ಈಗಾಗಲೇ ಬೇಸಿಗೆಕಾಲ ಶುರುವಾಗಿ, ಅತಿಹೆಚ್ಚು ಬಿಸಿಲಿನ ತಾಪ ನಮ್ಮನ್ನು ಈಗಾಗಲೇ ಬಾಧಿಸಲು ಪ್ರಾರಂಭಿಸಿದೆ, ಹೊರಗೆ ಹೋಗದೆ ಇರಲು ಸಾಧ್ಯವಿಲ್ಲ, ದೇಹ ನಿತ್ರಾಣ ವಾಗುವ, ಹೆಚ್ಚು ಸುಸ್ತು ಮಾಡುವ ತಲೆನೋವು ಮತ್ತು ವಾಂತಿ ಇದೆಲ್ಲವೂ ಬಿಸಿಲಿನಿಂದ ಕೆಟ್ಟ ಪರಿಣಾಮಗಳು ಶುರುವಾಗುತ್ತದೆ. ನೀರಿನ ಸಾಂದ್ರತೆ ಕಮ್ಮಿ ಮಾಡಿ ಭೇದಿಯಾಗುವ ಸಂದರ್ಭಗಳು ಕೂಡ ಈ ಬಿಸಿಲುಗಾಲ ಗಳಲ್ಲಿಯೇ ಹೆಚ್ಚು, ಬಿಸಿಲು ನಮಗೆ ಹಿಂಸೆಯನ್ನು ಮಾಡುವ ಸಂದರ್ಭಈ ಬಿಸಿಲುಗಾಲ.. ಆದರೆ ಹೊರಗೆ ಹೋಗದೆ ಇರಲು ಕೂಡ ಸಾಧ್ಯವಿಲ್ಲ.. ಮನೆಯಲ್ಲಿಯೇ ಅತಿಸುಲಭವಾಗಿ ನಾವು ಉಪಚರಿಸು ಕೊಳ್ಳುವ ಕೆಲವೊಂದು ವಿಧಾನಗಳಲ್ಲಿ,, ಅತ್ಯಂತ ಹೇರಳವಾಗಿ ಸಿಗುವ ದ್ರಾಕ್ಷಿಹಣ್ಣಿನ ಕಾಲವೂ ಕೂಡ ಇದು. ಇದರಲ್ಲಿ ಬಿಳಿ ಮತ್ತು ಕಪ್ಪು ದ್ರಾಕ್ಷಿಯ ಹೆಚ್ಚಾಗಿ ಸಿಗುತ್ತದೆ..
- ಅತಿ ಹೆಚ್ಚು ದ್ರಾಕ್ಷಿ ಹಣ್ಣನ್ನು ತಿನ್ನುವುದು ಈ ಕಾಲಕ್ಕೆ ಅತ್ಯಂತ ಒಳ್ಳೆಯದು. ಕಾರಣ ದ್ರಾಕ್ಷಿಹಣ್ಣು ನಮ್ಮಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ..
- ನರ ದೌರ್ಬಲ್ಯ ಕಮ್ಮಿ ಮಾಡುತ್ತದೆ,, ಮತ್ತುಸುಸ್ತು ಕಮ್ಮಿ ಮಾಡುತ್ತದೆ..
- ವಾಂತಿ ಬರುವಂತೆ ಆದರೆ ದ್ರಾಕ್ಷಿ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೂ ಒಳ್ಳೆಯದು.
- ಮಿದುಳಿನಾ ಕ್ಷಮತೆ ಹೆಚ್ಚು ಮಾಡುತ್ತದೆ,,ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ಬೀಜವಿಲ್ಲದ ಕಪ್ಪು ದ್ರಾಕ್ಷಿಯು ನಮಗೆ ಸಿಗುತ್ತಿದೆ.
- ಕಪ್ಪು ದ್ರಾಕ್ಷಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.ದೇಹ ಸುಕ್ಕುಗಟ್ಟುವುದನ್ನು ತಡೆಯುತ್ತದೆ.
- ಹೊರಗೆ ಬಿಸಿಲಿಗೆ ಹೋಗಿ ಬಂದಾಗ ಕೆಲವರಲ್ಲಿ ತಲೆನೋವು ಕಾಡುತ್ತದೆ ಅಂತಹವರು ಮತ್ತುಮೈಗ್ರೆನ್ ತಲೆ ನೋವು ಬರುವವರು ಕೂಡ ಈ ದ್ರಾಕ್ಷಿಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.
- ಈ ಬಿಸಿಲುಗಾಲದಲ್ಲಿ ಯೂ ಕೂಡ ಡಯಟ್ ಮಾಡುವವರು ಮತ್ತು ತೂಕವನ್ನು ಕಮ್ಮಿ ಮಾಡಲು ಇಚ್ಛಿಸುವವರು ಕೂಡ ದ್ರಾಕ್ಷಿ ಹಣ್ಣನ್ನು ಹೇರಳವಾಗಿ ತೆಗೆದುಕೊಳ್ಳಬಹುದು ದೇಹದಲ್ಲಿ ನೀರಿನ ಸಾಂದ್ರತೆಯನ್ನು ಹೆಚ್ಚು ಉಂಟುಮಾಡುತ್ತದೆ ಮತ್ತು ದೇಹದ ತೂಕವನ್ನು ಕೂಡ ಇದು ಕಮ್ಮಿ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
- ಕೂದಲಿನ ಪೋಷಣೆ ಈ ದ್ರಾಕ್ಷಿಹಣ್ಣು ಮಾಡುತ್ತದೆ ಎಂದರೆ ನೀವು ನಂಬಲಾರಿರಿ. ಕೂದಲು ಉದುರುವುದನ್ನು ಕೂಡ ತಡೆಗಟ್ಟುತ್ತದೆ.
ದ್ರಾಕ್ಷಿ ಹಣ್ಣನ್ನು ಚೆನ್ನಾಗಿ ಉಪ್ಪು ನೀರಿನಲ್ಲಿ ತೊಳೆದು ಇಟ್ಟುಕೊಳ್ಳಿ. ಕುದಿಯುವ ನೀರಿಗೆ ಕಪ್ಪು ದ್ರಾಕ್ಷಿಯನ್ನು ಹಾಕಿ. ಕುದಿಯಲು ಬಿಡಬೇಡಿ.ಸ್ಟೋವ್ ಆಫ್ ಮಾಡಿಬಿಡಿ.
ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಣ್ಣುಗಳನ್ನು ಮಾತ್ರ ತೆಗೆದುಕೊಂಡುನುಣ್ಣಗೆ ರುಬ್ಬಿ ಶೋಧಿಸಿ,, ಆನಂತರ ಶೋಧಿಸಿಕೊಂಡು ನೀರಿಗೆ, ಹಣ್ಣು ಬೆಂದ ನೀರನ್ನು ಕೂಡ ಸೇರಿಸಿಕೊಳ್ಳಿ.. ಅದಕ್ಕೆ ಸ್ವಲ್ಪ ಉಪ್ಪು ಸಕ್ಕರೆ ಹಾಕಿ ಜ್ಯೂಸನ್ನು ಎತ್ತಿಟ್ಟುಕೊಳ್ಳಿ, ಬೇಕೆಂದಾಗ ಕುಡಿಯಲು ಸ್ವಲ್ಪ ಪೆಪ್ಪರ್ ಪೌಡರ್ ಹಾಕಿ ಕುಡಿದು ನೋಡಿ ಅತ್ಯಂತ ರುಚಿಕರವೂ ಮತ್ತು ಆರೋಗ್ಯ ಭರಿತ ಜ್ಯೂಸ್ ಕೂಡ ತಯಾರಾಗುತ್ತದೆ..ಮಾಡಿನೋಡಿ
Subscribe , Follow on
Facebook Instagram YouTube Twitter WhatsApp