ಮರೀಚಿ ಮಕ್ಕಳಿಗೆ ಬ್ರಹ್ಮನು ಅವರ ಇಚ್ಛೆಯಂತೆ ವರವನ್ನು ಕೊಟ್ಟಿದ್ದನು. ಅದನ್ನು ತಿಳಿದು ಹಿರಣ್ಯಕಷ್ಯಪನು ಕೋಪಗೊಂಡು ನಿವೆಲ್ಲರೂ ಭೂ ಲೋಕದಲ್ಲಿ ಅವತರಿಸಿರಿ. ನಿಮ್ಮ ತಂದೆಯೇ ನಿಮ್ಮನ್ನು ಕೊಲ್ಲಲಿ ಎಂದು ಶಾಪ ಕೊಟ್ಟನು.
ಬ್ರಹ್ಮನು ಸಾಯಬಾರದು ಎಂದು ವರ ಕೊಟ್ಟಿದ್ದರು. ಆದರೆ ಹಿರಣ್ಯಕಷ್ಯಪು ಸಾಯಿಲಿ ಎಂದು ಶಾಪ ಕೊಟ್ಟಿದ್ದ. ಇದು ದೈತ್ಯರ ಸಹಜ ಸ್ವಭಾವ.
ದುರ್ಗಾದೇವಿಯು ಭಗವಂತನಿಂದ ಪ್ರೇರೆಪಿಸಲ್ಪಟ್ಟು ಅಸುರರ ದೇಹದಲ್ಲಿದ್ದ ಕಾಲನೇಮಿಯ ಪುತ್ರರನ್ನು ಅಪಕರಿಸಿ ದೇವಕಿ ಗರ್ಭದಲ್ಲಿ ತಂದು ಸ್ಥಾಪಿಸುತ್ತಿದ್ದಳು. ದೇವಕೀಯ ಮಕ್ಕಳೆಂದು ತಿಳಿದು ಕಾಲನೇಮಿಯ ಅವತಾರವಾದ ಕಂಸನು ಕೊಲ್ಲುತ್ತಿದ್ದ.
ಮೊದಲ ಮಗು ಜನಿಸಿತು. ವಸುದೇವ ಕಂಸನಿಗೆ ಕೊಡಲು ಹೋದ ಎಂಟನೇ ಮಗನಿಂದ ನನ್ನ ಸಾವು ಇದನ್ನು ಕೊಲ್ಲುವುದಿಲ್ಲ ಎಂದು ಮರಳಿ ಕಳಿಸಿದ. ಆಗ ನಾರದರು ಬಂದು ದೇವತೆಗಳ ಮಾತು ನಂಬಬೇಡ ಅವರ ಲೆಕ್ಕವೇ ವಿಚಿತ್ರವಾಗಿರುತ್ತದೆ, ಯಾವುದನ್ನು ನಂಬಬೇಡ ಎಂದು ಹೇಳಿದರು. ಆಗ ಕಂಸ ಮಗುವನ್ನು ತಂದು ಬಂಡೆಗೆ ಅಪ್ಪಳಿಸುತ್ತಾನೆ. ಹೀಗೆ ಆರು ಮಕ್ಕಳನ್ನು ಕಂಸ ಕೊಲ್ಲುತ್ತಾನೆ. ಈ ಆರು ಮಕ್ಕಳು ಮರೀಚಿ ಋಷಿಗಳ ಪುತ್ರರು. ಜ್ಞಾನಿಗಳನ್ನು ಅವಮಾನಿಸಿದ್ದಕ್ಕಾಗಿ ಶಾಪದಿಂದ ಜನಿಸಿದವರು.
ಏಳನೇ ಗರ್ಭದಲ್ಲಿ ಶೇಷ ದೇವರು ಪ್ರವೇಶ ಮಾಡಿ ಮೂರು ತಿಂಗಳು ಮಾತ್ರ ಅಲ್ಲಿದ್ದು, ನಂತರ ರೋಹಿಣಿ ಗರ್ಭದಲ್ಲಿ ಸೇರಿದ್ದಾರೆ. ಮುಂದೆ ಎಂಟನೇ ಗರ್ಭದಲ್ಲಿ ಭಗವಂತನೆ ಪ್ರವೇಶ ಮಾಡಿದ.
ಭಗವಂತನನ್ನು ಪುತ್ರನನ್ನಾಗಿ ಪಡೆಯಬೇಕೆಂದು ತಪಸ್ಸು ಮಾಡಿದ ಕಶ್ಯಪ ಅದಿತಿಗಳೆ ವಾಸುದೇವ ದೇವಕಿಯರು. ವಾಸುದೇವ ಕೃಷ್ಣನನ್ನು ಕರೆದುಕೊಂಡು ನಂದನ ಬಳಿ ತೆರಳಿದ. ಕಾವಲುಗಾರಿಗೆ ನಿದ್ರೆ ಹತ್ತಿತು, ದ್ವಾರಗಳು ತರೆದವು. ಯಮುನಾ ನದಿ ಹಾದಿ ಬಿಟ್ಟತು. ಮಳೆ ಬರುತ್ತಿತ್ತು ಶೇಷದೇವರು ರಕ್ಷಾಕವಚವಾದರು. ಕೃಷ್ಣನನ್ನು ಯಶೋಧಾ ಬಳಿ ಬಿಟ್ಟು ಅವಳ ಬಳಿ ಇದ್ದ ಹೆಣ್ಣು ಶಿಶುವನ್ನು ತಗೆದುಕೊಂಡು ವಾಸುದೇವ ಬಂದು ದೇವಕಿಗೆ ನೀಡಿದ್ದಾನೆ. ಮಗು ಅಳುವ ದ್ವನಿ ಕಂಸನಿಗೆ ಕೇಳಿಸಿತು. ಬಂದು ಬಂಡೆಗೆ ಅಪ್ಪಳಿಸಬೇಕು ಎನ್ನುವಷ್ಟರಲ್ಲಿ ಕಂಸನ ಕೈಯಿಂದ ಮೇಲಕ್ಕೆ ಹಾರಿದ ಶಿಶು ನಿನ್ನ ಶತ್ರು ಬೇರೆಕಡೆ ಬೆಳೆಯುತ್ತಿದ್ದಾನೆ ಎಂದು ಹೇಳಿ ಮಾಯವಾಯಿತು. ಇತ್ತೀಚೆಗೆ ಜನಿಸಿದ ರಾಜ್ಯದಲ್ಲಿನ ಎಲ್ಲ ಮಕ್ಕಳನ್ನು ಕೊಲ್ಲುವಂತೆ ಪೂತನಿಗೆ ಕಳಿಸಿದ್ದಾನೆ. ಅನೇಕ ಮಕ್ಕಳನ್ನು ಕೊಂದು ಕೃಷ್ಣನನ್ನು ಕೊಲ್ಲಲು ಬಂದ ಪೂತನಿಯ ಹಾಲು ಮಾತ್ರವಲ್ಲದೆ ವಿಷವನ್ನೂ ಸೇವಿಸಿ ಕೃಷ್ಣ ಅವಳನ್ನು ಕೊಂದ. ಪೂತನಿಯಲ್ಲಿ ಊರ್ವಶಿಯೂ ಇರುತ್ತಾಳೆ. ಊರ್ವಶಿಗೆ ಸ್ಗದತಿ ನೀಡಿ ತನ್ನ ತಾಯಿ ಯಶೋಧಾಗೆ ಸಿಗುವ ಸ್ಥಾನ ಕರುಣಿಸಿದ. ಪೂತನಿಯನ್ನು ಸಂಹರಿಸಿದ. ಒಂದೆ ದೇಹದಲ್ಲಿ ಇರುವ ಇಬ್ಬರನ್ನೂ ಅವರವರ ಕರ್ಮಕ್ಕನುಗುಣವಾಗಿ ಶಿಕ್ಷೆ ನೀಡಿದ. ಮುಂದೆ ಅನೇಕ ರಾಕ್ಷಸರನ್ನು ಸಂಹರಿಸುತ್ತಾನೆ. ಬೆಣ್ಣೆ ಕಳ್ಳತನ ಮಾಡಿದಾಗ ತಾಯಿ ಯಶೋಧಾ ಕೃಷ್ಣನನ್ನು ಒರಳಿಗೆ ಕಟ್ಟಿ ಹಾಕಲು ಹೋಗುತ್ತಾಳೆ. ಹಗ್ಗ ಕಡಿಮೆ ಬಿದ್ದತು ಇನ್ನಿಷ್ಟು ಹಗ್ಗ ತಂದರೂ ಆಗಲೂ ಕಡಿಮೆ ಬಿತ್ತು. ಎಷ್ಟು ಹಗ್ಗ ತಂದರೂ ಕಡಿಮೆ ಬಿತ್ತು.ಕೊನೆಗೆ ಕೃಷ್ಣ ತಾನೆ ಕಟ್ಟಿಸಿಕೊಳ್ಳುತ್ತಾನೆ. ತಾಯಿಗೆ ಗೌರವ ನೀಡಬೇಕು ಎಂಬುದು ನಮಗೆ ಕೃಷ್ಣ ತೋರಿಸಿದ್ದಾನೆ. ಭಗವಂತನಿಗೆ ಕಟ್ಟಿ ಹಾಕುವುದು ಯಾರಿಂದಲೂ ಸಾಧ್ಯವಿಲ್ಲ, ಕಟ್ಟಿದರೂ ಭಕ್ತಿಯ ಹಗ್ಗದಿಂದ ಮಾತ್ರ ಸಾದ್ಯ ಎಂಬ ಸಂದೇಶವನ್ನು ಭಗವಂತ ನಮಗೆ ನೀಡಿದ್ದಾನೆ.
ವಿಷವನ್ನು ಬಿಟ್ಟು ಅನೇಕ ಗೋವು, ಗೋಪಾಲಕರ ಸಾವಿಗೆ ಕಾರಣವಾಗಿದ್ದ ಕಾಳಿಂಗ ಯಮುನಾ ನದಿಯಲ್ಲಿ ಇದ್ದ. ನದಿಯಲ್ಲಿ ಇಳಿದು ಕಾಳಿಂಗನ ಹೆಡೆಯ ಮೇಲೆ ನರ್ತನ ಮಾಡಿದರೇ. ಬ್ರಹ್ಮಾದಿ ದೇವತೆಗಳು ವಾದ್ಯ ನುಡಿಸಿರು. ಕಾಳಿಂಗನನ್ನು ಅಲ್ಲಿಂದ ಹೋಡಿಸಿದಕೃಷ್ಣ ವೃಂದಾವನಕ್ಕೆ ಬಲರಾಮನೊಂದಿಗೆ ತೆರಳುತ್ತಾನೆ. ಮುಂದೆ ಕಂಸನನ್ನು ಸಂಹರಿಸುತ್ತಾನೆ.
ಪಾಂಡವರ ಪಕ್ಷದಲ್ಲಿದ್ದು, ಅರ್ಜುನನಿಗೆ ಭಗವದ್ಗೀತೆ ಉಪದೇಶ ನೀಡಿ, ವಿಶ್ವರೂಪ ದರ್ಶನ ನೀಡಿ, ಯುದ್ದಕ್ಕೆ ಪ್ರೇರೆಪಿಸುತ್ತಾನೆ. ದುರ್ಯೋಧನಾದಿಗಳ ಸೋಲಿಗೆ ಕಾರಣವಾದ. ಕೃಷ್ಣಾವತಾರದಲ್ಲಿ
ಭಗವಂತ ಅನೇಕ ಅಸುರರನ್ನು ಸಂಹರಿಸಿ ಭೂ ಭಾರವನ್ನು ಹರಣ ಮಾಡಿದ್ದಾನೆ.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ ( 9886465925 )
Subscribe , Follow on
Facebook Instagram YouTube Twitter WhatsApp