ಒಂದು ದಿನ ಚಾಂಡಾಲನು ನೀರಿನ ಕುಂಡದಲ್ಲಿ ತನ್ನ ಶರೀರವನ್ನು ತೊಳೆಯುತಿದ್ದ. ಆಗ ಅಲ್ಲಿಗೆ ಕ್ಷತ್ರಬಂಧು ಎಂಬ ರಾಜ ಬರುತ್ತಾನೆ. ನೀನು ವೃದ್ಧನಂತೆ ಕಾಣುತ್ತಿರುವೆ ಆದರೂ ಬಾಲಕನಂತೆ ಚೇಷ್ಟೆ ಮಾಡುವಿಲ್ಲ ಎಂದು ರಾಜ ಚಾಂಡಾಲನಿಗೆ ಕೇಳುತ್ತಾನೆ.
ನೀನು ಸದಾ ನಾಯಿ ಮತ್ತು ಕತ್ತೆಗಳ ಜತೆಯಲ್ಲಿಯೇ ಓಡಾಡುತ್ತಿರುವಿಯಲ್ಲ. ಹಸುವಿನ ಧೂಳಿನ ವಿಷಯದಲ್ಲಿ ನೀನು ಯಾಕಿಷ್ಟು ಉದ್ವೇಗ ಗೊಂಡಿರುವಿ ಎನ್ನುತ್ತಾನೆ ರಾಜ.
ಗೋವಿನ ಧೂಳಿನಿಂದ ಪೂರಿತವಾಗಿರುವ ನಿನ್ನ ದೇಹಯಾಕೆ ತೊಳೆದು ಕೊಳ್ಳುತ್ತಿರುವೆ ಎಂದು ರಾಜ ಕೇಳಿದ.
ಸತ್ಪುರಿಷರಿಗೆ ನಿಂದ್ಯವಾದ ಕರ್ಮ ನನಗೆ ವಿಹಿತವಾಗಿದೆ ಎನ್ನುತ್ತಾನೆ ಚಾಂಡಾಲ.
ನಾನು ಗೋವಿನ ಧೂಳನ್ನು ತೊಳೆದುಕೊಳ್ಳಲು ಒಂದು ಕಾರಣವಿದೆ. ಹಿಂದೆ ನಡೆದ ಒಂದು ದೃಷ್ಟಾಂತ ಹೇಳುತ್ತಾನೆ.
ಹಿಂದೆ ಸಾತ್ವಕ ಬ್ರಾಹ್ಮಣನ ಗೋವುಗಳನ್ನು ಯಾರೋ ಕದ್ದುಕೊಂಡು ಹೋಗುತಿದ್ದರು.ಆಗ ಗೋವುಗಳ ಹಾಲಿನಿಂದ ಮಿಶ್ರಿತವಾದ ಧೂಳು ಸೋಮಲತೆ ಮೇಲೆ ಬಿದ್ದಿತು. ಆ ಸೋಮ ಲತೆಯನ್ನೇಯಾಗದಲ್ಲಿ ಉಪಯೋಗಿಸಿ ಯಜಮಾನಾದಿಯಾಗಿ ಎಲ್ಲರೂ ಅದನ್ನು ಸೇವಿಸಿದ್ದರಿಂದ ಬ್ರಾಹ್ಮಣರ ಸಂಪತ್ತು ಅಪಹರಿಸಿದ ದೋಷ ಎವರೆಲ್ಲರಿಗೂ ಅಂಟಿಕೊಂಡಿತು. ಅದರ ಪರಿಣಾಮವಾಗಿ ದಿಕ್ಷೀತರಾಜ ಸೇರಿ ಅಲ್ಲಿದ್ದ ಎಲ್ಲರಿಗೂ ಅವಸಾನದ ನಂತರ ನರಕಕ್ಕೆ ಹೋಗಬೇಕಾಯಿತು.
ಬ್ರಾಹ್ಮಣರ ಗೋವು ಅಪಹರಿಸಿಕೊಂಡು ಹೋಗಿದ್ದ ಊರಿನಲ್ಲಿ ಯಾರು ಆ ಗೋವಿನ ತುಪ್ಪ, ಹಾಲು ಸೇವಿಸಿದ್ದರೋ ಅವರೆಲ್ಲರೂ ನರಕಕ್ಕೆ ಹೋಗಬೇಕಾಯಿತು.
ಆ ಗೋವುಗಳಿಗೆ ಹಿಂಸೆ ನೀಡಿ ಹೆಚ್ಚಿನ ಹಾಲು ಕರೆಯುತ್ತಿದ್ದರು. ಕರುಗಳಿಗೂ ಕೂಡ ಹಾಲು ಕುಡಿಯಲು ಬಿಡುತ್ತಿರಲಿಲ್ಲ. ಹಿಂಸೆ ತಾಳಲಾಗದೇ ಆ ಹಸುಗಳು ಕೋಪಕೊಂಡು ತಮ್ಮನ್ನು ಅಪಹರಿಸಿಕೊಂಡು ಬಂದ ಕುಟುಂಬದವರನ್ನೆಲ್ಲರನ್ನೂ ನಾಶ ಮಾಡಿದವು.
ಅದೆ ಹಳ್ಳಿಯಲ್ಲಿ ನಾನು ಹಿಂದಿನ ಜನ್ಮದಲ್ಲಿ ಜಿತೇಂದ್ರಿಯ ನೆಂಬ ಬ್ರಾಹ್ಮಣನಾಗಿದ್ದೆ. ಬ್ರಹ್ಮಚರ್ಯ ವ್ರತಾನುಷ್ಠಾನ ಮಾಡುತ್ತ ವಾಸವಾಗಿದ್ದೆ.
ಒಂದು ದಿನ ನಾನಿಟ್ಟ ಭಿಕ್ಷಾನ್ನ ಆ ಗೋವುಗಳ ಧೂಳಿಯಿಂದ ಧೋಷಪೂರಿತವಾಯಿತು. ಆ ಅನ್ನವನ್ನೇ ನಾನು ಸೇವಿಸಿದ್ದರ ಫಲವಾಗಿ ಈಗ ಚಾಂಡಾಲನಾಗಿ ಜನ್ಮತಾಳಿದ್ದಿನೆ ಎಂದು ಚಾಂಡಾಲ ರಾಜನಿಗೆ ಹೇಳುತ್ತಾನೆ.
ಈ ಚಾಂಡಾಲ ಜನ್ಮದಿಂದ ಮುಕ್ತಿಯಾಗುವ ಉಪಾಯವನ್ನು ತಿಳಿಸು ಎಂದು ರಾಜನಲ್ಲಿ ಪ್ರಾರ್ಥಿ ಸುತ್ತಾನೆ.
ಶ್ರೋತ್ರಿಯರಾದ ಬ್ರಾಹ್ಮಣರನ್ನು ರಕ್ಷಿಸುವ ಸಲಯವಾಗಿ ಪ್ರಾಣ ತ್ಯಾಗ ಮಾಡುವುದರಿಂದ ನಿನ್ನ ಈ ಚಾಂಡಾಲ ಜನ್ಮದಿಂದ ಮುಕ್ತಿ ಸಿಗಲಿದೆ ಎಂದ ರಾಜ.
ಮುಂದೆ ಒಂದು ದಿನ ಬ್ರಾಹ್ಮಣನ ಸ್ವತ್ತನ್ನು ರಕ್ಷಿಸುವ ಸಲುವಾಗಿ ನಡೆದ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿ ಚಾಂಡಾಲ ಸದ್ಗತಿ ಹೊಂದಿದ.
ಸಾತ್ವಿಕರಾದ ಬ್ರಾಹ್ಮಣರ ಸ್ವತ್ತು ಅಪಹರಿಸಬಾರದು. ಬ್ರಾಹ್ಮಣ ಮಾತ್ರವಲ್ಲ ಸಾತ್ವಿಕರ ಸಂಪತ್ತು ಅಪಹರಿಸಬಾರದು ಎಂಬ ಸಂದೇಶ ಮಹಾಭಾರತ ನೀಡಿದೆ.
ನೀಚರ ಸೇವೆ,ದುರಾಭಿಮಾನ ಮತ್ತು ಮಿತ್ರನ ಪತ್ನಿ ಜತೆ ವೈಭಿಚಾರ ಮಾಡುವುದು ಮಹಾ ಅಪರಾಧ. ಅದರಲ್ಲೂ ದುರಾಭಿಮಾನ ಹೆಚ್ಚು ಪಾಪಕಾರಕವಾಗಿದೆ ಎಂದು ಭೀಷ್ಮರು ಚಾಂಡಾಲ ಮತ್ತು ರಾಜನ ಕತೆ ಹೇಳಿದರು.
- ಶಾಮಸುಂದರ ಕುಲಕರ್ಣಿ, ಕಲಬುರಗಿ, (9886465925)
Subscribe , Follow on
Facebook Instagram YouTube Twitter WhatsApp