ ಎಂದಾಗ ಅಲ್ಲಿದ್ದ ಕಾರು ಚಾಲಕನನ್ಮು ಕರೆದು ಇವರನ್ನು ಇವರು ಹೋಗಬೇಕಾದ ಜಾಗಕ್ಕೆ ಮುಟ್ಟಿಸಿ ಬಾ ಎಂದು ಹೇಳಿ ನಿನ್ನನ್ನು ಆತ್ಮೀಯವಾಗಿ ಬೀಳ್ಕೊಂಡು.ನೀನು ಮನೆ ಮುಟ್ಟುವ ಹೊತ್ತಿಗೆ ನಿನಗೆ ಕರೆ ಮಾಡಿ ಸುಖವಾಗಿ ತಲುಪಿದಿರಾ ಎಂದು ವಿಚಾರಿಸಿ ಅವರ ಸೌಜನ್ಯ ತೋರುತ್ತಾರೆ.
ಈಗ ಹೇಳು ಈ ಮಹಾನುಭಾವರನ್ನು ನೀನು ಎಷ್ಟುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತೀ....
ಮಂಜುನಾಥ ಹೇಳಿದ ನನ್ನ ಜೀವಮಾನದಲ್ಲಿ ನಾನು ಅವರನ್ನು ಮರೆಯುವುದಿಲ್ಲ.
ಈಗ ಗುರೂಜಿ ಸಭಿಕರಿಗೆ ಹೇಳಿದರು ನೋಡಿ ಇದು ವಾಸ್ತವಸಂಗತಿ.
ಸುಂದರವಾದ ಮುಖವನ್ನ ಜನರು ಕ್ಷಣಿಕ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.
ಆದರೆ ಸುಂದರವಾದ ನಡವಳಿಕೆಯನ್ನು ಜೀವನ ಪರ್ಯಂತ ಕಾಪಾಡಿಕೊಂಡಿರುತ್ತಾರೆ.
ಏನು ಬೇಕೆಂಬುದು ನೀವೇ ಆಯ್ಕೆ ಮಾಡಿಕೊಳ್ಳಿ.......
ನಮ್ಮ ಜೀವನದಲ್ಲಿ ನಾವು ತೊರಿಸುವ ಅಕ್ಕರೆ ಪ್ರೀತಿ ವಾತ್ಸಲ್ಯ ಮಮತೆ ಕರುಣೆ ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ..,..
Subscribe , Follow on
Facebook Instagram YouTube Twitter WhatsApp