ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನವಿರುತ್ತದೆಯೋ ಆ ವ್ಯಕ್ತಿ ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾನೆ
ಕೆಟ್ಟ 'ನಿನ್ನೆ'ಯ ಕುರಿತು ಯೋಚಿಸುತ್ತ ಸುಂದರವಾದ 'ಈ ದಿನ' ಕಳೆದುಕೊಳ್ಳಬೇಡಿ.
ಮನುಷ್ಯನ ಶ್ರೀಮಂತಿಕೆ ಅರ್ಧ ಹಣದ ರೂಪದಲ್ಲಿದ್ದರೆ, ಇನ್ನರ್ಧ ಗುಣದ ರೂಪದಲ್ಲಿರುತ್ತದೆ.ಮನುಷ್ಯನ ಸೌಂದರ್ಯ ಅರ್ಧ ಮುಖದಲ್ಲಿದ್ದರೆ, ಇನ್ನರ್ಧ ನಾಲಗೆಯಲ್ಲಿರುತ್ತದೆ. ನಾಲಗೆ ಹಾಗೂ ಗುಣ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ
ತಿಳುವಳಿಕೆಗಿಂತ ನಡವಳಿಕೆಯೆ ಶ್ರೇಷ್ಠ.ಏಕೆಂದರೆ, ಕೆಲವೊಮ್ಮೆ ತಿಳವಳಿಕೆ ಸೋಲಬಹುದು.*ಆದರೆ, ಉತ್ತಮ ನಡವಳಿಕೆ ಎಂದೂ ಸೋಲುವುದಿಲ್ಲ.
ಮಾತಿನಲ್ಲಿ ಸಿಹಿಕಹಿ ಎರಡೂ ಸಮಾನವಾಗಿ ಇರುವಂತೆ ನೋಡಿಕೊಳ್ಳಬೇಕು. ಯಾಕೆಂದರೆ ಪೂರ್ತಿ ಸಿಹಿಯಾದರೆ ಸಮಾಜ ನುಂಗಿಬಿಡುತ್ತದೆ. ಪೂರ್ತಿ ಕಹಿಯಾದರೆ ಉಗುಳಿಬಿಡುತ್ತದೆ. ಸಿಹಿಕಹಿ ಮಿಶ್ರಣವೇ ಜೀವನ.
ಸ್ವಾಭಿಮಾನದ ಬೆಲೆ ತಿಳಿಯದ ಶೂನ್ಯರಲ್ಲಿ ನಾವು ಯಾವತ್ತೂ ಸ್ವಾಭಿಮಾನದ ಬಗ್ಗೆ ವಿವರಣೆ ಕೊಟ್ಟರೆ ನಾವು ಹಾಸ್ಯಕ್ಕೆ ಒಳಗಾಗುತ್ತೇವೆ ವಿನಃ ಅಂತವರಲ್ಲಿ ಬದಲಾವಣೆ ಆಗಲಾರದು.
ಜೀವನದಲ್ಲಿ ಕಾಯುವುದನ್ನು ಕಲಿಯಬೇಕು . ಎಲ್ಲವೂ ನಡೆಯುವುದು ಸಮಯಕ್ಕೆ ಸರಿಯಾಗಿಯೇ ಹೊರತು ನಮ್ಮ ಅವಸರಕ್ಕೆ ತಕ್ಕಂತೆ ಅಲ್ಲ.
ಆಪ್ತ ನಗುವಿನಿಂದ ಕೂಡಿದ ಮಧುರ ಸಂಭಾಷಣೆಗಳು ಸಮಯದ ಸದ್ವಿನಿಯೋಗ ಎನ್ನಿಸಿಕೊಳ್ಳುತ್ತದೆ. ಮತ್ತೆ ಮತ್ತೆ ನೆನಪಿಸಿಕೊಂಡಾಗಲೂ ಸಂತೋಷ ಹೆಚ್ಚಾಗುತ್ತದೆ!
ಮನುಷ್ಯ ಬರಿ ಹಣವನ್ನೇ ಸಂಪಾದನೆ ಮಾಡುವುದರಲ್ಲಿ ಪೂರ್ತಿ ಸಮಯ ಕಳೆಯುತ್ತಾನೆ ಆದರೆ ನಾಳೆ ನಾಲ್ಕೂ ಜನ ತನ್ನ ಹೆಣ ಎತ್ತುವವರನ್ನು ಸಂಪಾದಿಸುವುದಿಲ್ಲ. ನಂಬಿಕೆಯನ್ನು ಉಳಿಸಿಕೊಳ್ಳುವವರಿಗಿಂತ, ಬಳಸಿಕೊಳ್ಳುವವರೇ ಜಾಸ್ತಿ.
ಹಿಂದೆ ಇರುವವರೆಲ್ಲರೂ ನಮ್ಮ ಹಿಂಬಾಲಕರು ಎಂಬ ಭ್ರಮೆ ಬೇಡ.ಮುಂದೆ ಇರುವವರೆಲ್ಲರೂ ನಮ್ಮ ವೈರಿಗಳು ಎನ್ನುವ ತಾತ್ಸಾರ ಬೇಡ.ಕೆಲವೊಮ್ಮೆ ಅನ್ನ ಬಡಿಸುವವನು ಮುಂದೆ ಇದ್ದರೆ, ಬೆನ್ನಿಗೆ ಚೂರಿ ಹಾಕುವವನು ಹಿಂದೆ ಇರುತ್ತಾನೆ.
ಜೀವನದಿಂದ ಏನೆಲ್ಲಾ ಸಿಕ್ಕಿದೆಯೋ ಅದನ್ನು ಜೀರ್ಣಿಸಿಕೊಳ್ಳಲು ಕಲಿಯಬೇಕು. ಏಕೆಂದರೆ ಭೋಜನ ಜೀರ್ಣವಾಗದೆ ಇದ್ದರೆ ರೋಗ ಹೆಚ್ಚುತ್ತದೆ. ಪ್ರಶಂಸೆ ಜೀರ್ಣವಾಗದಿದ್ದರೆ ಅಹಂಕಾರ ಹೆಚ್ಚುತ್ತದೆ. ನಿಂದನೆ ಜೀರ್ಣವಾಗದಿದ್ದರೆ ಶತ್ರುತ್ವ ಹೆಚ್ಚುತ್ತದೆ. ದು:ಖ ಜೀರ್ಣವಾಗದಿದ್ದಾಗ ನಿರಾಸೆ ಹೆಚ್ಚುತ್ತದೆ.
ಸಂತೋಷಕ್ಕಿಂತ ಶ್ರೇಷ್ಠಸುಖ ಯಾವುದೂ ಇಲ್ಲ. ದುರಾಸೆಗಿಂತ ದೊಡ್ಡ ರೋಗ ಯಾವುದೂ ಇಲ್ಲ.ದಯೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ
ಎಲ್ಲಾ ಸಮಯದಲ್ಲೂ ನಾವು ದುಡ್ಡನ್ನು ಉಳಿಸಬಹುದು, ಆದರೆ, ದುಡ್ಡು ಎಲ್ಲಾ ಸಮಯದಲ್ಲೂ
ನಮ್ಮನ್ನು ಉಳಿಸಲಾರದು
ಮಾಡುವ ಯಾವುದೇ ಕೆಲಸವನ್ನ ಇಷ್ಟಪಟ್ಟು ಮಾಡಿದರೆ ಕಷ್ಟವಾಗಲ್ಲ ಮಾಡಿದರೆ ಬೇಸರವಾಗಲ್ಲ ಭಯವಿಲ್ಲದೆ ಮಾಡಿದರೆ ತಪ್ಪಾಗಲ್ಲ ಆದರೆ ಕೆಲಸದ ಬಗ್ಗೆ ತಿಳಿದಿರಬೇಕು
ಸಂತೋಷವಾದಾಗ ಕಣ್ಣೀರು ಬರುತ್ತೆ, ದುಃಖದಿಂದ ಕಣ್ಣೀರು ಬರುತ್ತೆ, ಕಣ್ಣು ಯಾವುದನ್ನೂ ಮುಚ್ಚಿಡುವುದಿಲ್ಲ ಅದು ಸಾಗರದ ಅಲೆಯಂತೆ.ಕಲ್ಮಷಗಳನ್ನೆಲ್ಲಾ ಹೊರ ಹಾಕುತ್ತಲೆ ಇರುತ್ತೆ ಆದರೆ ಮನಸ್ಸು ಎಲ್ಲವನ್ನೂ ಮುಚ್ಚಿಟ್ಟು ಕೊರಗುತ್ತ ಇರುತ್ತೆ.
ಪ್ರತಿದಿನವೂ ಚೆನ್ನಾಗಿರದೇ ಇರಬಹುದು. ಆದರೆ ದಿನನಿತ್ಯದಲ್ಲಿ ಏನಾದರೂ ಒಳ್ಳೆಯದಿದ್ದೇ ಇರುತ್ತದೆ.
ಇನ್ನೊಬ್ಬರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದು ತಪ್ಪಲ್ಲ . ಆದರೆ ಆ ಹೋಲಿಕೆ ಅಸೂಯೆಗೆ ಕಾರಣವಾಗದೆ ಸಾಧನೆಗೆ ಸ್ಫೂರ್ತಿಯಾಗಬೇಕು
ಸರಳ ಸ್ವಭಾವ ಮನುಷ್ಯನ ಬಲಹೀನತೆ ಅಲ್ಲ. ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದೂ ಇಲ್ಲ.
ಆದರೆ, ಅದರ ರಭಸಕ್ಕೆ ಎಲ್ಲವನ್ನೂ ಗೆಲ್ಲುವ ಸಾಮರ್ಥ್ಯವಿದೆ.
ಯಾರ ಹೃದಯವು ದಯೆಯಿಂದ ಕೂಡಿದೆಯೋ ಮಾತು ಸತ್ಯದಿಂದ ಭೂಷಿತವಾಗಿದೆಯೋ ದೇಹವು ಪರಹಿತಕ್ಕೆ ಸಾಧನವಾಗಿದೆಯೋ ಅವನಿಗೆ ಕಲಿಪುರುಷನು ಏನು ಮಾಡಿಯಾನು ?
ಬದುಕು ಅನ್ನೋದು ನದಿಯ ಹಾಗೆ ಕೊನೆಯಿಲ್ಲದ ಪಯಣ. ಯಾವುದೂ ನಮ್ಮ ಜೊತೆ ಉಳಿಯುವುದಿಲ್ಲ ಉಳಿಯುವುದು ಒಂದೇ ಹೃದಯಕ್ಕೇ ತಟ್ಟಿದ "ನೆನಪು" ಮಾತ್ರ.
ಓದಿ ಕಲಿತ ಪಾಠ ಮರೆತು ಹೋಗಬಹುದು ಆದರೆ ಜೀವನದಲ್ಲಿ ಅನುಭವದಿಂದ ಕಲಿತ ಪಾಠಗಳು ಮಾತ್ರ ಎಂದೂ ಮರೆಯಲು ಸಾಧ್ಯವಿಲ್ಲ
ನೇರವಾಗಿ ಮಾತನಾಡುವ ವ್ಯಕ್ತಿಗಳ ಬಳಿ ಜನರ ಸಮೂಹ ಕಡಿಮೆಯಿರುತ್ತದೆ.ಡಂಭಾಚಾರದ ಮಾತುಗಳನ್ನು ಆಡುವವರ ಬಳಿ ಜನರ ಸಮೂಹ ದೊಡ್ಡದಿರುತ್ತದೆ.ಆದರೆ, ನೇರವಾಗಿ ಮಾತನಾಡುವವರು ಆದರ್ಶಪ್ರಾಯರಾದರೆ, ಡಂಭಾಚಾರಿಗಳು ಹಾಸ್ಯದ ವಸ್ತುಗಳಾಗಿರುತ್ತಾರೆ.
ರೂಪ ಅಂದವಾಗಿದ್ದರೆ ಸಾಲದು ಮನಸ್ಸು ಅಂದವಾಗಿರಬೇಕು ನಮ್ಮನ್ನು ಇತರ ವ್ಯಕ್ತಿಗಳು ಇಷ್ಟಪಡುತ್ತಾರೆ ಎಂದರೆ ಅದು ಮನಸ್ಸಿನೊಳಗಿನ ಭಾವನೆಯ ಅಂದಕ್ಕೆ ಮಾತ್ರವೇ ಆಗಿರಬೇಕು.
Subscribe , Follow on
Facebook Instagram YouTube Twitter X WhatsApp