*ಆ ಕಡೆಯಿಂದ ಮಂಡನೆ*
*ಈ ಕಡೆಯಿಂದ ಖಂಡನೇ*
*ನಿನ್ನ ಕೇಳುವರಾರಿಲ್ಲಿ ಬಡವನೆ*
*ಒಬ್ಬನ ಹಾರಾಟ*
*ಇನ್ನೊಬ್ಬನ ಹೋರಾಟ*
*ಲೆಕ್ಕಕ್ಕಿಲ್ಲ ಬಡವನ ಪರದಾಟ*
*ಅವನದೊಂದು ವಿವಾದ*
*ಇವನದೊಂದು ಉನ್ಮಾದ*
*ಕೇಳುವರಿಲ್ಲ ದುರ್ಬಲನ ವಾದ*
*ಓಲೈಕಿಗೆ ಮನ್ನಣೆ*
*ಚಾಲಾಕಿಗೆ ಮಣೆ*
*ಕಷ್ಟಜೀವಿಯೇ ತಪ್ಪದು ನಿನ್ನ ಬವಣೆ*
*ಮಾಡಲಿರುವವನೊಬ್ಬ ಪ್ರಚಾರ*
*ಹೇಳುವವರೆಲ್ಲರೂ ಆಚಾರ*
*ಯಾರಿಗೂ ಬೇಕಾಗಿಲ್ಲ ನಿರ್ಗತಿಕನ ವಿಚಾರ*
*ಮಿತ್ಯ ವಾದಗಳಿಗುಂಟು ಮೆಚ್ಚಿಗೆ*
*ಸತ್ಯ ಸೋತು ಹೋಗಿರಬಹುದು ಮಿತ್ಯಗೆ*
*ಸತ್ಯವೇನ್ನುವ ಮಿತ್ಯಗಳ ನಿತ್ಯ ಮೆರವಣಿಗೆ*
- ಶಿವಾನಂದ ಬಿ ಮೊಗೇರ
Subscribe , Follow on
Facebook Instagram YouTube Twitter WhatsApp