-->

ಈಗ - 40 ವರ್ಷದ ಹಿಂದೆ

🤔40 ವರ್ಷದ ಹಿಂದೆ ದೇಹ ಚೆಂದ ಕಾಣಲು ದಪ್ಪಗಿರಬೇಕೆಂದು ಕೊಂಡಿದ್ದರು,
ಈಗ ತೆಳ್ಳಗೆ ಆರೋಗ್ಯವಾಗಿರ ಬೇಕೆಂದು ಪಥ್ಯ ಮಾಡುತ್ತಿದ್ದಾರೆ.

🤔40 ವರ್ಷಗಳ ಹಿಂದೆ ಮದುವೆಯಾಗುವುದು ಸುಲಭವಾಗಿತ್ತು,
ವಿಚ್ಚೇಧನ ಕಷ್ಟವಾಗಿತ್ತು.
ಈಗ ಮದುವೆಯಾಗುವುದು ಕಷ್ಟ, ವಿಚ್ಚೇದನೆ ಸುಲಭ.

🤔40 ವರ್ಷಗಳ ಹಿಂದೆ ದಂಪತಿಗಳಿಗೆ ಬೇಗ ಮಕ್ಕಳಾಗಬೇಕೆಂಬ ಹಂಬಲ, ಈಗ ಹೆಚ್ಚಿನ ದಂಪತಿಗಳಿಗೆ ಮಕ್ಕಳಾಗುವುದೆಂದರೆ ಭಯ.

🤔40 ವರ್ಷಗಳ ಹಿಂದೆ ಮಕ್ಕಳು ಹೆತ್ತವರಿಗೆ ಗೌರವ ಕೊಡುತ್ತಿದ್ದರು,
ಈಗ ಹೆತ್ತವರು ಮಕ್ಕಳಿಗೆ ಗೌರವ ಕೊಡಬೇಕು.

ಈಗ - 40 ವರ್ಷದ ಹಿಂದೆ



🤔40 ವರ್ಷಗಳ ಹಿಂದೆ ಮನೆಯಲ್ಲಿ ಅಪ್ಪ ಮಾತ್ರ ದುಡಿದು ಎಂಟು-ಹತ್ತು ಮಕ್ಕಳನ್ನು ಸಾಕುತಿದ್ದರು,
ಈಗ ತಂದೆ ತಾಯಿ ದುಡಿದು ಒಂದು ಮಗುವನ್ನು ಸಾಕುತ್ತಿದ್ದಾರೆ.

🤔40 ವರ್ಷಗಳ ಹಿಂದೆ ನಮ್ಮ ನೆರೆಹೊರೆಯ ಎಲ್ಲರ ಪರಿಚಯ ಇತ್ತು,
ಈಗ ನೆರೆಕರೆಯವರು ಅಪರಿಚಿತರು.

🤔40 ವರ್ಷಗಳ ಹಿಂದೆ ಹಳ್ಳಿಯಿಂದ ಪೇಟೆಗೆ ಕೆಲಸ ಹುಡುಕಿ ಹೋಗುತಿದ್ದರು,
ಈಗ ಶಾಂತಿ ಹುಡುಕಿಕೊಂಡು ಪೇಟೆಯಿಂದ ಹಳ್ಳಿ ಕಡೆಗೆ ಬರುತಿದ್ದಾರೆ.

🤔40 ವರ್ಷಗಳ ಹಿಂದೆ ಸಿರಿವಂತರು ಆದಾಯ ತೆರಿಗೆ ವಂಚಿಸಲು ಬಡವರಂತೆ ನಟಿಸುತ್ತಿದ್ದರು,
ಈಗ ಬಡವರು ಶ್ರೀಮಂತರಂತೆ ಪೋಸು ಕೊಡುತ್ತಾರೆ.

🤔40 ವರ್ಷಗಳ ಹಿಂದೆ ಪುಸ್ತಕಗಳನ್ನು ಓದುವ ಹವ್ಯಾಸವಿತ್ತು,
ಈಗ ಫೇಸ್ಬುಕ್ ಸಂದೇಶ ಓದುವುದಕ್ಕೆ ಸೀಮಿತವಾಯಿತು ಬದುಕು.

 *40 ವರ್ಷ* ಅಂದರೆ, *1980* ನಿನ್ನೆಯಂತೆ ಅನಿಸುತಿದೆ.

ಮೇಲಿನದ್ದೆಲ್ಲಾ ನಿಮಗೂ ಗೊತ್ತಿರುವ ಸತ್ಯ.
ಕಾಲದ ಜೊತೆಗಿನ ಓಟ ತಂತ್ರಜ್ಞಾನದ ಮೇಲಾಟ..

Terms | Privacy | 2024 🇮🇳
–>