-->

ಬೆಲೆ ಬಾಳುವ ಉಡುಗೊರೆ ಬೇಡ, ಬೆಲೆ ಕಟ್ಟಲಾಗದ್ದನ್ನ ಕೊಟ್ಟು ನೋಡಿ

ಪ್ರಿಯ ಸಾಫ್ಟವೆರ್ ಇಂಜಿನಿಯರ್ ಆಗಿ ತನ್ನ ಮೊದಲ ತಿಂಗಳ ಸಂಬಳ ದಲ್ಲಿ ತಂದೆಗೆ 25,000 ದ ಆಂಡ್ರಾಯ್ಡ್ ಮೊಬೈಲ್ ಗಿಫ್ಟ್ ಕೊಟ್ಟಳು👌.. ಅದರ ಫೋಟೋ ತೆಗೆದು ತನ್ನ ಸ್ಟೇಟಸ್ ಗೆಲ್ಲಾ ಹಾಕಿಕೊಂಡು ತಿರುಗಾಡುತಿದ್ದಳು.. ಲಕ್ಕಿ ಫಾದರ್, ಎಂದು ಅನೇಕ ಕಾಂಪ್ಲಿಮೆಂಟ್ ಗಳು ಫುಲ್ ಆಗಿತ್ತು ಇನ್ಬಾಕ್ಸ್...ಇವಳ ಖುಷಿ ಹೆಚ್ಚಾಗಿತ್ತು...👌👌

ಅಪ್ಪ ಮರದ ಮಿಲ್ ಅಲ್ಲಿ ಕೆಲಸ ಮಾಡಿ... ತನ್ನನ್ನು ಸಾಕಿದ್ದು, ಕುಟುಂಬ ನಿರ್ವಹಣೆ ಮಾಡುತಿದ್ದದ್ದು, ಅಕ್ಕ, ಅಣ್ಣ ನನ್ನು ಓದಿಸಿದ್ದು.. ತನ್ನ ಕಾಲೇಜು ಫೀಸ್ ಕಟ್ಟಲು ಸಾಲ ಮಾಡಿ ರಾತ್ರಿ ಎಕ್ಸ್ಟ್ರಾ ಡ್ಯೂಟಿ ಮಾಡಿ ಸಾಲದ ಕಂತು ಕಟ್ಟಿದ್ದುದು😔... ಎಲ್ಲಾ ನೆನಪಿತ್ತು ಆಕೆಗೆ...3 ದಿನ ಕಳೆದರೂ ತಾನು ಕೊಟ್ಟ ಹೊಸ ಮೊಬೈಲ್ ಅನ್ನು ಉಪಯೋಗಿಸದೆ ಮೂಲೆ ಯಲ್ಲಿ ಇಟ್ಟಿದ್ದು ಅದೇ ಡಬ್ಬ 1500 ರೂ ಯ ನೋಕಿಯಾ ಸೆಟ್ ಉಪಯೋಗಿಸುತ್ತಿದ್ದು ದು ಅಂದು  ಪ್ರೀಯಾಳ ಕಣ್ಣು ಕೆಂಪಾಗಿಸಿತ್ತು....🥱🥱

ಸೀದಾ ಹೋದವಳೇ ಏಕಾಯೇಕಿ ತಂದೆಯ ಕೈ ಇಂದ ಮೊಬೈಲ್ ಕಸಿದು ಕೊಂಡು ನೆಲಕ್ಕೆಸೆದು ಬಿಟ್ಟಳು.. 🥱ಮೊಬೈಲ್  ಎರಡು ಭಾಗವಾಗಿತ್ತು..🥱. ಮೇಲಿಟ್ಟಿದ್ದ ತಾನು ಕೊಟ್ಟ ಮೊಬೈಲ್ ಕೊಟ್ಟು.. ಇನ್ನಾದರೂ ಇದನ್ನು ಉಪಯೋಗಿಸಿ... ಮಗಳು ಮೊದಲ ಸಂಬಳದಲ್ಲಿ ಪ್ರೀತಿ ಯಿಂದ ಕೊಟ್ಟ ಉಡುಗೋರೆ ಅದು...ಅದನ್ನು ಮೂಲೆ ಯಲ್ಲಿಟ್ಟು ನನಗೆ ಅವಮಾನ ಮಾಡಬೇಡಿ ಎಂದು ಕೂಗಿದಳು...🥱🥱
 ಅವಳ ರೌದ್ರಾವತಾರ.. ತಂದೆಯನ್ನು ಮೌನವಾಗಿಸಿತ್ತು..😔
ಸಪ್ಪಗಿನ ಮೋರೆಯಲ್ಲಿ ಒಡೆದ ಮೊಬೈಲ್ನ ಚೂರುಗಳನ್ನೇ ನೋಡುತಿದ್ದರು ಅವರು ...😔
ಮಗಳು ಸಿಟ್ಟಲ್ಲಿ ತನ್ನ ರೂಮಿಗೆ ಹೋದಳು....



ತಾಯಿಗೆ ಏನನ್ನಿತೊ ಏನೋ ನೇರ ಮಗಳ ರೂಮಿಗೆ ಹೋಗಿ ಬಾಗಿಲು ಹಾಕಿದಳು. ನಮ್ಮ ಮಾತುಕತೆ ಅವರಿಗೆ ಗೊತ್ತಾಗಬಾರದು ಎಂಬುದಷ್ಟೇ ಆಕೆಯ ಆಸೆಯಗಿತ್ತು
 ತಾಯಿಯ ಕಣ್ಣು ಕೆಂಪಾಗಿತ್ತು.... " ಪ್ರಿಯ ನೀನು ಮಾಡಿದ್ದು ತಪ್ಪು... ನಿನ್ನ ತಂದೆ ನಿನಗಾಗಿ ತಮ್ಮ ಜೀವನ ವನ್ನೇ ಸವೆಸಿದ್ದಾರೆ, ಇವತ್ತಿಗೂ 65 ವರ್ಷ  ವಯಸ್ಸಾದರೂ ಕೆಲಸಕ್ಕೆ ಹೋಗಿ ನಿನ್ನ ವಿದ್ಯಾಭ್ಯಾಸ ಹಾಗೂ ಇತರ ಖರ್ಚಿಗೆ ಮಾಡಿದ್ದ ಸಾಲ ತೀರಿಸುತ್ತಿದ್ದಾರೆ😔, ಅದೇ ಡಬ್ಬ ಮೊಬೈಲ್ ಅನ್ನು ಕಳೆದ 5 ವರ್ಷದಿಂದ ಬಳಸುತ್ತಿದ್ದಾರೆ ಅವರು.. ಅದೆಷ್ಟೋ ರಬ್ಬರ್ ಬ್ಯಾಂಡ್ ಗಳು ಇದ್ದವು ಅದರಲ್ಲಿ ಆದರೂ ಅದನ್ನು ಅಷ್ಟೊಂದು ಪ್ರೀತಿಸುತ್ತಿದ್ದರು ಅವರು... ನೀನು ಮೊಬೈಲ್ ತೆಕ್ಕೊಟ್ಟಿ 25,000 ದ್ದು ಆದರೆ ಅವರಿಗೆ ಕಣ್ಣಿನ ದೃಷ್ಟಿ ಸಮಸ್ಯೆ ಇದೆ ಕನ್ನಡಕ ಚೇಂಜ್ ಮಾಡಬೇಕೆಂದು ಡಾಕ್ಟರ್ ಹೇಳಿ 8 ತಿಂಗಳೇ ಕಳೆದಿದೆ🥱... ಆ ಕನ್ನಡಕದಲ್ಲಿ ಸರಿಯಾಗಿ ತೋರುತ್ತಿರಲಿಲ್ಲ ಹಾಗಾಗಿ ಹಳೆಯ ಮೊಬೈಲ್ ಅನ್ನೆ ಬಳಸುತ್ತಿದ್ದರು ಅವರು... ಅಲ್ಲಿಯ ಸಂಖ್ಯೆ ಗಳು ಅವರಿಗೆ ಕಂಠ ಪಾಠ ವಾಗಿತ್ತು.. ಹಾಗಾಗಿ ನೀನು ಕೊಟ್ಟ ಮೊಬೈಲ್ ತೆಗೆದಿರಲಿಲ್ಲ... ನಿನ್ನನ್ನು ಅವಮಾನ ಮಾಡಿದ್ದಲ್ಲ ನೆನಪಿಟ್ಟುಕೋ😡... ನಿನ್ನ ಸ್ಟೇಟಸ್ ಗೆ ಹಾಕಿ ನಾಲ್ಕು ಜನರಿಗೆ ದೊಡ್ಡಸ್ತಿಗೆ ತೋರಿಸಲೋಸ್ಕರ 25,000 ದ ಮೊಬೈಲ್ ತೆಗೆದು ಕೊಟ್ಟಿ, ಅದನ್ನು ಉಪಯೋಗಿಸಿಲ್ಲ ಎಂದು ಅಷ್ಟು ಬೈದು ಅವರ ಮೊಬೈಲ್ ಪುಡಿ ಮಾಡಿ ಅವಮಾನಿಸಿದ್ದಿ..😡
ಅದರ ಬದಲು ಅಪ್ಪನ ಬಳಿ ಪ್ರೀತಿ ಯಿಂದ ಹೋಗಿ ನಾಲ್ಕು ಮಾತಾಡಿ ಅಪ್ಪ ನನ್ನ ಮೊದಲ ಸಂಬಳ ದಲ್ಲಿ ನಿಮಗೇನು ಬೇಕು ಎಂದು ಕೆಳ ಬಹುದಿತ್ತು,ಅಥವಾ 2,3 ಸಾವಿರ ವಷ್ಟೇ ಖರ್ಚು ಮಾಡಿ ಅಪ್ಪನಿಗೆ ಕನ್ನಡಕ ಕೊಡಿಸಿದ್ದರೆ.. ಖಂಡಿತ ಖುಷಿ ಪಡುತಿದ್ದರು.. ಅದು ಬಿಟ್ಟು ಅವರು ಪ್ರೀತಿಸುತ್ತಿದ್ದ ಮೊಬೈಲ್ ಅನ್ನು ಒಡೆದು ಹಾಕಿದ್ದೆಯಲ್ಲ... ಇದು ಅಪ್ಪನಿಗೆ ಕೊಡುವ ಗೌರವನ😡. ತೂ.. ನಿನ್ನ ಜನ್ಮಕ್ಕಿಷ್ಟು... ಎಂದವಳೇ ಅಪ್ಪನಿಗೆ ಕೊಟ್ಟಿದ್ದ 25,000 ದ ಮೊಬೈಲ್ ಅನ್ನು ಮಗಳ ಮುಖಕ್ಕೆ ಎಸೆದು ಹೋಗಿದ್ದಳು ತಾಯಿ...ಸಿಟ್ಟಿನಿಂದ..😡😡

ತಾಯಿಯ ಮಾತುಗಳು ಈ ಬಾರಿ ಮಗಳ ಮನಸ್ಸನ್ನು ಘಾಸಿ ಗೊಳಿಸಿತ್ತು .. ಅಲ್ಲೇ ಇದ್ದ ತಂದೆ ಯ ಕಬಾಟು ತೆರೆದು ನೋಡಿದಳು ಅದೇ 4,5 ಅಂಗಿ ಗಳು, ತೂತು ಬಿದ್ದ ಬನಿಯಾನು, ಅದೇ 2 ಪ್ಯಾಂಟು ಗಳು ಪ್ರೀಯಾಳ ಕಣ್ಣು ಒದ್ದೆ ಯಾಗಿಸಿತ್ತು,ಯಾಕೆಂದರೆ ಅಪ್ಪ ಯಾವತ್ತೂ ನಮಗೆ ಹೊಟ್ಟೆಗೆ ಬಟ್ಟೆಗೆ ಕಮ್ಮಿ ಮಾಡಿರಲಿಲ್ಲ 😔😔.
 ಏನೋ ಯೋಚಿಸಿ ಹೊರ ಹೋದಳು.. ಮೆಟ್ಟಿಲು ಬಳಿ ಇದ್ದ ತೂತು ಬಿದ್ದ ಅಪ್ಪನ ಸ್ಲಿಪ್ಪರ್ ನೋಡುತ್ತಿದ್ದಂತೆ ಪ್ರಿಯಾಳ ಕಣ್ಣಾಲಿ ಗಳು ತುಂಬಿ ಬಂದಿದ್ದವು..😔
ಎಲ್ಲಿಗೋ ಹೋಗಿ ಸಂಜೆ ಮನೆಗೆ ಬಂದಳು... ಅಪ್ಪನಿಗೆ ಅವರ ಒಡೆದ ಮೊಬೈಲ್ ಅನ್ನು ತಾನೇ ರಿಪೇರಿ ಮಾಡಿ ತಂದಿದ್ದಳು... ಅಪ್ಪನ ಸಪ್ಪೆ ಮೊರೆ ಈ ಬಾರಿ ನಗುವಾಗಿ ಬದಲಾಗಿತ್ತು...🙏

ಬೆಲೆ ಬಾಳುವ ಉಡುಗೊರೆ ಬೇಡ, ಬೆಲೆ ಕಟ್ಟಲಾಗದ್ದನ್ನ ಕೊಟ್ಟು ನೋಡಿ



ಅಪ್ಪ ಸಂಜೆ 5 ಗಂಟೆಗೆ ಕಣ್ಣಿನ ಆಸ್ಪತ್ರೆಯಲ್ಲಿ ಅಪೋಯಿಂಟ್ ಮೆಂಟ್ ಇದೆ ರೆಡಿ ಆಗಿ ಎಂದವಳೇ ಅಲ್ಲೇ ಸೋಫಾದ ಮೇಲೆ ಮೊಬೈಲ್ ಹಿಡಿದು ಕೂತಳು.. ತಂದೆಯ ನಗು ಮುಖ ನೋಡಿ ಖುಷಿ ಪಟ್ಟಳು.. ಓರೆ ಕಣ್ಣಲ್ಲಿ ತಂದೆಯನ್ನೇ ಗಮನಿಸುತ್ತಿದ್ದಳು..🙏
 ತಂದೆ ಖುಷಿ ಖುಷಿಯಾಗಿ
ಹೊರಡುತಿದ್ದರು.. ಮುಖ
ತೊಳೆದರು ಬಟ್ಟೆಯ ಕಬಾಟಿನ ಬಾಗಿಲು ತೆರೆದರೆ ಅಲ್ಲಿ ಆಶ್ಚರ್ಯ ಒಂದು ಕಾದಿತ್ತು ಅವರಿಗೆ.. 🥱🥱🥱.

ತಮ್ಮ ಹಳೆಯ ಬಟ್ಟೆ ಯ ಜಾಗ ದಲ್ಲಿ ಹೊಸ ಬಟ್ಟೆ, ಪ್ಯಾಂಟ್, ಅಂಗಿ, ಬನಿಯಾನ್ 5,6 ಬಗೆಯದ್ದು ಅಲ್ಲಿತ್ತು... ತಂದೆ ಕುಶಿ ಖುಷಿಯಾಗಿ ಆವಲ್ಲಿ 1 ನ್ನು ಹಾಕಿ ಕೊಂಡರು.. ತಂದೆಯ ಮುಖದಲ್ಲಿ ಹೊಸ ಉಲ್ಲಾಸ ವಿತ್ತು..😃
ಅಮ್ಮನೂ ಬಂದಿದ್ದರು ಅಲ್ಲಿ... ಅಪ್ಪ ಏಕೋ ಇಂದು ತುಂಬಾ ಸುಂದರವಾಗಿ ಕಾಣುತಿದ್ದರು.. ಚಪ್ಪಲ್ ಹುಡುಕುತಿದ್ದವರಿಗೆ ಅಲ್ಲೇ ಇದ್ದ ಚೆಂದದ ಶೂ ಕಾಣಿಸಿರಲಿಲ್ಲ ಮಗಳೇ ತೆಗೆದು ಕೊಟ್ಟಾಗ.. ಅಪ್ಪ ಮಗಳನ್ನು ಬಾಚಿ ತಬ್ಬಿಕೊಂಡಿದ್ದರು .. ಇಬ್ಬರ ಕಣ್ಣಾಲ್ಲೂ ನೀರಿತ್ತು..😔
ಅಪ್ಪನನ್ನು ತನ್ನ ಸ್ಕೂಟಿಯಲ್ಲಿ ಕಣ್ಣಿನ ತಪಾಸಣೆ ಗೆ ಕರೆದೋಯ್ದ ಳು..

ಹಿಂತಿರುಗಿ ಅಮ್ಮನನ್ನು ನೋಡಿ ಒಂದು ಕಣ್ಣು ಹೊಡೆದಳು ಪ್ರೀಯ.. ಅಮ್ಮನ ಕಣ್ಣಲ್ಲೂ ನೀರಿತ್ತು...ಲೆಕ್ಕ ಹಾಕಿದಳು 15,000 ಮಾತ್ರ ಖರ್ಚಗಿತ್ತು... ನಿಜಕ್ಕೂ ಈ 15,000... ಆ 25,000 ದ ಮೊಬೈಲ್ ಗಿಂತ ಅಮೂಲ್ಯವಾಗಿ ಕಂಡಿತು ಪ್ರೀಯಳಿಗೆ.. ಮೊಬೈಲ್ ಸ್ಟೇಟಸ್ ತುಂಬಾ ಗೆಳೆಯರ ಲೈಕ್ಸ್ ಗಳಿದ್ದವು...
ತಕ್ಷಣ ಸ್ಟೇಟಸ್ ಡಿಲೀಟ್ ಮಾಡಿ ಬಿಟ್ಟಳು ಪ್ರಿಯ.. ಈ ಬಾರಿ ಬೆಲೆ ಬಾಳುವ ಉಡುಗೊರೆ... ಬೆಲೆ ಕಟ್ಟಲಾಗದ ಉಡುಗೊರೆ ಎದುರು ಸಪ್ಪೆಯಾಗಿ ಕಂಡಿತ್ತು ಅವಳಿಗೆ.....

ನಿಜ ಅಲ್ಲವೇ... ಅದೆಷ್ಟೋ ಮಂದಿ ತಮಗೆ ಜೀವ ಜೀವನ ಎರಡು ಕೊಟ್ಟ ತಂದೆ ತಾಯಿಯರಿಗೆ.. ಏನೋ ಒಂದು ಕೊಟ್ಟು... ಸ್ಟೇಟಸ್ ಗೆ ಹಾಕಿ ಮೆರೆಯುತ್ತಾರೆ.. ಇನ್ನು ಕೆಲವರಂತೂ  ನಮ್ಮ ತಂದೆ/ತಾಯಿ ನನ್ನೊಟ್ಟಿಗೆ ನನ್ನ ಮನೆಯಲ್ಲೇ ಇದ್ದಾರೆ ಎನ್ನುವುದುಟು.. ಅವರ ಉದ್ದೇಶ ತನ್ನ ಸ್ಟೇಟಸ್ ತೋರಿಸುವುದಷ್ಟೇ ಆಗಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ😔.. ನೀವು ಈ ಪ್ರಪಂಚಕ್ಕೆ ಬರಲು ಅವರೇ ಕಾರಣ ಎಂದಾದ ಮೇಲೆ ಅವರೆದುರು ನಿಮ್ಮ ಸ್ಟೇಟಸ್ ಅದ್ಯಾವ ಮಟ್ಟದ್ದು ಒಮ್ಮೆ ಯೋಚಿಸಿ🙏...
 ಇಂದಿನಿಂದಲೇ ಬದಲಾಗೋಣ.. ತಂದೆ, ತಾಯಿ ಜೊತೆ ನಾವಿದ್ದೇವೆ, ನಾವು ಒಟ್ಟಿಗೆ ಇದ್ದೇವೆ ಎಂದು ಹೇಳುವುದನ್ನು ರೂಡಿಸಿ ಕೊಳ್ಳಿ , ಹಾಗೆ....


ಬೆಲೆ ಬಾಳುವ ಉಡುಗೊರೆ ಬೇಡ, ಬೆಲೆ ಕಟ್ಟಲಾಗದ್ದನ್ನ ಕೊಟ್ಟು ನೋಡಿ.

ಡಾ. ಶಶಿಕಿರಣ್ ಶೆಟ್ಟಿ
ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ
9945130630

Terms | Privacy | 2024 🇮🇳
–>