ಒಂದು ದಿನ ದೇವತೆಗಳು ಬ್ರಹ್ಮದೇವರ ಬಳಿಗೆ ತೆರಳುತ್ತಾರೆ. ನಿನ್ನಿಂದ ವರ ಪಡೆದ ತಾರಕನೆಂಬ ಅಸುರನು ದೇವತೆಗಳಿಗೆ, ಋಷಿಗಳಿಗೆ ಪೀಡಿಸುತ್ತಿರುವನು. ಅವನ ಸಂವಾರ ಮಾಡಿ ಭೂಲೋಕದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾರೆ.
ನಿನ್ನ ವರದಿಂದ ಅವನು ಮಹಾ ಬಲಶಾಲಿಯಾಗಿದ್ದಾನೆ. ದೇವತೆಗಳಿಗೂ ಅವನನ್ನು ಸಂಹರಿಸಲು ಸಾಧ್ಯವಿಲ್ಲ. ಯಾಕಂದರೆ ದೇವತೆ, ಅಸುರರಿಂದ ಹಾಗೂ ಮಾನವರಿಂದ ಸಾವು ಬರದಂತೆ ನೀವೆ ವರ ಕೊಟ್ಟಿದ್ದಿರಿ.
ಹಿಂದೆ ದೇವತೆಗಳು ರುದ್ರಾಣಿಯಲ್ಲಿ ಸಂತಾನವಾಗುವುದನ್ನು ತಡೆದಾಗ ಅವಳು ನಮಗಾರಿಗೂ ಮಕ್ಕಳಾಗದಂತೆ ಶಾಪ ಕೊಟ್ಟಿದ್ದಾಳೆ. ನಮ್ಮ ಮಕ್ಕಳಾದರೂ ತಾರಕನನ್ನು ಸಂಹರಿಸುವರು ಎಂದರೆ ಪಾರ್ವತಿದೇವಿ ಶಾಪದಿಂದಾಗಿ ನಮಗೆ ಮಕ್ಕಳಾಗುವಂತಿಲ್ಲ. ನೀವೆ ದಾರಿ ತೋರಬೇಕು ಎಂದು ದೇವತೆಗಳು ಪ್ರಾರ್ಥಿಸಿದರು.
ಪಾರ್ವತಿ ಶಾಪ ಕೊಟ್ಟ ಸಂದರ್ಭ ದಲ್ಲಿ ಅಗ್ನಿ ಅಲ್ಲಿರಲಿಲ್ಲ. ಅಗ್ನಿಗೆ ಪಾರ್ವತಿಯ ಶಾಪ ತಟ್ಟಿಲ್ಲ. ತಾರಕನನ್ನು ಸಂಹರಿಸಲು ಅಗ್ನಿಯು ಸಂತಾನ ಪಡೆಯುತ್ತಾನೆ. ಅಗ್ನಿಯ ಸಂತಾನವು ಅಮೋಘವಾದ ಅಸ್ತ್ರದಿಂದ ತಾರಕನನ್ನು ಸಂಹರಿಸುವನು ಎಂದು ಬ್ರಹ್ಮದೇವರು ದೇವತೆಗಳಿಗೆ ಅಭಯ ನೀಡಿದರು.
ಸನಾತನವಾದ ಸಂಕಲ್ಪವನ್ನೆ ಕಾಮ ಎಂದು ಕರೆಯುತ್ತಾರೆ. ಆ ಕಾಮನ ಪರಿಣಾಮವಾಗಿ ರುದ್ರನ ತೇಜಸ್ಸು ಸ್ಖಲಿತವಾಗಿ ಅಗ್ನಿಯಲ್ಲಿ ಬೀಳುತ್ತದೆ. ಎತಡನೇ ಅಗ್ನಿಯಂತಿದ್ದ ಆ ಮಹಾಭೂತವನ್ನು ಅಗ್ನಿಯೂ ದೇವಶತ್ರುಗಳ ಪದಾರ್ಥವಾಗಿ ಗಂಗೆಯಲ್ಲಿ ಇರಿಸಿ ಅವಳಿಂದ ಪುತ್ರನನ್ನು ಪದುಕೊಕೊಳ್ಳುತ್ತಾನೆ. ರುದ್ರಾಣಿ ಶಾಪಕೊಟ್ಟಾಗ ಅಗ್ನಿಯೂ ನಷ್ಟವಾಗಿ ಹೋಗಿದ್ದನು. ಆದ್ದರಿಂದ ಅವನಿಗೆ ಶಾಪ ಅಂಟಿರಲಿಲ್ಲ. ದೇವತೆಗಳ ಭಯ ಪರಿಹರಿಸಲು ಅಗ್ನಿಯಲ್ಲಿ ಪಾವಕಿ (ಅಗ್ನಿ ಪುತ್ರ) ಜನಿಸುತ್ತಾನೆ ಎಂದು ತಾರಕನ ವಧೆಯ ರಹಸ್ಯವನ್ನು ಬ್ರಹ್ಮದೇವರು ದೇವತೆಗಳಿಗೆ ಹೇಳಿದರು.
ಬ್ರಹ್ಮನ ಮಾತು ಕೇಳಿ ಸಂತುಷ್ಡರಾದ ದೇವತೆಗಳು ಅಲ್ಲಿಂದ ಹೊರಟರು. ಅಗ್ನಿಯನ್ನು ಹುಡುಕಲು ಶುರುಮಾಡಿರು. ಮೂರು ಲೋಕದಲ್ಲಿ ಹುಡುಕುದರೂ ಅಗ್ನಿ ಸಿಗಲಿಲ್ಲ. ದೇವತೆಗಳಿಗೆ ,ಋಷಿಗಳಿಗೆ ಹುಡುಕಿ ಸಾಕಾಯಿತು. ರಸಾತಲದಿಂದ ಕಪ್ಪೆಯೊಂದು ಮೇಲಕ್ಕೆ ಬಂದು ನೀವು ಹುಡಕುತ್ತಿರುವ ಅಗ್ನಿಯೂ ರಸಾತಲದ ತಳದಲ್ಲಿರುವನು ಎಂದು ಹೇಳಿತು. ಅಗ್ನಿಯಿಂದ ಉತ್ಪತ್ತಿಯಾದ ತಾಪ ತಾಳದೆ ನಾನು ಇಲ್ಲಿಗೆ ಬಂದಿರುವೆ. ಅಗ್ನಿ ದೇವನು ತನ್ನ ತೇಜಸ್ಸಿನಿಂದ ನೀರಿನೊಡನೆ ಬೆರೆತು ನೀರಿನ ಮಧ್ಯದಲ್ಲಿ ಮಲಗಿದ್ದಾನೆ. ನೀವು ಅಗ್ನಿಯನ್ನು ಕಾಣಬೇಕಾದರೆ ರಸಾತಲಕ್ಕೆ ಹೋಗಿ ಎಂದು ಹೇಳಿತು ಕಪ್ಪೆ.
ಕಪ್ಪೆ ಚಾಡಿ ಹೇಳಿದ್ದಕ್ಕೆ ಕೋಪಕೊಂಡ ಅಗ್ನಿಯು ನಿನಗೆ ರಸಗಳ ಅನುಭವ ಆಗದಿರಲಿ ಎಂದು ಅಗ್ನಿ ಕಪ್ಪೆಗೆ ಶಾಪ ಕೊಟ್ಟ. ಅಗ್ನಿ ಬೇರೆ ಕಡೆ ಹೊರಟು ಹೋದ.
ಅಗ್ನಿಯ ಶಾಪದಿಂದ ನಾಲಿಗೆ ಕಳೆದುಕೊಂಡರೂ ನಾನಾ ವಿಧವಾದ ವಾಣಿಯಲ್ಲಿ ಉಚ್ಚರಿಸಲು ನೀನು ಸಮರ್ಥ ನಾಗಿರುವೆ ಎಂದು ದೇವತೆಗಳು ಕಪ್ಪೆಯನ್ನು ಅನುಗ್ರಹಿಸಿದರು.
ದೇವತೆಗಳು ಎಷ್ಟು ಹುಡುಕಿದರೂ ಅಗ್ನಿ ಸಿಗಲಿಲ್ಲ. ಹೀಗೆ ಹುಡಕುತ್ತಿರುವಾಗ ಆನೆಯೊಂದು ಎದುರಿಗೆ ಬಂದು ಅಗ್ನಿಯು ಅಶ್ವತ್ಥ ವೃಕ್ಷದಲಿರುವನು ಎಂದು ಹೇಳಿತು.ಅದನ್ನು ಅರಿತ ಅಗ್ನಿಯೂ ನಿಮ್ಮ ನಾಲಿಗೆ ತಿರಗು ಮುರಗಾಗಲಿ ಎಂದು ಆನೆಗೆ ಶಾಪ ಕೊಟ್ಟ. ಅಶ್ವತ್ಥ ಮರದಿಂದ ಹೊರಗೆ ಬಂದ ಅಗ್ನಿ ಬನ್ನಿ(ಶಮಿ) ಮರದಲ್ಲಿ ಸೇರಿದ .
ಆನೆಗೂ ದೇವತೆಗಳು ಅನುಗ್ರಹಿಸಿದರು. ಮತ್ತೆ ಅಗ್ನಿಯನ್ನು ಹುಡುಕತೊಡಗಿದರು. ಅಗ್ನಿ ಶಮಿವೃಕ್ಷದಲ್ಲಿದ್ದಾನೆ ಎಂದು ಗಿಳಿಯೊಂದು ಹೇಳಿತು.
ನಿನಗೆ ಮಾತು ಬರದಿರಲಿ ಎಂದು ಅಗ್ನಿಯು ಗಿಳಿಗೆ ಶಾಪವನ್ನಿತ್ತನು.
ಮಾತಾನಾಡಲೂ ಬರದಿದ್ದರೂ ಧ್ವನಿ ಸುಮಧುರವಾಗಿರಲಿ ಎಂದು ದೇವತೆಗಳು ಗಿಳಿಗೂ ಅನುಗ್ರಹಿಸಿದರು.
ಶಮಿ ವೃಕ್ಷದಲ್ಲಿದ್ದ ಅಗ್ನಿಯನ್ನು ದೇವತೆಗಳು ಭೇಟಿಯಾಗುತ್ತಾರೆ. ಬ್ರಹ್ಮದೇವರ ಸಂಕಲ್ಪವನ್ನು ಅಗ್ನಿಗೆ ತಿಳಿಸುತ್ತಾರೆ.
- ಶಾಮಸುಂದರ ಕುಲಕರ್ಣ, ಕಲಬುರಗಿ (9886465925)
Subscribe , Follow on
Facebook Instagram YouTube Twitter X WhatsApp