-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 9

ಮುಖ ಪರಿಶುದ್ದವಾಗಿದ್ದರೆ ಸಾಲದು,  ಮನಸ್ಸು ಪರಿಶುದ್ದವಾಗಿರ ಬೇಕು.

ತಪ್ಪು ಚಿಂತನೆಗಳು ಜೀವನದ ಬಹು ದೊಡ್ಡ ಶತ್ರುಗಳು. ಹಾಗಾಗಿ ನಮ್ಮ ಚಿಂತನೆಗಳು ಯಾವತ್ತೂ ಸಕಾರಾತ್ಮಕವಾಗಿರಲಿ 

ನೆಂಟರೊಡನೆ ಊಟಮಾಡಬೇಕು , ಮಾತಾಡಬೇಕು. ಕುಶಲ ಪ್ರಶ್ನೆ ಮಾಡಬೇಕು , ಆಗಾಗ ಅವರ ಮನೆಗೆ ಹೋಗಿ ಭೇಟಿ ಮಾಡಬೇಕು. ಎಂದಿಗೂ ಹಗೆತನ ಮಾಡಬಾರದು

 ಶಕ್ತಿ ಇರುವುದು ನಮ್ಮೊಳಗೆ,   ಭಕ್ತಿ ಇರುವುದು ನಮ್ಮೊಳಗೆ,     ಭಗವಂತ ಇರುವುದು ನಮ್ಮೊಳಗೆ,        ನಾವು ಅರಿತರಷ್ಟೇ ಎಲ್ಲವೂ ಕಾಣುವುದು....    

 ನೋವನ್ನು ನುಂಗಿ ಬದುಕುವ ಜೀವ ಯಾವತ್ತೂ ಇನ್ನೊಬ್ಬರನ್ನು ನೋಯಿಸುವುದಿಲ್ಲ ,       ಯಾಕೆ ಗೊತ್ತಾ ...... ಈ ಜೀವ ತನಗಷ್ಟೇ ನೋವಾದರೂ ಇನ್ನೊಬ್ಬರ ಖುಷಿಯನ್ನು ಬಯಸುತ್ತಾ ಬದುಕುತ್ತಿರುತ್ತದೆ..... 

*ಸಂಬಂಧ  ಅನ್ನೊದು ,  ನೋವನ್ನು ಹಂಚಿಕೂಳ್ಳುವ , ತರಹ ಇರಬೇಕೇ ಹೊರತು, ನೋವನ್ನು ಹೆಚ್ಚಿಸುವ ,  ತರಹ ಇರಬಾರದು.*

ಸಂತೋಷದಿಂದ ಇರುವವರ ಹತ್ತಿರ ಎಲ್ಲವೂ ಇರುತ್ತದೆ ಅಂತಲ್ಲ,  ಇದ್ದುದ್ದರಲ್ಲೇ ತೃಪ್ತಿ ಕಾಣುವ ಗುಣವೇ ಅವರ ಸಂತೋಷಕ್ಕೆ ಕಾರಣ.......

ಯಾವ ವ್ಯಕ್ತಿಯನ್ನೂ ಅವನಲ್ಲಿರುವ ಲೋಪದೋಷಗಳಿಂದಲೇ ಅಳೆಯಕೂಡದು. ವ್ಯಕ್ತಿಯಲ್ಲಿರುವ ದೊಡ್ಡಗುಣಗಳೇ ಅವನ‌ ವೈಶಿಷ್ಟ್ಯ. ಅವೆಲ್ಲವೂ ಅವನವೇ. ಅವನು ಮಾಡುವ ತಪ್ಪುಗಳು ಮಾನವ ಸಹಜವಾದ ದೌರ್ಬಲ್ಯಗಳು. ನಾವು ಅವನ ಚಾರಿತ್ರ್ಯವನ್ನು ಪರಿಗಣಿಸುವಾಗ ದೌರ್ಬಲ್ಯಗಳನ್ನು ಗಮನಿಸಲೇಕೂಡದು.

ಜೀವನದಲ್ಲಿ ಎಲ್ಲರಿಗೂ ಗೆಲ್ಲಬೇಕೆಂಬ  ಬಯಕೆ ಇದ್ದೇ ಇರುತ್ತದೆ. ಆದರೆ ಬಯಸಿದಂತೆ ಎಲ್ಲವೂ
         ನೆಡೆಯುವುದಿಲ್ಲ . ಬಯಸಿದ್ದು ಈಡೇರದೆ ಇದ್ದಾಗ ದುಃಖ ಸಹಜ. ಎಲ್ಲಿ ನಮಗೆ ಸೋಲುಂಟಾಯಿತು ಎಂದು ಅವಲೊಕಿಸಬೇಕು. ಆ ದಾರಿಯನ್ನು ಸರಿಪಡಿಸಿಕೊಂಡು ದಿಟ್ಟ
      ಗುರಿಯೊಂದಿಗೆ ಮುನ್ನಡೆಯಬೇಕು.    ಏಕೆಂದರೆ "ಭರವಸೆಯೇ ಬದುಕು"

 

Kannada subhashitha - ಕನ್ನಡ ಸುಭಾಷಿತ ಸಂಗ್ರಹ 9

 

ಹೊಟ್ಟೆ ತುಂಬಿದ ಶ್ರೀಮಂತ ಆಹಾರದಲ್ಲಿ ರುಚಿ ಹುಡುಕುತ್ತಾನೆ ಹಸಿದ ಬಡವ ಆಹಾರವನೇ ದೇವರು ಅಂತ ಭಾವಿಸುತ್ತಾನೆ....

ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ,  ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ.
ಎಲ್ಲಿ ಸ್ತ್ರೀಯರನ್ನು ಅಪಮಾನ ಗೊಳಿಸಲಾಗುತ್ತದೆಯೋ, ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗುತ್ತದೆ

ಸಿಟ್ಟು ಏಕಾಂಗಿಯಾಗಿ ಬರುತ್ತದೆ. ಆದರೆ, ಅದು ನಮ್ಮ ಒಳ್ಳೆಯ ಗುಣಗಳನ್ನು  ನುಂಗಿ ಹಾಕುತ್ತದೆ. ತಾಳ್ಮೆ ಕೂಡ ಏಕಾಂಗಿ ಯಾಗಿ ಬರುತ್ತದೆ. ಆದರೆ , ಅದು ನಮಗೆ ಒಳ್ಳೆಯ ಗುಣಗಳನ್ನು ತಂದು ಕೊಡುತ್ತದೆ

ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಆದರೆ ತಾಳ್ಮೆ ಇರುವವರಿಗೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ. ಹೀಗಾಗಿ ಜೀವನದಲ್ಲಿ ಕಾಯುವಿಕೆ ಮತ್ತು ತಾಳ್ಮೆ ಇರಲೇಬೇಕು.

ಜೀವನ ಎಲ್ಲರಿಗೂ ದೊರೆಯುತ್ತದೆ. ಆದರೆ ಪ್ರೀತಿ, ಅನುಕಂಪ, ಕರುಣೆ, ವಿಶಾಲ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡ ಮತ್ತು ಅವುಗಳನ್ನು ಅಳವಡಿಸಿಕೊಂಡ ಜೀವನ ಹೃದಯವಂತರದು ಮಾತ್ರ ಆಗಿರುತ್ತದೆ. ನಾವೊಬ್ಬರೇ ಅಲ್ಲ ನಮ್ಮೊಂದಿಗೆ ಇರುವವರನ್ನು ಸಹ ನಮ್ಮ ಜೊತೆಯಲ್ಲಿ ಯಶಸ್ಸಿನೆಡೆಗೆ ಕರೆದೊಯ್ಯಬೇಕು.  ಯಾರು ಏನೇ ಆಗಿರಲಿ, ಹೇಗೆ ಇರಲಿ ನಿಮ್ಮ ವರ್ತನೆ ಮಾತ್ರ ಎಲ್ಲರೂ ಅನುಸರಿಸುವಂತೆ ಇರಲಿ. ನಮ್ಮ ಜೊತೆಯಲ್ಲಿ ಇರುವವರಿಗೆ ನಮ್ಮ ಕೈಲಾದಷ್ಟು ಸಹಾಯ ಹಸ್ತ ಚಾಚುತ್ತ ಅವರನ್ನು ನಮ್ಮ ಜೊತೆಯಲ್ಲಿಯೇ ಮುನ್ನಡೆಸಿಕೊಂಡು ಹೋಗೋಣ. ದ್ವೇಷಿಸುವವರನ್ನು ಪ್ರೀತಿಸೋಣ, ಪ್ರೀತಿಸಿದರೆ ಮರಳಿ ಪ್ರೀತಿ ತಾನೆ ಸಿಗುವುದು. ಇರುವಷ್ಟು ದಿನ ದೊರಕಿರುವ ಈ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹ, ಪ್ರೀತಿ, ಪ್ರೇಮದಿಂದ ಇರೋಣ.ನಮ್ಮ ಬದುಕನ್ನು ಸನ್ಮಾರ್ಗದಲ್ಲಿ ನಡೆಯೋಣ.  ನಮ್ಮ ಆತ್ಮೀಯರು, ನಮ್ಮ  ಹತ್ತಿರದವರ ಬದುಕನ್ನು ಉತ್ತಮ ಗಳಿಸಿಕೊಳ್ಳಲು ಸಹಕಾರ ಮಾಡೋಣ. ಸುಂದರ ಸುಖಮಯ ಜೀವನವನ್ನು ನಮ್ಮದಾಗಿಸಿಕೊಳ್ಳೋಣ

ಅಂದಂದಿನ ಕೆಲಸ ಮುಗಿಸಿಯೇ ಮಲಗುವುದನ್ನು ರೂಢಿಸಿಕೊಳ್ಳಿ. ಉಳಿದುಹೋದ ಕೆಲಸಗಳು ಬೆಟ್ಟದಷ್ಟಾದ ಮೇಲೆ ಜೀವನವೇ ಜಿಗುಪ್ಸೆ ಎನಿಸಿಬಿಡುತ್ತದೆ!


ಜೀವನ ಎಂಬ ಒಂದು ಸುಂದರವಾದ ತೋಟದಲ್ಲಿ ಮನಸ್ತಾಪ ಅನ್ನೋ ಕಳೆ ಸಾಕಷ್ಟು ಬರ್ತಾವೆ ಆದರೆ ಆ ಮನಸ್ತಾಪದ ಕಳೆ ಕಿತ್ತು ಹಾಕಿ ನಗುವಿನ ಹೂ ಬಿಡುವಂತೆ ನೋಡಿಕೊಂಡಾಗ ಮಾತ್ರ  ಜೀವನ ಸುಖಮಯವಾಗಿರುತ್ತದೆ.

ಜವಾಬ್ದಾರಿ ಹೆಚ್ಚಾದಾಗ, ನಮಗೆ  ಅರಿವಿಲ್ಲದೆ , ಧೈರ್ಯ ನಮ್ಮ   ಸಂಗಾತಿಯಾಗಿರುತ್ತದೆ.

ದುಂಬಿಗಳು ಹೂಗಳಿಂದ ಮಕರಂದವನ್ನು ಸಂಗ್ರಹಿಸುವಂತೆ , ಸಜ್ಜನರು ವಿದ್ವಾಂಸರಿಂದ ಸುಭಾಷಿತ ವನ್ನು ಬದುಕಿರುವವರಿಗೂ ಸಂಗ್ರಹಿಸುತ್ತಾರೆ.

ನಾವು ಇಷ್ಟ ಪಟ್ಟಿದ್ದು ನಮಗೆ ಸಿಗದೆ ಇದ್ದಾಗ ಅದರ ಅವಶ್ಯಕತೆ ನಮಗಿಲ್ಲ ಎಂದುಕೊಂಡು ಬದುಕಬೇಕು.

ಆಕಾಶದಷ್ಟು ಪ್ರೀತಿ ಇದ್ದರೆ ಸರಿಹೋಗುವುದಿಲ್ಲ. ಅಣುವಷ್ಟು ಅರ್ಥ ಮಾಡಿಕೊಳ್ಳುವ ಮನಸ್ಸು ಇರಬೇಕು. ಸಮುದ್ರದಷ್ಟು ಸಂಪಾದನೆ ಇದ್ದರೆ ಸರಿಹೋಗುವುದಿಲ್ಲ, ಸಮಯಕ್ಕೆ ಸಹಾಯ ಮಾಡುವ ಗುಣ ಇರಬೇಕು

–>