ಬಂಗಾರದ ಬೆಲೆ ಇಬ್ಬರಿಗೆ ಮಾತ್ರ ಗೊತ್ತು . ಅದನ್ನು ಕೊಳ್ಳುವವರಿಗೆ ಹಾಗೂ ಅದನ್ನು ಮಾರುವವರಿಗೆ , ನೋಡುವವರಿಗಲ್ಲ . ಹಾಗೆಯೇ ನಿನ್ನ ಬೆಲೆ ನಿನ್ನ ಹೆತ್ತವರಿಗೆ ಮತ್ತು ನಿನ್ನ ನಂಬಿದ ಪ್ರೀತಿಪಾತ್ರರಿಗೆ ಮಾತ್ರ ಗೊತ್ತು. ವಸ್ತುವಿನಂತೆ ಅವಶ್ಯಕತೆಗೆ ತಕ್ಕಂತೆ ನಿಮ್ಮನ್ನು ಬಳಸಿಕೊಳ್ಳುವವರಿಗಲ್ಲ
ಅನುಭವದ ಗುರುವಾಗು, ಅಭಿನಂದನೆಗೆ ಆಳಾಗು, ಬೇಡಿ ಬಂದವರ ಬೆಂಗಾವಲಾಗು,
ಇದಾವುದೂ ಆಗದಿದ್ದಲ್ಲಿ ಮನುಷ್ಯತ್ವ ತೋರುವ ಮನುಜನಾಗು...
ಒಬ್ಬ ಒಳ್ಳೆಯ ವ್ಯಕ್ತಿ ಗೋಸ್ಕರ ಕಾದು ನೋಡಿದ ಸಮಯ, ಒಂದು ಒಳ್ಳೆಯ ಕೆಲಸಕ್ಕಾಗಿ ಖರ್ಚು ಮಾಡಿದ ಹಣ ಇಂದಿಗೂ ವ್ಯರ್ಥವಾಗುವುದಿಲ್ಲ...
ಜೀವಿಗಳಲ್ಲಿ ಎರಡು ವಿಧ, ನಾಶವಾಗುವವರು ಮತ್ತು ನಾಶವಾಗದವರು. ಈ ಜಗತ್ತಿನಲ್ಲಿ ಎಲ್ಲ ಜೀವಿಗಳು ನಾಶವಾಗುವವು ಮತ್ತು ಪರಮಾತ್ಮನಲ್ಲಿ ನೆಲೆಸಿದವರು ನಾಶವಾಗದವರು
ವಾದ ಮಾಡಿ ನೋವು ಅನುಭವಿಸುವುದಕ್ಕಿಂತ ಹೌದು ನನ್ನದೇ ತಪ್ಪು ಎಂದು ಮೌನವಾಗಿರುವುದೇ ಮೇಲೆ.......
ಹಣವನ್ನು ದಾನ ಮಾಡಬೇಕು, ಅನುಭವಿಸಲೂ ಬೇಕು. ಸುಮ್ಮನೆ ಕೂಡಿಡಬಾರದು.
ಜೇನು ಹುಳುಗಳು ಹಗಲಿರುಳು ಶ್ರಮಿಸಿ ಕೂಡಿಟ್ಟ ಜೇನನ್ನು ಇತರರು ಅಪಹರಿಸುವಂತೆ , ಕೂಡಿಟ್ಟ ಹಣವೂ ಪರರ ಪಾಲಾಗುವುದು.
ಚಿಲ್ಲರೆ ನಾಣ್ಯಗಳು ಸದ್ದು ಮಾಡಿದ ಕೂಡಲೇ ನೋಟಿನ ಮೌಲ್ಯ ಕಡಿಮೆಯಾಗುವುದಿಲ್ಲ.
ಸಮಯಸಾಧಕರು ಅರಚಿಕೊಂಡ ಕೂಡಲೇ ಶ್ರೇಷ್ಠರ ಬೆಲೆ ಕಡಿಮೆಯಾಗುವುದಿಲ್ಲ. ಹಿಡಿದಕೆಲಸ ದೃಢಚಿತ್ತದಿಂದ ಮಾಡಿ. ಸಮಯಸಾಧಕರ ಸದ್ದು ನಿಲ್ಲುವುದು.
ಜನನಮರಣಗಳಲ್ಲಿ, ಸುಖ ದುಃಖಗಳಲ್ಲಿ ದೇವರು ಒಂದೇ ಸಮನಾಗಿ ಅಸ್ತಿತ್ವದಲ್ಲಿರುತ್ತಾನೆ. ಇಡೀ ಪ್ರಪಂಚವು ಅವನಿಂದ ತುಂಬಿ ತುಳುಕಾಡುತ್ತಿದೆ. ಕಣ್ತೆರೆದು ಅವನನ್ನು ನೋಡು.
We always work for a better tomorrow, but when tomorrow comes, instead of enjoying, we again think of a better tomorrow, !!! Let's have a BETTER TODAY
ನಿಮ್ಮ ವಕಾಲತ್ತನ್ನು ಭಗವಂತನಿಗೆ ಒಪ್ಪಿಸಿಬಿಡಿ. ಒಳ್ಳೆಯ ವ್ಯಕ್ತಿಗೆ ನಿಮ್ಮ ಜವಾಬ್ದಾರಿಯನ್ನು ವಹಿಸಿದರೆ ನಿಮಗೆ ಕೇಡಾಗುವುದಿಲ್ಲ. ಭಗವಂತನ ಇಚ್ಚೆಯಿದ್ದಂತಾಗುತ್ತದೆ
ಅವರು ನನ್ನ ಬಗ್ಗೆ ಹೀಗೆ ಆಲೋಚಿಸುತ್ತಿರಬಹುದಾ?'
ಅಂತ ಯೋಚಿಸಿ ನೀವು ತಲೆಕೆಡಿಸಿಕೊಳ್ಳುತ್ತೀರಾ ಅಷ್ಟೇ. ಅವರಿಗೆ ನಿಮ್ಮ ಬಗ್ಗೆ ಯೋಚಿಸಲು ಪುರಸೊತ್ತೂ ಇರುವುದಿಲ್ಲ
ಆಗಿಹೋದ ಯುಗಗಳಲ್ಲಿ ಪ್ರಚಲಿತವಿದ್ಧ ತಪಸ್ಸು ಅಥವಾ ಇತರ ಕಠೋರ ಯೋಗಾಭ್ಯಾಸಗಳು ಈ ಯುಗದಲ್ಲಿ ಪ್ರಸ್ತುತವಾಗುವುದಿಲ್ಲ. ಕೈಯತ್ತಿ ಕೊಡುವುದು ಮತ್ತು ಇತರರಿಗೆ ಸಹಾಯ ಮಾಡುವುದಷ್ಟೇ ಈ ಯುಗದಲ್ಲಿ ಬೇಕಾಗಿರುವುದು.
ಎಲ್ಲವೂ ಭಗವಂತನ ಇಚ್ಚೆಯಂತೆಯೇ ನಡೆಯುವುದು ನಿಜವೇ ಆದರೂ ಮನುಷ್ಯ ಕಾರ್ಯಶೀಲನಾಗಲೇಬೇಕು. ಏಕೆಂದರೆ, ಭಗವಂತ ತನ್ನ ಇಚ್ಚೆಯನ್ನು ಮನುಷ್ಯನ ಕ್ರಿಯೆಯ ಮೂಲಕವೇ ಪ್ರಕಟಿಸುತ್ತಾನೆ. ಆಧ್ಯಾತ್ಮಿಕ ಸಾಧನೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡ
ವ್ಯಕ್ತಿಯ ಪ್ರಸ್ತುತ ಪರಿಸ್ಥಿತಿಗಳ ಆಧಾರದ ಮೇಲೆ ಆತನ ಭವಿಷ್ಯವನ್ನು ನಿರ್ಣಯಿಸಬಾರದು. ಏಕೆಂದರೆ ಕಪ್ಪು ಕಲ್ಲಿದ್ದಲನ್ನು ಹೊಳೆಯುವ ವಜ್ರವನ್ನಾಗಿ ಬದಲಾಯಿಸುವ ಶಕ್ತಿಯನ್ನು ಸಮಯ ಹೊಂದಿದ
ಕೊಡಲಿಯಿಂದ ಕಡಿದ ಮರವು ಮತ್ತೆ ಚಿಗುರಬಹುದು ಆದರೆ ಮಾತಿನಿಂದ ನೊಂದ ಮನಸ್ಸು ಮತ್ತೆ ಯಾವತ್ತೂ ಚಿಗುರುವುದಿಲ್ಲ
ಉಧ್ಯಾನವನದಲ್ಲಿ ಅರಳಿರುವ ಗುಲಾಬಿಯಂತೆ ಆಗಬೇಕು ಎಂದು ನಾವು ಬಯಸುವುದಾದರೆ ಮೊದಲು ಮುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು. ಜೀವನದಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ನಾವು ಗೆಲುವು ಸಾಧಿಸಲು ಸಾಧ್ಯ
ನಾವು ಯಾವಾಗಲೂ,ನಮಗಾದ ನೋವಿನ ಬಗ್ಗೆ ಯೋಚಿಸುತ್ತಿದ್ದರೆ, ಎಂದೆಂದಿಗೂ,ನಾವು ಅದರಿಂದ ನರಳುತ್ತಲೇ,ಇರುತ್ತೇವೆ. ಆದರೆ ಅದರ ಬದಲಾಗಿ,ನಮಗಾದ ನೋವಿನಿಂದ,ಕಲಿತ ಪಾಠದ ಬಗ್ಗೆ,ನಾವು ಗಮನ ಹರಿಸಿದರೆ,ನಾವು ಜೀವನದಲ್ಲಿ ಬೆಳೆಯುತ್ತೇವೆ,ಮತ್ತು ಉದ್ದಾರವಾಗುತ್ತೀವೆ.
*ಇಷ್ಟಪಟ್ಟಿದ್ದೆಲ್ಲಾ ಸಿಗಬೇಕಾದರೆ ಪ್ರಯತ್ನ ಮಾತ್ರವಲ್ಲ, ಯೋಗವೂ ಬೇಕು. ಆ ಯೋಗ ಪಡೆಯುವುದು ನಮ್ಮಲ್ಲಿಲ್ಲ. ಆದರೇ ಇಷ್ಟಪಟ್ಟಿದ್ದು ಸಿಕ್ಕಾಗ ಉಳಿಸಿಕೊಳ್ಳುವುದಕ್ಕೆ ಯೋಗ್ಯತೆ ಬೇಕು. ಅದು ನಮ್ಮಲ್ಲಿ ಇರುತ್ತದೆ. ಉಪಯೋಗಿಸಬೇಕು ಅಷ್ಟೇ.*
ಯಾರು ಹೃತ್ಪೂರ್ವಕವಾಗಿ ತನ್ನಡೆಗೆ ಬರಲು ಹೋರಾಡುತ್ತಿರುವನೋ ಅವನ ಮೇಲೆ ದೇವರು ಅಪಾರ ಕರುಣೆ ಬೀರುವನು. ನೀನು ಸೋಮಾರಿಯಾಗಿ ಏನನ್ನೂ ಮಾಡದೇ ಇದ್ದರೆ ಅವನು ಎಂದಿಗೂ ಬರುವುದಿಲ್ಲವೆಂದು ನಿನಗೇ ತಿಳಿಯುವುದು.
Subscribe , Follow on
Facebook Instagram YouTube Twitter WhatsApp