1.ಬೆಳಿಗ್ಗೆ ಸಮಯದಲ್ಲಿ ಹಲ್ಲುಜ್ಜಿದ ನಂತರ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ, ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡುತ್ತದೆ.
2.ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ
3.ನೆಲ್ಲಿಕಾಯಿ ಜ್ಯೂಸ್ ಗೆ ಮೆಂತೆ ಪುಡಿ ಹಾಕಿ ಪ್ರತಿದಿನವೂ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ.
4.ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ.
5.ನೆಲ್ಲಿಕಾಯಿ ಜ್ಯೂಸ್ ಗೆ ಮೆಂತೆ ಪುಡಿ ಹಾಕಿ ಪ್ರತಿದಿನವೂ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ.
6.ಏಲಕ್ಕಿ ಕೇವಲ ಸಿಹಿ ಪದಾರ್ಥಗಳ ರುಚಿ ಹೆಚ್ಚಿಸಲು ಮಾತ್ರವಲ್ಲದೆ ನಮ್ಮ ದೇಹದ ಒಳಗಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವ ಗುಣ ಹೊಂದಿದೆ.
7.ದೇಹದ ಮೇಲೆ ಗಾಯಗಳು, ಹುಣ್ಣುಗಳಿದ್ದರೆ ಅರಿಶಿನ ಹಾಕಿದ ಹಾಲು ಕುಡಿಯುವುದರಿಂದ ಕಲೆ ಸಮೇತ ಗುಣವಾಗುತ್ತದೆ.
8.ದಾಳಿಂಬೆ ಹಣ್ಣಿನ ಮೇಲಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಮಜ್ಜಿಗೆಯಲ್ಲಿ ತೇಯ್ದು ತಿಂದರೆ ಆಮಶಂಕೆ ಬೇಧಿ ನಿವಾರಣೆಯಾಗುತ್ತದೆ.
9.ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗೆಯುವುದರಿಂದ ದಂತಕ್ಷಯ ಹಾಗೂ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
10.ರಕ್ತಹೀನತೆಯಿಂದ ಬಳಲುತ್ತಿರುವವರು ದ್ರಾಕ್ಷಾರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
11.ಊಟ ಮಾಡುವ ಕೆಲವು ನಿಮಿಷಗಳ ಮೊದಲು ನೀರು ಕುಡಿಯುವುದು ಒಳ್ಳೆಯದಲ್ಲ. ಇದರಿಂದ ಜೀರ್ಣಕ್ರಿಯೆ ನಿಗಧಿತ ಸಮಯಕ್ಕಿಂತ ಬೇಗನೆ ಆಗುತ್ತದೆ. ಇದರಿಂದ ಅಸಿಡಿಟಿ
ಸಮಸ್ಯೆ ಹೆಚ್ಚಾಗುತ್ತದೆ.
12.ಕ್ಯಾರೆಟ್ ಉಪಯೋಗ ನಿತ್ಯ ಮಾಡಿದರೆ ದೇಹಕ್ಕೆ ನಿರೋಧಕ ಶಕ್ತಿಯನ್ನು ನೀಡುತ್ತದೆ.
13. ಮೂಲಂಗಿಯಲ್ಲಿ ಸೋಡಿಯಂ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಗಳು ಹೆಚ್ಚಾಗಿ ಇವೆ.
14.ಉಷ್ಣ ಪ್ರಕೃತಿ ಉಳ್ಳವರಹ ಕಾಮ ಕಸ್ತೂರಿ ಬೀಜಗಳನ್ನು ನೀರಿನಲ್ಲಿ ಹಾಕಿಕೊಂಡು ಸೇವಿಸುವುದರಿಂದ ದೇಹ ತಂಪಾಗಿಸುತ್ತದೆ.
15. ಅತಿ ಕಡಿಮೆ ನಿದ್ರೆ ನಮ್ಮ ಮೆದುಳಿನ ಮೇಲೂ ಅಗಾಧ ದುಷ್ಪರಿಣಾಮ ಬೀರಿ ಪಾರ್ಶ್ವವಾಯುವಿಗೆ ದಾರಿ ಮಾಡಿಕೊಡುತ್ತದೆ.
16.ಹಾಲು, ಸಕ್ಕರೆ ಬೆರಸದೆ ತಣ್ಣಗಿರುವ ಹಾಲನ್ನು ಕುಡಿಯಿರಿ. ತಣ್ಣಗಿರುವ ಹಾಲು ದೇಹದಲ್ಲಿರುವ ಆಸಿಡ್ ಅಂಶಗಳನ್ನು ಹೀರಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ನಿಂದಾಗುವ ಉರಿಯನ್ನು ಶಮನಗೊಳಿಸುತ್ತದೆ.
17.- ಪ್ರತಿದಿನ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕಾಮಾಲೆ ರೋಗವನ್ನು ನಿವಾರಿಸುತ್ತದೆ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
18.ಚಳಿ ಹೆಚ್ಚಿದ್ದಾಗ ಪುರುಷರು ಬಿಸಿ ನೀರಿನ ಸ್ನಾನ ಮಾಡಿದರೆ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಕಂಡು ಬರುತ್ತವೆ.
19.ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರೆಯುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
20.ಊಟದ ಜೊತೆಯಲ್ಲಿ ಹಸಿ ಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು, ಮೂಗು, ಕಿವಿ, ಗಂಟಲಿನ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.
21.ಮನಸ್ಸಿನಲ್ಲಿ ಮೂಡಿಬರುವ ಆಲೋಚನೆಗಳನ್ನು ಹಿಡಿದಿಟ್ಟು, ಮನಸ್ಸಿನ ಏಕಾಗ್ರತೆಯನ್ನು ಉಸಿರಿನ ಏರಿಳಿತದ ಕಡೆಗೆ ದೃಢೀಕರೀಸುವುದು ಧ್ಯಾನ.
22.ಪ್ರತಿದಿನವೂ ಸ್ವಲ್ಪ ಹಾಲಿನಲ್ಲಿ ಮುಖವನ್ನು ಮೆತ್ತಗೆ ಮಸಾಜ್ ಮಾಡುತ್ತಿದ್ದರೆ ಚರ್ಮ ತಾಜಾತನದಿಂದ ಕೂಡಿರುತ್ತದೆ. ಒಣ ಚರ್ಮವಿರುವವರಿಗೆ ಇದು ಅತ್ಯುತ್ತಮ.
23.ಟೊಮ್ಯಾಟೊ ಹಣ್ಣನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆದರೆ ಮುಖದ ಮೊಡವೆಗಳು ನಿವಾರಣೆಯಾಗುತ್ತದೆ, ಮುಖ ಕಾಂತಿಯುಕ್ತವಾಗುತ್ತದೆ. ಸೌತೆಕಾಯಿ ಮತ್ತು ಟೊಮ್ಯಾಟೊವನ್ನು ಪೇಸ್ಟ್ ಮಾಡಿ, ದಿನಕ್ಕೆ ಎರಡು ಬಾರಿ ಕಣ್ಣಿನ ಸುತ್ತ ಉಜ್ಜಬೇಕು. ಇದರಿಂದ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
25.ಪ್ರತಿದಿನವೂ ಎದ್ದ ಮೇಲೆ ಒಂದು ಲೋಟ ನೀರಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿದರೆ ಚರ್ಮ ಹೊಳೆಯುವುದಲ್ಲದೆ ಆರೋಗ್ಯಯುತವಾಗಿ ನಯವಾಗಿರುತ್ತದೆ.
26.ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ, ಒಣಗಿದ ಮೇಲೆ ತಣ್ಣೀರಿನಿಂದ ತೊಳೆದರೆ, ಚರ್ಮ ಹೊಳೆಯುತ್ತದೆ.
27.ಬೆನ್ನು ನೋವು : 50 ಮಿಲಿ ಎಳ್ಳೆಣ್ಣೆ, 5 ಗ್ರಾಂ ಪಚ್ಚಕರ್ಪೂರ ಮತ್ತು ೪ ಬೆಳ್ಳುಳ್ಳಿ ಎಸಳನ್ನು ಜಜ್ಜಿ ಹಾಕಿ ಕುದಿಸಿ, ತುಸು ಬೆಚ್ಚಗಿರುವಾಗ ನೋವಿರುವ ಜಾಗಕ್ಕೆ ಹಚ್ಚಿ, ಮೃದುವಾಗಿ ಮಸಾಜ್ ಮಾಡಬೇಕು 28.ಬೆನ್ನು ನೋವು : ಬ್ರಾಹ್ಮಿ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ, ಒಂದು ಚಮಚ ಪುಡಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಇಲ್ಲವೇ ಹಾಲಿನೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು
29.ಬಿಸಿ ನೀರಿನಲ್ಲಿ ಸ್ವಲ್ಪ ಕಲ್ಲಪ್ಪು ಹಾಕಿ ಅದರಲ್ಲಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕಾಲುಗಳ ಒರಟು ಕಡಿಮೆ ಮಾಡುತ್ತದೆ.
30. ಕೂದಲು ಉದುರುವುದಕ್ಕೆ : ತೆಂಗಿನ ಕಾಯಿಯನ್ನು ತುರಿದು ಅದರ ಹಾಲನ್ನು ತಲೆಯ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ, ಒಂದು ಗಂಟೆಯ ನಂತರ ಸ್ನಾನ ಮಾಡಬೇಕು.
31.ಹಸಿ ಹಾಲು, ಎಳ್ಳು, ಕೇಸರಿ ಈ ಮೂರರಲ್ಲೀ ಒಂದು ಅಥವಾ ಎಲ್ಲವೂ ಸೆರಿಸುವುದರಿಂದ ನಿಮ್ಮ ಅದ್ರೃಪ್ಟ ಬದಲಾಗುವುದು.
32.ವಾರಕ್ಕೊಮ್ಮೆ ಹರಳೆಣ್ಣೆಯಿಂದ ಬೆನ್ನನ್ನು ಮಸಾಜ್ ಮಾಡುತ್ತಾ ಬಂದರೆ ಸೊಂಟ ನೋವು ಕಡಿಮೆ ಮಾಡುತ್ತದೆ.
33. ಬೆನ್ನು ನೋವು : ತುಂಬೆ ಸೊಪ್ಪನ್ನು ಅರೆದು, ಹರಳೆಣ್ಣೆ ಅಥವಾ ಎಳ್ಳೆಣ್ಣೆಯಲ್ಲೆ ಬೆರೆಸಿ, ತುಸು ಬೆಚ್ಚಗಿರುವಾಗ ನೋವಿರುವ ಜಾಗಕ್ಕೆ ಹಚ್ಚಿ, ಮೃದುವಾಗಿ ಮಸಾಜ್ ಮಾಡಬೇಕು.
34.ಬೆನ್ನು ನೋವು : ಒಂದು ಚಮಚ ತುಂಬೆಯ ರಸ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದು.
35.ಬ್ರಾಹ್ಮಿ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ, ಒಂದು ಚಮಚ ಪುಡಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಇಲ್ಲವೇ ಹಾಲಿನೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು.
36.ಸುಟ್ಟ ಜಾಗದಲ್ಲಿ ಶರೀರದ ಯಾವುದೇ ಭಾಗವಿರಲಿ ಅದಕ್ಕೆ ಆಲೂಗಡ್ಡೆಯನ್ನು ನುಣ್ಣಗೆ ಅರೆದು ಹಚ್ಚುವುದರಿಂದ ಗಾಯದ ಉರಿ ಕಡಿಮೆ ಆಗುವುದರ ಜೊತೆಗೆ ತಂಪಾಗಿಸುತ್ತದೆ.
37.ಮಧುಮೇಹ, ಹೃದಯ ಸಂಬಂಧಿ ರೋಗಗಳು, ಉದರ ಸಂಬಂಧಿಸಿದ ರೋಗಗಳಿಂದ ನರಳುತ್ತಿರುವವರಿಗೆ ಬೆಚ್ಚಗಿನ ನೀರು ಬಹಳಷ್ಟು ಮಟ್ಟಿಗೆ ಒಳ್ಳೆಯದನ್ನು ಮಾಡುತ್ತದೆ.
38.ಬೆಳಗಿನ ಉತ್ತಮ ಉಪಹಾರ ಸೇವಿಸುವವರು, ಉದ್ವಿಗ್ನ ಪರಿಸ್ಥಿತಿಯಲ್ಲಿ ಶೇಕಡಾ 80 ರಷ್ಟು ಒತ್ತಡ ರಹಿತರಾಗಿರುತ್ತಾರೆ, ಲಘು ಉಪಾಹಾರ ಮಾಡುವವರು ಗೊಂದಲ ಪರಿಸ್ಥಿತಿಯಲ್ಲಿ ಶೇಕಡಾ 7 ಬೇಗ ನಿರ್ಧಾರ ತೆಗೆದುಕೊಳ್ಳುವರು.
39.ಬೆಳಗಿನ ಉಪಹಾರ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಬೆಳಿಗ್ಗೆ ಉತ್ತಮ ಉಪಹಾರ ಮಾಡುವವರು, ಇತರರಿಗಿಂತ ಕಡಿಮೆ ಒತ್ತಡದಲ್ಲಿ ಇರುತ್ತಾರಂತೆ.
40.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಸೇವಿಸಿದರೆ ಒಳ್ಳೆಯದು.
41.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಸೇವಿಸಿದರೆ ಒಳ್ಳೆಯದು.
42.ಉಪ್ಪಿಗೆ ಅದರದ್ದೇ ಆದ ವಿಶೇಷ ರುಚಿಯಿದೆ. ಆ ರುಚಿಯಿಂದ ನಾವು ಸ್ವಲ್ಪ ದೂರ ಇದ್ದಿದ್ದೇ ಆದರೆ, ಹೃದಯ ಸಂಬಂಧಿ ಹಾಗೂ ರಕ್ತದೊತ್ತಡದ ಕಾಯಿಲೆಗಳಿಂದ ದೂರವಿರಬಹುದು.
43.ಬಸಳೆ ಸೊಪ್ಪಿನಲ್ಲಿ ಎ, ಬಿ ಜೀವಸತ್ವಗಳು, ಕಬ್ಬಿಣ, ಪೊಟ್ಯಾಸಿಯಮ್ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ.
44.ಹೊಟ್ಟೆಯಲ್ಲಿ ಸಂಕಟ ತರಹ ಆಗುತ್ತಿದ್ದರೆ ಎಳನೀರು ಸೇವಿಸುವುದು ಉತ್ತಮ.
45.ಮೊಣಕಾಲು ನೋವು ಇದ್ದರೆ ವಜ್ರಾಸನ ಮಾಡಬೇಕು.
46.ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಮೂತ್ರಪಿಂಡದ ಕಲ್ಲು ಹಾಗೂ ಮೂತ್ರಕೋಶದ ಸೋಂಕಿಗೆ ಉತ್ತಮ ಮದ್ದಾಗಿ ಕೆಲಸ ಮಾಡುತ್ತದೆ.
47ಬೆಲ್ಲವು ಅಮೋಘವಾದ ರಕ್ತ ಶುದ್ಧಿ ಟಾನಿಕ್.
48.ಕಫ ಕಡಿಮೆ ಮಾಡಲು ಪ್ರತಿದಿನ ಶುಂಠಿ ಕಷಾಯವನ್ನು ಸೇವಿಸಿ.
48.ಅಲ್ಸರ್ ಸಮಸ್ಯೆ ಇರುವವರು ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ, ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅದರ ಅಲ್ಸರ್ ತೊಂದರೆಯನ್ನು ಶಮನ ಮಾಡುತ್ತದೆ.
49.ಸೇಬು ಹಣ್ಣಿನ ತಿರುಳಿನಿಂದ ಮುಖಕ್ಕೆ ನಯವಾಗಿ ಉಜ್ಜಿಕೊಂಡರೆ ಜಿಡ್ಡಿನ ಅಂಶ ಹೋಗಿ ಮುಖ ಹೊಳೆಯುತ್ತದೆ.
50ಎಳ್ಳೆಣ್ಣೆಯನ್ನು ತಲೆ ಸ್ನಾನ ಮಾಡುವ ಒಂದು ಗಂಟೆಗೆ ಮುಂಚೆ ಹಚ್ಚಿಕೊಂಡು ನಂತರ ಸ್ನಾನ ಮಾಡಿದರೆ, ಕೂದಲು ದಟ್ಟವಾಗಿ ಮತ್ತು ಕಾಂತಿಯುತವಾಗಿ ಕಾಣುತ್ತದೆ.
51.ಅಲೋವೆರಾದಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಶಕ್ತಿ ಇದೆ.
52.ಯಾವಾಗಲೂ ಹಸಿರು ಬಣ್ಣದ ಹಾಗಲಕಾಯಿಯನ್ನೇ ಉಪಯೋಗಿಸಿ. ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿಯನ್ನು ಸೇವಿಸಬಾರದು.
53.ಹಳದಿಗಟ್ಟಿದ ಹಲ್ಲುಗಳು ಬೆಳ್ಳಗಾಗಲು ಪ್ರತಿದಿನ ಹಲ್ಲುಜ್ಜುವ ಮುನ್ನ ಪೇಸ್ಟ್ ಜೊತೆ ಸ್ವಲ್ಪ ಪ್ರಮಾಣದ ಅಡುಗೆ ಸೋಡಾವನ್ನು ಸೇರಿಸಿ ಹಲ್ಲುಜ್ಜಿದರೆ ಹಲ್ಲುಗಳು ನಿಧಾನವಾಗಿ ಬೆಳ್ಳಗಾಗುತ್ತವೆ.
54.ಹೃದಯ ದೌರ್ಬಲ್ಯ ಇರುವವರು ಸೋರೆಕಾಯಿ ರಸ ಸೇವಿಸುವುದು ಉತ್ತಮ.
55.ಕಹಿಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
56.ಹೆಸರು ಹಿಟ್ಟಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿರುವ ದುರ್ಗಂಧ ದೂರವಾಗುತ್ತದೆ.
57.ಹೊಟ್ಟೆಯಲ್ಲಿ ಸಂಕಟ ಆಗುತ್ತಿದ್ದರೆ ಎಳನೀರು ಸೇವಿಸುವುದು ಉತ್ತಮ.
58.ಕೇಸರಿ ಹಾಲು ಕುಡಿಯುವುದರಿಂದ ರಕ್ತ ದೋಷವಿದ್ದರೆ ನಿವಾರಣೆಯಾಗುತ್ತದೆ. *
59.ಹಲಸಿನ ಹಣ್ಣಿನ ಸೇವನೆಯಿಂದ, ಅದರಲ್ಲಿರುವ ಅಧಿಕ ಮೆಗ್ನೀಷಿಯಂ ಹಾಗೂ ಕ್ಯಾಲ್ಸಿಯಂ ಅಂಶಗಳು ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. *
60.ಬೆನ್ನು ಅಥವಾ ಸೊಂಟ ನೋವಿದ್ದರೆ ತಲೆದಿಂಬು ಇಲ್ಲದೇ ಸಮತಟ್ಟಾದ ನೆಲದಲ್ಲಿ ಮಲಗುವುದರಿಂದ ಬೆನ್ನೆಲುಬಿಗೆ ವಿಶ್ರಾಂತಿ ಸಿಗುತ್ತದೆ.
61.ಅಲರ್ಜಿ ಏನಾದರೂ ಆಗಿದ್ದರೆ ಅಮೃತ ಬಳ್ಳಿಯ ಕಷಾಯ ಕುಡಿಯಬೇಕು. ಇದರಿಂದ ಅಲರ್ಜಿ ಕಡಿಮೆಯಾಗುತ್ತದೆ.
62.ಮಣ್ಣಿನ ಮಡಕೆಯು ಭೂಮಿಯಲ್ಲಿರುವ ಮಣ್ಣಿನಿಂದ ಆಗಿರುವುದರಿಂದ ಮನುಷ್ಯನ ದೇಹಕ್ಕೆ ಅಗತ್ಯವಾದ ಉತ್ಕೃಷ್ಟ ಅಂಶಗಳನ್ನು ಒಳಗೊಂಡಿರುತ್ತದೆ.
63.ಮಣ್ಣಿನ ಮಡಕೆಯ ನೀರು ವ್ಯತಿರಿಕ್ತ ಉಷ್ಣಾಂಶವನ್ನು ತಡೆಯುವುದರಲ್ಲಿ ಕೆಲಸ ಮಾಡುವುದರಿಂದ ಬಿಸಿಲಿನಿಂದಾಗುವ Sunstroke ಹತ್ತಿರಕ್ಕೂ ಸುಳಿಯುವುದಿಲ್ಲ.
64.ಮಣ್ಣಿನ ಮಡಕೆಯ ನೀರು ಜೀರ್ಣ ಪ್ರಕ್ರಿಯೆಯನ್ನು ಸುಲಲಿತಗೊಳಿಸುತ್ತದೆ. *
65.ಮೆಂತ್ಯಕಾಳಿನ ಸೇವನೆ - ರಾತ್ರಿ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೆನೆಸಿರುವ ಕಾಳನ್ನು ಚೆನ್ನಾಗಿ ಅಗಿದು ತಿನ್ನಬೇಕು. ಇದರಿಂದ ಹೊಟ್ಟೆ ಹಸಿವು ಬೇಗ ಆಗುವುದಿಲ್ಲ. ಇದರಿಂದ ದೇಹದ ತೂಕ ಸಮತೋಲನೆಗೆ ಬರುವಂತೆ ನೋಡಿಕೊಳ್ಳುತ್ತದೆ.
66.ಮೆಂತ್ಯಕಾಳಿನ ಸೇವನೆ - ಮೆಂತ್ಯೆ ಕಾಳಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿದ್ದು ಇದು ಹೃದಯಾಘಾತದಿಂದ ತಪ್ಪಿಸುತ್ತದೆ.
67.ಮೆಂತ್ಯಕಾಳಿನ ಸೇವನೆ - ಮೆಂತ್ಯೆ ಕಾಳಿನಲ್ಲಿ ಸೋಡಿಯಮ್ ಇರುವುದರಿಂದ ಹೃದಯ ಮತ್ತು ರಕ್ತದೊತ್ತಡವನ್ನು ನಿಭಾಯಿಸುತ್ತದೆ.
68.ಮೆಂತ್ಯಕಾಳಿನ ಸೇವನೆ - ಕೆಮ್ಮು, ನೆಗಡಿ, ಶೀತ, ಜ್ವರ, ಗಂಟಲು ಬೇನೆ, ಸುಸ್ತು ಇಂತಹ ಕಾಯಿಲೆಗಳು ಬಂದಾಗ ಒಂದು ಚಮಚ ನಿಂಬೆರಸ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಅದರ ಜೊತೆಗೆ ಸ್ವಲ್ಪ ಮೆಂತ್ಯೆ ಕಾಳನ್ನು ಸೇರಿಸಿ ಸೇವಿಸುವುದು.
69.ಮೆಂತ್ಯಕಾಳಿನ ಸೇವನೆ - ಮಲಬದ್ಧತೆ ಇದ್ದಲ್ಲಿ ಮೆಂತ್ಯೆ ಕಾಳನ್ನು ನೆನೆಸಿ ಅದನ್ನು ಬೆಳಿಗ್ಗೆ ಎದ್ದು ಚೆನ್ನಾಗಿ ಕುದಿಸಿ, ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಬೇಕು.
70.ಮೆಂತ್ಯಕಾಳಿನ ಸೇವನೆ - ರಾತ್ರಿ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಎದ್ದ ತಕ್ಷಣ ಚೆನ್ನಾಗಿ ಅಗಿದು ತಿನ್ನಬೇಕು. ಇದರಿಂದ ಹೊಟ್ಟೆ ಹಸಿವು ಬೇಗ ಆಗುವುದಿಲ್ಲ. ಇದರಿಂದ ದೇಹದ ತೂಕ ಸಮತೋಲನಗೆ ಬರುವಂತೆ ನೋಡಿಕೊಳ್ಳುತ್ತದೆ.
71.ಮೆಂತ್ಯಕಾಳಿನ ಸೇವನೆ - ಮುಖದಲ್ಲಿ ಹೆಚ್ಚಾಗಿ ಬ್ಲಾಕ್ ಹೆಡ್ಸ್, ಮೊಡವೆ, ನೆರಿಗೆಗಳು ಹೆಚ್ಚಾಗಿ ಕಂಡು ಬಂದಾಗ ಮೆಂತ್ಯೆ ಕಾಳಿಂದ ಮುಕ್ತಿ ಪಡೆಯಬಹುದು.
72.ಮೆಂತ್ಯಕಾಳಿನ ಸೇವನೆ - ಮೆಂತ್ಯೆ ಕಾಳನ್ನು ನೆನೆಸಿ ಅದನ್ನು ಮೊಳಕೆ ಬರಿಸಿ ಅದರಿಂದ ಉಸಲಿ ಮಾಡಿಕೊಂಡು ತಿಂದರೆ ಎದೆ ಹಾಲು ಕುಡಿಸುವ ತಾಯಿಯಂದಿರಿಗೆ ಬಹಳ ಒಳ್ಳೆಯದು.
73.ಮೆಂತ್ಯಕಾಳಿನ ಸೇವನೆ - ಕೆಮ್ಮು, ನೆಗಡಿ, ಶೀತ, ಜ್ವರ, ಗಂಟಲು ಬೇನೆ, ಸುಸ್ತು ಇಂತಹ ಕಾಯಿಲೆಗಳು ಬಂದಾಗ ಒಂದು ಚಮಚ ನಿಂಬೆರಸ ಮತ್ತು ಸ್ವಲ್ಪ ಜೇನುತುಪ್ಪ ಅದರ ಜೊತೆಗೆ ಸ್ವಲ್ಪ ಮೆಂತ್ಯೆ ಕಾಳನ್ನು ಬೆರೆಸಿ ತಿನ್ನುವುದರಿಂದ ಈ ಕಾಯಿಲೆಗಳಿಂದ ಆರಾಮ ವಾಗುತ್ತದೆ
74.ಮೆಂತ್ಯಕಾಳಿನ ಸೇವನೆ - ಸ್ವಲ್ಪ ಮೆಂತ್ಯೆ ಕಾಳನ್ನು ದಿನವೂ ತಿನ್ನುವುದರಿಂದ ದೇಹಕ್ಕೆ ಸುಸ್ತು ಆಗದಂತೆ ನೋಡಿಕೊಳ್ಳುತ್ತದೆ.
75.ಶೇಂಗಾ ಕಡಲೆಕಾಯಿ ಒಂದು ದ್ವಿದಳ ಧಾನ್ಯವಾದ ಕಾರಣ ಯಾವುದೇ ದ್ವಿದಳ ಧಾನ್ಯಗಳಲ್ಲಿರುವಂತೆ ಇದರಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನ್ ಗಳಿವೆ.
76.ಪಪ್ಪಾಯಿ ಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಷಿಯಂ, ನಿಯಾಸಿನ್ ನ ಹಲವಾರು ಅಂಶಗಳನ್ನು ಹೊಂದಿದೆ.
77.ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಇರುವ ಕಾರಣ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಿಸದಂತೆ ನೋಡಿಕೊಳ್ಳುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರ ಇರುವುದರ ಜೊತೆಗೆ ರಕ್ತದೊತ್ತಡ ತಡೆಗಟ್ಟಲು ಸಹಾಯ ಮಾಡುತ್ತದೆ.
78.ಪಪ್ಪಾಯಿ ಹಣ್ಣಿನ್ನು ಮಕ್ಕಳಿಗೆ ಹೆಚ್ಚಾಗಿ ತಿನ್ನಿಸಬೇಕು, ಇದರಿಂದ ಕಣ್ಣಿನ ಸಮಸ್ಯೆ ಕಾಡುವುದಿಲ್ಲ.
78.ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಕೆ ಇರುವುದರಿಂದ ಆರ್ಥರೈಟಿಸ್ ಅನ್ನು ತಡೆಗಟ್ಟುತ್ತದೆ ಹಾಗೂ ಕೀಲುನೋವಿನ ಸಮಸ್ಯೆ ಕಾಡುವುದಿಲ್ಲ.
80.ಪಪ್ಪಾಯಿ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಸಕ್ಕರೆ ಕಾಯಿಲೆ ಇರುವವರು ಕೂಡ ಯಾವುದೇ ಭಯವಿಲ್ಲದೆ ತಿನ್ನಬಹುದು.
81.ತೂಕ ಇಳಿಸಲಯ ಬಯಸುವವರು ಅಧಿಕವಾಗಿ ಪಪ್ಪಾಯಿ ಹಣ್ಣನ್ನು ತಿನ್ನಬೇಕು. ಇದರಿಂದ ದೇಹದಲ್ಲಿ ಬೇಡದಿರುವ ಕೊಬ್ಬನ್ನು ಕರಗಿಸುತ್ತದೆ.
82.ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಕೆ ಇರುವುದರಿಂದ ಮೂಳೆಗಳು ಸದೃಢಗೊಳ್ಳುತ್ತದೆ.
83.ಪಪ್ಪಾಯಿ ಹಣ್ಣಿನಲ್ಲಿ ನಾರಿನ ಅಂಶ ಹೊಂದಿದೆ, ಅಷ್ಟೇ ಅಲ್ಲದೇ ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಷಿಯಂ, ನಿಯಾಸಿನ್ ಇನ್ನೂ ಹಲವಾರು ಅಂಶಗಳನ್ನು ಇದು ಹೊಂದಿರುತ್ತದೆ.
84.ಋತು ಚಕ್ರದ ಸಮಸ್ಯೆ ಇರುವವರು ಪಪ್ಪಾಯ ಹಣ್ಣಿನ ಜ್ಯೂಸ್ ಅಥವಾ ಹಸಿ ಪರಂಗಿ ಕಾಯಿಯ ರಸವನ್ನು ಸೇವಿಸುತ್ತಾ ಬಂದರೆ ಈ ಸಮಸ್ಯೆ ಕ್ರಮೇಣ ಕಡಿಮೆ ಆಗುತ್ತಾ ಬರುತ್ತದೆ.
85.ಸಕ್ಕರೆ ಕಾಯಿಲೆ ಇರುವವರು ಕೂಡ ಪಪ್ಪಾಯಿ ಹಣ್ಣನ್ನು ಸೇವಿಸಬಹುದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ಇದು ತಡೆಗಟ್ಟುತ್ತದೆ.
86.ಪಪ್ಪಾಯಿ ಹಣ್ಣಿನಲ್ಲಿ ಕಿಣ್ವ ಎಂಬ ಅಂಶವು ಅಧಿಕವಾಗಿರುವುದರಿಂದ ಇದನ್ನು ನಿತ್ಯದಲ್ಲೂ ಸೇವಿಸುತ್ತಾ ಬಂದರೆ ದೇಹಕ್ಕೆ ಶಕ್ತಿ ಬರುವುದರ ಜೊತೆಗೆ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.
87.ಪಪ್ಪಾಯ ವನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅಪಾಯ.
88.ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತ ಸಂಚಾರ ಸುಲಭವಾಗುತ್ತದೆ. ರಕ್ತವು ವೃದ್ಧಿಯಾಗುತ್ತದೆ
89.ತಾಮ್ರದ ವಸ್ತುಗಳನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವುದರಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತದೆ.
90.ತಾಮ್ರದ ಬಳೆ ತೊಡಗುವುದರಿಂದ ಉಪಯೋಗ - ಇದನ್ನು ಧರಿಸುವುದರಿಂದ ಕೊಬ್ಬಿನಿಂದ ಆಗುವ ಹೃದಯದ ಮೇಲೆ ಆಗುವ ಪರಿಣಾಮ ದೂರವಾಗುತ್ತದೆ.
91.ತಾಮ್ರದ ಬಳೆ ತೊಡಗುವುದರಿಂದ ಉಪಯೋಗ - ಸಂಧಿವಾತ ಮತ್ತು ಕೈ ಕಾಲುಗಳು ಜುಮ್ ಎನ್ನುವವರು ತಾಮ್ರದ ಖಡಗ ಹಾಕಿಕೊಂಡರೆ ಪರಿಹಾರ ದೊರೆಯುತ್ತದೆ.
92.ತಾಮ್ರದ ಬಳೆ ತೊಡಗುವುದರಿಂದ ಉಪಯೋಗ - ನಮ್ಮ ದೇಹದಲ್ಲಿ ಇರುವ ಸೂಕ್ಷ್ಮ ಖನಿಜಗಳು ನಮ್ಮ ಬೆವರಿನ ಮೂಲಕ ರಕ್ತನಾಳಗಳನ್ನು ಪ್ರವೇಶಿಸುತ್ತವೆ. ಆದ್ದರಿಂದ ಈ ಬಳೆ ತುಂಬಾ ಪರಿಣಾಮ ಬೀರುತ್ತದೆ.
93.ಸೌತೆಕಾಯಿ ಸೇವನೆ - ಸಿಪ್ಪೆ ಸಹಿತ ಸೌತೆಕಾಯಿಯನ್ನು ಉಪ್ಪು ಮತ್ತು ಮೆಣಸು ಬಳಸಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.ಸೌತೆಕಾಯಿ ಸೇವನೆ - ಹಸಿ ಸೌತೆಕಾಯಿಯ ಸೇವನೆಯು ಮಧುಮೇಹ ರಕ್ತದೊತ್ತಡ ಈ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಒಂದು ಉತ್ತಮ ಆಹಾರ.
94.ಸೌತೆಕಾಯಿ ಸೇವನೆ - ಸೌತೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ಫ್ರಿಟ್ಜ್ ನಲ್ಲಿ ಇಟ್ಟು ನಂತರ ಅದನ್ನು ಕಣ್ಣುಗಳ ಮೇಲೆ ಇರಿಸುವುದರಿಂದ ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು ನಿವಾರಣೆಯಾಗುತ್ತದೆ ಮತ್ತು ಕಣ್ಣುಗಳ ಆಯಾಸ ಕಡಿಮೆಯಾಗುತ್ತದೆ ಹಾಗೂ ಕಣ್ಣುಗಳು ನಳನಳಿಸುತ್ತವೆ.
95.ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಮೂತ್ರ ರೋಗದಿಂದ ಬಳಲುತ್ತಿರುವವರಿಗೆ ಹಸಿ ಸೌತೆಕಾಯಿಯ ಸೇವನೆ ಲಾಭದಾಯಕವಾಗಿದೆ.
96.ಸೌತೆಕಾಯಿ ಸೇವನೆ - ಸೌತೆಕಾಯಿ ರಸವನ್ನು ಅಂಗಾಲುಗಳಿಗೆ ಉಜ್ಜುವುದರಿಂದ ಕಣ್ಣುಗಳ ಉರಿ ಅಂಗಾಲಿನ ಉರಿಯು ಕಡಿಮೆಯಾಗಿ ಸುಖವಾದ ನಿದ್ರೆ ಬರುತ್ತದೆ.
97.ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಟೊಮ್ಯಾಟೊ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಕುಡಿಯುವುದು ಅಥವಾ ಟೊಮ್ಯಾಟೊ ಹಣ್ಣನ್ನು ತಿನ್ನುವುದರಿಂದಲೂ ದೇಹದ ಆಯಾಸ ಕಡಿಮೆಯಾಗಿ ಲವಲವಿಕೆಯಿಂದ ಇರಬಹುದು.
98.ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಸೌತೆಕಾಯಿ, ಕಲ್ಲಂಗಡಿ, ನೇತಳರ, ಟೊಮ್ಯಾಟೊ, ಕರಬೂಜ - ಈ ಹಣ್ಣುಗಳ ಸೇವನೆ ದೇಹಕ್ಕೆ ಹಾಗೂ ಮನಸ್ಸಿನ ಚೈತನ್ಯಕ್ಕೆ ಲಾಭದಾಯಕ.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಹಸಿ ಕ್ಯಾರೆಟ್ ಅನ್ನು ತುರಿದು ಉಪ್ಪು ನಿಂಬೆರಸ ಬೆರೆಸಿ ಸೇವಿಸುವುದರಿಂದ ದೇಹದ ಆಯಾಸ ನಿವಾರಣೆಯಾಗುವುದಲ್ಲದೇ ಚೈತನ್ಯದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.
99.ಬಿಸಿಲಿನಿಂದ ಆಗುವ ದಾಹ - ಕಲ್ಲಂಗಡಿ ಹಾಗೂ ಕರಬೂಜ ಹಣ್ಣಿನ ಪಾನಕ ಸೇವನೆ ಆಯಾಸ ಮತ್ತು ನೀರಡಿಕೆ ಉತ್ತಮವಾಗಿದೆ.
ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ಟಮೊಟೋ ಹಣ್ಣಿನ ರಸಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ಅಥವಾ ಟಮೋಟೋ ತಿನ್ನುವುದರಿಂದ ದೇಹದ ಆಯಾಸವು ಬಹುಬೇಗನೆ ನಿವಾರಣೆಯಾಗುತ್ತದೆ.
100.ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ದಾಹ - ನಿಂಬೆಹಣ್ಣಿನ ಪಾನಕಕ್ಕೆ ಸಕ್ಕರೆಯ ಬದಲಾಗಿ ಬೆಲ್ಲವನ್ನು ಉಪಯೋಗಿಸಿ, ಕುಡಿಯುವುದರಿಂದ ಆಯಾಸವು ಬಹುಬೇಗನೆ ನಿವಾರಣೆಯಾಗುತ್ತದೆ.
101.ರಕ್ತಹೀನತೆಯನ್ನು ದೂರ ಮಾಡಲು ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಬೇಕು. ಇದರಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುತ್ತದೆ.
102.ಮಲಬದ್ಧತೆ ಆದಾಗ ಮಾತ್ರೆಗಳನ್ನು ಕೊಡುವ ಮೊದಲು ಬಾಳೆಹಣ್ಣನ್ನು ಕೊಡಬಹುದು. ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.
103.ಗ್ಯಾಸ್ಟ್ರಿಕ್, ಅಸಿಡಿಟಿ ಅಥವಾ ಎದೆಯಲ್ಲಿ ಹುಳಿ ತೇಗು ತುಂಬಾ ಬರುತ್ತಿದ್ದರೆ, ಬಾಳೆಹಣ್ಣನ್ನು ಹೆಚ್ಚಾಗಿ ಉಪಯೋಗಿಸಬೇಕು.
104.ರಕ್ತದೊತ್ತಡ ಇರುವವರು ಬಾಳೆಹಣ್ಣಿನ ಸೇವನೆ ಮಾಡಬಹುದು. ಇದರಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿದ್ದು, ಲವನಾಂಶ ಕಡಿಮೆ ಇರುತ್ತದೆ.
105.ಬೇಸಿಗೆಯಲ್ಲಿ ದಿನಕ್ಕೆ ಒಂದು ಬಾಳೆಹಣ್ಣನ್ನು ತಿನ್ನಿಸುವುದರಿಂದ ದೇಹವು ತಂಪಾಗಿರುತ್ತದೆ.
106.ಮಲಗುವ ಮೊದಲು ಹದವಾದ ಬಿಸಿ ನೀರಿನಲ್ಲಿ ಸೋಪು ಹಚ್ಚಿ ಮೃದುವಾಗಿ ತೊಳೆದು, ನಂತರ ಸಾಸಿವೆ ಎಣ್ಣೆ ಹಚ್ಚಿ ಸಾಕ್ಸ್ ಹಾಕಿ ಮಲಗಿದರೆ, ಒರಟು ಕಡಿಮೆ ಮಾಡುತ್ತದೆ.
107.ನಿಂಬೆಹಣ್ಣಿನ ರಸವನ್ನು ಮುಖದ ಸುಕ್ಕುಗಳಿರುವ ಭಾಗಕ್ಕೆ ಲೇಪಿಸುತ್ತಿದ್ದರೆ, ಸುಕ್ಕುಗಳಿರುವ ಭಾಗದಲ್ಲಿನ ಗೆರೆಗಳು ಮತ್ತು ಕಲೆಗಳು ಕಳೆಗುಂದಿ, ಸುಕ್ಕುಗಳು ಮಾಯವಾಗುತ್ತವೆ.
108.ಮುಖದ ಸುಕ್ಕುಗಳನ್ನು ನಿವಾರಿಸಲು ಜೇನುತುಪ್ಪ, ಹಾಲಿನ ಕೆನೆ ಮತ್ತು ಆಲೀವ್ ಎಣ್ಣೆಯ ಮಿಶ್ರಣವನ್ನು ಬಳಸಬಹುದು.
109.ಪಪ್ಪಾಯಿ ಹಣ್ಣಿಗೆ ಸ್ವಲ್ಪ ನಿಂಬೆರಸ ಹಾಕಿ ಪಾದಗಳಿಗೆ 10 ನಿಮಿಷ ತಿಕ್ಕಿ ನಂತರ ಕಾಲುಗಳನ್ನು ತೊಳೆಯಬೇಕು. ಈ ರೀತಿಯಲ್ಲಿ ಎರಡು ಬಾರಿ ಮಾಡಿದರೆ ಪಾದಗಳು ನುಣುಪಾಗಿ ಸುಂದರವಾಗಿ ಕಾಣುತ್ತದೆ.
110.ಕೂದಲಿಗೆ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ, ಏಕೆಂದರೆ, ಬಿಸಿ ನೀರು ಕೂದಲನ್ನು ಒಣಗಿಸುತ್ತದೆ.
111.ನಿಂಬೆ ರಸ ಹಾಗೂ ತೆಂಗಿನಕಾಯಿ ಹಾಲಿನ ಪೇಸ್ಟ್ ನೈಸರ್ಗಿಕವಾಗಿ ಕೂದಲನ್ನು ನಯಗೊಳಿಸಲು ಉತ್ತಮ ವಿಧಾನ. ಅದು ಕ್ರೀಮ್ ಕಂಡೀಷನರ್ ರೀತಿ ಕೆಲಸ ಮಾಡುತ್ತದೆ.
112.ನಿಂಬೆಹಣ್ಣಿನ ರಸದಿಂದ ತುಟಿಗಳನ್ನು ಮಸಾಜ್ ಮಾಡುತ್ತಿದ್ದರೆ, ತುಟಿಗಳು ಕಪ್ಪಾಗುವುದನ್ನು ತಡೆಯಬಹುದು.
113.ಬೀಟ್ ರೂಟ್ ರಸವನ್ನು ಪ್ರತಿದಿನ ಹಚ್ಚುತ್ತಾ ಬಂದರೆ ತುಟಿ ಮೃದುವಾಗುತ್ತದೆ ಮತ್ತು ಸಹಜವಾದ ಗುಲಾಬಿ ಬಣ್ಣ ಬರುತ್ತದೆ.
114.ಬಾದಾಮಿ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಾ ಬಂದರೆ ತುಟಿ ಮೃದುವಾಗುತ್ತದೆ ಮತ್ತು ಹೊಳಪು ಹೆಚ್ಚುತ್ತದೆ.
115.ನಿಂಬೆರಸಕ್ಕೆ ಸ್ವಲ್ಪ ಗ್ಲಿಸರಿನ್ ಸೇರಿಸಿ ರಾತ್ರಿ ಮಲಗುವ ವೇಳೆ ನಯವಾಗಿ ಹಚ್ಚಬೇಕು, ಬೆಳಗೆದ್ದು ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ತುಟಿಗಳು ಮಾಯಿಶ್ಚರೈಸರ್ ಆಗುತ್ತವೆ.
116.ಸ್ವಲ್ಪ ಹಾಲಿನ ಕೆನೆಯೊಂದಿಗೆ ಸಕ್ಕರೆಯನ್ನು ಬೆರೆಸಿ ಹಚ್ಚದರೆ, ನಿರ್ಜೀವತೆಯನ್ನು ನಿವಾರಿಸಿ ತುಟಿಗಳನ್ನು ತೇವವಾಗಿರಿಸುತ್ತದೆ.
117.ತೆಂಗಿನ ಎಣ್ಣೆ ಹಾಗೂ ಹಾಲು ನೈಸರ್ಗಿಕ ಲಿಪ್ ಬಾಮ್ ನಂತೆ ಕೆಲಸ ಮಾಡುತ್ತದೆ. ಇದನ್ನು ಸೇರಿಸಿ ರಾತ್ರಿ ಮಲಗುವ ವೇಳೆ ನಯವಾಗಿ ಹಚ್ಚಬೇಕು, ಬೆಳಗೆದ್ದು ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ತುಟಿಗಳು ಮಾಯಿಶ್ಚರೈಸರ್ ಆಗುತ್ತವೆ.
118.ತೆಂಗಿನಕಾಯಿ ಯನ್ನು ತುರಿದು ಹಾಲು ತೆಗೆದು ತುಟಿಗಳಿಗೆ ಸವರಿದರೆ ತುಟಿಗಳು ಮೃದುವಾಗಿ ಹೊಳೆಯುತ್ತದೆ.
119.ಹೆಚ್ಚು ಕ್ಯಾರೆಟ್ ಹಾಗೂ ಹಸಿ ಸೌತೆಕಾಯಿ ತಿನ್ನುತ್ತಿದ್ದರೆ, ತುಟಿಗಳನ್ನು ಯಾವಾಗಲೂ ತಾಜಾತನದಿಂದ ಹೊಳೆಯುವಂತೆ ಮಾಡುತ್ತದೆ.
120.ಗುಲಾಬಿ ದಳಗಳನ್ನು ಚೆನ್ನಾಗಿ ಅರೆದು ತುಟಿಗಳಿಗೆ ಲೇಪಿಸಿದರೆ ತುಟಿಗಳು ಪಿಂಕ್ ಆಗಿ ಉಳಿಯುತ್ತದೆ.
121.ನೈಸರ್ಗಿಕವಾಗಿ ಕೆಂಪು ತುಟಿಯನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಬೀಟ್ ರೂಟ್ ನ್ನು ಲೇಪಿಸಿ ಮಲಗಿ.
122.ಮುಳ್ಳು ಸೌತೆಕಾಯಿಯನ್ನು ಸಿಪ್ಪೆ, ಬೀಜ ಸಮೇತ ನುಣ್ಣಗೆ ಕಡೆದು ಮುಖಕ್ಕೆ ಲೇಪನ ಮಾಡಿ, 30 ನಿಮಿಷಗಳ ನಂತರ ತೊಳೆದರೆ, ಮೊಡವೆಗಳು ನಿವಾರಣೆಯಾಗುತ್ತವೆ.
123.ನಿಂಬೆರಸ ಮತ್ತು ರೋಸ್ ವಾಟರ್ ಸಮ ಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ. ಇದು ಮೊಡವೆಗಳನ್ನು ಹೋಗಲಾಡಿಸುತ್ತದೆ. ಶುಭ ಮೈಕಾಂತಿಯನ್ನೂ ನೀಡುತ್ತದೆ.
124.ವಿನೆಗರ್ ಮತ್ತು ಉಪ್ಪನ್ನು ನುಣ್ಣಗೆ ರುಬ್ಬಿ, ಮುಖಕ್ಕೆ ಬೆರಳ ತುದಿಯಿಂದ ಗೋಲಾಕಾರವಾಗಿ ಸವರಿ, ಐದು ನಿಮಿಷ ಬಿಟ್ಟು ತೊಳೆಯಲು, ಬ್ಲಾಕ್ ಹೆಡ್, ಡೆಡ್ ಸ್ಕಿನ್ ಗಳೆಲ್ಲವೂ ನಿವಾರಣೆಯಾಗುತ್ತದೆ.
125.ಮುಖವನ್ನು ತೊಳೆದು ಕಣ್ಣಿಗೆ ಸೌತೆಕಾಯಿಯ ತುಂಡು ಅಥವಾ ಹಸಿ ಆಲೂಗಡ್ಡೆಯ ತುಂಡನ್ನು ಇಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಅರ್ಧ ಗಂಟೆ ಪ್ರತಿದಿನ ಇಡುತ್ತಾ ಬಂದರೆ ಒಂದು ತಿಂಗಳಿನಲ್ಲಿ ಕಣ್ಣಿನ ಸುತ್ತ ಬಿದ್ದಿರುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.
126.ಟೊಮ್ಯಾಟೊ ಮತ್ತು ನಿಂಬೆರಸ ಮಿಶ್ರಣ ಮಾಡಿ, ದಿನಕ್ಕೆ ಎರಡು ಬಾರಿ ಕಣ್ಣಿನ ಸುತ್ತ ಉಜ್ಜಬೇಕು. ಇದರಲ್ಲಿರುವ ಬ್ಲೀಚ್ ಅಂಶ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
127.ಅರಿಶಿನ ಪುಡಿಯನ್ನು ಫೈನಾಫಲ್ ಜ್ಯೂಸ್ ಜೊತೆ ಮಿಶ್ರಣ ಮಾಡಿ ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು.
128.ಪುದೀನ ಎಲೆಯ ರಸವನ್ನು ಹಿಂಡಿ ಅದನ್ನು ಕಣ್ಣಿನ ಸುತ್ತ ಹಚ್ಚಿದರೂ ಕಪ್ಪು ಕಲೆಯ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು.
129.ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಪುದೀನ ಎಲೆ ಸೇರಿಸಿ ಅರೆದು ಪೇಸ್ಟ್ ಮಾಡಿ ರಾತ್ರಿ ಫ್ರಿಟ್ಜ್ ನಲ್ಲಿಡಿ. ಬೆಳಿಗ್ಗೆ ಅದನ್ನು ಮುಖಕ್ಕೆ ಹಚ್ಚಿ, ಮೊಡವೆ ಮುಖಕ್ಕೆ ಇದು ಅತ್ಯುತ್ತಮ
- ನಮ್ಮ ಓದುಗರು ನೀಡಿದ ಲೇಖನ
Subscribe , Follow on
Facebook Instagram YouTube Twitter X WhatsApp