-->

ಶ್ರಾದ್ಧದ ಮಹತ್ವ ಹೇಳಿದ ಭೀಷ್ಮ , ಮಹಾಭಾರತ ಸಾರ

 ಪಿತೃಗಳ ಪ್ರಿತ್ಯರ್ಥವಾಗಿ  ಕೊಡುವ ಯಾವ ವಸ್ತು ಅಕ್ಷಯವನ್ನು ಹೊಂದುತ್ತದೆ, ಯಾವ ವಸ್ತು ಕೊಡುವುದರಿಂದ ಪಿತೃಗಳು ತೃಪ್ತರಾಗುತ್ತಾರೆ ಎಂದು ಯುಧಿಷ್ಠಿರ ಭೀಷ್ಮಾಚಾರ್ಯರನ್ನು ಕೇಳುತ್ತಾನೆ.
ಶ್ರಾದ್ಧವಿಧಿಗಳ ರಹಸ್ಯವನ್ನು ತಿಳಿದ ವಿದ್ವಾಂಸರು ಯಾವ ಹವಿಸ್ಸುಗಳನ್ನು ನಿಯತ ಗೊಳಿಸುವವರೋ ಅವೆಲ್ಲವೂ ಕಾಮ್ಯಗಳನ್ನೇ ಕೊಡುತ್ತವೆ.
ಎಳ್ಳು, ಕೆಂಬತ್ತ, ಜವೆ, ಉದ್ದು,ನೀರು, ಗಡ್ಡೆ- ಗೆಣಸು ಮತ್ತು ಹಣ್ಣುಗಳು ಇವುಗಳ ಮೂಲಕವಾಗಿ ಮಾಡಿದ ಶ್ರಾದ್ಧದಿಂದ ಪಿತೃಗಳು ಒಂದು ಮಾಸ ಪರ್ಯಂತರ ತೃಪ್ತರಾಗಿರುತ್ತಾರೆ.
ಯಾವ ಶ್ರಾದ್ದದಲ್ಲಿ ಹೆಳ್ಳಿನ ಪ್ರಮಾಣ ಹೆಚ್ಚಾಗಿರುತ್ತದಯೋ ಆ ಶ್ರಾದ್ಧವು ಅಕ್ಷಯವಾದದ್ದು ಎಂದು ಮನು ಹೇಳಿದ್ದಾನೆ. ಶ್ರಾದ್ದದ ಸಂಬಂಧವಾದ ಎಲ್ಲ ಬೋಜ್ಯ ಪದಾರ್ಥದಲ್ಲಿ ಎಳ್ಳನ್ನು ಹೆಚ್ಚಾಗಿ ಬಳಸಬೇಕು.
ಗೋ ಸಂಬಂದವಾದ ವಸ್ತುಗಳಾದ ಹಾಲು, ಮೊಸರು, ತುಪ್ಪಗಳಿಂದ ಮಾಡಲ್ಪಟ್ಟ ಶ್ರಾದ್ಧದಿಂದ ಪಿತೃಗಳು ಒಂದು ಸಂವತ್ಸರದ ವರೆಗೂ ತೃಪ್ತರಾಗಿರುತ್ತಾರೆ
ಮನುಷ್ಯರು ಬಹು ಪುತ್ರರನ್ನು ಪಡೆಯುವ ಅಭಿಲಾಷೆ ಇಟ್ಟುಕೊಳ್ಳಬೇಕು. ಯಾಕಂದರೆ ಅವರಲ್ಲಿ ಒಬ್ಬ ಮಗನಾದರೂ ಗಯಾದಲ್ಲಿ ಶ್ರಾದ್ಧ ಕರ್ಮ ಮಾಡಿದರೆ ಪಿತೃಗಳಿಗೆ ಅಕ್ಷಯ ತೃಪ್ತಿಯಾಗುತ್ತದೆ.
ಕೃತಿಕಾ ನಕ್ಷತ್ರದಲ್ಲಿ ಶ್ರಾಧ್ದ ಮಾಡಿದರೆ ಪುತ್ರವಂತನಾಗಿ ರೋಗ ಮುಕ್ತನಾಗಿರುವನು,  ರೋಹಿಣಿ ನಕ್ಷತ್ರದಲ್ಲಿ ಮಾಡಿದರೆ ತೇಜಸ್ಸು,  ಮೃಗಶಿರ ನಕ್ಷತ್ರದಲ್ಲಿ  ಮಾಡಿದರೆ ಕ್ರೂರಿಯಾಗಿರುತ್ತಾರೆ. ಆಶ್ಲೇಷ ನಕ್ಷತ್ರದಲ್ಲಿ ಶಾದ್ದಮಾಡುವವರು ಧೀರ ಮಕ್ಕಳನ್ನು ಪಡೆಯುತ್ತಾರೆ. ಪೂರ್ವ ಪಾಲ್ಗುಣದಲ್ಲಿ ಮಾಡಿದರೆ ಸೌಭಾಗ್ಯ ಶಾಲಿ, ಉತ್ತರ ಪಾಲ್ಗುಣದಲ್ಲಿ ಮಾಡಿದರೆ ಪುತ್ರವಂತನಾಗುವನು ಎಂದು ಭೀಷ್ಮರು ಹೇಳಿದರು.

ಶ್ರಾದ್ಧದ ಮಹತ್ವ ಹೇಳಿದ ಭೀಷ್ಮ , ಮಹಾಭಾರತ ಸಾರ
ಶ್ರಾದ್ದ ಹೇಗೆ ಪ್ರಾರಂಭವಾಯಿತು, ಯಾವ ಕಾಲದಲ್ಲಿ ಪ್ರಾರಂಭವಾಯಿತು ಎಂದು ಯುಧಿಷ್ಢಿರ ಕೇಳುತ್ತಾನೆ.
ಸ್ವಯಂಭು ಬ್ರಹ್ಮನ ಮಗ ಅತ್ರಿ ಮಹರ್ಷಿ. ಆ ಅತ್ರಿಯ ವಂಶದಲ್ಲಿಯೇ ದತ್ತಾತ್ರೇಯ ಜನಿಸಿದನು. ದತ್ತಾತ್ರೇಯ ಮಗನೇ ನಿಮಿ. ನಿಮಿಗೆ ಶ್ರೀಮಂತ ಎಂಬ ಮಗ ಹುಟ್ಡಿದನು. ಶ್ರೀಮಂತನು ತಪ್ಪಸ್ಸು ಆಚರಿಸುವಾಗಲೇ ಕಾಲ ಧರ್ಮಕ್ಕೆ ಅಧೀನನಾಗಿ ನೀಧನ ಹೊಂದಿದನು. ತಂದೆಯಾದ ನಿಮಿಯೂ  ಶಾಸ್ತ್ರೋಕ್ತವಾದ ಕರ್ಮ ಗಳಿಂದ ಅಶೌಚ ನಿವಾರಿಸಿಕೊಂಡು ಪುತ್ರ ಶೋಕದಲ್ಲಿ ಮಗ್ನನಾಗಿ  ದುಃಖಿಸತೊಡಗಿದನು. ಶಾಸ್ತ್ರೋಕ್ತವಾಗಿ ಶ್ರಾದ್ಧ ಮಾಡಿದನು. ಭೂಮಂಡಲದಲ್ಲಿ ನಿಮಿಯೇ ಪ್ರಥಮ ಶ್ರಾದ್ಧಕರ್ತನು. ನಮ್ಮ ಪೂರ್ವಜರು ಮಾಡದ ಈ ಶ್ರಾದ್ಧ ಕರ್ಮ ನಾನೇಕೆ ಮಾಡಿದೆ. ಧರ್ಮ ಸಂಕರ ಉಂಟಾಗುವುದೇ ಎಂದು ಚಿಂತಿಸುತ್ತ  ತನ್ನ ವಂಶ ಪ್ರವರ್ತಕರಾದ ಅತ್ರಿಯ ಮುನಿಯನ್ನು ಧ್ಯಾನಿಸಿದ. ಅತ್ರಿ ಮುನಿಗಳು ಆಗಮಿಸಿ ಶ್ರಾದ್ಧ ಕರ್ಮ ಆಚರಣೆಯಿಂದ ಧರ್ಮ ಸಂಕರ ಉಂಟಾಗವುದಿಲ್ಲ ಎಂದು ಉಪದೇಶ ನೀಡಿದರು ಎಂದು ಭೀಷ್ಮರು ಯುಧಿಷ್ಠಿರನಿಗೆ ಶ್ರಾದ್ಧ ಆರಂಭದ ಮಹಿಮೆ ಕುರಿತು ಹೇಳಿದರು.
ನಮ್ಮನ್ನು ಹೆತ್ತು ಸಾಕಿ ದೊಡ್ಡವರನ್ನಾಗಿ ಮಾಡಿದ ತಂದೆ, ತಾಯಿಗಳ ಶ್ರಾದ್ಧ ಮಾಡದಷ್ಟು ಪಾಪಿಗಳಾಗುತ್ತಿದ್ದಾರೆ. ತಂದೆ, ತಾಯಿ ಋಣ ಎಷ್ಟು ಜನ್ಮ ತಾಳಿದರೂ ತೀರಿಸುವುದಕ್ಕಾಗುವುದಿಲ್ಲ. ಶ್ರಾದ್ಧ ಮರ್ಕ ಆಚರಿಸುವ ಮೂಲಕವಾದರೂ ಕಚಿತ್ ಋಣ ತೀರಿಸಬೇಕು.

- ಶಾಮಸುಂದರ, ಕುಲಕರ್ಣಿ, ಕಲ್ಬುರ್ಗಿ (9886465925)

–>