ಈ ವಿಷಯವಾಗಿ ವಾಸ್ತವಿಕತೆಯನ್ನು ಅರಿಯಬೇಕು. ಹಿರಿಯರಾದವರು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ, ಕಿರಿಯರು ಆದಷ್ಟು ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಇತ್ತೀಚೆಗೆ ಹಿರಿಯರ ವೃದ್ಧಾಶ್ರಮದ ಬಗ್ಗೆ ಹೆಚ್ಚು ಹೆಚ್ಚು ಜಿಜ್ಞಾಸೆ ಮೂಡುತ್ತಿದೆ, ಇಲ್ಲಿ ಯಾರದು ಸರಿ ಅಥವಾ ಯಾರದು ತಪ್ಪು ಎಂದು ಹೇಳುವುದು ಕಷ್ಟ ಆದರೆ, ಅದರ ಬಗ್ಗೆ ಕೆಲವು ವಾಸ್ತವಾಂಶಗಳನ್ನು ನಾವೆಲ್ಲರೂ ಅರಿಯಲೇ ಬೇಕಾಗಿದೆ.
ಇಲ್ಲಿ ಗುರುಹಿರಿಯರು ನಿಶ್ಚಿತ ಮಾಡುವ ಮದುವೆಯ ಬಗ್ಗೆ ತಿಳಿಸುವುದಾದರೆ, (Arrange MARRIAGE ). ಸುಮಾರು 25 ರಿಂದ 30 ವರುಷದವರ ಮದುವೆಯ ಬಗ್ಗೆ ತಿಳಿಸುವುದಾದರೆ.
ಮೊದಲಿಗೆ ತಂದೆ-ತಾಯಿಯರ ಬಗ್ಗೆ
ಮೊದಲು ಮನೆಯಲ್ಲಿ ನೀವು ಯಾವ ರೀತಿಯಲ್ಲಿ ವಾತಾವರಣ ಇರಿಸಿದ್ದೀರಿ ಅನ್ನುವುದು ಬಹಳ ಮುಖ್ಯ. ಮಕ್ಕಳು ಅದನ್ನು ಅನುಸರಣೆ ಮಾಡುವುದು ಸಹಜ, ನಿಮ್ಮ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರ ತಿಳಿಸಿಕೊಂಡು ಬರುತ್ತಿದ್ದರೆ ಅವರಲ್ಲಿ ಹೆಚ್ಚಾಗಿ ನಿಷ್ಟುರತೆ ಕಡಿಮೆ, ತಗ್ಗಿ-ಬಗ್ಗಿ ನಡೆಯುವ ವ್ಯವಧಾನ ಹೆಚ್ಚಾಗಿರುತ್ತದೆ. ಹೆಣ್ಣುಮಕ್ಕಳು ಒಳ್ಳೆಯ ಸಂಪ್ರದಾಯ ಕಲಿಯುತ್ತಾರೆ, ಆಗಾಗ ಮಕ್ಕಳ ಬಗ್ಗೆ ಗಮನವಿರಬೇಕು, ಯಾವ ರೀತಿಯ ಸ್ನೇಹಿತರನ್ನು ಹೊಂದಿದ್ದಾರೆ, ಸ್ಕೂಲು-ಕಾಲೇಜಿಗೆ ಸರಿಯಾಗಿ ಹೋಗುತ್ತಾರಾ.? ಇಂತಹ ವಿಷಯಗಳ ಬಗ್ಗೆ ವಿಚಾರ ಮಾಡುತ್ತಿರಬೇಕು. ಮನೆಯಲ್ಲಿ ಮುಕ್ತವಾದ ವಾತಾವರಣ ಇರಿಸಿ. ಮಕ್ಕಳೊಂದಿಗೆ ಪ್ರತಿಯೊಂದು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರೆ, ಅವರಲ್ಲಿ ಒಂಟಿತನ ಕಾಡುವುದಿಲ್ಲ ಹಾಗೂ ಸರಿ ತಪ್ಪುಗಳ ತಿಳುವಳಿಕೆ ಮೂಡುತ್ತದೆ, ಇದರಿಂದ ಅವರಿಗೆ ಹೊರಗಿನ ವ್ಯವಹಾರಗಳು ಸುಲಭವಾಗುತ್ತದೆ. ಮನೆಯೇ ಮೊದಲ ಪಾಠಶಾಲೆ ಅಲ್ಲವೇ..?
ಎರಡನೆಯದಾಗಿ ಮಕ್ಕಳ ಬಗ್ಗೆ
ತಂದೆ-ತಾಯಿಗೆ ಹಾಗೂ ಹಿರಿಯರಿಗೆ ಮೊದಲು ಗೌರವ ಕೊಡಿ.
ನಿಮ್ಮ ಮನಸ್ಸಿನಲ್ಲಿ ನಡೆಯುವ ತಳಮಳವನ್ನು ಮನೆಯಲ್ಲಿ ನಿಮ್ಮ ತಂದೆ -ತಾಯಿ, ಸಹೋದರ- ಸಹೋದರಿಯರಲ್ಲಿ ಮುಕ್ತವಾಗಿ ಹಂಚಿಕೊಳ್ಳಿ. ನೀವು ಹೋಗುವ ಮಾರ್ಗ ಒಳ್ಳೆಯ ರೀತಿಯಲ್ಲಿ ಇರಲಿ. ಮನೆಯಲ್ಲಿ ಸುಳ್ಳು ಹೇಳಬೇಡಿ, ಒಳ್ಳೆಯ ಸ್ನೇಹಿತರ ಸಹವಾಸ ಮಾಡಿ. ಉತ್ತಮ ಭವಿಷ್ಯ ರೂಪಿಸಿಕೊಂಡು ತಂದೆ-ತಾಯಿಗೆ ಗೌರವ ತಂದುಕೊಡಿ.
ಹುಟ್ಟಿದ ಮನೆಗೂ ಸೇರಿದ ಮನೆಗೂ ಒಳ್ಳೆಯ ಹೆಸರು ತರುವುದು ನಿಮ್ಮ ಕರ್ತವ್ಯ.
*(ಮಗ ಅಳಿಯನಾಗಿ... ಮಗಳು ಸೊಸೆಯಾಗುವ ಸಮಯ ಬಂದಾಗಾ)* ಅತ್ತೆ-ಮಾವ ಇವರ ಬಗ್ಗೆ
(ಇಲ್ಲಿ ತಂದೆ-ತಾಯಿಯ ಪಾತ್ರ ಕೂಡಾ ಅನ್ವಯ ಆಗುತ್ತೆ )
ಮನೆಯಲ್ಲಿ ಮದುವೆಗೆ ಬಂದ ಹುಡುಗ /ಹುಡುಗಿ ಇದ್ದರೆ..
ಹೆಣ್ಣು / ಗಂಡು ನೋಡಲು ಹೋದಾಗ..
ನಿಮ್ಮ ಮನೆಯ ಹಾಗೂ ಅಲ್ಲಿಯ ವಾತಾವರಣ ಸ್ವಲ್ಪ ಗಮನಿಸಿ, ಆಗ ಅವರ ಸಂಪ್ರದಾಯದ ಸ್ವಲ್ಪ ಮಟ್ಟಿಗೆ ತಿಳಿಯುವುದು. ನಿಮ್ಮ- ನಿಮ್ಮ ಆಚರಣೆಯ ಬಗ್ಗೆ ಮುಕ್ತವಾಗಿ ಮಾತನಾಡಿ, ಸ್ನೇಹದಿಂದ ಇರಲು ಆದಷ್ಟು ಪ್ರಯತ್ನ ಪಡಿ. ಹೆಣ್ಣು /ಗಂಡು ಒಪ್ಪಿಗೆಯಾದ ಪಕ್ಷದಲ್ಲಿ ಕೆಳಗೆ ಹೇಳಿರುವ ವಿಷಯಗಳ ಬಗ್ಗೆ ಸ್ವಲ್ಪ ಅವಲೋಕನ ಮಾಡಿ.
ಇನ್ನು ಮದುವೆಯ ನಂತರ..
25 ವರ್ಷದಿಂದ ತಿದ್ದಲು ಸಾಧ್ಯವಾಗದ ನಿಮ್ಮ ಮಕ್ಕಳು ಬಗ್ಗೆ ಗಮನದಲ್ಲಿಟ್ಟುಕೊಳ್ಳಿ. ಹೊಸದಾಗಿ ಮದುವೆಯಾಗಿ ಬಂದ ಹೆಣ್ಣು/ಗಂಡು ತಕ್ಷಣ ಹೊಂದಿಕೊಳ್ಳುವುದು ಕಷ್ಟ. ಅವರಿಗೆ ಹೊಸ ಮನೆ ಅನುಕರಣೆ ಮಾಡಲು ಸ್ವಲ್ಪ ದಿನ ಬೇಕು, ಆಗ ಮನೆಯ ಸದಸ್ಯರು ಅವರೊಂದಿಗೆ ಸ್ನೇಹಭಾವದಿಂದ ನಡೆದುಕೊಳ್ಳಿ, ನಿಮ್ಮ ಮನೆಯ ವಿಷಯಗಳನ್ನು ಸ್ವಲ್ಪ ಸ್ವಲ್ಪ ವಾಗಿ ತಿಳಿಸುತ್ತಾ ಬನ್ನಿ, ಎಲ್ಲಾ ಒಟ್ಟಿಗೆ ಕಲಿತುಕೊಳ್ಳಿ ಅನ್ನುವು ಧೋರಣೆ ಬಿಟ್ಟು ಬಿಡಿ.
ಮುಖ್ಯವಾಗಿ ಯಾವಾಗಲೂ ನಿಮ್ಮ ಹೆಣ್ಣುಮಕ್ಕಳ /ಗಂಡುಮಕ್ಕಳ ಬಗ್ಗೆ ಹೊಗಳಿಕೆಯನ್ನು ಅವರ ಮುಂದೆ ಮಾಡಬೇಡಿ, ಅವರಿಗೂ ಸಹ ಹೊಸದಾಗಿ ಬಂದ ಅತ್ತಿಗೆ /ಭಾವ ಇವರುಗಳ ಬಗ್ಗೆ ಸ್ನೇಹದಿಂದ ಇರಲು ತಿಳಿಸಿ. ಬಂದು ಹೋಗಿ ಮಾಡುವಾಗ ಒಳ್ಳೆಯ ವಿಚಾರ ವಿನಿಮಯ ಮಾಡಿಕೊಳ್ಳಿ ಬೀಗರು ಬೀಗರ ಬಗ್ಗೆ ಅವಹೇಳನ ಮಾಡಿಕೊಂಡು ಹೊಸದಾಗಿ ಮದುವೆಯಾದ ಮಕ್ಕಳಲ್ಲಿ ಜಿಗುಪ್ಸೆ ತರಿಸಬೇಡಿ. ಅವರಿಬ್ಬರಲ್ಲಿ ಹೊಂದಾಣಿಕೆ ಮೂಡಲು ಸಹಕರಿಸಿ.
ಮದುವೆಯಾದ ಹೊಸತನದಲ್ಲೇ ಅವರಿಗೆ ಸಂಸಾರದ ಬಗ್ಗೆ ಬೇಸರ ಬರುವಂತೆ ಮಾಡಬೇಡಿ, ಹಿರಿಯರ ಮಾರ್ಗದರ್ಶನ ಕಿರಿಯಗೆ ಅನಿವಾರ್ಯತೆ ಇರುತ್ತದೆ. ಎಲ್ಲದಕ್ಕೂ ನಮ್ಮದೇ ನಡೆಯಬೇಕು ಅನ್ನುವುದು ಸ್ವಲ್ಪ ಕಡಿಮೆ ಮಾಡಿ. ಹಾಗೆ ಮಕ್ಕಳು ಕೂಡಾ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಿ. ಮನೆಯಲ್ಲಿ ಹೊಂದಿಕೊಂಡು ಹೋಗುವುದನ್ನು ಪ್ರಯತ್ನಿಸಿ. ಪ್ರತಿಯೊಂದು ಸಣ್ಣ ಪುಟ್ಟ ಜಗಳ ವಾದರೆ ವಿಷಯವನ್ನು ತಂದೆ ತಾಯಿಗೆ ಹೇಳಬೇಡಿ
ಆಗಲೇ ಸಂಬಂಧ ಹಾಳಗಲು ಶುರುವಾಗುವುದು.
ಆದಷ್ಟು ಹೊಂದಾಣಿಕೆಯಿಂದ ಇರಲು ಪ್ರಯತ್ನ ಪಡಿ, ಇದೆಲ್ಲಾ ಮನೆಯಲ್ಲಿನ ವಾತಾವರಣ ಬಹಳ ಮುಖ್ಯ ಸೊಸೆ ಅದು ತಂದಿಲ್ಲ ಇದು ತಂದಿಲ್ಲ ಅಥವಾ ಅಳಿಯ ಹಾಗೆ ಹೀಗೆ ಅನ್ನುವುದು ಮೊದಲು ಬಿಡಿ. ಅವರಿಬ್ಬರೂ ನಿಮ್ಮ ಮನೆಯ ಮಕ್ಕಳೇ ಆಗುವರಲ್ಲವೇ ?
ಹೆಚ್ಚಾಗಿ ಈಗ ಕೆಲಸದ ನಿಮಿತ್ತ ತಂದೆ-ತಾಯಿ/ಅತ್ತೆ-ಮಾವ ಇವರಿಂದ ಹೊರಗಡೆ ಇರುವುದು ಸಾಮಾನ್ಯವಾಗಿದೆ /ಅನಿವಾರ್ಯತೆ ಆಗಿದೆ ಆಗ ಹೋಗಿ ಬಂದು ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಎಲ್ಲರೂ ವ್ಯವಹರಿಸಿ.
ಕೂಡು ಕುಟುಂಬವಿದ್ದಾಗ ಎಷ್ಟು ಹೇಳಿದರೂ ತಿಳುವಳಿಕೆ ತಿಳಿಯಲಿಲ್ಲ ಅಂದಾಗ ಅವರಸ್ಟಕ್ಕೆ ಅವರನ್ನು ಇರಲು ಬಿಡಿ, ಆದರೆ ಸಂಪರ್ಕದಲ್ಲಿ ಇರಿ.
ಇಲ್ಲಿ ಮುಖ್ಯವಾಗಿ ಹೇಳಬೇಕು ಅಂದರೆ ಮನೆಯಲ್ಲಿಯ ಒಂದು *#ಹೆಣ್ಣು ಮುಖ್ಯ ಕಾರಣ.* ಅವಳು ಸರಿ ಇದ್ದರೆ ಮನೆ ಸುಂದರ ಹಾಗೆ ನಂದಗೋಕುಲ.
ವಯಸ್ಸು ಎಲ್ಲರಿಗೂ ಆಗುತ್ತದೆ. ಇವತ್ತು ಸೊಸೆ ನಾಳೆ ಅತ್ತೆ ಇವರಿಬ್ಬರಲ್ಲಿ ಹೊಂದಾಣಿಕೆ ಬಹಳ ಮುಖ್ಯ, ಶಾಂತತೆ ತಾಳ್ಮೆ ಅತ್ಯಗತ್ಯ ಇಲ್ಲಿ ಜಗಳಕ್ಕೆ ಆಸ್ಪದ ಮಾಡಿಕೊಳ್ಳಬೇಡಿ, ಪ್ರತಿಯೊಂದು ತಪ್ಪುಗಳನ್ನು ಮನೆಯ ಗಂಡಸರ ಗಮನಕ್ಕೆ ತರಬೇಡಿ, ನೀವೇ ಕೂತು ಬಗೆಹರಿಸಿಕೊಳ್ಳಿ. ನಿಮ್ಮಿಂದಲೇ (ನಮ್ಮಿಂದಲೇ )ಎಲ್ಲಾ. ಸಂಸಾರದ ಬುನಾದಿ ಅಲುಗಿಸಲು ಪ್ರಯತ್ನ ಪಡಬೇಡಿ, ಸಣ್ಣ ಸಣ್ಣದಕ್ಕೂ ಕೋಪ ಮನಸ್ತಾಪ ಮಾಡಿಕೊಂಡು ಮುನಿಸಿಕೊಂಡು ಮನೆಯಲ್ಲಿ ಇರಬೇಡಿ.
ಗಂಡಸರು ಮನೆಗೆ ಬಂದಾಗ ತಕ್ಷಣ ಎಲ್ಲಾ ವಿಷಯ ಹೇಳಿ ಅವರ ನೆಮ್ಮದಿ ಹಾಳುಮಾಡಬೇಡಿ, ಸರಿ ತಪ್ಪು ನಿಮ್ಮಲ್ಲೇ ಚರ್ಚಿಸಿ ಅವರ ಬಂಧ ಗಟ್ಟಿ ಮಾಡಿಕೊಳ್ಳಿ, ಮನೆಯಲ್ಲಿ ನಡೆಯುವ ವಿಷಯ ಹೊರಗಡೆ ಹೋದ ಗಂಡಸರಿಗೆ ತಿಳಿದಿರುವುದಿಲ್ಲ.
ಇನ್ನೊಂದು ವಿಷಯ ಪ್ರತಿ ಯೊಂದು ಮನೆಯಲ್ಲಿ ನಡೆಯುವ ವಿಷಯವನ್ನು ಅಕ್ಕ ಪಕ್ಕದ ಮನೆ ಇಲ್ಲವೇ ಬಂಧುಗಳಲ್ಲಿ ಹೇಳಬೇಡಿ, ಚಿನ್ನದಂತ ಸಂಸಾರ ಬೀದಿಗೆ ಬರುತ್ತೆ. ಎಚ್ಚರವಿರಲಿ.
*"ಸಂಸಾರ ಗುಟ್ಟು ವ್ಯಾಧಿ ರಟ್ಟು"* ನೆನಪಿರಲಿ.
ಒಂದೊಮ್ಮೆ ಜಗಳ ಆಗಿದ್ದರೆ ಯಾರಾದರೋಬ್ಬರು ಕಲಹ ತಿಳಿಯಾಗುವ ತನಕ ಮೌನವಹಿಸಿ, ಆಮೇಲೆ ಮತ್ತೆ ನಗು ನಗುತ್ತಾ ವಾತಾವರಣ ತಿಳಿಗೊಳಿಸಿ.
ಹಿರಿಯರಿಗೆ ಮೊಮ್ಮಕ್ಕಳ ಜೊತೆ ಆಡಲು ಬಿಡಿ, ಅವರಿಗೆ ಹಿರಿಯರ ಮಹತ್ವ ತಿಳಿಸಿ ಅವರೇ ಮುಂದಿನ ನಮ್ಮ ಸಂಸ್ಕಾರ ಸಂಸ್ಕೃತಿ ನಡೆಸುವವರು.
ಒಟ್ಟಿನಲ್ಲಿ ಒಂದು ಮನೆಯಲ್ಲಿ ಒಳ್ಳೆಯ ವಾತಾವರಣ ವಾತ್ಸಲ್ಯ ಮಮತೆ ಪ್ರೀತಿ ಹೊಂದಾಣಿಕೆ ಬಹಳ ಮುಖ್ಯ, ತಪ್ಪುಗಳನ್ನು ಮಾಡುವುದು ಸಹಜ ಅದನ್ನೇ ದೊಡ್ಡದು ಮಾಡಿ ತಿಳಿಗೊಳದಂತಿರುವ ಸಂಸಾರವನ್ನು ಹಾಳುಮಾಡಿಕೊಳ್ಳಬೇಡಿ.
ತುಂಬಾ ಖಾಯಿಲೆ ಇದ್ದು ನೋಡಿಕೊಳ್ಳಲು ತೊಂದರೆ ಇದ್ದಾಗ ಎಲ್ಲರೂ ಕೂಡಿ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳಿ.
ಎಲ್ಲದಕ್ಕೂ ಒಂದು ಹೆಣ್ಣು ಮನೆಯಲ್ಲಿ ಬಹಳ ಮುಖ್ಯ, ಹೆಣ್ಣು ಸಂಸಾರದ ಕಣ್ಣು. ಇದೆಲ್ಲಾ ಒಂದು ಮನೆಯಲ್ಲಿ ಇದ್ದಾಗ ಯಾವ ವೃದ್ಧಾಶ್ರಮ ಇರುವುದಿಲ್ಲ. ಒಂದು ಕೈಯಲ್ಲಿ ಚಪ್ಪಾಳೆ ಆಗದು. ತಪ್ಪು ಒಪ್ಪುಗಳ ಅರ್ಥ ಅನಿವಾರ್ಯ. ಅರ್ಥ ಮಾಡಿಕೊಂಡು ನಡೆದರೆ ಸಂಸಾರ ಸುಂದರ.
ನಮ್ಮ ಪೀಳಿಗೆಯಿಂದಲೇ ಇದೆಲ್ಲವನ್ನು ನಿಲ್ಲಿಸಲು ಪ್ರಯತ್ನ ಪಡೋಣ..
Subscribe , Follow on
Facebook Instagram YouTube Twitter X WhatsApp