ಕುಂತಿಯ ಮಾತನ್ನುಕೇಳಿದ ಪಾಂಡುರಾಜ ಧರ್ಮವನ್ನು ಚನ್ನಾಗಿ ತಿಳಿಯದಿದ್ದರೆ ರಾಜನಾದವನು ಭೂಮಿಯನ್ನು ರಕ್ಷಿಸಲಾರನು. ಅದಕ್ಕಾಗಿ ಧರ್ಮಪರಾಯಣನಾದ ವಿಭು ನನ್ನು ಕರೆ ಎಂದು ಪಾಂಡುರಾಜ ಹೇಳಿದ.
ಧರ್ಮರಾಜನಾದರೆ ಧಾರ್ಮಿಕನಾಗುತ್ತಾನೆ.ಅವನೆ ಉತ್ತಮ ಮಗನೆಂದು ತಿಳಿದು ಕುಂತಿಯು ಯಮಧರ್ಮ ನನ್ನು ಭಕ್ತಿಯಿಂದ ಪ್ರಾರ್ಥಿಸಿದ್ದಾಳೆ. ಕೂಡಲೇ ಯಮನು ಪ್ರತ್ಯಕ್ಷನಾದನು.
ಯಮನೆ ಕುಂತಿಗೆ ಉತ್ತಮ ಮಗನಾಗಿ ಜನಿಸಿದ್ದಾನೆ. ಅವನೆ ಯಧಿಷ್ಠಿರ (ಧರ್ಮರಾಜ).
ಉತ್ತಮ ಪತಿಯ ಆಶ್ರಯವಿದ್ದರೂ ಅಧಮನನ್ನು ಆಶ್ರಯಿಸಿದರೆ ಆ ಪಾಪಕ್ಕೆ ಪ್ರಾಯಶ್ಚಿತವೇ ಇಲ್ಲ.
ಇಲ್ಲಿ ಕುಂತಿ ತಪ್ಪು ಮಾಡಿದ್ದಾಳೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಅದರೆ ಮಹಾ ಭಾರತ ಹೇಳುತ್ತದೆ ಕುಂತಿ ತಪ್ಪು ಮಾಡಿಲ್ಲ. ಅವಳು ಪತಿವ್ರತಾ ಸ್ತ್ರೀ ಎಂದು.
ದೇವತೆಗಳಿಂದ ಮಕ್ಕಳನ್ನು ಪಡೆಯಲು ಅನೇಕ ವಿಧಾನಗಳಿವೆ. ದೇವತೆಗಳು ದೃಷ್ಟಿಯಿಂದಲೇ ಮಕ್ಕಳನ್ನು ಕರುಣಿಸುತ್ತಿದ್ದರು. ದೇವರ ಆಶೀರ್ವಾದದಿಂದ ಕುಂತಿ ದೇವತೆಗಳಿಂದ ಮಕ್ಕಳನ್ನು ಪಡೆದಿದ್ದಾಳೆ ವಿನಃ ತಪ್ಪು ಮಾಡಿ ಪಡೆದಿಲ್ಲ. ಹೀಗಾಗಿ ಕುಂತಿ ತಪ್ಪು ಮಾಡಿಲ್ಲ ಎಂಬ ನಿರ್ಣಯ ಮಹಾಭಾರತದ್ದಾಗಿದೆ.
ಮಕ್ಕಳಾಗಿಲ್ಲ ಎಂದು ಇಂದಿಗೂ ಕೆಲವರು ಅನೇಕ ದೇವತೆಗಳಿಗೆ ಹರಕೆ ಹೊರುತ್ತಾರೆ. ಮಕ್ಕಳನ್ನು ಕರುಣಿಸು ದೇವರೆ ಎಂದು ಪ್ರಾರ್ಥಿಸುತ್ತಾರೆ.ಅಂದ ಮಾತ್ರಕ್ಕೆ ಅವರು ತಪ್ಪು ಮಾಡಿದ್ದರೆ ಎಂದು ಭವಿಸುವುದು ಉಚಿತವಲ್ಲ. ಕುಂತಿಯು ಕೂಡ ದೇವರ ಅನುಗ್ರಹದಿಂದಮಾತಗರ ಮಕ್ಕಳನ್ನು ಪಡೆದಿದ್ದಾಳೆ.
ಹಿಂದೆ ಕೃತಯುಗದಲ್ಲಿ ದೇವತೆಗಳು ಕೆಲವೊಂದು ಕಾರಣದಿಂದ ತಮಗಿಂತಲೂ ಅಧಮ ಸ್ತ್ರೀಯರನ್ನು ಕೂಡಿದ್ದುಂಟು. ಆದರೆ ದೇವತಾ ಸ್ತ್ರೀಯರು ಮಾತ್ರ ಯಾವ ಕಾರಣಕ್ಕೂ ಅಂಥ ತಪ್ಪು ಕಾರ್ಯ ಮಾಡಿಲ್ಲ. ಕುಂತಿ ಕೂಡ ತಪ್ಪುಮಾಡಿ ಮಕ್ಜಳನ್ನು ಪಡೆದಿಲ್ಲ.
ಯಮನೆ ಕುಂತಿಗೆ ಮಗನಾಗಿ ಜನಿಸಿದ್ದಾನೆ ಎಂಬ ವಾರ್ತೆ ಕೇಳಿ ಗಾಂಧಾರಿ ಹೊಟ್ಟೆಕಿಚ್ಚೆಂಬ ಬೆಂಕಿಯಿಂದ ಬೆಂದವಳಾಗಿ ತನ್ನ ಗರ್ಭವನ್ನೇ ತಾನೆ ಜಚ್ಚಿಕೊಂಡಳು.
ತಾನು ಮೊದಲು ಗರ್ಭಿಣಿಯಾದರೂ ಕುಂತಿಗೆ ಮೊದಲು ಮಗುವಾಯಿತಲ್ಲ ಎಂದು ನೋವಿನಿಂದ ಈ ಕೆಲಸ ಮಾಡಿದ್ದಾಳೆ.
ಎಲ್ಲ ಸ್ತ್ರೀಯರಲ್ಲಿ ಅಸೂಹೆ ಭಾವನೆ ಸಹವಾಗಿ ಇರುವಂಥದ್ದು. ಆದರೆ ಇಲ್ಲಿ
ಮೂಲತ ಗಾಂಧಾರಿ ಕೂಡ ಮಹಾಸಾದ್ವಿ ಸ್ತ್ರೀಯಾಗಿದ್ದಾಳೆ.
- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ ( 9886465925 )
Subscribe , Follow on
Facebook Instagram YouTube Twitter WhatsApp